»   » ತೆಲುಗು ತೆರೆಗೆ ಕನ್ನಡದ ಹಾರರ್ ಚಿತ್ರ '6-5=2'

ತೆಲುಗು ತೆರೆಗೆ ಕನ್ನಡದ ಹಾರರ್ ಚಿತ್ರ '6-5=2'

Posted By:
Subscribe to Filmibeat Kannada

ಈಗಾಗಲೆ ಹಿಂದಿ ಭಾಷೆಗೆ ಡಬ್ ಆಗಿರುವ ಕನ್ನಡದ ಹಾರರ್ ಚಿತ್ರ '6-5=2' ಇದೀಗ ಹೊಸ ರೂಪದಲ್ಲಿ ತೆಲುಗು ತೆರೆ ಬೆಳಗಲು ಸಿದ್ಧವಾಗಿದೆ. ತೆಲುಗಿನಲ್ಲಿ ಈ ಚಿತ್ರಕ್ಕೆ 'ಚಿತ್ರಮ್ ಕಾದು ನಿಜಮ್' ಎಂದು ಹೆಸರಿಡಲಾಗಿದ್ದು 'True Footage Film' ಎಂಬ ಅಡಿಬರಹ ನೀಡಲಾಗಿದೆ.

ಕಡಿಮೆ ಬಜೆಟ್ ನಲ್ಲಿ ನಿರ್ಮಿಸಿದ ಈ ಚಿತ್ರ ಸ್ಯಾಂಡಲ್ ವುಡ್ ನಲ್ಲಿ ಸಂಚಲನ ಮೂಡಿಸಿತ್ತು. ಕೇವಲ ರು.30 ಲಕ್ಷದಲ್ಲಿ ನಿರ್ಮಿಸಿದ ಈ ಚಿತ್ರ ಬಾಕ್ಸ್ ಆಫೀಸಲ್ಲಿ ರು.5 ಕೋಟಿ ಬಾಚಿ ಗಾಂಧಿನಗರ ಬೆಚ್ಚಿ ಬೀಳುವಂತೆ ಮಾಡಿದ್ದು ಇತಿಹಾಸ. [6-5=2 ಚಿತ್ರ ವಿಮರ್ಶೆ]

'Chitram Kadu Nijam' releases on 3rd April

ಎಲ್ಲರೂ ಹೊಸಬರೇ ಕೂಡಿಕೊಂಡು ತಯಾರಿಸಿದ ಈ ಚಿತ್ರಕ್ಕೆ ಅದ್ಭುತ ಪ್ರತಿಕ್ರಿಯೆ ಸಿಕ್ಕಿತು. ಅನ್ಯ ಭಾಷೆಯ ಚಿತ್ರೋದ್ಯಮದ ಗಮನವನ್ನೂ ಸೆಳೆಯುವಲ್ಲಿ ಯಶಸ್ವಿಯಾಯಿತು. 2010ರಲ್ಲಿ ಒಂದು ಕ್ಯಾಮೆರಾ ದೊರಕಿದ್ದು, ಆ ಕ್ಯಾಮೆರಾದ ಟೇಪನ್ನು ಚಿತ್ರಮಂದಿರಗಳಲ್ಲಿ ಪ್ರದರ್ಶನ ಮಾಡಲಾಗುತ್ತದೆ ಎಂದು ಚಿತ್ರತಂಡ ಹೇಳಿಕೊಂಡಿತ್ತು.

ಇದು ನಿಜವಾಗಿಯೂ ನಡೆದ ಘಟನೆ ಎಂಬಂತೆ ಬಿಂಬಿಸಲಾಗಿತ್ತು. ಆದರೆ ಚಿತ್ರ ತೆರೆಕಂಡ ಸ್ವಲ್ಪ ದಿನಕ್ಕ್ಕೆ ಅದರ ಅಸಲಿ ಕಥೆ ಗೊತ್ತಾಯಿತು. ಇದೂ ಒಂದು ಕಾಲ್ಪನಿಕ ಚಿತ್ರ ಎಂಬುದನ್ನು ಪ್ರೇಕ್ಷಕರು ಅರ್ಥ ಮಾಡಿಕೊಂಡರು. ಅಷ್ಟರಲ್ಲಾಗಲೆ ಚಿತ್ರ ಕೋಟಿಗಟ್ಟಲೆ ಕೊಳ್ಳೆಹೊಡೆದಿತ್ತು. [ಫಿಲ್ಮಿಬೀಟ್ ಕನ್ನಡ ಉಚಿತ ಸುದ್ದಿಸಾರಂಗಿ]

ಕನ್ನಡ ಚಿತ್ರೋದ್ಯಮವನ್ನು ದಿಗ್ಭ್ರಮೆಗೊಳಿಸಿದ ಈ ಚಿತ್ರ ಇದೀಗ ಹೊಸ ರೂಪದಲ್ಲಿ ತೆಲುಗಿನಲ್ಲಿ ಇದೇ ಏಪ್ರಿಲ್ 3ರಂದು ಬಿಡುಗಡೆಯಾಗುತ್ತಿದೆ. ಹಾರರ್, ಸಸ್ಪೆನ್ಸ್ ಚಿತ್ರಗಳಿಗೆ ತೆಲುಗಿನಲ್ಲಿ ಬಲು ಬೇಡಿಕೆ ಇದೆ. ಈ ಚಿತ್ರ ಅಲ್ಲೂ ಹಿಟ್ ಆದರೆ '6-5=2' ಚಿತ್ರ ಮತ್ತೊಂದು ಮೈಲುಗಲ್ಲು ತಲುಪಿದಂತಾಗುತ್ತದೆ. (ಏಜೆನ್ಸೀಸ್)

English summary
Telugu horror movie 'Chitram Kadu Nijam', remake of Kannada movie '6-5=2' will be released on 3rd April in Tollywood. It is the story of six friends, who go to trekking in a forest and go missing one by one.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada