»   » ತುಳು ಸಿನಿಮಾದಲ್ಲಿ ಕಾಮಿಡಿ ಕಿಂಗ್ ಜಾನಿ ಲಿವರ್

ತುಳು ಸಿನಿಮಾದಲ್ಲಿ ಕಾಮಿಡಿ ಕಿಂಗ್ ಜಾನಿ ಲಿವರ್

By: ಜೀವನರಸಿಕ
Subscribe to Filmibeat Kannada

ಬಾಲಿವುಡ್ ನ ಕಾಮಿಡಿ ಕಿಂಗ್ ಜಾನಿ ಲಿವರ್ ಈಗ ತುಳು ಸಿನಿಮಾಗೆ ಎಂಟ್ರಿ ಕೊಟ್ಟಿದ್ದಾರೆ. ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಡದ ಈ ಕಾಮಿಡಿಯನ್ ತುಳು ಸಿನಿಮಾಗೆ ಎಂಟ್ರಿ ಕೊಟ್ಟಿರೋದು ಯಾಕೆ ಅಂತೀರಾ, ಅದು ತನ್ನ ಆತ್ಮೀಯ ಗೆಳೆಯನಿಗಾಗಿ. ಇನ್ನು ರೀಲು, ರಿಯಲ್ಲು ಎರಡರಲ್ಲೂ ಇವ್ರು ತುಳು ಸಿನಿಮಾದಲ್ಲಿ ಕಾಣಿಸಿಕೊಂಡಿರೋದು ಗೆಳೆತನಕ್ಕಾಗೀನೇ.

"ರಂಗ್" ಅನ್ನೋ ತುಳು ಬಾಷೆಯ ಸಿನಿಮಾದಲ್ಲಿ ಬಾಂಬೆಯಿಂದ ರಂಗುರಂಗಾಗಿ ಫ್ಯಾಮಿಲಿ ಸಮೇತ ಎಂಟ್ರಿಕೊಡ್ತಾರೆ. ಹಳ್ಳಿಯಲ್ಲಿರೋ ತನ್ನ ಗೆಳೆಯ ಹತ್ತು ವರ್ಷದ ನಂತರ ಕಾಲೇಜು ಪಾಸಾದ ಸಮಭ್ರಮವನ್ನ ಆಚರಿಸೋದಕ್ಕಾಗಿ ಬರುವ ಪಾತ್ರ.


ಮೋದಿ ಕರೆದ್ರೂ ಬರಲ್ಲ, ರಾಹುಲ್ ಕರೆದ್ರೂ ಬರಲ್ಲ, ಸೋನಿಯಾ ಗಾಂಧಿ ಕರೆದ್ರೂ ಬರಲ್ಲ, ಅಷ್ಟೇ ಯಾಕೆ ಬರಾಕ್ ಒಬಾಮಾ ಕರೆದ್ರೂ ಬರಾಕ್ ಆಗಲ್ಲ. ಆದ್ರೆ ನೀನು ಹೇಳಿದ್ದಕ್ಕೆ ಬರ್ತಿದ್ದೀನಿ ಅಂತ ಉದ್ದುದ್ದ ಡೈಲಾಗ್ ಹೇಳ್ತಾರೆ ಜಾನಿ ಲಿವರ್. ದೇವದಾಸ್ ಕುಮಾರ್ ಪಾಂಡೇಶ್ವರ್ ನಿರ್ಮಿಸುತ್ತಿರುವ 'ರಂಗ್' ಚಿತ್ರಕ್ಕೆ ವಿಸ್ಮಯ್ ವಿನಾಯಕ್ ಆಕ್ಷನ್ ಕಟ್ ಹೇಳುತ್ತಿದ್ದಾರೆ.

ಜಾನಿ ಲಿವರ್ ತುಳು ಡೈಲಾಗ್ ಹೇಳಿದ್ರಾ ಅಂತ ನಿಮ್ಗೆ ಅಚ್ಚರಿ ಆಗಬಹುದು. ಹೌದು ಜಾನಿ ಲಿವರ್ ತುಳುವಿನಲ್ಲಿ ಡೈಲಾಗ್ ಹೇಳ್ತಾರೆ. ಅವರಿಗೆ ತುಳು ಚೆನ್ನಾಗಿ ಬರುತ್ತೆ. ಬಾಂಬೆಯಲ್ಲಿರೋ ಅವರ ಗೆಳೆಯರು ತುಳು ಚೆನ್ನಾಗಿ ಕಲಿಸಿದ್ದಾರಂತೆ. ಏನೇ ಆಗ್ಲಿ 'ರಂಗ್' ಸಿನಿಮಾದಲ್ಲಿ ಜಾನಿ ಲಿವರ್ ರಂಗ್ ರಂಗ್ ಡೈಲಾಗ್ ಕೇಳೋಕೆ ಸಿನಿಪ್ರೇಮಿಗಳು ಕಾಯೋದು ಖಂಡಿತ.

ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯ ಜಾನಿ ಲಿವರ್ (56) ಒರಿಜಿನಲ್ ಹೆಸರು ಜಾನ್ ಪ್ರಕಾಶರಾವ್ ಜನುಮಲ. ಹಿಂದೂಸ್ತಾನ್ ಲೀವರ್ ಕಂಪನಿಯಲ್ಲಿ ಕೆಲಸ ಮಾಡಿದ ಕಾರಣ ತಮ್ಮ ಹೆಸರನ್ನು ಜಾನಿ ಲಿವರ್ ಎಂದು ಬದಲಾಯಿಸಿಕೊಂಡರು. ಇದುವರೆಗೂ 13 ಫಿಲಂಫೇರ್ ಪ್ರಶಸ್ತಿಗಳನ್ನು ಅತ್ಯುತ್ತಮ ಹಾಸ್ಯ ನಟ ವಿಭಾಗದಲ್ಲಿ ಪಡೆದ ಖ್ಯಾತಿ ಜಾನಿ ಅವರದು.

English summary
Bollywood's comedy king Johnny Lever makes his debut in Tulu film Rang. produced by Devdas Kumar Pandeshwar and directed by Vismay Vinayak. Arjun Kapikad and Deekshitha Acharya are playing the lead roles. 
Please Wait while comments are loading...