Don't Miss!
- News
ರಾಜ್ಯಕ್ಕೆ ಅಮಿತ್ ಶಾ ಆಗಮನ; ಕಿತ್ತೂರು ಕರ್ನಾಟಕದಲ್ಲಿ ಸಂಚಲನ: ಬಸವರಾಜ ಬೊಮ್ಮಾಯಿ
- Sports
ನಾವು ಆಡುವುದನ್ನು ನೋಡಲು ಜನ ಬಂದಿಲ್ಲ: ಆತನಿಗಾಗಿ ಜನ ಬಂದಿದ್ದಾರೆ ಎಂದ ನ್ಯೂಜಿಲೆಂಡ್ ಕ್ರಿಕೆಟಿಗ
- Technology
ಶೀಘ್ರದಲ್ಲೇ ಭಾರತಕ್ಕೆ ಎಂಟ್ರಿ ನೀಡಲಿದೆ ಸ್ಯಾಮ್ಸಂಗ್ ಗ್ಯಾಲಕ್ಸಿ S23! ಫೀಚರ್ಸ್ ನಿರೀಕ್ಷೆ ಏನು?
- Lifestyle
ಬೆಳ್ಳಿಯ ಆಭರಣಗಳು ಹೊಳಪಿನಿಂದ ಕೂಡಿರಲು ಈ ಟ್ರಿಕ್ಸ್ ಬಳಸಿ
- Automobiles
ಟಾಟಾದ ಜನಪ್ರಿಯ ಕಾರುಗಳ ಬೆಲೆ ಏರಿಕೆ: ಘೋಷಣೆ
- Finance
ಹಿಂಡನ್ಬರ್ಗ್ vs ಅದಾನಿ ನಡುವೆ ಎಲ್ಐಸಿ, ಎಸ್ಬಿಐ ಉಳಿತಾಯ ರಿಸ್ಕ್ನಲ್ಲಿದೆಯೇ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಅನ್‌ಲಾಕ್‌ನಿಂದ ಥಿಯೇಟರ್‌ಗಿಲ್ಲ ರಿಲೀಫ್: ಇನ್ನಷ್ಟು ದಿನ ಕಷ್ಟ ತಪ್ಪಿದ್ದಲ್ಲ!
ಜೂನ್ 14ರ ನಂತರ ಕರ್ನಾಟಕದಲ್ಲಿ ಅನ್‌ಲಾಕ್ ಪ್ರಕ್ರಿಯೆ ಆರಂಭಿಸಲಾಗುತ್ತದೆ ಎಂಬ ಸುದ್ದಿ ಚಾಲ್ತಿಯಲ್ಲಿದೆ. ಕೊರೊನಾ ಸೋಂಕಿನ ಪ್ರಮಾಣದಲ್ಲಿ ಇಳಿಕೆ ಕಂಡಿರುವ ಜಿಲ್ಲೆಗಳನ್ನು ಅನ್‌ಲಾಕ್ ಮಾಡಿ, ಹಂತ ಹಂತವಾಗಿ ಜನರ ಓಡಾಟ ಹಾಗೂ ಚಟುವಟಿಕೆಗಳನ್ನು ಪ್ರಾರಂಭಿಸಲು ಅನುವು ಮಾಡಿಕೊಡಲು ಸರ್ಕಾರ ಮುಂದಾಗಿದೆ.
ತಾಂತ್ರಿಕ ಸಲಹಾ ಸಮಿತಿ ಸೂಚನೆ ಮೆರೆಗೆ ನಾಲ್ಕು ಹಂತಗಳಲ್ಲಿ ಅನ್‌ಲಾಕ್ ಮಾಡುವ ಪ್ರಕ್ರಿಯೆಗೆ ರಾಜ್ಯ ಸರ್ಕಾರ ಚಿಂತಿಸಿದೆ. ಈ ಹಿನ್ನೆಲೆ ನೋಡಿದ್ರೆ ಚಿತ್ರರಂಗಕ್ಕೆ ಇದು ನಿರಾಸೆ ತಂದಿದೆ. ಜೂನ್ 14 ರಿಂದ ಅನ್‌ಲಾಕ್ ಮಾಡಿದರೂ ಚಿತ್ರಮಂದಿರಗಳಿಗೆ ರಿಲೀಫ್ ಸಿಗುವುದು ಇನ್ನಷ್ಟು ತಡವಾಗಬಹುದು. ಸಿನಿಮಾ ಥಿಯೇಟರ್‌ಗಳಿಂದ ಸೋಂಕು ಬೇಗ ಹರಡುವ ಸಾಧ್ಯತೆ ಎಂದು ತಾಂತ್ರಿಕಾ ಸಲಹಾ ಸಮಿತಿ ಅಭಿಪ್ರಾಯಪಟ್ಟಿದ್ದು, ಈ ತಿಂಗಳ ಅಂತ್ಯದವರೆಗೂ ಚಿತ್ರಮಂದಿರಗಳು ಬಂದ್ ಮುಂದುವರಿಯಬಹುದು. ಮುಂದೆ ಓದಿ...
ಕರ್ನಾಟಕ
ಲಾಕ್‌ಡೌನ್:
ಚಿತ್ರಮಂದಿರ,
ಚಿತ್ರೀಕರಣದ
ಮೇಲಿನ
ನಿರ್ಬಂಧ
ಮುಂದುವರಿಕೆ

ಮೊದಲನೇ ಹಂತದಲ್ಲಿ ಚಿತ್ರಮಂದಿರ ಇರಲ್ಲ
ನಾಲ್ಕು ಹಂತಗಳಲ್ಲಿ ಅನ್‌ಲಾಕ್ ಪ್ರಕ್ರಿಯೆ ಆರಂಭಿಸಲು ಸರ್ಕಾರ ನಿರ್ಧರಿಸಿದ್ದು, ಕಡಿಮೆ ಸೋಂಕು, ಸಾಧಾರಣ ಸೋಂಕು, ಹೆಚ್ಚು ಸೋಂಕು ಎಂದು ವಿಂಗಡಿಸಿ ಅನ್‌ಲಾಕ್ ಮಾಡಲಾಗುವುದು. ಮೊದಲ ಹಂತದಲ್ಲಿ ಕಡಿಮೆ ರಿಸ್ಕ್ ಕ್ಷೇತ್ರಗಳಿಗೆ ರಿಲೀಫ್ ಸಿಗಲಿದೆ. ಈ ಹಂತದಲ್ಲಿ ಚಿತ್ರಮಂದಿರಗಳು ಸೇರಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.

ನಾಲ್ಕನೇ ಹಂತದಲ್ಲಿ ಸಿನಿಮಾ ಥಿಯೇಟರ್
ಸಿನಿಮಾ ಥಿಯೇಟರ್‌ಗಳನ್ನು ಹೈ ರಿಸ್ಕ್ ವಿಭಾಗಕ್ಕೆ ಸೇರಿಸಲಾಗಿದೆ. ಹಾಗಾಗಿ, ನಾಲ್ಕನೇ ಅಂದ್ರೆ ಕೊನೆಯ ಹಂತದಲ್ಲಿ ಚಿತ್ರಮಂದಿರಗಳು ತೆರೆಯಲು ಅನುಮತಿ ನೀಡುವ ಲೆಕ್ಕಾಚಾರ ಸರ್ಕಾರದ ಮುಂದಿದೆ.
ಚಿತ್ರಮಂದಿರಗಳು
ಸಂಪೂರ್ಣ
ಬಂದ್:
ಸರ್ಕಾರ
ಆದೇಶ

50 ಪರ್ಸೆಂಟ್ ಮಾತ್ರ!
ನಾಲ್ಕನೇ ಹಂತದಲ್ಲಿ ಚಿತ್ರಮಂದಿರಗಳಿಗೆ ಅವಕಾಶ ಕೊಟ್ಟರೂ 100 ಪರ್ಸೆಂಟ್ ನೀಡಲ್ಲ. ಆರಂಭಿಕವಾಗಿ ಕೇವಲ 50 ಪರ್ಸೆಂಟ್ ಮಾತ್ರ ಅನುಮತಿಸಲಾಗುತ್ತದೆ. ಹಾಗ್ನೋಡಿದ್ರೆ ಜೂನ್ ಅಂತ್ಯದವರೆಗೂ ಥಿಯೇಟರ್‌ಗಳು ತೆರೆಯುವ ಸಾಧ್ಯತೆ ಬಹುತೇಕ ಕಡಿಮೆ ಎನ್ನಲಾಗುತ್ತಿದೆ.
Recommended Video

ಸಭೆ ಬಳಿಕ ತೀರ್ಮಾನ
ಸೋಮವಾರದಿಂದ ಅನ್‌ಲಾಕ್ ಮಾಡಬೇಕಾ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಗುರುವಾರ ಸಂಜೆ ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದಲ್ಲಿ ಸಭೆ ನಡೆಯಲಿದೆ. ಈ ಸಭೆಯಲ್ಲಿ ಅನ್‌ಲಾಕ್ ಕುರಿತು ಅಂತಿಮ ನಿರ್ಧಾರ ಕೈಗೊಳ್ಳಲಿದ್ದು, ಆನಂತರ ಹೊಸ ಮಾರ್ಗಸೂಚಿ ಹೊರಬೀಳಲಿದೆ.