Don't Miss!
- News
ಸಿಬಿಎಸ್ಇ ಶಾಲೆ ಎಂದು ಮೋಸ: ಆರ್ಕಿಡ್ ಇಂಟರ್ನ್ಯಾಷನಲ್ ಸ್ಕೂಲ್ ವಿರುದ್ಧ ದೂರು ದಾಖಲಿಸಿದ ಶಿಕ್ಷಣ ಇಲಾಖೆ
- Sports
WIPL 2023: ಮಹಿಳಾ ಐಪಿಎಲ್ ಫ್ರಾಂಚೈಸಿ ಗೆದ್ದ ಆರ್ಸಿಬಿ; ವಿರಾಟ್ ಕೊಹ್ಲಿ ಪ್ರತಿಕ್ರಿಯೆ ಏನು?
- Lifestyle
ಗರುಡ ಪುರಾಣ ಪ್ರಕಾರ ಈ 4 ಗುಣಗಳಿದ್ದರೆ ಆ ವ್ಯಕ್ತಿ ಖಂಡಿತ ಯಶಸ್ವಿಯಾಗುತ್ತಾನೆ
- Technology
WhatsApp: ವಾಟ್ಸಾಪ್ ಮ್ಯಾಕ್ಒಎಸ್ MacOS ಆ್ಯಪ್ ಬಿಡುಗಡೆ! ಇದನ್ನು ಬಳಸುವುದು ಹೇಗೆ?
- Finance
Budget 2023: ಹಲ್ವಾ ಸಮಾರಂಭ ಎಂದರೇನು, ಪ್ರಾಮುಖ್ಯತೆಯೇನು?
- Automobiles
ಬೊಲೆರೊ ನಿಯೋ ಲಿಮಿಟೆಡ್ ಎಡಿಷನ್ ಕುರಿತ ಟಾಪ್ ವಿಷಯಗಳಿವು
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಅರ್ಜುನ್ ಜನ್ಯ ಆಯ್ತು.. ಈಗ ಶಿವಣ್ಣನನ್ನೂ ಹಿಂದಿಕ್ಕಿದ ಅಭಿಮಾನಿ ಕಾಫಿನಾಡು ಚಂದು!
ಕಳೆದ ಕೆಲವು ದಿನಗಳಿಂದ ಎಲ್ಲಿ ನೋಡಿದರೂ ಒಂದೇ ಹೆಸರು ಕೇಳೋಕೆ ಸಿಗುತ್ತಿದೆ. ಅದು ಮತ್ಯಾರೂ ಅಲ್ಲ ಚಿಕ್ಕಮಗಳೂರಿನ ಸೋಶಿಯಲ್ ಮೀಡಿಯಾ ಸ್ಟಾರ್ ಕಾಫಿನಾಡು ಚಂದು. ಕರ್ನಾಟಕ ಮೂಲೆ ಮೂಲೆಯಲ್ಲೂ ಚಂದು ಬಗ್ಗೆನೇ ಮಾತು. ಅವರ ಹಾಡುಗಳದ್ದೇ ಟಾಕ್.
Recommended Video
ಸೋಶಿಯಲ್ ಮೀಡಿಯಾ ಸಾಮಾನ್ಯ ಜನರನ್ನೂ ಸೂಪರ್‌ಸ್ಟಾರ್ ಮಾಡುತ್ತಿದೆ. ತಮ್ಮ ವಿಶಿಷ್ಟ ಟ್ಯಾಲೆಂಟ್‌ನಿಂದ ಅದೆಷ್ಟೋ ಪ್ರತಿಭೆಗಳು ಸೋಶಿಯಲ್ ಮೀಡಿಯಾದಲ್ಲಿ ಜನಪ್ರಿಯರಾಗಿದ್ದಾರೆ. ಕಳೆದ ಕೆಲವು ದಿನಗಳಿಂದ ಕರ್ನಾಟಕದಲ್ಲಿ ಹೆಚ್ಚು ಚರ್ಚೆಯಾಗುತ್ತಿರೋದು ವ್ಯಕ್ತಿ ಇದೇ ಕಾಫಿನಾಡು ಚಂದು.
ಕಾಫಿ ನಾಡು ಚಂದು ಸೋಶಿಯಲ್ ಮೀಡಿಯಾಗಳಲ್ಲಿ ಹುಟ್ಟುಹಬ್ಬಕ್ಕೆ ತಮ್ಮದೇ ಶೈಲಿಯಲ್ಲಿ ಹಾಡುಗಳನ್ನು ಹೇಳುತ್ತಾ ಫೇಮಸ್ ಆಗಿದ್ದಾರೆ. ಅದಕ್ಕೆ ಇನ್‌ಸ್ಟಾಗ್ರಾಂ ಹಾಗೂ ಸೊಶಿಯಲ್ ಮೀಡಿಯಾಗಳಲ್ಲಿ ಸೆಲೆಬ್ರೆಟಿಗಳಿಗಿಂತ ಹೆಚ್ಚು ಫಾಲೋವರ್ಸ್ ಹೊಂದಿದ್ದಾರೆ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಶಿವಣ್ಣ ಹಾಗೂ ಸಂಗೀತ ನಿರ್ದೇಶಕ ಅರ್ಜುನ್ ಜನ್ಯರನ್ನು ಹಿಂದಿಕ್ಕಿದ್ದಾರೆ.

ಸೋಶಿಯಲ್ ಮೀಡಿಯಾ ಸ್ಟಾರ್ ಚಂದು
ಇನ್‌ಸ್ಟಾಗ್ರಾಂನಲ್ಲಿ ಕಾಫಿ ನಾಡು ಚಂದು ಹೆಸರು ಕಳೆದ ಕೆಲವು ದಿನಗಳಿಂದ ತುಂಬಾನೇ ಜನಪ್ರಿಯವಾಗುತ್ತಿದೆ. ಚಂದು ಹಾಡುಗಳಿಗೆ ನೆಟ್ಟಿಗರು ಫಿದಾ ಆಗಿದ್ದಾರೆ. ಕೆಲವರು ಮನರಂಜನೆಗಾಗಿ ಇನ್‌ಸ್ಟಾಗ್ರಾಂನಲ್ಲಿ ಕಾಫಿ ನಾಡು ಚಂದುರನ್ನು ರಂಜಿಸುತ್ತಿದ್ದಾರೆ. ಆರಂಭದಲ್ಲಿ ಹುಟ್ಟುಹಬ್ಬಕ್ಕೆ ಶುಭಾಶಯ ತಿಳಿಸಲು ಚಂದು ಹಾಡಲು ಆರಂಭಿಸಿದ್ದರು. ಬಳಿಕ ನಿಧಾನವಾಗಿ ಜನಪ್ರಿಯರಾಗುತ್ತಿದ್ದಂತೆ ಕನ್ನಡದ ಹಾಡುಗಳನ್ನು ತನ್ನದೇ ಶೈಲಿಯಲ್ಲಿ ಹೇಳುತ್ತಿದ್ದಾರೆ. ಈ ಮೂಲಕ ಸೋಶಿಯಲ್ ಮೀಡಿಯಾ ಸ್ಟಾರ್ ಆಗಿ ಹೊರಹೊಮ್ಮಿದ್ದಾರೆ.

ಶಿವಣ್ಣನನ್ನು ಹಿಂದಿಕ್ಕಿದ ಚಂದು
ಇನ್‌ಸ್ಟಾಗ್ರಾಂನಲ್ಲಿ ಕಾಫಿ ನಾಡು ಚಂದ್ರು ಹೆಸರಲ್ಲಿ ಎರಡು ಖಾತೆಗಳಿವೆ. ಒಂದು ಖಾತೆಯಲ್ಲಿ ಈಗಾಗಲೇ ಎರಡು ಲಕ್ಷದ ಮೂವತ್ತು ಸಾವಿರ ಫಾಲೋವರ್ಸ್ ಇದ್ದಾರೆ. ಇನ್ನೊಂದು ಖಾತೆಯಲ್ಲಿ 12ಕ್ಕೂ ಹೆಚ್ಚು ಮಂದಿ ಫಾಲೋವರ್ಸ್ ಇದ್ದಾರೆ. ಇವೆರಡರಲ್ಲಿ ಕಾಫಿ ನಾಡು ಚಂದು ಖಾತೆ ಯಾವುದು ಅನ್ನೋ ಗೊಂದಲವಿದೆ. ಅಥವಾ ಎರಡೂ ಖಾತೆ ಇವರದ್ದೇನಾ? ಅನ್ನೋ ಅನುಮಾನ ಕೂಡ ಇದೆ. ಈ ಮಧ್ಯೆ ಶಿವಣ್ಣನ ಇನ್‌ಸ್ಟಾಗ್ರಾಂ ಖಾತೆಯಲ್ಲಿ 2 ಲಕ್ಷದ 5 ಸಾವಿರ ಫಾಲೋವರ್ಸ್ ಇದ್ದಾರೆ. ಈ ಮೂಲಕ ಶಿವಣ್ಣನನ್ನು ಕಾಫಿ ನಾಡು ಚಂದು ಹಿಂದಿಕ್ಕಿದ್ದಾರೆ. ಆದರೆ, ಇನ್‌ಸ್ಟಾಗ್ರಾಂನಲ್ಲಿರುವ ಶಿವಣ್ಣ ಅಕೌಂಟ್‌ನಲ್ಲಿ ಬ್ಲ್ಯೂ ಟಿಕ್ ಇಲ್ಲ. ಹೀಗಾಗಿ ಇದು ಅವರದ್ದೇ ಅಧಿಕೃತ ಖಾತೆನಾ ಅನ್ನೋದು ಕನ್ಪರ್ಮ್ ಆಗಬೇಕಿದೆ.

