For Quick Alerts
  ALLOW NOTIFICATIONS  
  For Daily Alerts

  BREAKING: ಕನ್ನಡದ ಖ್ಯಾತ ಹಾಸ್ಯನಟ ರಾಕ್‌ಲೈನ್ ಸುಧಾಕರ್ ನಿಧನ

  |

  ಕನ್ನಡದ ಖ್ಯಾತ ಹಾಸ್ಯನಟರುಗಳಲ್ಲಿ ಒಬ್ಬರಾದ ರಾಕ್‌ಲೈನ್ ಸುಧಾಕರ್ ಅವರು ಹಠಾತ್ತನೆ ನಿಧನರಾಗಿದ್ದಾರೆ.

  ಕನ್ನಡದ ಚಿತ್ರರಂಗಕ್ಕೆ ಮತ್ತೊಂದು ಆಘಾತ | Filmibeat Kannada

  'ಶುಗರ್ ಲೆಸ್' ಕನ್ನಡ ಸಿನಿಮಾದ ಚಿತ್ರೀಕರಣ ಮಾಡುತ್ತಿದ್ದ ವೇಳೆ ಸೆಟ್‌ನಲ್ಲಿಯೇ ಅವರು ಹೃದಯಾಘಾತದಿಂದ ಕುಸಿದುಬಿದ್ದು ಸಾವನ್ನಪ್ಪಿದ್ದಾರೆ. ಸುಧಾಕರ್ ಅವರಿಗೆ 64 ವರ್ಷ ವಯಸ್ಸಾಗಿತ್ತು.

  ಬೆಂಗಳೂರಿನ ಕಮಲಾನಗರದ ನಿವಾಸಿ ಆಗಿದ್ದ ಸುಧಾಕರ್ ಅವರಿಗೆ ಎರಡು ತಿಂಗಳ ಹಿಂದೆ ಕೊರೊನಾ ಸೋಂಕು ತಗುಲಿತ್ತು. ಆದರೆ ಅದನ್ನು ಯಶಸ್ವಿಯಾಗಿ ಗೆದ್ದು ಬಂದಿದ್ದರು ಸುಧಾಕರ್.

  120 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ಸುಧಾಕರ್

  120 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ಸುಧಾಕರ್

  120 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ಸುಧಾಕರ್, 'ಡಕೋಟಾ ಎಕ್ಸ್‌ಪ್ರೆಸ್' ಸಿನಿಮಾದ ಮೂಲಕ ಅಭಿನಯ ಪ್ರಾರಂಭಿಸಿದ್ದರು, ಆದರೆ ಅವರಿಗೆ ಖ್ಯಾತಿ ತಂದುಕೊಟ್ಟಿದ್ದು ಪಂಚರಂಗಿ ಸಿನಿಮಾ. ಆ ನಂತರ ಪರಮಾತ್ಮ, ಮಿಸ್ಟರ್ ಆಂಡ್ ಮಿಸಸ್ ರಾಮಚಾರಿ, ಲವ್ ಇನ್ ಮಂಡ್ಯ, ವಾಸ್ತು ಪ್ರಕಾರ, ಜೂಮ್, ಟೋಪಿವಾಲಾ, ಕೆಮಿಸ್ಟ್ರಿ ಆಫ್ ಕರಿಯಪ್ಪ ಇನ್ನೂ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.

   ಮೇಕಪ್ ಹಚ್ಚಿರುವಾಗಲೇ ಹೃದಯಾಘಾತ

  ಮೇಕಪ್ ಹಚ್ಚಿರುವಾಗಲೇ ಹೃದಯಾಘಾತ

  ಸುಧಾಕರ್ ನಿಧನದ ಸುದ್ದಿ ಕೇಳಿ ಆಘಾತ ವ್ಯಕ್ತಪಡಿಸಿರುವ ನಿರ್ದೇಶಕ ಸುನಿ, '2020 ರೌದ್ರಾವತಾರ ಮುಂದುವರೆದಿದೆ, ಸಿನಿಕಲಾವಿದರಾದ ರಾಕ್‌ಲೈನ್ ಸುಧಾಕರ್ ಅವರು ಇಂದು ಮೇಕಪ್ ಹಚ್ಚಿರುವಾಗಲೇ ಹೃದಯಾಘಾತದಿಂದ ನಮ್ಮನ್ನೆಲ್ಲಾ ಅಗಲಿದ್ದಾರೆ, ಅವರ ಆತ್ಮಕ್ಕೆ ಶಾಂತಿ ಸಿಗಲಿ' ಎಂದು ಟ್ವೀಟ್ ಮಾಡಿದ್ದಾರೆ.

  'ಮೂರು ಸಿನಿಮಾದಲ್ಲಿ ಅಪ್ಪನ ಪಾತ್ರ ಮಾಡಿದ್ದರು'

  'ಮೂರು ಸಿನಿಮಾದಲ್ಲಿ ಅಪ್ಪನ ಪಾತ್ರ ಮಾಡಿದ್ದರು'

  'ಫಿಲ್ಮೀಬೀಟ್' ಜೊತೆಗೆ ಮಾತನಾಡಿದ ಬಿಗ್‌ಬಾಸ್ ಖ್ಯಾತಿಯ ಪ್ರಥಮ್ ಮಾತನಾಡಿ, ನನ್ನ ಮೂರು ಸಿನಿಮಾಗಳಲ್ಲಿ ತಂದೆಯ ಪಾತ್ರವನ್ನು ಅವರು ಮಾಡಿದ್ದರು. ಅವರ ಅಗಲಿಕೆ ಸುದ್ದಿ ಕೇಳಿ ತೀವ್ರ ದುಃಖವಾಗಿದೆ ಎಂದು ಭಾವುಕರಾದರು.

  ರಾಕ್‌ಲೈನ್ ವೆಂಕಟೇಶ್ ಬಳಿ ಕೆಲಸ ಮಾಡುತ್ತಿದ್ದರು

  ರಾಕ್‌ಲೈನ್ ವೆಂಕಟೇಶ್ ಬಳಿ ಕೆಲಸ ಮಾಡುತ್ತಿದ್ದರು

  ರಾಕ್‌ಲೈನ್ ಸುಧಾಕರ್ ಅವರು ಮೊದಲಿಗೆ ರಾಕ್‌ಲೈನ್ ವೆಂಕಟೇಶ್ ಅವರೊಟ್ಟಿಗೆ ಕೆಲಸ ಮಾಡುತ್ತಿದ್ದರು. ರಾಕ್‌ಲೈನ್ ಅವರು ನಾಯಕರಾಗಿ ನಟಿಸಿದ್ದ 'ಡಕೋಟಾ ಎಕ್ಸ್‌ಪ್ರೆಸ್' ಸಿನಿಮಾದಲ್ಲಿ ಅಚಾನಕ್ಕೆ ಬಣ್ಣ ಹಚ್ಚಿದರು. ನಂತರ 120 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದರು ಸುಧಾಕರ್.

  English summary
  Sandalwood comedy actor Rockline Sudhakar passed away. He got heart attack while shooting for a movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X