For Quick Alerts
  ALLOW NOTIFICATIONS  
  For Daily Alerts

  ವಿತರಕ ಪ್ರಸಾದ್ ವಿರುದ್ಧ ಕಾಮೆಂಟ್‌ಗಳ ಮಹಾಪೂರ

  By Rajendra
  |

  ಸಮರ್ಥ್ ವೆಂಚರ್ಸ್‌ನ ಎನ್ ಪ್ರಸಾದ್ ಅವರು ಪಾರ್ವತಮ್ಮ ರಾಜ್ ಕುಮಾರ್ ಒಡೆತನದ ವಜ್ರೇಶ್ವರಿ ಕಂಬೈನ್ಸ್ ಹಾಗೂ ಪೂರ್ಣಿಮಾ ಎಂಟರ್‌ಪ್ರೈಸಸ್ ನಿರ್ಮಾಣದ ಚಿತ್ರಗಳ ಬಗ್ಗೆ ಕೆಮ್ಮಿರುವುದು ಗಾಂಧಿನಗರದ ಹವಾಮಾನ ಬದಲಾವಣೆಗೆ ಕಾರಣವಾಗಿದೆ.

  ಸರಿ ಸುಮಾರು ಐವತ್ತಕ್ಕೂ ಹೆಚ್ಚು ವರ್ಷಗಳಿಂದ ಸಿನಿಮಾ ಮಾಡುತ್ತಿರುವ ರಾಜ್ ಬ್ಯಾನರ್‌ನಲ್ಲಿ ಕಥೆಯೇ ಇಲ್ಲದೆ ಚಿತ್ರಗಳನ್ನು ಮಾಡಿ ಜನರಿಗೆ ಮೋಸ ಮಾಡುತ್ತಿದೆ. ಇವರಿಗೆ ಸಂಸ್ಕೃತಿ ಅಥವಾ ಪುಸ್ತಕ ಅಂದರೆ ಏನೆಂದೇ ಗೊತ್ತಿಲ್ಲ. ಈ ಬ್ಯಾನರ್ ಬೇಜವಾಬ್ದಾರಿಯಿಂದ ಸಿನಿಮಾಗಳನ್ನು ತಯಾರಿಸುತ್ತದೆ ಎಂದು ಪ್ರಸಾದ್ ಹೇಳಿದ್ದರು.

  ಈ ಸುದ್ದಿಯನ್ನು ಒನ್‌ಇಂಡಿಯಾ ಕನ್ನಡ ಪ್ರಕಟಿಸಿತ್ತು, ಇದಕ್ಕೆ ಕಾಮೆಂಟ್‌ಗಳ ಮಹಾಪೂರವೇ ಹರಿದು ಬಂದಿದೆ. ಬಹುತೇಕ ಕಾಮೆಂಟ್‌ಗಳು ನಾಲಿಗೆ ಹಿಡಿತ ತಪ್ಪಿ ಸಭ್ಯತೆಯ ಎಲ್ಲೆಮೀರಿರುವುದು ವಿಷಾದನೀಯ ಸಂಗತಿ. ವ್ಯಾಕರಣ ದೋಷಗಳನ್ನು ಪಕ್ಕಕ್ಕಿಟ್ಟರೆ, ಸಭ್ಯತೆಯ ಚೌಕಟ್ಟಿನಲ್ಲಿರುವ ಆಯ್ದ ಕೆಲವು ಕಾಮೆಂಟ್‌ಗಳು...

  ಪ್ರಸಾದ್ ಮಾತಿನಲ್ಲಿ ನಿಜ ಇಲ್ಲ, ಇಧು ಅಣ್ಣ ಬಾಂಡ್ ವಿಥರನ್ನೇ ಸಿಗದಿರುವುದರ ಪ್ರಬಾವ ಹಣ್ಣ ಮನುಷ್ಯನನು ಮತ್ತಿ ಹಿನ್ನನಾಗಿ ಸುತೆ ಉದಾಹರಣೆ ಪ್ರಸಾದ್ ಆಗು ಇದ್ದು. ರಾಜ್ banner ಗೆ ವೊಂದು ವೊಳ್ಳೆ ಮತ್ತು ಜನ್ನ ನಿಮ್ಮ ಮೇಲೆ ತುಂಬಬ ಬರವಸೆ ಇಟ್ಟಿದಾರೆ ಸೊ ಟೈಮ್ ತಗೊಂಡರು ಪರವಾಗಿಲ್ಲ ವಲ್ಲೆ ಸಿನಿಮಾ ಕೊಡ್ಡಿ ಹಾಗು ರೆಮಕೆ ಬಿಟ್ಟು ಬಿಡಿ ಹುಡುಕಿದರೆ ವಲ್ಲೆ ಕಥೆ ಸಿಗುಥೆ.....(Nayaka The Worrior)

  ಏನು ಹೇಳೋದು ಇಂತ ಟೈಮಲ್ಲಿ ಯಾವನಿಗೊತ್ತು ಯಾವನಿಗೊತ್ತು ??? ಈ ಮಾತು ಹೇಳೋ ಪ್ರಸಾದು ಹೆಚ್ಚುಕಮ್ಮಿ 16 ಕೋಟಿ ರೂಪಾಯಿಗೆ 'ಅಣ್ಣಾಬಾಂಡ್' ಚಿತ್ರವನ್ನು ಕೊಂಡುಕೊಳ್ಳುತ್ತೇನೆ ಅಂತಾ ಯಾಕ್ ಹೇಳ್ದಾ? (Deep). ವಿಜಯ್ ರಾಜ್ ಬ್ಯಾನೆರ್ ಬಗ್ಗೆ ಮಾತನಾಡುವ ಯೋಗ್ಯತೆ ನಿಮಗಿಲ್ಲ. (Vijaya kumari)

  ಇ ಪ್ರಸಾದ್ ಯಾರ ರೀ ಅಣ್ಣಾವ್ರ banner ಬಗ್ಗೆ ಮಾತಾಡೋಕೆ ಯೋಗ್ಯತೆ ಇರ್ಬೇಕು ? 80+ ಫಿಲಂಸ್ ಸೂಪರ್ duper ಹಿಟ್ ಆಗಿವೆ ನಮ್ ಕನ್ನಡಿಗರು ತುಂಬ ಚೂಸಿ ಫಿಲಂ ಹಿಟ್ ಆಯಿತು ಅಂದ್ರೆ ಅದ್ರಾಲ್ಲಿ ಕಥೆ ಮೊರಲ್ ಎರಡು ಇದ್ರೆ ಒಪ್ಕೋತಾರೆ ? ನಿನ್ನೆ ಮೊನ್ನೆ ಬಂದಿರೋ ಬಚ್ಚಾಗಳು ನಮ್ ಕನ್ನಡದ ಕಣ್ಮಣಿ ಬಗ್ಗೆ ಮಾತಾಡೋ ರೀತಿ ಆಗಿದೆ ? ಅಣ್ಣ ಬದುಕಿದ್ರೆ ಅವ್ರ ಕಾಲು ಇಡಿದು ಹೆಸರು ಮಾಡ್ತಿದ್ರು ಇ ಲೋಫರ್ ಗಳು ? ಇಂಥ ಪ್ರಸಾದ್ ನ ಫಸ್ಟ್ ಬ್ಯಾನ್ ಮಾಡಿ ? ನಮ್ ಕನ್ನಡ ಇಂಡಸ್ಟ್ರಿ ದೆವೆಲೋಪ್ agute (Murali)

  ರಾಜಕುಮಾರ್ ಇರೋವರೆಗೂ ಉತ್ತಮ ಚಿತ್ರಗಳನ್ನೇ ನೀಡುತ್ತಿದ್ದರು.ಯಾಕಂದ್ರೆ ಅಣ್ಣ ಬಾಂಡ್ ನಂತಹ ಕಚಡಾ ಚಿತ್ರಗಳನ್ನು ಮಾಡೋಕೆ ಆಗ ಅಣ್ಣಾವ್ರು ಒಪ್ಪುತ್ತಿರಲಿಲ್ಲ.ಅವರು ನಟಿಸೋದನ್ನು ಬಿಟ್ಟು ಅಗಲಿದ ಮೇಲೆ ಅವರ ಫ್ಯಾಮಿಲಿಯ ರಾಜ್ಯಭಾರ ಮಿತಿಮೀರಿದೆ.ಈಗ ಅವರು ನಿಶ್ಚಿಂತೆಯಿಂದ ಅಣ್ಣ ಬಾಂಡ್,ಜಾಕಿಯಂತಹ ರೌಡಿಸಂ ಕಚಡಾ ಚಿತ್ರಗಳನ್ನು ತೆಗೀತಿದ್ದಾರೆ.ಕರ್ನಾಟಕದ ಪೆದ್ದರು ಅದನ್ನು ನೋಡುತ್ತಿದ್ದಾರೆ.ಅಣ್ಣಾವ್ರ ಮಕ್ಕಳೇ ಇವತ್ತು ರೌಡಿಸಂನ ಚಿತ್ರಗಳಲ್ಲಿ ನಟಿಸುತ್ತಾ,ಅವರನ್ನು follow ಮಾಡೋ ದಡ್ಡ ಶಿಖಾಮಣಿಗಳಿಗೆ ರೋಲ್ ಮಾಡೆಲ್ ಆಗಿದ್ದಾರೆ.ಆದರೆ ನಾನು ಪ್ರಸಾದನನ್ನು ವಹಿಸಿಕೊಂಡು ಮಾತಾಡ್ತಿಲ್ಲ. (Sachin)

  ಅರ್ಧರಾತ್ರೀಲಿ ಬೆಳಕ ಕಂಡ ಅರ್ಧಬೆಂದ ಮಡಕೆ ಈ ಪ್ರಸಾದ್, ಇತ್ತೀಚೆಗೆ ಎಲ್ಲಾ ಯಶಸ್ವಿ ಚಿತ್ರಗಳನ್ನು ಹೆಚ್ಚು ಹಣ ನೀಡಿ ಖರೀದಿಸಿದ ವಿತರಕ ಕೂಡ ಇದೇ ಮುಟ್ಟಾಳ.. ಪಕ್ಕಾ ವ್ಯಾಪಾರಿ ಮನೋಭಾವದ ಈ ವ್ಯಕ್ತಿ ಒಂದು ಚಿತ್ರ ತೆಗೆದು ತೋರಿಸಿ ಆ ಮೇಲೆ ಮಾತಾಡೋದು ಸರಿ. ಯಾರೋ ಕಷ್ಟಪಟ್ಟು ತೆಗೆದ ಚಿತ್ರಗಳನ್ನು ಕೊಂಡು ದುಡ್ಡುಮಾಡೋ ಇವನು ರಾಜ್ ಬ್ಯಾನರ್ ಬಗ್ಗೆ ಹೇಳೋದಕ್ಕೂ ಯೋಗ್ಯತೆ ಇಲ್ಲದ ಮನುಷ್ಯ.. ಪುನೀತ್ ಚಿತ್ರದ ವಿತರಣೆ ಹಕ್ಕು ಸಿಕ್ಕಿಲ್ಲದೆ ಅದರ ಯಶಸ್ಸು ನೋಡಿ ಕರುಬೋ ಈ ಕಿತ್ತೋಗಿರೋನ್ನ ಏನ್ಮಾಡೋದು.. ತಮಗೆ ಗೊತ್ತಿರಲಿ.. ಚಿತ್ರರಂಗದ ಅನೇಕ ನಾಯಕನಟರುಗಳ ಮಧ್ಯೆ ವೈರತ್ವವನ್ನು ಕೂಡಾ ಈತಾ ಹುಟ್ಟಾಕ್ತಿರೋ ದುಷ್ಟ. (mahesh)

  ಸಮರ್ಥ್ ವೆಂಚರ್ಸ್ ಪ್ರಸಾದ್ ಕುರಿತು: ಸಮರ್ಥ್ ವೆಂಚರ್ಸ್ ಎಂಬ ಚಿತ್ರ ನಿರ್ಮಾಣ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸಾದ್. ಈ ಸಂಸ್ಥೆಯ ಮೂಲಕ ಹಲವಾರು ಕನ್ನಡ ಚಿತ್ರಗಳ ವಿತರಣೆ ಹಕ್ಕುಗಳನ್ನು ಪಡೆದಿದ್ದಾರೆ. ಚಿತ್ರ ನಿರ್ಮಾಣಕ್ಕೆ ಏನೇನು ಸೌಲಭ್ಯಗಳು ಬೇಕೋ ಅವೆಲ್ಲವನ್ನೂ ಹಂತ ಹಂತವಾಗಿ ಹೊಂದಿಸುಕೊಂಡು ಈ ಸಂಸ್ಥೆ ಮುಂದಡಿ ಇಡುತ್ತಿದೆ. ಕೃಷ್ಣ ಪ್ರಸಾದ್ ಒಡೆತನದಲ್ಲಿದ್ದ ಅಶ್ವಿನಿ ಆಡಿಯೋ ಕಂಪಪನಿಯನ್ನು ಇತ್ತೀಚೆಗೆ ಕೊಂಡುಕೊಂಡಿದೆ.

  ಇತ್ತೀಚೆಗೆ ತೆರೆಕಂಡ 'ಜಾನೂ' ಸೇರಿದಂತೆ ಬಹಳಷ್ಟು ಚಿತ್ರಗಳ ವಿತರಣೆ ಹಕ್ಕುಗಳನ್ನು ಪ್ರಸಾದ್ ಪಡೆದುಕೊಂಡಿದ್ದಾರೆ. ಕೆ ಮಂಜು ನಿರ್ಮಾಣದ ಗಾಡ್ ಫಾದರ್, ರಜನಿಕಾಂತ, ಶಂಕರೇಗೌಡ ನಿರ್ಮಾಣದ ವರದನಾಯಕ, ದ್ವಾರಕೀಶ್ ನಿರ್ಮಾಣದ ಚಾರುಲತಾ ಬಿಡುಗಡೆಯಾಗಬೇಕಿವೆ.

  ಅಣಜಿ ನಾಗರಾಜ್ ನಿರ್ಮಾಣದ 'ಭೀಮಾ ತೀರದಲ್ಲಿ' (ಬದಲಾದ ಶೀರ್ಷಿಕೆ: ಚಂದಪ್ಪ), 'ಅಲೆಮಾರಿ' ಚಿತ್ರಗಳು ಬಾಕ್ಸಾಫೀಸಲ್ಲಿ ತಕ್ಕಮಟ್ಟಿಗೆ ಸದ್ದು ಮಾಡಿವೆ. 'ಚಕ್ರವ್ಯೂಹ' ಎಂಬ ಚಿತ್ರದ ಮೂಲಕ ಚಿತ್ರ ನಿರ್ಮಾಣಕ್ಕೂ ಕೈಹಾಕಿದೆ ಸಮರ್ಥ್ ವೆಂಚರ್ಸ್. (ಒನ್‌ಇಂಡಿಯಾ ಕನ್ನಡ)

  English summary
  Kannada films distributor N Prasad of Samarth Ventures satatement against Dr Rajkumar home production has flooded with comments. Prasad has indirectly targetted Dr. Raj home production movies. Dr Raj fans turns on the war path.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X