»   » ಜನತಾದಳ ಅಭ್ಯರ್ಥಿಯಾಗಿ ಬುಲೆಟ್ ಪ್ರಕಾಶ್ ಸಾಧ್ಯತೆ

ಜನತಾದಳ ಅಭ್ಯರ್ಥಿಯಾಗಿ ಬುಲೆಟ್ ಪ್ರಕಾಶ್ ಸಾಧ್ಯತೆ

Posted By:
Subscribe to Filmibeat Kannada
Bullet Prakash
ತನ್ನ ವಿಶಿಷ್ಟ ನಟನೆ ಮತ್ತು ದಡೂತಿ ದೇಹದ ಮ್ಯಾನರಿಸಂ ಮೂಲಕ ಮನೆಮಾತಾಗಿರುವ ಹಾಸ್ಯ ನಟ ಬುಲೆಟ್ ಪ್ರಕಾಶ್ ಗಾಂಧಿನಗರ ವಾರ್ಡ್ ಕ್ಷೇತ್ರದಿಂದ ಜನತಾದಳ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸುವುದು ಬಹುತೇಕ ಖಚಿತವಾಗಿದೆ.

ಬಿಬಿಎಂಪಿ ಗಾಂಧಿನಗರದ ಕಾರ್ಪೊರೇಟರ್ ನಟರಾಜ್ ಭರ್ಭರ ಹತ್ಯೆಯಾದ ನಂತರ ಖಾಲಿಯಾಗಿರುವ ಈ ಕ್ಷೇತ್ರದಲ್ಲಿ ಬುಲೆಟ್ ಪ್ರಕಾಶ್ ಜಾತ್ಯಾತೀತ ಜನತಾದಳ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದು ಸದ್ಯದಲ್ಲೇ ಕುಮಾರಸ್ವಾಮಿ ಅಧಿಕೃತ ಹೇಳಿಕೆ ನೀಡಲಿದ್ದಾರೆಂದು ವರದಿಯಾಗಿದೆ.

ಗಾಂಧಿ ಜಯಂತಿ (ಅಕ್ಟೋಬರ್ 1) ಹಿಂದಿನ ದಿನ ಗಾಂಧಿನಗರ ವಾರ್ಡ್ ನಂಬರ್ 94 ಕಾರ್ಪೊರೇಟರ್ ನಟರಾಜ್ ಅವರನ್ನು ದುಷ್ಕರ್ಮಿಗಳು ಹಾಡುಹಗಲೇ ಮಲ್ಲೇಶ್ವರಂ ವೃತ್ತದಲ್ಲಿ ಲಾಂಗ್ ಮತ್ತು ಮಚ್ಚುಗಳಿಂದ ಹತ್ಯೆ ಮಾಡಿದ್ದರು.

English summary
Kannada Comedy Actor Bullet Prakash may contest from BBMP Gandhinagara ward. This seat is vacant after corporater Nataraj's murder.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada