»   » ಬಾಹುಬಲಿ ಬಲವನ್ನು ಮೆಟ್ಟಿ ನಿಲ್ಲುವವೇ ಕನ್ನಡ ಚಿತ್ರಗಳು

ಬಾಹುಬಲಿ ಬಲವನ್ನು ಮೆಟ್ಟಿ ನಿಲ್ಲುವವೇ ಕನ್ನಡ ಚಿತ್ರಗಳು

By: ಜೀವನರಸಿಕ
Subscribe to Filmibeat Kannada

'ಮುಂಗಾರುಮಳೆ' ಮತ್ತು 'ದುನಿಯಾ' ನಂತರ ಮತ್ತೆ ಸ್ಯಾಂಡಲ್ವುಡ್ ಚೇತರಿಸಿಕೊಂಡು ಎದ್ದು ನಿಂತಿದ್ದು 2012ರಲ್ಲಿ. ಅದ್ರ ನಡುವೆ ಒಳ್ಳೊಳ್ಳೆಯ ಸಿನಿಮಾಗಳು ಬಂದ್ರೂ ಪರಭಾಷೆಗಳಿಗೆ ಸೆಡ್ಡು ಹೊಡೆಯೋ ಸಿನಿಮಾಗಳು ಬಂದಿದ್ದು ತೀರಾ ಕಡಿಮೆ.

ಅಂದ್ರೆ ನಾವು ನೀವು ಗಮನಿಸೋ ಹಾಗೇನೆ 2011ರವರೆಗೆ ಎರಡು ತಿಂಗಳಿಗೊಮ್ಮೆ ತಮಿಳು ತೆಲುಗಿನ ಸೂಪರ್ಸ್ಟಾರ್ಗಳ ಸಿನಿಮಾ ಬಂದಾಗ ಕನ್ನಡ ಸಿನಿಮಾದವ್ರು ಥಿಯೇಟರ್ ಸಮಸ್ಯೆ, ಪರಭಾಷೆಗೆ ಥಿಯೇಟರ್ ನಮಗಿಲ್ಲ ಅಂತ ವಾಣಿಜ್ಯ ಮಂಡಳಿಯ ಮೊರೆ ಹೋಗ್ತಿದ್ದಿದ್ದು ಸಾಮಾನ್ಯವಾಗಿತ್ತು.

2012ರ ನಂತ್ರ ಥಿಯೇಟರ್ ಸಮಸ್ಯೆ ಆಗಿದೆ ಅಂತ ವಾಣಿಜ್ಯ ಮಂಡಳಿಗೆ ಬರ್ತಿರೋ ದೂರುಗಳು ಕಡಿಮೆಯಾಗಿವೆ. ರಾಕಿಂಗ್ ಸ್ಟಾರ್ ಯಶ್ ಸಿನಿಮಾಗಳಂತೂ ಸಾರ್ವಕಾಲಿಕ ದಾಖಲೆ ಬರೆದ 'ಪಿಕೆ'ಯಂತಹಾ ಸಿನಿಮಾಗಳಿಗೇನೇ ಕಲೆಕ್ಷನ್ನಲ್ಲಿ ಸೆಡ್ಡು ಹೊಡೆದಿವೆ. [ಬಾಹುಬಲಿ ವಿರುದ್ಧ ರಂಗಿತರಂಗ ತಂಡದಿಂದ ದೂರು]

Competition from other language movies to Kannada films

ಈಗ ಬರ್ತಿರೋ 'ಬಾಹುಬಲಿ' ಮಾತ್ರ ಮತ್ತೊಮ್ಮೆ ಥಿಯೇಟರ್ ಸಮಸ್ಯೆ ತಲೆದೋರುವಂತೆ ಮಾಡಿದೆ. ಕನ್ನಡ ಚಿತ್ರಗಳ ಕ್ವಾಲಿಟಿ ಚೆನ್ನಾಗಿದ್ರೆ ಯಾಕೆ ಪರಭಾಷೆಗೆ ಹೆದರ್ಬೇಕು ಅನ್ನೋದಕ್ಕೆ ಉದಾಹರಣೆಗಳೂ ನಮ್ಮಲ್ಲೇ ಇವೆ.

ಹಂಗೆ ನೋಡಿದರೆ 'ಬಾಹುಬಲಿ' ಸಿನಿಮಾ ನಿರ್ದೇಶಕರೂ ಕೂಡ ನಮ್ಮವರೆ. ತೆಲುಗಿನಲ್ಲಿ ಈಗ, ಮಗಧೀರದಂಥ ಚಿತ್ರಗಳನ್ನು ನಿರ್ದೇಶಿಸಿರುವ ಎಸ್ಎಸ್ ರಾಜಮೌಳಿ ಹುಟ್ಟಿದ್ದು ರಾಯಚೂರಲ್ಲಿ. ಕನ್ನಡಿಗನಾದರೇನಂತೆ ಕನ್ನಡ ಚಿತ್ರ ತೆಗೆಯಲು ಇವರಿಗೇನು ಧಾಡಿ ಅಂತೆಲ್ಲ ಸೋಷಿಯಲ್ ಮೀಡಿಯಾದಲ್ಲಿ ಜನರು ಆಡಿಕೊಳ್ಳುತ್ತಿದ್ದಾರೆ.

ಇಷ್ಟು ಮಾತ್ರವಲ್ಲ, ಚಿತ್ರದಲ್ಲಿ ಕನ್ನಡಿಗರ ದಂಡೇ ಇದೆ. ನಮ್ಮ ನೆಚ್ಚಿನ ನಟ 'ಕಿಚ್ಚ' ಸುದೀಪ್ ಅಸ್ಲಂ ಖಾನ್ ಪಾತ್ರಧಾರಿಯಾಗಿ ಕಾಣಿಸಿಕೊಂಡಿದ್ದಾರೆ. ಕುಡ್ಲದ ಸ್ವೀಟಿ ಅನುಷ್ಕಾ ಶೆಟ್ಟಿ ದೇವಸೇನ ಎಂಬ ಪಾತ್ರ ಪೋಷಿಸಿದ್ದಾರೆ. ಅಲ್ಲದೆ, ಕನ್ನಡ ನಿರ್ಮಾಪಕರೇ ತೆಲುಗಿನ ವಿತರಣಾ ಹಕ್ಕುಗಳನ್ನು ಪಡೆದುಕೊಂಡಿದ್ದಾರೆ. [ಅನುಷ್ಕಾ ಶೆಟ್ಟಿ ಫಸ್ಟ್ ಲುಕ್ ರಿಲೀಸ್]

ಇಷ್ಟೆಲ್ಲಾ ಆದರೂ, ಕನ್ನಡ ನಾಡಲ್ಲಿ ಅತ್ಯುತ್ತಮ ಸ್ಪಂದನೆ ಪಡೆದಿರುವ 'ರಂಗಿತರಂಗ' ಚಿತ್ರಕ್ಕೆ ಅಡ್ಡಗಾಲಾಗಿ, ಚಿತ್ರಮಂದಿರಗಳನ್ನೂ ಕಿತ್ತುಕೊಂಡಿರುವ 'ಬಾಹುಬಲಿ' ಚಿತ್ರ ಎಷ್ಟೇ ಚೆನ್ನಾಗಿದ್ದರೂ ನಾನು ನೋಡುವುದಿಲ್ಲ ಎಂದು ಕನ್ನಡಿಗರು ಪ್ರತಿಜ್ಞೆ ಮಾಡುತ್ತಿದ್ದಾರೆ. ಈ ನಡುವೆ, ಬಾಹುಬಲಿ ಚಿತ್ರ ಅಷ್ಟಕ್ಕಷ್ಟೆ ಅಂತೇ ಎಂಬ ಮಾತುಗಳೂ ಅಲ್ಲಲ್ಲಿ ಸುಳಿದಾಡುತ್ತಿವೆ. ತಾವೂ ಗೆಲ್ಲಲಿಲ್ಲ, ಬೇರೆಯವರನ್ನೂ ಗೆಲ್ಲಲು ಬಿಡಲಿಲ್ಲ ಎಂಬಂತೆ ಆಗಬಾರದು. ಏನಾಗುತ್ತೋ? ['ಬಾಹುಬಲಿ' ವಿತರಣಾ ಹಕ್ಕಿನ ಹಿಂದಿದೆ ಮಾಸ್ಟರ್ ಪ್ಲಾನ್!]

English summary
There is always competition and threat to Kannada movies from other language films. The theatre owners in Bengaluru have shown step motherly treatment to our movies. In recent times Sandalwood had not faced this problem. But, SS Rajamouli's Baahubali is threatening now.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada