»   » ಅನ್ನ ಹಾಕಿದ ನಿರ್ಮಾಪಕರಿಗೆ ದ್ರೋಹ ಬಗೆದ ಸಂಯುಕ್ತ ವಿರುದ್ಧ ದೂರು ದಾಖಲು.!

ಅನ್ನ ಹಾಕಿದ ನಿರ್ಮಾಪಕರಿಗೆ ದ್ರೋಹ ಬಗೆದ ಸಂಯುಕ್ತ ವಿರುದ್ಧ ದೂರು ದಾಖಲು.!

Posted By:
Subscribe to Filmibeat Kannada
ಕಾಲೇಜ್ ಕುಮಾರ್ ಸಿನಿಮಾ ಟೀಮ್ ಜೊತೆ ನಟಿ ಸಂಯುಕ್ತ ಹೆಗ್ಡೆ ಫೈಟ್ | Filmibeat Kannada

ಸದಾ ಒಂದಲ್ಲ ಒಂದು ಕಿರಿಕ್ ಮಾಡಿಕೊಳ್ಳುತ್ತಿರುವ ನಟಿ ಸಂಯುಕ್ತ ಹೆಗ್ಡೆ ಈಗ ಮತ್ತೊಂದು ಕಿರಿಕ್ ಮಾಡಿಕೊಂಡಿದ್ದಾರೆ. ಜೊತೆಗೆ ಇದೀಗ 'ಕಾಲೇಜ್ ಕುಮಾರ್' ಚಿತ್ರದ ನಿರ್ಮಾಪಕ ಪದ್ಮನಾಭ್ ಅವರು ಸಂಯುಕ್ತ ವಿರುದ್ಧ ಫಿಲ್ಮ್ ಚೇಂಬರ್ ನಲ್ಲಿ ದೂರು ನೀಡುವ ನಿರ್ಧಾರ ಮಾಡಿದ್ದಾರೆ.

ಈ ಹಿಂದೆ ''ಚಿತ್ರದ ಚಿತ್ರೀಕರಣಕ್ಕೆ ಭಾಗಿಯಾಗುತ್ತಿಲ್ಲ'' ಎನ್ನುವ ಕಾರಣಕ್ಕೆ ನಿರ್ಮಾಪಕ ಪದ್ಮನಾಭ್ ಮತ್ತು ಸಂಯುಕ್ತ ನಡುವೆ ಜಗಳ ಆಗಿತ್ತು. ಈಗ ಅದೇ ರೀತಿ ಇವರಿಬ್ಬರ ನಡುವೆ ವಿವಾದ ಹುಟ್ಟಿಕೊಂಡಿದೆ. 'ಕಾಲೇಜ್ ಕುಮಾರ್‌' ಚಿತ್ರದ ಪ್ರಚಾರ ಕಾರ್ಯಕ್ರಮಗಳಿಗೆ ಸಂಯುಕ್ತ ಬರುತ್ತಿಲ್ಲವೆಂದು ನಿರ್ಮಾಪಕ ಪದ್ಮನಾಭ್ ಕೋಪಗೊಂಡಿದ್ದಾರೆ.

ಅಂದಹಾಗೆ, ಸದ್ಯ 'ಕಾಲೇಜ್ ಕುಮಾರ್' ಸಿನಿಮಾದ ಹೊಸ ವಿವಾದದ ಬಗ್ಗೆ ನಿರ್ಮಾಪಕ ಪದ್ಮನಾಬ್ ಮಾಡಿರುವ ಆರೋಪ ಏನು.? ಮುಂದೆ ಓದಿ...

ನಿರ್ಮಾಪಕರ ಮಾತು

ನಟಿ ಸಂಯುಕ್ತ ವಿರುದ್ದ ದೂರು ನೀಡಿರುವ ನಿರ್ಮಾಪಕ ಪದ್ಮನಾಭ್ ''ಸಂಯುಕ್ತ ನಮ್ಮ ಚಿತ್ರಕ್ಕೆ ಹಣ ಪಡೆದಿದ್ದಾರೆ. ಕಾಲ್ ಶೀಟ್ ನೀಡಿದ ಮೇಲೆ ಚಿತ್ರದ ಪ್ರಮೋಷನ್ ಗೆ ಕೂಡ ಬರಬೇಕು. ಆದರೆ ಅವರು ಚಿತ್ರದ ಪ್ರಚಾರಕ್ಕೆ ಬರುತ್ತಿಲ್ಲ'' ಎಂದು ಆರೋಪಿಸಿದ್ದಾರೆ.

