For Quick Alerts
  ALLOW NOTIFICATIONS  
  For Daily Alerts

  ಗುಣಮಟ್ಟದ ಶಿಕ್ಷಣಕ್ಕೆ ಡಾ.ರಾಜ್ ಅಕಾಡೆಮಿಯಿಂದ ಮತ್ತೊಂದು ಮಹತ್ವದ ಕಾರ್ಯ

  |

  ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಕ್ಷರ ಕ್ರಾಂತಿಯಲ್ಲಿ ಇನ್ನೊಂದು ಹೆಜ್ಜೆ ಇಟ್ಟ ಬೆನ್ನಲ್ಲೇ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಸಹ ಗುಣಮಟ್ಟದ ಶಿಕ್ಷಣಕ್ಕೆ ಮುಂದಾಗಿದ್ದಾರೆ. ಸುದೀಪ್ ಚಾರಿಟೇಬಲ್​ ಸೊಸೈಟಿ ಮೊದಲ ಹಂತವಾಗಿ ಶಾಲೆಗಳನ್ನು ದತ್ತು ಪಡೆದುಕೊಳ್ಳುವ ಕೆಲಸ ಯಶಸ್ವಿ ಆಗಿದ್ದು, ಈಗ ಮುಂದಿನ ಹಂತವಾಗಿ ಆ ಮಕ್ಕಳಿಗೆ ಸರಿಯಾದ ರೀತಿಯ ಶಿಕ್ಷಣ ಕೊಡಿಸುವ ಕೆಲಸದತ್ತ ಗಮನಹರಿಸಿದೆ. ಆನ್ ಲೈನ್ ಕ್ಲಾಸ್ ನಲ್ಲಿ ಆಗುವ ಕಿರಿಕಿರಿ ತಡೆಯಲು ಉತ್ತಮವಾದ ಪ್ಲಾನ್ ಮಾಡಿದ್ದು, ಹೊಸ ಆಪ್ ಪರಿಚಯಿಸಿ ಆ ಮೂಲಕ ಮಕ್ಕಳಿಗೆ ಆನ್ ಲೈನ್ ಕ್ಲಾಸ್ ಮಾಡಲು ಮುಂದಾಗಿದೆ.

  ಅಪ್ಪನ ಆಸೆ ಬೆನ್ನೆಲುಬಾಗಿ ನಿಂತ ಪುನೀತ್

  ಇದೀಗ ಡಾ.ರಾಜ್ ಕುಮಾರ್ ಅಕಾಡೆಮಿ ಕೂಡ ಶಿಕ್ಷಣದ ಕಡೆ ಹೆಚ್ಚು ಗಮನ ಹರಿಸುತ್ತಿದೆ. ಶಿಕ್ಷಣದ ದಾರಿಯಲ್ಲಿ ಇನ್ನೊಂದು ಹೆಜ್ಜೆ ಇಟ್ಟಿರುವ ಡಾ.ರಾಜ್ ಕುಮಾರ್ ಅಕಾಡೆಮಿ ವಿಶೇಷ ಲರ್ನಿಂಗ್ ಆಪ್ ತಯಾರಿಕೆ ಮಾಡಿದೆ. ಡಾ.ರಾಜ್ ಕುಮಾರ್ ಲರ್ನಿಂಗ್ ಆಪ್ ಅನ್ನು ಸಿಎಂ ಬಸವರಾಜ ಬೊಮ್ಮಾಯಿ ಲೋಕಾರ್ಪಣೆ ಮಾಡಿದರು. ಡಾ.ರಾಜ್ ಕುಮಾರ್ ಅಕಾಡೆಮಿ ಈಗಾಗಲೇ ನಾಗರೀಕ ಸೇವಾ ಪರೀಕ್ಷೆ ತರಬೇತಿಯಲ್ಲಿ ಹೆಸರು ಮಾಡಿದೆ.

  ಸ್ವಾತಂತ್ರ್ಯ ದಿನಕ್ಕೆ 'ಜೇಮ್ಸ್' ಆಗಿ ಸೈನಿಕರ ಜೊತೆ ಬಂದ ಅಪ್ಪುಸ್ವಾತಂತ್ರ್ಯ ದಿನಕ್ಕೆ 'ಜೇಮ್ಸ್' ಆಗಿ ಸೈನಿಕರ ಜೊತೆ ಬಂದ ಅಪ್ಪು

  ಕೊರೊನಾ ಪರಿಣಾಮ ಶಾಲೆಗಳು ಬಂದ್ ಆಗಿದ್ದು, ಮಕ್ಕಳು ಆನ್ ಲೈನ್ ಕ್ಲಾಸ್ ಮೊರೆಹೋಗಿದ್ದಾರೆ. ವಿದ್ಯಾರ್ಥಿಗಳ ಶಿಕ್ಷಣ ಕಷ್ಟ ಆಗುತ್ತಿದೆ ಈ ಕಾರಣಕ್ಕೆ ಹೊಸ ಆಪ್ ಬಿಡುಗಡೆ ಮಾಡಿದ್ದು, ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುತ್ತಿದೆ ಡಾ.ರಾಜ್ ಅಕಾಡೆಮಿ. ಈ ಆಪ್ ಅನ್ನು ಪಿಯುಸಿ ವಿದ್ಯಾರ್ಥಿಗಳು ಉಪಯೋಗಿಸಿಕೊಳ್ಳಬಹುದು.

  ಆಪ್ ಲೋಕಾರ್ಪಣೆ ವೇಳೆ ಸಿಎಂ ಬೊಮ್ಮಾಯಿ ಜೊತೆ ರಾಜ್ ಕುಟುಂಬದವರಾದ ರಾಘವೇಂದ್ರ ರಾಜ್ ಕುಮಾರ್, ಪುನೀತ್ ರಾಜ್ ಕುಮಾರ್ ಮತ್ತು ರಾಘಣ್ಣ ಮಕ್ಕಳು ಹಾಜರಿದ್ದರು. ಆಪ್ ಲೋಕಾರ್ಪಣೆ ಮಾಡಿ ಮಾತನಾಡಿದ ಸಿ ಎಂ ಬೊಮ್ಮಾಯಿ,

  "ಡಾ. ರಾಜ್ ಕುಮಾರ್ ಅಂದ್ರೆ ಒಬ್ಬ ಸಾಧಕ. ಈ ಮಾತು ಹೇಳೋಕೆ ಕಾರಣ ಸ್ವಾಮಿ ವಿವೇಕಾನಂದ ಹೇಳಿದ ಮಾತು. ಸಾಧಕನಿಗೆ ಸಾವು ಅಂತ್ಯವಲ್ಲ.ಸಾವಿನ ನಂತರವೂ ಸಾಧನೆ ಬದುಕಿರುತ್ತೆ, ಅಂತಹ ಸಾಧನೆ ಮಾಡಿದಂತಹ ಕರ್ನಾಟಕದ ಸ್ಟಾರ್‌. ರಾಜ್ ಕುಮಾರ್ ಸ್ಟಾರ್ ಅಂದ್ರೆ ಸಿನಿಮಾ ಸ್ಟಾರ್ ಅಲ್ಲ. ಆಕಾಶದಲ್ಲಿರೋ ದೊಡ್ಡ ನಕ್ಷತ್ರ. ಅದು ರಾಜ್ ಕುಮಾರ್. ಅವರ ನುಡಿ, ಮೌಲ್ಯ, ಸರಳತನವನ್ನ ನಾವು ಕಲಿಬೇಕು" ಎಂದು ಬೊಮ್ಮಾಯಿ ಹೇಳಿದರು.

  "ಅದರಲ್ಲೂ ನಾವು ಅಧಿಕಾರದಲ್ಲಿದ್ದವರು ರಾಜ್ ಕುಮಾರ್ ಗುಣಗಳನ್ನು ಕಲಿಯಬೇಕು. ರಾಜ್ ಕುಮಾರ್ ಅಷ್ಟು ಹಂಬಲ್ ಆಗಿರೋದಕ್ಕೆ ಯಾರಿಂದಲೂ ಸಾಧ್ಯವಿಲ್ಲ. ರಾಜ್ ಕುಮಾರ್ ಒಬ್ಬ ವಿದ್ಯಾರ್ಥಿ. ಪ್ರತಿ ಕ್ಷಣದಲ್ಲೂ ಕಲಿಯುವ ಹಂಬಲ ಇತ್ತು. ಅವರಲ್ಲಿ ಮುಗ್ಧತೆ ಎಂದೂ ಕಡಿಮೆ ಆಗಿರಲಿಲ್ಲ" ಎಂದು ಹೇಳಿದರು.

  "ಅವರ ರಿಯಲ್‌ ಕ್ಯಾರೆಕ್ಟರ್ ಬಹಳ ದೊಡ್ಡದು. ಅದನ್ನ ಅರ್ಥ ಮಾಡಿಕೊಳ್ಳೊದು ಕಷ್ಟ. ನೀವು ಮಕ್ಕಳಿಗೆ ಜ್ಞಾನ. ಈಗಿನ ಪ್ರಪಂಚದಲ್ಲಿ ಜ್ಞಾನ ಇದ್ದೋರಿಗೆ ಮಾತ್ರ‌ ಎಲ್ಲವೂ ಸಿಗುತ್ತೆ. ಜ್ಞಾನಕ್ಕೆ ದೊಡ್ಡ ಬೆಲೆ ಇದೆ. ಜ್ಞಾನದ ಕ್ಷೇತ್ರಕ್ಕೆ‌ ಡಾ.ರಾಜ್ ಕುಮಾರ್ ಲರ್ನಿಂಗ್ ಆಪ್ ಸೇರಿದೆ. ಇದು ದೊಡ್ಡ ಸಾಧನೆ" ಎಂದರು.

  "ಮಕ್ಕಳಿಗೆ ಕೇವಲ ಬೋಧನೆ ಮಾಡಿದ್ರೆ ಪ್ರಯೋಜನವಿಲ್ಲ. ಚಿಂತನೆಗೆ ಹಚ್ಚಬೇಕು. ಆಗ ಮಾತ್ರ ಕಲಿಕೆ‌ ಸಾಧ್ಯ. ರಾಜ್ ಕುಮಾರ್ ಅಕಾಡೆಮಿ ಬಹಳ ಅದ್ಭುತವಾದ ಕೆಲಸ ಮಾಡುತ್ತಿದೆ. ನೀವು ಇಡೀ ಜಗತ್ತಿಗೆ ರೀಚ್ ಆಗುತ್ತೀರಿ. ಪ್ರಧಾನ ಮಂತ್ರಿಗಳು ನ್ಯೂ ಎಜುಕೇಶನ್ ಪಾಲಿಸಿ ಮಾಡಿದ್ದಾರೆ ರಾಜ್ ಕುಮಾರ್ ಲರ್ನಿಂಗ್ ಆಪ್ ನ್ಯೂ ಎಜುಕೇಶನ್ ಪಾಲಿಸಿ ಬಹಳ ಉಪಯೋಗ ಆಗುತ್ತೆ. ಕರ್ನಾಟಕದಲ್ಲಿ ನ್ಯೂ ಎಜುಕೇಶನ್ ಪಾಲಿಸಿಯನ್ನು ಮೊದಲು ಅಳವಡಿಸಿಕೊಳ್ಳುತ್ತದೆ" ಎಂದು ತಿಳಿಸಿದರು.

  ಇನ್ನು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಈ ಬಗ್ಗೆ ಟ್ವೀಟ್ ಮಾಡಿ ಲರ್ಲಿಂಗ್ ಆಪ್ ಬಗ್ಗೆ ಮಾಹಿತಿ ನೀಡಿದ್ದಾರೆ. ಜೊತೆಗೆ ಒಂದು ವಿಡಿಯೋವನ್ನು ಶೇರ್ ಮಾಡಿದ್ದಾರೆ. "ಡಾ. ರಾಜ್‌ಕುಮಾರ್ ಲರ್ನಿಂಗ್ ಆಪ್ ಗುಣಮಟ್ಟದ ಶಿಕ್ಷಣ ಎಲ್ಲರಿಗಾಗಿ. ಬನ್ನಿ ಮುಂದೆ ಸಾಗೋಣ" ಎಂದು ಹೇಳಿದ್ದಾರೆ.

  ಇನ್ನು ಸುದೀಪ್ ಚಾರಿಟೇಬಲ್ ಸೊಸೈಟಿ ಬಿಡುಗಡೆ ಮಾಡುತ್ತಿರುವ ಆಪ್ ನಲ್ಲಿ​ ಆಲ್ ಲೈನ್ ಕ್ಲಾಸ್ ನಿಂದ ಆಗುತ್ತಿರುವ ಕಿರಿಕಿರಿಯನ್ನು ತಪ್ಪಿಸಲು ಪ್ಲಾನ್ ಮಾಡಿದ್ದಾರೆ. ಸದ್ಯ ಆನ್‌ ಲೈನ್ ಕ್ಲಾಸ್​ನಲ್ಲಿ ವಿದ್ಯಾರ್ಥಿಗಳು ಶಿಕ್ಷಕರ ಬೆನ್ನು ನೋಡಿಕೊಂಡು ಪಾಠ ಕೇಳುತ್ತಿದ್ದಾರೆ. ಅದರಿಂದ ಪಾಠ ಅರ್ಥ ಆಗದೇ‌ ವಿದ್ಯಾರ್ಥಿಗಳು ಕಷ್ಟಪಡುತ್ತಿದ್ದಾರೆ. ಆದರೆ ಈ ಆಪ್ ಬಳಸಿದರೆ ಅಂಥ ಪ್ರಮೇಯ ಎದುರಾಗುವುದಿಲ್ಲ ಎಂಬ ಭರವಸೆಯನ್ನು ಕಿಚ್ಚ ಸದೀಪ್​ ಚಾರಿಟೇಬಲ್​ ಸೊಸೈಟಿ ನೀಡಿದೆ.

  ಡಾರ್ಕ್ ಬೋರ್ಡ್ ಆನಿಮೇಷನ್ ಎಜುಕೇಷನ್ ಎಂಬ ಆಪ್ ಬಳಸಿ ಆನ್ ​ಲೈನ್ ಕ್ಲಾಸ್ ಮಾಡಬಹುದು. ಇದರಿಂದ ವಿದ್ಯಾರ್ಥಿಗಳಿಗೆ ದೊಡ್ಡ ಲಾಭ ಇದೆ. ಈ ಆಪ್ ಬಳಸಿ ಪಾಠ ಮಾಡಿದರೆ ಮಕ್ಕಳಿಗೆ ಶಿಕ್ಷಕರ ಪಾಠ ಚೆನ್ನಾಗಿ ಅರ್ಥ ಆಗುತ್ತದೆ. ಶಾಲೆಯಲ್ಲಿ ಡಾರ್ಕ್ ಬೋರ್ಡ್ ರೂಂ ಮಾಡಿ ಪಾಠ ಮಾಡಬಹುದು. ಯಾವುದೇ ವಿಷಯದ ಪಾಠವನ್ನು ರೆಕಾರ್ಡ್ ಮಾಡಿ ಕೂಡ ವಿದ್ಯಾರ್ಥಿಗಳಿಗೆ ಕಳಿಸಬಹುದು ಎಂದು ಚಾರಿಟೇಬಲ್ ಸೊಸೈಟಿಯ ಅಧ್ಯಕ್ಷ ಮಾಹಿತಿ ಬಹಿರಂಗ ಪಡಿಸಿದ್ದಾರೆ.

  English summary
  CM Basavaraj Bommai Launches Dr.Rajkumar learning App for Education.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X