ಅರ್ಜುನ್ ಜನ್ಯ ಹಿಂದಿಕ್ಕಿದ ಚಂದು
ಕೇವಲ ಶಿವಣ್ಣನನ್ನು ಅಷ್ಟೇ ಅಲ್ಲ. ಸ್ಯಾಂಡಲ್‌ವುಡ್‌ನ ಮ್ಯೂಸಿಕಲ್ ಕಂಪೋಸರ್ ಅರ್ಜುನ್ ಜನ್ಯರನ್ನೂ ಕಾಫಿ ನಾಡು ಚಂದು ಹಿಂದಿಕ್ಕಿದ್ದಾರೆ. ಅರ್ಜುನ್ ಜನ್ಯಗೆ ಇನ್‌ಸ್ಟಾಗ್ರಾಂನಲ್ಲಿ ಸುಮಾರು 1 ಲಕ್ಷದ 94 ಸಾವಿರ ಮಂದಿ ಫಾಲೋವರ್ಸ್ ಇದ್ದಾರೆ. ಅರ್ಜುನ್ ಜನ್ಯ ಸುಮಾರು 457 ಪೋಸ್ಟ್ ಮಾಡಿದ್ದಾರೆ. ಅದೇ ಕಾಫಿ ನಾಡು ಚಂದು 456 ಪೋಸ್ಟ್ ಮಾಡಿದ್ದಾರೆ. ಈ ಮೂಲಕ ಹೆಚ್ಚು ಕಡಿಮೆ ಇಬ್ಬರೂ ಪೋಸ್ಟ್ ಮಾಡಿದ ಸಂಖ್ಯೆ ಒಂದೇ ಇದ್ದು, ಸ್ಯಾಂಡಲ್‌ವುಡ್‌ನ ಖ್ಯಾತ ಸಂಗೀತ ನಿರ್ದೇಶಕರಿಗೆ ಟಕ್ಕರ್ ಕೊಟ್ಟಿದ್ದಾರೆ.

ಅಭಿಮಾನಿ ಅಂತಲೇ ಗೆದ್ದ ಚಂದು
ಆರಂಭದಿಂದಲೂ ನಾನು ಶಿವಣ್ಣ ಹಾಗೂ ಪುನೀತ್ ರಾಜ್‌ಕುಮಾರ್ ಅಭಿಮಾನಿ ಎನ್ನುತ್ತಲೇ ಚಂದು ಸೋಶಿಯಲ್ ಮೀಡಿಯಾದಲ್ಲಿ ಫೇಮಸ್ ಆಗಿದ್ದಾರೆ. ತನ್ನಿಚ್ಚೆಯಂತೆ ಹಾಡುವುದು, ಮನಸ್ಸಿಗೆ ಖುಷಿ ಕೊಟ್ಟಂತೆ ಸಾಹಿತ್ಯ ಹೇಳಿ ಕಾಫಿ ನಾಡು ಚಂದು ಫೇಮಸ್ ಆಗಿದ್ದರು. ಸೋಶಿಯಲ್ ಮೀಡಿಯಾದಲ್ಲಿ ಇಂದಿಗೂ ಇವರ ಹಾಡುಗಳು ವೈರಲ್ ಆಗಿವೆ. ಈ ಮೂಲಕ ಕಾಫಿ ಚಂದು ಸಿಕ್ಕಾಪಟ್ಟೆ ಜನಪ್ರಿಯರಾಗಿದ್ದಾರೆ.