ಸನ್ಯಾಸತ್ವ ಪಡೆದ್ರಾ 'ಬಿಗ್ ಬಾಸ್' ಸ್ಪರ್ಧಿ: ಚೈತ್ರಾ ಕೊಟೂರು ಸ್ಪಷ್ಟನೆ
ಕನ್ನಡ ಚಲನಚಿತ್ರ ನಟಿ, ಬಿಗ್ ಬಾಸ್ ಮಾಜಿ ಸ್ಪರ್ಧಿ ಚೈತ್ರಾ ಕೊಟೂರ್ ಸನ್ಯಾಸತ್ವ ಸ್ವೀಕರಿಸಿದರಾ ಎಂಬ ಅನುಮಾನ ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತವಾಗಿದೆ. ಅದಕ್ಕೆ ಕಾರಣ ಸ್ವತಃ ಚೈತ್ರಾ ಹಾಕಿಕೊಂಡಿದ್ದ ಪೋಸ್ಟ್.
ಓಶೊ ಧ್ಯಾನ ಮಂದಿರಕ್ಕೆ ಭೇಟಿ ನೀಡಿದ್ದ ಚೈತ್ರಾ ಕೊಟೂರು ತಮ್ಮ ಹೆಸರು ಬದಲಿಸಿಕೊಂಡಿರುವ ಬಗ್ಗೆ ಮಾಹಿತಿ ನೀಡಿದ್ದರು. 'ಮಾ ಪ್ರಜ್ಞಾ ಭಾರತಿ' ಎಂದು ಗುರುಗಳು ನಾಮಕರಣ ಮಾಡಿದ್ದಾರೆ ಎಂದು ಹೇಳಿ ಆಶ್ರಮವಾಸಿಯಂತೆ ಕಾಣಿಸಿಕೊಂಡಿದ್ದರು.
ಇದನ್ನೆಲ್ಲಾ ಗಮನಿಸಿದ ಚೈತ್ರಾ ಕೊಟೂರು ಹಿಂಬಾಲಕರು 'ಖಾಸಗಿ ಜೀವನದಲ್ಲಿ ನಡೆದ ಕೆಲವು ಘಟನೆಗಳ ಪರಿಣಾಮ ನಟಿ ಸನ್ಯಾಸತ್ವ ಪಡೆದಿರಬೇಕು' ಎಂದು ಮಾತನಾಡಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಸ್ಪಷ್ಟನೆ ಕೊಟ್ಟಿರುವ ಚೈತ್ರಾ ನಾನು ಸನ್ಯಾಸಿಯಾಗಿಲ್ಲ ಎಂದಿದ್ದಾರೆ.

''ಓಶೋ ಸನ್ಯಾಸ ದೀಕ್ಷೆ ಅಂದರೆ, ಎಲ್ಲವನ್ನೂ ತ್ಯಜಿಸುವುದಲ್ಲ! ಮಠವಂತೂ ಅಲ್ಲವೇ ಅಲ್ಲ! ಎಲ್ಲದರೊಳಗೇ ಇದ್ದುಕೊಂಡು ಬದುಕನ್ನು ಹೆಚ್ಚು ಸಂತೋಷಮಯವಾಗಿ, ಅರ್ಥಪೂರ್ಣವಾಗಿ ಬದುಕುವುದು'' ಎಂದು ಫೇಸ್‌ಬುಕ್‌ನಲ್ಲಿ ಮತ್ತೊಂದು ಪೋಸ್ಟ್ ಹಾಕಿದ್ದಾರೆ.
ಏಪ್ರಿಲ್ ತಿಂಗಳಲ್ಲಿ ಚೈತ್ರಾ ಕೊಟೂರು, ನಾಗಾರ್ಜುನ ಎಂಬುವರೊಟ್ಟಿಗೆ ದೇವಸ್ಥಾನದಲ್ಲಿ ವಿವಾಹವಾಗಿದ್ದರು. ಆದರೆ ವಿವಾಹವಾದ ದಿನವೇ ಪೊಲೀಸ್ ಠಾಣೆ ಮೆಟ್ಟಿಲು ಏರಿ ಸಾಕಷ್ಟು ವಿವಾದಕ್ಕೆ ಕಾರಣವಾಗಿತ್ತು. ಬಲವಂತದಿಂದ ಮದುವೆ ಮಾಡಲಾಗಿದೆ ಎಂದು ನಾಗಾರ್ಜುನ ದೂರು ನೀಡಿದ್ದರು. ಇದಾದ ಬಳಿಕ ಚೈತ್ರಾ ಕೊಟೂರು ಆತ್ಮಹತ್ಯೆಗೆ ಯತ್ನಿಸಿದ್ದರು. ಇದೆಲ್ಲ ವಿವಾದಗಳ ಬಳಿಕ ಈಗ ಅಧ್ಯಾತ್ಮಕ ಕಡೆಗೆ ವಾಲಿಕೊಂಡಿದ್ದಾರೆ ಚೈತ್ರಾ.


Click it and Unblock the Notifications











