Just In
Don't Miss!
- Automobiles
ಬಿಡುಗಡೆಗೆ ಸಜ್ಜಾಗುತ್ತಿದೆ 2021ರ ಮಾರುತಿ ಎಕ್ಸ್ಎಲ್5 ಕಾರು
- Sports
ನೇಥನ್ ಲಿಯಾನ್ಗೆ ಅವಿಸ್ಮರಣೀಯ ಉಡುಗೊರೆ ಕೊಟ್ಟ ಅಜಿಂಕ್ಯ ರಹಾನೆ
- News
ನಮಗೆ ಮಾತ್ರ ಏಕೆ ಕೋವ್ಯಾಕ್ಸಿನ್ ಲಸಿಕೆ?: ಸರ್ಕಾರಕ್ಕೆ ನಿವಾಸಿ ವೈದ್ಯರ ಪ್ರಶ್ನೆ
- Lifestyle
ಚೀನಾದ ಐಸ್ ಕ್ರೀಮ್ ನಲ್ಲಿ ಕೊರೊನಾ ವೈರಸ್ ಪತ್ತೆ!!!
- Finance
ಷೇರುಪೇಟೆಯಲ್ಲಿ ಉತ್ಸಾಹ; ಹೂಡಿಕೆದಾರರ ಸಂಪತ್ತು 3.50 ಲಕ್ಷ ಕೋಟಿ ರು. ಹೆಚ್ಚಳ
- Education
NBT Recruitment 2021: 26 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಜಾನಕಿ ವಿರುದ್ಧವೇ ದ್ವೇಷ ಬೆಳೆಸಿಕೊಳ್ಳುತ್ತಾಳಾ ಮುದ್ದು ತಂಗಿ ಚಂಚಲ
ಚಂಚಲ ಮದುವೆ ವಿಚಾರ ಬಾರಿ ಕಗ್ಗಂಟಾಗಿ ಕಾಡುತ್ತಿದೆ. ಚಿರಂತನ್ ಕ್ರಿಮಿನಲ್ ಬ್ಯಾಗ್ರೌಂಡ್ ಬಗ್ಗೆ ಜಾನಕಿಗೆ ಎಲ್ಲಾ ಸತ್ಯ ಗೊತ್ತಾಗಿದೆ. ಸಿ ಎಸ್ ಪಿ ಹೇಳಿದ ಸತ್ಯವನ್ನು ಜಾನಕಿ ತಾಯಿ ರಶ್ಮಿ ಬಳಿಯೂ ಹೇಳಿದ್ದಾರೆ.
ತಂಗಿಯ ಬಾಳು ಹಾಳಾಗುವುದು ಜಾನಕಿಗೂ ಇಷ್ಟವಿಲ್ಲ. ಹಾಗಾಗಿ ಕ್ರಿಮಿನಲ್ ಚಿರಂತನ್ ಜೊತೆ ಚಂಚಲ ಮದುವೆ ತಪ್ಪಿಸಲು ಜಾನಕಿ ಹರಸಾಹಸ ಪಡುತ್ತಿದ್ದಾರೆ. ಜಾನಕಿ ಮಾತು ಕೇಳಿ ಜಾನಕಿ ಮೇಲೆ ಭಾರ್ಗಿ ಮತ್ತಷ್ಟು ಸಿಟ್ಟಾಗಿದ್ದಾರೆ.
ಜಾನಕಿ ಮಾತಿನಿಂದ ಚಿರಂತನ್ ನನ್ನು ಮನೆಗೆ ಕರೆಸಿ ಸತ್ಯ ಕೇಳಿದ್ದಾರೆ ಭಾರ್ಗಿ. ಚಿರಂತನ್ ಮೇಲೆ ಸರಿಯಾಗಿ ರೇಗಿದ ಹಾಗೆ ಮಾಡಿ ನಂತರ ಮಗಳನ್ನು ಮದುವೆ ಆಗಲ್ಲು ಒಪ್ಪಿಕೊಂಡಿದ್ದಾರೆ. ಮತ್ತೊಂದೆಡೆ ಭಾರ್ಗಿ, ಚಂಚಲಳನ್ನು ಜಾನಕಿ ವಿರುದ್ಧ ಎತ್ತಿಕೊಟ್ಟುವ ಪ್ರಯತ್ನ ಮಾಡುತ್ತಿದ್ದಾರೆ. ಮುಂದೆ ಓದಿ..

ಚಿರಂತನ್ ಗೆ ಭಾರ್ಗಿ ವಾರ್ನಿಂಗ್
ಚಿರಂತನ್ ಅವರ ಕ್ರಿಮಿನಲ್ ಬ್ಯಾಗ್ರೌಂಡ್ ಬಗ್ಗೆ ಭಾರ್ಗಿ ವಿಚಾರಿಸಿದ್ದಾರೆ. ನಿನ್ನಂತಹ ಕ್ರಿಮಿನಲ್ ವ್ಯಕ್ತಿಗೆ ಮಗಳನ್ನು ಕೊಡುವುದಿಲ್ಲ ಎಂದು ಭಾರ್ಗಿ ರೊಚ್ಚಿಗೆದ್ದಿದ್ದಾರೆ. ನೀನೊಬ್ಬ ಕ್ರಿಮಿನಲ್ ಆಗಿ ಚಂಚಲಳನ್ನು ಪ್ರೀತಿ ಮಾಡುವಷ್ಟು ಧೈರ್ಯ ಬಂತ ಎಂದು ಭಾರ್ಗಿ ಚಿರಂತನ್ ಮೇಲೆ ರೇಗಾಡಿದ್ದಾರೆ. ಅಷ್ಟೆಯಲ್ಲ ಚಿರಂತನ್ ಮೇಲೆ ಕೈ ಮಾಡಲು ಮುಂದಾಗಿದ್ರು ಭಾರ್ಗಿ.

ಭಾರ್ಗಿ ಕ್ರಿಮಿನಲ್ ಬ್ಯಾಗ್ರೌಂಡ್ ಬಿಚ್ಚಿಟ್ಟ ಚಿರಂತನ್
ಸ್ನೇಹಿತ ಮಾಡಿದ ಪ್ರಕರಣದಿಂದ ನಾನೇನು ಅಪರಾದಿ ಅಲ್ಲ. ಅರೋಪ ಬಂದಕ್ಷಣ ಅಪರಾದಿ ಆಗುವುದಿಲ್ಲ. ಚಂಚಲ ತುಂಬ ಹಚ್ಕೊಂಡಿದ್ದಾರೆ. ಒಂದು ವೇಳೆ ನಾನು ಬಿಟ್ಟು ಹೋದೆ ಎಂದು ಚಂಚಲಗೆ ಏನಾದ್ರು ಆದ್ರೆ ಭಾರ್ಗಿನೆ ಹೊಣೆ ಎಂದು ಹೇಳಿ ಭಾರ್ಗಿಯನ್ನು ನಂಬಿಸಿದ್ದಾರೆ ಚಿರಂತನ್. ಚಿರಂತನ್ ಮಾತು ಕೇಳಿ ಆತನ ಧೈರ್ಯ ಮೆಚ್ಚಿ ಬೇಶ್ ಅಂದಿದ್ದಾರೆ ಭಾರ್ಗಿ. ಮುಂದೆ ಇಂತಹ ಕ್ರಿಮಿನಲ್ ಪ್ರಕರಣಗಳನ್ನು ಮಾಡಬಾರದು ಎಂದು ವಾರ್ನಿಂಗ್ ಮಾಡಿದ್ದಾರೆ.

ಚಂಚಲ ಮನಸ್ಸಿನಲ್ಲಿ ದ್ವೇಷ ಬಿತ್ತಿದ ಭಾರ್ಗಿ
ಚಂಚಲ ಮತ್ತು ಜಾನಕಿ ಇಬ್ಬರು ಅಕ್ಕ-ತಂಗಿ. ಇಬ್ಬರಿಗೂ ಒಬ್ಬರನ್ನು ಕಂಡರೆ ಇನ್ನೊಬ್ಬರಿಗೆ ತುಂಬಾ ಪ್ರೀತಿ. ಆದ್ರೆ ಭಾರ್ಗಿ ಚಂಚಲ ಬಳಿ ಜಾನಕಿ ಬಗ್ಗೆ ಹೇಳಿ ಧ್ವೇಷದ ಬೀಜ ಬಿತ್ತಿದ್ದಾರೆ. ಚಿರಂತನ್ ಕ್ರಿಮಿನಲ್ ಎಂದು ಜಾನಕಿ ಮದುವೆ ಬೇಡ ಎಂದು ಹೇಳುತ್ತಿದ್ದಾಳೆ. ಆದ್ರೆ ಜಾನಕಿಗೆ ಚಂಚಲ ಹೋಮ್ ಮಿನಿಸ್ಟರ್ ಮನೆಯ ಸೊಸೆ ಆಗಿ ಹೋಗುತ್ತಿರುವುದು ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿ ಜಾನಕಿ ವಿರುದ್ಧ ಚಂಚಲಳನ್ನು ಎತ್ತಿಕಟ್ಟುವ ತಂತ್ರ ಮಾಡುತ್ತಿದ್ದಾರೆ.

ಶ್ಯಾಮಲಾ ಮನೆಯಲ್ಲಿ ಮೈತ್ರಿ
ಮೈತ್ರಿ ಮಹಾನಂದ ಶ್ಯಾಮಲಾ ಅವರ ಮಗಳು ಅಂತ ಗೊತ್ತಿಲ್ಲ. ಆದ್ರೆ ಶ್ಯಾಮಲಾ ಅವರಿಗೆ ಮಾತ್ರ ಮೈತ್ರಿ ಮೇಲೆ ವಿಶೇಷವಾದ ಪ್ರೀತಿ. ಎಲ್ಲೋ ಉಳಿದು ಕೊಳ್ಳುವುದಕ್ಕಿಂತ ಶ್ಯಾಮಲ ಮನೆಯಲ್ಲೆ ಇರಬಹುದೆಂದು ಕೇಳಿಕೊಂಡಿದ್ದಾರೆ. ಅಲ್ಲದೆ ಮೈತ್ರಿ ಮೇಲೆ ವಿಶೇಷವಾದ ಅಕ್ಕರೆ ಇದೆ ಎಂದು ಹೇಳಿದ್ದಾರೆ. ಸಿ ಎಸ್ ಪಿ ಪುತ್ರ ಮಧುಕರ ಅನ್ನು ಭೇಟಿಯಾದ ಬಗ್ಗೆ ಹೇಳಿ, ಊಟ ಮಾಡಿ ಹೊರಟು ಹೋಗಿದ್ದಾರೆ.

ಚಿರಂತನ್ ಬಳಿ ಸತ್ಯ ಕೇಳಿದ ಚಂಚಲ
ಇಬ್ಬರು ಸ್ನೇಹಿತರು ಹಾಗಾಗಿ ಅವರಿಗೆ ಸಹಾಯ ಮಾಡಿದೆ. ಆದ್ರೆ ಸ್ನೇಹಿತ ಮಾಡಿದ ಕೆಲಸಕ್ಕೆ ನಾನೆನು ಮಾಡೋಕೆ ಆಗುತ್ತೆ. ಆದ್ರೆ ಸಿ ಎಸ್ ಪಿ ದುರಹಂಕಾರಿ, ಕೇಸ್ ತೆಗೆದುಕೊಳ್ಳಲು ಒಪ್ಪಲಿಲ್ಲ. ನಂತರ ಬೇರೆ ವಕೀಲರನ್ನು ಸಂಪರ್ಕಿಸಿದ್ವಿ ಎಂದು ಹೇಳಿ ಚಂಚಲಳನ್ನು ಒಪ್ಪಿಸಿದ್ದಾರೆ ಚಿರಂತನ್. ಜೊತೆಗೆ ಚಿರಂತನ್ ಮೇಲಿದ್ದ ಮತ್ತೊಂದು ಕ್ರಿಮಿನಲ್ ಕೇಸ್ ಬಗ್ಗೆ ವಿಚಾರಿಸುತ್ತಿದ್ದಾರೆ ಚಂಚಲ. ಚಿರಂತನ್ ಮಾತನ್ನು ನಂಬಿ ಆತನನ್ನೆ ಮದುವೆಯಾಗಿ ಜಾನಕಿ ವಿರದ್ಧ ದ್ವೇಷ ಬೆಳೆಸಿಕೊಳ್ಳುತ್ತಾಳಾ ಚಂಚಲ ಎನ್ನುವುದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ.
mobile summ
ಚಿರಂತನ್ ಅವರ ಕ್ರಿಮಿನಲ್ ಬ್ಯಾಗ್ರೌಂಡ್ ಬಗ್ಗೆ ಭಾರ್ಗಿ ವಿಚಾರಿಸಿದ್ದಾರೆ. ನಿನ್ನಂತಹ ಕ್ರಿಮಿನಲ್ ವ್ಯಕ್ತಿಗೆ ಮಗಳನ್ನು ಕೊಡುವುದಿಲ್ಲ ಎಂದು ಭಾರ್ಗಿ ರೊಚ್ಚಿಗೆದ್ದಿದ್ದಾರೆ. ನೀನೊಬ್ಬ ಕ್ರಿಮಿನಲ್ ಆಗಿ ಚಂಚಲಳನ್ನು ಪ್ರೀತಿ ಮಾಡುವಷ್ಟು ಧೈರ್ಯ ಬಂತ ಎಂದು ಭಾರ್ಗಿ ಚಿರಂತನ್ ಮೇಲೆ ರೇಗಾಡಿದ್ದಾರೆ. ಅಷ್ಟೆಯಲ್ಲ ಚಿರಂತನ್ ಮೇಲೆ ಕೈ ಮಾಡಲು ಮುಂದಾಗಿದ್ರು ಭಾರ್ಗಿ. ಸ್ನೇಹಿತ ಮಾಡಿದ ಪ್ರಕರಣದಿಂದ ನಾನೇನು ಅಪರಾದಿ ಅಲ್ಲ. ಅರೋಪ ಬಂದಕ್ಷಣ ಅಪರಾದಿ ಆಗುವುದಿಲ್ಲ. ಚಂಚಲ ತುಂಬ ಹಚ್ಕೊಂಡಿದ್ದಾರೆ. ಒಂದು ವೇಳೆ ನಾನು ಬಿಟ್ಟು ಹೋದೆ ಎಂದು ಚಂಚಲಗೆ ಏನಾದ್ರು ಆದ್ರೆ ಭಾರ್ಗಿನೆ ಹೊಣೆ ಎಂದು ಹೇಳಿ ಭಾರ್ಗಿಯನ್ನು ನಂಬಿಸಿದ್ದಾರೆ ಚಿರಂತನ್.