»   » ಚಿರಂಜೀವಿ ಸರ್ಜಾ ಹೆಸರಿನ ಮುಂದೆ ಹೊಸ ಟೈಟಲ್

ಚಿರಂಜೀವಿ ಸರ್ಜಾ ಹೆಸರಿನ ಮುಂದೆ ಹೊಸ ಟೈಟಲ್

Posted By:
Subscribe to Filmibeat Kannada

ಸ್ಯಾಂಡಲ್ ವುಡ್ ನ 'ಗಂಡೆದೆ'ಯ ನಾಯಕ ಚಿರಂಜೀವಿ ಸರ್ಜಾರನ್ನು ಇನ್ನು ಮುಂದೆ ಸಿಂಪಲ್ಲಾಗಿ ಚಿರು ಎಂದು ಕರೆಯುವಂಗಿಲ್ಲ. ಏಕೆಂದರೆ ಅವರಿಗೆ ಹೊಸ ಬಿರುದು ನೀಡಿದ್ದಾರೆ ಸಾಹಸಸಿಂಹ ಡಾ.ವಿಷ್ಣುವರ್ಧನ್ ಅಭಿಮಾನಿಗಳು.

ಚಿರಂಜೀವಿ ಸರ್ಜಾ ಅವರನ್ನು ಇಷ್ಟು ದಿನ ಎಲ್ಲರೂ ಚಿರು ಎಂದೇ ಕರೆಯುತ್ತಿದ್ದರು. ಈಗ ಅವರಿಗೆ 'ಯುವ ಸಾಮ್ರಾಟ್' ಎಂಬ ಬಿರುದು ನೀಡಲಾಗಿದೆ. ಗುರು ದೇಶಪಾಂಡೆ ಅವರು ಆಕ್ಷನ್ ಕಟ್ ಹೇಳಿರುವ 'ರುದ್ರತಾಂಡವ' ಚಿತ್ರದ ಆಡಿಯೋ ಬಿಡುಗಡೆ ಸಮಾರಂಭದಲ್ಲಿ ಇತ್ತೀಚೆಗೆ ನೆರವೇರಿತು.

Chiranjeevi Sarja is now Yuva Samrat

ಈ ಸಂದರ್ಭದಲ್ಲಿ ವಿಷ್ಣು ಅಭಿಮಾನಿಗಳು ಅವರಿಗೆ ಯುವ ಸಾಮ್ರಾಟ್ ಎಂಬ ಬಿರುದನ್ನೂ ನೀಡಿ ಗೌರವಿಸಿದರು. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ.ಗಿರೀಶ್ ಕಾರ್ನಾಡ್ ಅವರು 'ಯುವ ಸಾಮ್ರಾಟ್' ಪ್ರಶಸ್ತಿಯನ್ನು ಚಿರಂಜೀವಿ ಸರ್ಜಾ ಅವರಿಗೆ ಪ್ರದಾನ ಮಾಡಿರುವುದು ವಿಶೇಷ.

ಈ ಬಗ್ಗೆ ಚಿರಂಜೀವಿ ಸರ್ಜಾ ಅವರಿಗೆ ಸಹಜವಾಗಿ ಖುಷಿಯಗಿದ್ದು, ಪ್ರಶಸ್ತಿ ಸಿಕ್ಕಿದ್ದು ನಿಜಕ್ಕೂ ಸಂತಸ ತಂದಿದೆ ಎಂದಿದ್ದಾರೆ. ರಾಧಿಕಾ ಕುಮಾರಸ್ವಾಮಿ ಜೊತೆಗಿನ ಅವರ 'ರುದ್ರತಾಂಡವ' ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. 'ಸೀಜರ್' ಚಿತ್ರದ ಪ್ರಕಟವಾಗಿದೆ.

Chiranjeevi Sarja is now Yuva Samrat2

ವಾಯುಪುತ್ರ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಅಡಿಯಿಟ್ಟ ಶಕ್ತಿ ಪ್ರಸಾದ್ ಕುಟುಂಬದ ಕುಡಿ ಚಿರು ಈಗ ಸ್ಯಾಂಡಲ್ ವುಡ್ ನಲ್ಲಿ ತನ್ನದೇ ಆದಂತಹ ಅಭಿಮಾನಿಗ ಬಳಗವನ್ನು ಹೊಂದಿರುವ ನಟ. ಚಿರು ಅಭಿನಯದ 'ಚಂದ್ರಲೇಖ' ಚಿತ್ರ 2014ರ ಸೂಪರ್ ಹಿಟ್ ಚಿತ್ರವಾಗಿ ಹೊರಹೊಮ್ಮಿದೆ.

ಅದೆಲ್ಲಾ ಇರಲಿ, ಚಿರಂಜೀವಿ ಸರ್ಜಾ ಲವ್ ಸ್ಟೋರಿ ಎಲ್ಲಿಗೆ ಬಂತು, ಹುಡುಗಿ ಸಿಕ್ಕಿದ್ಲಾ? ಯಾರಪ್ಪಾ ಆ ಲಕ್ಕಿ ಬೆಡಗಿ, ಇದು ನಿಜಕ್ಕೂ ಲವ್ವಾ ಅಥವಾ ಗಾಸಿಪ್ ಇರಬಹುದೇ? ಏನೋಪ್ಪಾ ಗೊತ್ತಿಲ್ಲ, ಇದನ್ನು ಓದಿ ನೋಡಿ ನಿಮಗೂ ಒಂದಷ್ಟು ಸುಳಿವು ಸಿಗಬಹುದೇನೋ. (ಏಜೆನ್ಸೀಸ್)

English summary
Sandalwood hero Chiranjeevi Sarja has got a new title called 'Yuva Samrat' from late Dr Vishnuvardhan fans. Chiru who was overwhelmed by the title.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada