For Quick Alerts
  ALLOW NOTIFICATIONS  
  For Daily Alerts

  ಕನ್ನಡದ ಅವಹೇಳನೆ: ವಿವಾದದಲ್ಲಿ 'ಕಾಮಿಡಿ ಕಿಲಾಡಿಗಳು' ಖ್ಯಾತಿಯ ನಯನಾ

  |

  ಹಾಸ್ಯ ಕಾರ್ಯಕ್ರಮ 'ಕಾಮಿಡಿ ಕಿಲಾಡಿಗಳು' ಮೂಲಕ ಮನೆ ಮಾತಾಗಿದ್ದ ನಯನಾ, ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ಸಿನಿಮಾಗಳಲ್ಲಿ ನಟಿಯಾಗಿಯೂ ಗುರುತಿಸಿಕೊಂಡಿರುವ ಅವರು ಕನ್ನಡದ ಅಭಿಮಾನಿಯೊಬ್ಬರಿಗೆ ಕೆಟ್ಟ ಪದ ಬಳಕೆ ಮಾಡಿರುವುದು ಅನೇಕರ ಆಕ್ರೋಶಕ್ಕೆ ಕಾರಣವಾಗಿದೆ. ತಮ್ಮ ಫೇಸ್ ಬುಕ್ ಪುಟದಲ್ಲಿ ಅವರು ಇಂಗ್ಲಿಷ್‌ನಲ್ಲಿಯೇ ಪೋಸ್ಟ್‌ಗಳನ್ನು ಹಾಕುತ್ತಿದ್ದರು. ಇದನ್ನು ಪ್ರಶ್ನಿಸಿದವರನ್ನು ವ್ಯಂಗ್ಯವಾಡಿದ್ದಾರೆ.

  Darshan,ಆಷಾಢ ಶುಕ್ರವಾರ ಚಾಮುಂಡಿ ತಾಯಿಯ ಆಶೀರ್ವಾದ ಪಡೆದ ನಟ ದರ್ಶನ್ | Filmibeat Kannada

  ನಯನಾ ಅವರ ವರ್ತನೆ ಅನೇಕರನ್ನು ಕೆರಳಿಸಿದೆ. ಬೆಳೆಯೋವಾಗ ಕನ್ನಡ ಭಾಷೆ, ಕರ್ನಾಟಕ ಬೇಕು. ಹೆಸರು ಗಳಿಸಿದ ಬಳಿಕ ಕನ್ನಡ ಬಿಟ್ಟು ಇಂಗ್ಲಿಷ್‌ಗೆ ಹೋಗುತ್ತೀರ. ಅದನ್ನು ಪ್ರಶ್ನಿಸಿದರೆ ಕೆಟ್ಟ ಪದಗಳಿಂದ ನಿಂದಿಸುತ್ತೀರಾ ಎಂದು ಅನೇಕರು ಕಿಡಿಕಾರಿದ್ದಾರೆ. ಮುಂದೆ ಓದಿ...

  ಕನ್ನಡದ ಭಕ್ತ...

  ಕನ್ನಡದ ಭಕ್ತ...

  ನಯನಾ ಗುರುವಾರ ಫೇಸ್‌ಬುಕ್‌ನ ಪುಟದಲ್ಲಿ ತಮ್ಮ ಹೊಸ ಫೋಟೊವೊಂದನ್ನು ಹಾಕಿದ್ದರು. ಆದರೆ ಅದಕ್ಕೆ ವಿವರಣೆಯನ್ನು ಇಂಗ್ಲಿಷ್‌ನಲ್ಲಿ ಬರೆದುಕೊಂಡಿದ್ದರು. ಅದಕ್ಕೆ ಒಬ್ಬರು 'ಫೇಮಸ್ ಆಗೋತನಕ ಕನ್ನಡ ಬೇಕು. ಆದ್ಮೇಲೆ ಇಂಗ್ಲಿಷ್' ಎಂದು ಅಸಮಾಧಾನ ವ್ಯಕ್ತಪಡಿಸಿ ಕಾಮೆಂಟ್ ಹಾಕಿದ್ದರು. ಅದಕ್ಕೆ ನಯನಾ, 'ಅಪ್ಪಾ ಕನ್ನಡದ ಭಕ್ತ ಮುಚ್ಕೊಂಡ್ ನಿನ್ನ ಕೆಲಸ ನೋಡ್ಕೋ' ಎಂದು ಪ್ರತಿಕ್ರಿಯಿಸಿದ್ದರು.

  ಉಪೇಂದ್ರ ವಿರುದ್ಧ ಕಿಡಿಕಾರಿದ ಮಾಜಿ ಡಿವೈಎಸ್ಪಿ ಅನುಪಮಾ ಶೆಣೈ: ಅಭಿಮಾನಿಗಳ ಆಕ್ರೋಶ

  ಜನರ ಅಸಮಾಧಾನ

  ಜನರ ಅಸಮಾಧಾನ

  ನಯನಾ ಅವರು ಈ ಹಿಂದೆ ಹಲವು ಪೋಸ್ಟ್‌ಗಳನ್ನು ಕನ್ನಡದಲ್ಲಿಯೇ ಬಳಸಿದ್ದರು. ಅವರು ಅದನ್ನು ಉದಾಹರಣೆಯಾಗಿ ನೀಡಿ ತಮಗೆ ಕನ್ನಡದ ಬಗ್ಗೆ ಪ್ರೀತಿ ಇದೆ ಎಂಬುದನ್ನು ತೋರಿಸಬಹುದಾಗಿತ್ತು. ಅಥವಾ ಅವರಿಗೆ ಬೇರೆ ಸಮಾಧಾನಕರ ರೀತಿಯಲ್ಲಿ ಉತ್ತರ ನೀಡಬಹುದಾಗಿತ್ತು. ಆದರೆ ಕನ್ನಡದ ಭಕ್ತ ಎಂದು ಲೇವಡಿ ಮಾಡಿರುವುದು ಮತ್ತು ಮುಚ್ಕೊಂಡು ಕೆಲಸ ನೋಡಿಕೋ ಎಂದು ನಿಂದಿಸಿರುವುದು ಜನರ ಕೋಪಕ್ಕೆ ಕಾರಣವಾಗಿದೆ.

  ಬೆಳೆದ ಮೇಲೆ ಕನ್ನಡ ಬೇಡ್ವಾ?

  ಬೆಳೆದ ಮೇಲೆ ಕನ್ನಡ ಬೇಡ್ವಾ?

  ನೀವು ಇರೋದು ಕರ್ನಾಟಕದಲ್ಲಾ ಅಥವಾ ಅಮೆರಿಕಾದಲ್ಲಾ ಸ್ವಲ್ಪ ಹೇಳುತ್ತೀರಾ? ಬೆಳೆಯುವವರೆಗೂ ಕನ್ನಡ ಬೇಕು ಬೆಳೆದ ಮೇಲೆ ಕನ್ನಡ ಬೇಡ್ವ. ನಿಮ್ಮಲ್ಲಿ ಒಳ್ಳೆಯ ಅಭಿನಯ ನೋಡಿ ನಿಮಗೆ ಕಾಮಿಡಿ ಕಿಲಾಡಿಗಳ ಕಾರ್ಯಕ್ರಮದಲ್ಲಿ ಓಟು ಹಾಕಿ ಗೆಲ್ಲಿಸಿದ್ದು ಕನ್ನಡಿಗರು, ಇಂಗ್ಲಿಷ್ ನವರು ಅಲ್ಲ. ಮೊದಲು ಭಾಷೆಯ ಪ್ರೇಮ ಬೆಳೆಸಿಕೋಬೇಕು. ನೀವು ಇಂಗ್ಲಿಷ್ ನಲ್ಲಿ ಬರೆದ್ದಿದೀರ ಅಂದ್ರೆ ಹಾಲಿವುಡ್ ಇಂಗ್ಲಿಷ್ ಭಾಷೆಯಲ್ಲಿ ಅವಕಾಶ ಸಿಗಲ್ಲ. ಅದಕ್ಕೆ ಕನ್ನಡಿಗರು ನಿಮ್ಮನ್ನು ಬೆಳೆಸಬೇಕು ಇಲ್ಲ ಅಂದ್ರೆ ಲಾಟರಿ ಹೋಡಿಬೇಕಾಗುತ್ತೆ ಎಂದು ಶ್ರೀಕಾಂತ್ ದರ್ಶನ್ ಎಂಬುವವರು ಹೇಳಿದ್ದಾರೆ.

  ಪ್ರಭಾಸ್ ಸಿನಿಮಾ ಬಹಿಷ್ಕರಿಸಲು ಆಗ್ರಹ: ಕನ್ನಡಿಗರ ಅಸಮಾಧಾನಕ್ಕೆ ಕಾರಣವೇನು?

  ಕನ್ನಡಿಗರನ್ನು ಅವಮಾನಿಸಬೇಡಿ

  ಕನ್ನಡಿಗರನ್ನು ಅವಮಾನಿಸಬೇಡಿ

  ಕಾಗೆ ಕೋಗಿಲೆ ತರ ಇರುತ್ತೆ ಅಷ್ಟೆ....ಆದರೆ ಕಾಗೆ ಕೋಗಿಲೆ ಹಾಗಲು ಸಾಧ್ಯವಿಲ್ಲ....ಕಾಗೆ ಕಾಗೆನೆ ಕೋಗಿಲೆ ಕೋಗಿಲೆನೇ... ಸರಿ ಮಾತನ್ನು ಯಾಕೆ ಹೇಳುತ್ತೇವೆ ಅಂದರೆ..... ಇವರಿಗೆ ಕನ್ನಡದ ಅವಶ್ಯಕತೆ ಇಲ್ಲ. ಇಂತಹ ನಾಡ ದ್ರೋಹಿಗಳು ನಮಗೆ ಬೇಕೇ???? ಖಂಡಿತ ಬೇಡ....

  ನಯನ ರವರೆ ಯಾವುದೋ ಒಂದು ಸಣ್ಣ ಊರಿನಲ್ಲಿ ವಾಸವಿದ್ದ ನಿಮ್ಮನ್ನು ಇಷ್ಟು ದೊಡ್ಡ ಮಟ್ಟಕ್ಕೆ ಬೆಳೆಯಲು ಇಂಗಿಷ್ ನವರಾಗಲಿ, ಹಿಂದಿಯವರಾಗಲಿ, ಪರಭಾಷಿಕರ ಆಗಲಿ ನಿಮಗೆ ಸಪೋರ್ಟ್ ಮಾಡಲಿಲ್ಲ. ನಿಮಗೆ ಸಂಪೂರ್ಣ ಸಪೋರ್ಟ್ ಮಾಡಿದ್ದು ನಮ್ಮ ಕನ್ನಡಿಗರು. ಅದನ್ನು ಯಾವತ್ತಿಗೂ ಮರೆಯಬೇಡಿ. ಇದನ್ನು ಗಮನದಲ್ಲಿಟ್ಟುಕೊಂಡು ನಿಮ್ಮ ಮುಖದಲ್ಲಿ, ಇನ್‌ಸ್ಟಾಗ್ರಾಮಲ್ಲಿ ಸ್ವಚ್ಛವಾಗಿ ಕನ್ನಡದಲ್ಲಿ ಬರೆಯಿರಿ, ಇನ್ನಷ್ಟು ನಿಮಗೆ ಅಭಿಮಾನಿಗಳ ಆಗುತ್ತಾರೆ. ಅದನ್ನು ಬಿಟ್ಟು ಈ ರೀತಿ ಇಂಗ್ಲಿಷ್‌ನಲ್ಲಿ ಬರೆದು ಕನ್ನಡಿಗರನ್ನು ಅವಮಾನಿಸಬೇಡಿ. ನೀವು ಕನ್ನಡಿಗರ ಎಂಬುದು ನೆನಪಿರಲಿ.... ಧನ್ಯವಾದಗಳು- ನಾಗೇಶ್ ಯಾದವ್

  ಮಾಡಿದ ತಪ್ಪಿಗೆ ಕ್ಷಮೆ ಕೇಳಿ

  ಮಾಡಿದ ತಪ್ಪಿಗೆ ಕ್ಷಮೆ ಕೇಳಿ

  ನಯನರವರೇ ನಿಮ್ಮ ಮೇಲೆ ಅಪಾರ ಅಭಿಮಾನವಿತ್ತು. ಆದರೆ ನೀವು ಕನ್ನಡಿಗನನ್ನು ಅವಮಾನಿಸಿದ ರೀತಿ ನೋಡಿ ನಿಮ್ಮ ಮೇಲಿದ್ದ ಗೌರವವೇ ಹೋಯ್ತು. ದಯವಿಟ್ಟು ಮಾಡಿದ ತಪ್ಪಿಗೆ ಕ್ಷಮೆ ಕೇಳಿ‌. ಕನ್ನಡಿಗರ ಮುನಿಸು ನಿಮ್ಮ ಭವಿಷ್ಯಕ್ಕೆ ಮಾರಕವಾಗಬಹುದು.- ಪ್ರಕಾಶ್ ಕರುನಾಡು.

  ಹೌದು ನಾವು ಕನ್ನಡ ಭಕ್ತರು

  ಹೌದು ನಾವು ಕನ್ನಡ ಭಕ್ತರು

  ಕನ್ನಡಿಗರಿಂದ ನೀನು, ನಿನ್ನಿಂದ ಕನ್ನಡಿಗರು ಅಲ್ಲ. ಕನ್ನಡ ಭಕ್ತ ಅಂತೀಯಾ? ಹೌದು ನಾವು ಕನ್ನಡ ಭಕ್ತರು. ಕನ್ನಡ ಗುಲಾಮರು. ನಮಗೆ ಕನ್ನಡ ಮೊದಲು ನಂತರ ಎಲ್ಲವೂ. ಮೊದಲು ಬೆಳೆಸಿದ, ಅನ್ನ ಕೊಟ್ಟ ಕನ್ನಡಿಗರ ಜೊತೆ ಹೇಗೆ ಮಾತನಾಡಬೇಕು ತಿಳಿದುಕೋ- ಸುಜಿತ್ ಗೌಡ ಚಿಕ್ಕುಂದೂರು.

  ಸೆಲೆಬ್ರಿಟಿ ಪಟ್ಟ ಕೊಟ್ಟಿರೋದು ಕನ್ನಡಿಗರು

  ಸೆಲೆಬ್ರಿಟಿ ಪಟ್ಟ ಕೊಟ್ಟಿರೋದು ಕನ್ನಡಿಗರು

  ನಯನ ಅವರೇ ಕಾಮೆಂಟ್ ಸೆಕ್ಷನ್ ಅಲ್ಲಿ ಎಲ್ಲರೂ ಹಾಕ್ಕೊಂಡು ಹಿಂಗ್ ರುಬ್ಬುತ್ತಿರೋದು ಯಾಕ್ ಗೊತ್ತ..???

  ಕಾರಣ ಇಷ್ಟೇ, ಮೊದಲು ನೀವು ಕನ್ನಡಿಗರು. ನಂತರ ಭಾರತ, ತದನಂತರ ವಿಶ್ವ. ಬೇರೆ ಬೇರೆ ರಾಜ್ಯಗಳಿಂದ ವಲಸೆ ಬಂದು ಕನ್ನಡತನವನ್ನ ಎಲ್ಲರೂ ಹಾಳ್ ಮಾಡ್ತಿದಾರೆ ಅವರಿಗೆಲ್ಲ ಎಚ್ಚರಿಸುತ್ತಿದ್ದೇವೆ ಏನಂತ....? ನೀವು ಕನ್ನಡ ನಾಡಲ್ಲಿ ಇರೋದು ನಿಮ್ಮ ರಾಜ್ಯದಲ್ಲಲ್ಲ, ಆದ್ದರಿಂದ ಕಡ್ಡಾಯವಾಗಿ ಕನ್ನಡ ಬಳಸಲೇಬೇಕು ಎಂದು..! ಕನ್ನಡಿಗರಾಗಿ ನೀವೇ ಕನ್ನಡ ಬಳಸಿಲ್ಲ ಅಂದ್ರೆ ಬೇರೆಯವರಿಗೆ ನಾವು ಕನ್ನಡ ಬಳಸಿ ಅಂತ ಹೇಳೋ ಯಾವ ನೈತಿಕತೆನೂ ಇರಲ್ಲ. ಇದನ್ನೆಲ್ಲಾ ಗಮನದಲ್ಲಿ ಇಟ್ಕೊಂಡು ಇಂಗ್ಲಿಷ್ ಬಳಸಿ ಬೇಡ ಅನ್ನಲ್ಲ. ಆದರೆ ಅವಶ್ಯಕತೆ ಇರೋ ಕಡೆ ಮಾತ್ರ ಬಳಸಿ... ನಿಮ್ ಫೇಸ್ಬುಕ್ ಪ್ರೊಫೈಲ್ ನೇಮ್ ಏನ್ ಅಂತ ಇಟ್ಕೊಂಡಿದೀರಾ ಹೇಳಿ?

  #ನಯನ_ಕಾಮಿಡಿ_ಕಿಲಾಡಿಗಳು ಅಂತ. ನಿಮಗೆ ಸೆಲೆಬ್ರಿಟಿ ಅನ್ನೋ ಪಟ್ಟ ಕೊಟ್ಟಿರೋದು ಕನ್ನಡಿಗರು ಮರೀಬೇಡಿ.. - ನಿತ್ಯಾನಂದ ನಾಗರಾಜ್

  ಸ್ಟಾರ್ ನಟರು ಬರೆಯೋದು ಇಂಗ್ಲಿಷ್‌ನಲ್ಲೇ..

  ಸ್ಟಾರ್ ನಟರು ಬರೆಯೋದು ಇಂಗ್ಲಿಷ್‌ನಲ್ಲೇ..

  ಕಾಮಿಡಿ ಕಿಲಾಡಿ ನಯನ ಅಂತ ದೊಡ್ಡ ಕಲಾವಿದೆಯೆನಲ್ಲ! ಅದಕ್ಕೆ ನಾವು ನೀವು ಸುಲಭವಾಗಿ ಪ್ರಶ್ನೆ ಮಾಡಿದ್ವಿ! ಕನ್ನಡದ ಹಲವು ದೊಡ್ಡ ಸ್ಟಾರ್ ನಟರು, ಇಂಗ್ಲೆಂಡಿಗೆ ಹುಟ್ಟಿದ ಹಾಗೇ ದುಡಿಮೆಗೆ ಮಾತ್ರ ಕನ್ನಡ ವಯುಕ್ತಿಕ ಜೀವನ ಅಥವಾ ಸಾಮಾಜಿಕ ಜಾಲತಾಣದ ಪೋಸ್ಟ್ ಬರೆಯೋದಿರಲಿ ಎಲ್ಲವೂ ಇಂಗ್ಲೀಷ್‌ಮಯವೇ!- ಕನ್ನಡಿಗ

  English summary
  Fans slams Comedy Kiladigalu fame actress Nayana for abusing a Kannada fan on social media.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more
  X