For Quick Alerts
  ALLOW NOTIFICATIONS  
  For Daily Alerts

  'ರಾಜಕುಮಾರ'ನ ರಾಜ್ಯಭಾರ ಕಂಡು ಪುನೀತ್ ಗೆ ಜೈಕಾರ ಹಾಕಿದ ಸಿದ್ದರಾಮಯ್ಯ.!

  By Harshitha
  |

  ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ 'ರಾಜಕುಮಾರ' ಚಿತ್ರ ರಾಜ್ಯಾದ್ಯಂತ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಕ್ಲಾಸ್ ಹಾಗೂ ಮಾಸ್ ಎಂಬ ಭೇದಭಾವ ಇಲ್ಲದೇ ಎಲ್ಲರೂ ಕುಟುಂಬ ಸಮೇತ 'ರಾಜಕುಮಾರ' ಸಿನಿಮಾ ನೋಡಿ ಅಪ್ಪುಗೆ ಜೈಕಾರ ಹಾಕುತ್ತಿದ್ದಾರೆ. ಇದೇ ಸಾಲಿನಲ್ಲಿ ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಇದ್ದಾರೆ ಅಂದ್ರೆ ನೀವೇ ನಂಬಲೇಬೇಕು.['ರಾಜಕುಮಾರ' ನೋಡಿ ಮಗುವಿನಂತೆ ಕಣ್ಣೀರಿಟ್ಟ ಶಿವಣ್ಣ]

  ಕಳೆದ ಹತ್ತು ದಿನಗಳಿಂದ ಉಪ ಚುನಾವಣೆ ಪ್ರಚಾರ, ಕಾರ್ಯತಂತ್ರ ರೂಪಿಸುವಲ್ಲಿ ಮಗ್ನರಾಗಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಮೈಸೂರಿನಲ್ಲಿ ನಿನ್ನೆ (ಏಪ್ರಿಲ್ 9) 'ರಾಜಕುಮಾರ' ಸಿನಿಮಾ ನೋಡುವ ಮೂಲಕ ರಿಲ್ಯಾಕ್ಸ್ ಆದರು.

  ಮೈಸೂರಿನಲ್ಲಿ 'ರಾಜಕುಮಾರ' ದರ್ಶನ ಮಾಡಿದ ಸಿ.ಎಂ

  ಮೈಸೂರಿನಲ್ಲಿ 'ರಾಜಕುಮಾರ' ದರ್ಶನ ಮಾಡಿದ ಸಿ.ಎಂ

  ಹತ್ತು ದಿನಗಳಿಂದ ಮೈಸೂರಿನಲ್ಲೇ ತಂಗಿದ್ದ ಸಿ.ಎಂ ಸಿದ್ದರಾಮಯ್ಯ ನಿನ್ನೆ (ಏಪ್ರಿಲ್ 9) ಮಧ್ಯಾಹ್ನ ಬೆಂಗಳೂರಿಗೆ ಹೊರಡುವ ಮುನ್ನ ಜಯಲಕ್ಷ್ಮಿಪುರದಲ್ಲಿರುವ ಡಿ.ಆರ್.ಸಿ ಮಲ್ಟಿಪ್ಲೆಕ್ಸ್ ಗೆ ತೆರಳಿ ಪುನೀತ್ ರಾಜಕುಮಾರ್ ನಾಯಕ ನಟರಾಗಿ ಅಭಿನಯಿಸಿರುವ ಸಂತೋಷ್ ಆನಂದ್ ರಾಮ್ ನಿರ್ದೇಶಿಸಿರುವ 'ರಾಜಕುಮಾರ' ಚಿತ್ರ ವೀಕ್ಷಿಸಿದರು.

  ಡಾ.ರಾಜ್ ಅಭಿಮಾನಿ

  ಡಾ.ರಾಜ್ ಅಭಿಮಾನಿ

  ಮೊದಲಿನಿಂದಲೂ ವರನಟ ಡಾ.ರಾಜಕುಮಾರ್ ಕಂಡ್ರೆ ಸಿ.ಎಂ ಸಿದ್ದರಾಮಯ್ಯ ರವರಿಗೆ ಎಲ್ಲಿಲ್ಲದ ಅಭಿಮಾನ. ಈಗ ಅವರೇ ಹೆಸರಿನಲ್ಲಿಯೇ 'ರಾಜಕುಮಾರ' ಚಿತ್ರ ಬಿಡುಗಡೆ ಆಗಿರುವುದರಿಂದ, ಸಿನಿಮಾವನ್ನ ವೀಕ್ಷಿಸಲು ಸಿದ್ದರಾಮಯ್ಯ ಮುಂದಾದರು.[ಡಾ.ರಾಜ್ ಕುಮಾರ್ ಮತ್ತು 'ರಾಜಕುಮಾರ': ಕಾಕತಾಳೀಯ ಅಂದ್ರೆ ಇದೇ ನೋಡಿ.!]

  ಸಿದ್ದರಾಮಯ್ಯ-ಅಪ್ಪು ಭೇಟಿ

  ಸಿದ್ದರಾಮಯ್ಯ-ಅಪ್ಪು ಭೇಟಿ

  ಇತ್ತೀಚೆಗಷ್ಟೇ ಕಾರ್ಯಕ್ರಮವೊಂದರಲ್ಲಿ ಮುಖ್ಯಮಂತ್ರಿ ಗಳನ್ನು‌ ಭೇಟಿಯಾಗಿದ್ದ ಪುನೀತ್ ರಾಜ್ ಕುಮಾರ್ ಅವರು ತಮ್ಮ 'ರಾಜಕುಮಾರ' ಚಿತ್ರ ಬಿಡುಗಡೆ ಆಗುತ್ತಿರುವ ವಿಷಯ ತಿಳಿಸಿದ್ದರು. ಅದಾದ ನಂತರವೇ 'ರಾಜಕುಮಾರ' ನೋಡುವ ತವಕ ಸಿದ್ದರಾಮಯ್ಯನವರಲ್ಲಿ ಶುರುವಾಗಿದ್ದು.[ಸ್ಯಾಂಡಲ್ ವುಡ್ ನಲ್ಲಿ ಹೊಸ ದಾಖಲೆ ಬರೆದ 'ರಾಜಕುಮಾರ'ನ ಬೊಂಬೆ.!]

  ಪುನೀತ್ ಜೊತೆ ದೂರವಾಣಿ ಮಾತುಕತೆ

  ಪುನೀತ್ ಜೊತೆ ದೂರವಾಣಿ ಮಾತುಕತೆ

  ಸಿ.ಎಂ ಸಿದ್ದರಾಮಯ್ಯ 'ರಾಜಕುಮಾರ' ಚಿತ್ರ ವೀಕ್ಷಿಸಿರುವ ವಿಚಾರವನ್ನ ಮಾಧ್ಯಮಗಳ ಮೂಲಕ ತಿಳಿದುಕೊಂಡ ಪುನೀತ್ ಅವರು ಮುಖ್ಯಮಂತ್ರಿಗಳೊಂದಿಗೆ ದೂರವಾಣಿ ಮೂಲಕ ಮಾತನಾಡಿದ್ದಾರೆ.

  'ರಾಜಕುಮಾರ'ನ ರಾಜ್ಯಭಾರ ನೋಡಿ ಸಿ.ಎಂ ಹೇಳಿದ್ದೇನು.?

  'ರಾಜಕುಮಾರ'ನ ರಾಜ್ಯಭಾರ ನೋಡಿ ಸಿ.ಎಂ ಹೇಳಿದ್ದೇನು.?

  'ರಾಜಕುಮಾರ' ಚಿತ್ರವನ್ನ ವೀಕ್ಷಿಸಿದ ಸಿ.ಎಂ ಸಿದ್ದರಾಮಯ್ಯ ಪುನೀತ್ ರಾಜ್ ಕುಮಾರ್ ನಟನೆಯನ್ನ ಹಾಡಿ ಹೊಗಳಿದರು. ''ಬೆಳ್ಳಿಪರದೆ ಮೇಲೆ ಡಾ.ರಾಜ್ ಕುಮಾರ್ ರವರನ್ನ ನೋಡಿದ ಹಾಗೇ ಆಯ್ತು. ಅವರ ನಟನೆ ಮತ್ತೊಮ್ಮೆ ಚಿತ್ರದಲ್ಲಿ ನನ್ನ ಕಣ್ಮುಂದೆ ಕಾಣಿಸಿತು. ನಾನು ಕೂಡ ಡಾ.ರಾಜಕುಮಾರ್ ಅಭಿಮಾನಿ'' ಡಾ.ರಾಜ್ ಅವರನ್ನು ಭೇಟಿಯಾದಾಗ ಅವರು "ನಮ್ಮ ಕಾಡಿನವರು ಬಂದರು" ಎಂದು ಹೇಳುತ್ತಿದ್ದುದನ್ನು ಸಿದ್ದರಾಮಯ್ಯ ಇದೇ ವೇಳೆ ಸ್ಮರಿಸಿಕೊಂಡರು.[ವಿಮರ್ಶೆ: ಡಾ'ರಾಜಕುಮಾರ' ಹೆಸರು ಉಳಿಸಿದ ಸಿನಿಮಾ]

  English summary
  Karnataka Chief Minister Siddaramaiah watched Kannada Movie 'Raajakumara' yesterday (April 9th) in Mysore and appreciated Puneeth Rajkumar's acting.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X