ಸಂಯುಕ್ತ ರಿಂದ ಸಿನಿಮಾ ಓಡಿಲ್ಲ

''ನಾನು ಫಿಲ್ಮ ಚೆಂಬರ್ ನಲ್ಲಿ ದೂರು ನೀಡಿರುವುದು ಸಂಯುಕ್ತ ಮತ್ತೆ ಪ್ರಚಾರಕ್ಕೆ ಬರಲಿ ಅಂತ ಅಲ್ಲ. ಅವರ ಪ್ರಚಾರ ಈಗ ಬೇಡ. ನಮ್ಮ ಸಿನಿಮಾವನ್ನು ಜನ ಒಪ್ಪಿಕೊಂಡಿದ್ದಾರೆ. ಸಂಯುಕ್ತ ಹೆಗಡೆ ಕಡೆಯಿಂದ ನಮ್ಮ ಸಿನಿಮಾ ಓಡುತ್ತಿಲ್ಲ'' - ಪದ್ಮನಾಭ್, ನಿರ್ಮಾಪಕ

ದ್ರೋಹ ಬಗೆದಿದ್ದಾರೆ

"90 ದಿನ ಹೊಟ್ಟೆಗೆ ಅನ್ನಹಾಕಿ, ಹೇಳಿದಷ್ಟು ಸಂಭಾವನೆ, ಕಾಸ್ಟ್ಯೂಮ್ಸ್ ಕೊಟ್ಟು ಅವರಿಗೊಂದು ಒಂದು ಕ್ಯಾರವಾನ್ ತರಿಸಿ, ಚೆನ್ನಾಗಿ ನೋಡಿಕೊಂಡರೂ ಆ ನಟಿ ದ್ರೋಹ ಬಗೆದಿದ್ದಾರೆ'' - ಪದ್ಮನಾಭ್, ನಿರ್ಮಾಪಕ

ನಿರ್ಮಾಪಕರ ಸಮಸ್ಯೆ ಗೊತ್ತಿಲ್ಲ

''ಇಂತಹ ನಟಿಯನ್ನು ಹಾಕಿಕೊಂಡು ಸಿನಿಮಾ ಮಾಡುವ ನಿರ್ಮಾಪಕ, ನಿರ್ದೇಶಕರಿಗೆ ಸಮಸ್ಯೆ ಹೆಚ್ಚು. ನನ್ನ ಸಿನಿಮಾ ಮೂಲಕ ನಾಯಕಿ ಪಟ್ಟ ಪಡೆದ ಆ ಹುಡುಗಿಗೆ ನಿರ್ಮಾಪಕರ ಸಮಸ್ಯೆ ಗೊತ್ತಿಲ್ಲ. ಒಂದು ಚಿತ್ರಕ್ಕೆ ಹೇಗೆ ಕೆಲಸ ಮಾಡಬೇಕು ಎಂಬುದು ತಿಳಿದಿಲ್ಲ'' - ಪದ್ಮನಾಭ್, ನಿರ್ಮಾಪಕ

'ಕಾಲೇಜ್ ಕುಮಾರ' ನೋಡಿ ಡಿ ಬಾಸ್ ದರ್ಶನ್ ಕೊಟ್ಟ ವಿಮರ್ಶೆ!

ಬೆಳೆದೇ ಇಲ್ಲ, ಈಗಲೇ ಹೀಗೆ

''ಇನ್ನು ಬೆಳೆದೇ ಇಲ್ಲ, ಈಗಲೇ ಹೀಗೆ ಮಾಡಿದರೆ, ಮುಂದೆ ಬೇರೆ ಸಿನಿಮಾಗಳ ನಿರ್ಮಾಪಕ, ನಿರ್ದೇಶಕರ ಗತಿ ಏನು? ಕನ್ನಡದಲ್ಲಿ ನಿರ್ಮಾಪಕ, ನಿರ್ದೇಶಕರ ಮೇಲೆ ಕಾಳಜಿ ಇಟ್ಟುಕೊಂಡ ಬಹಳಷ್ಟು ಒಳ್ಳೆಯ ನಟಿಯರಿದ್ದಾರೆ. ಅಂತಹವರಿಗೆ ಸಹಕಾರ ಕೊಡಿ'' - ಪದ್ಮನಾಭ್, ನಿರ್ಮಾಪಕ

ರವಿಶಂಕರ್ ಹುಟ್ಟುಹಬ್ಬಕ್ಕೆ 'ಕಾಲೇಜ್ ಕುಮಾರ್' ತಂಡದ ಗಿಫ್ಟ್

ಸಂಯುಕ್ತ ಪ್ರತಿಕ್ರಿಯೆ

ಈ ವಿವಾದದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಂಯುಕ್ತ ''ನಾನು ಚಿತ್ರ ಬಿಡುಗಡೆಯ ಮೊದಲ ಪ್ರಮೋಷನ್ ನಲ್ಲಿ ಭಾಗಿಯಾಗಿದ್ದೇನೆ. ಆದರೆ ಚಿತ್ರದ ರಿಲೀಸ್ ಬಳಿಕ ಹುಷಾರಿಲ್ಲದ ಕಾರಣ ಉಳಿದ ಪ್ರಚಾರಕ್ಕೆ ಹೋಗಿಲ್ಲ'' ಎಂದು ಹೇಳಿದ್ದಾರೆ.

English summary
'College Kumar' in controversy, Producer Padmanabh filed a complaint against Samyuktha Hegde in KFCC. 'ಕಾಲೇಜ್ ಕುಮಾರ್' ಚಿತ್ರದ ನಿರ್ಮಾಪಕ ಪದ್ಮನಾಭ್ ಅವರು ಸಂಯುಕ್ತ ವಿರುದ್ಧ ಫಿಲ್ಮ್ ಚೆಂಬರ್ ನಲ್ಲಿ ದೂರು ದಾಖಲಿಸಿದ್ದಾರೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada