For Quick Alerts
  ALLOW NOTIFICATIONS  
  For Daily Alerts

  ಸ್ಯಾಂಡಲ್ ವುಡ್ ನಲ್ಲಿ ತ್ರಿಕೋನ ಪ್ರೇಮಕತೆಯ ಕಂಪ್ಲೀಟ್ ಡಿಟೇಲ್ಸ್

  By Pavithra
  |

  ಸ್ಯಾಂಡಲ್ ವುಡ್ ನಟಿ ಕಾರುಣ್ಯ ರಾಮ್ ಮೇಲೆ ಕಿರುಕುಳದ ಆರೋಪ ಕೇಳಿ ಬಂದಿದೆ. 'ನಾನು ಮದುವೆ ಆಗುತ್ತಿರುವ ಹುಡುಗನ ಕುಟುಂಬಕ್ಕೆ ಕಾರುಣ್ಯ ರಾಮ್ ಕಡೆಯಿಂದ ತೊಂದರೆಯಾಗುತ್ತಿದೆ' ಎಂದು ಕಿರುತೆರೆಯ ನಟಿ ಅನಿಖ ಸಿಂಧ್ಯಾ ಆರೋಪ ಮಾಡಿದ್ದಾರೆ.

  ಅನಿಖ ಸಿಂಧ್ಯಾ ಕಲರ್ಸ್ ಕನ್ನಡ ವಾಹಿನಿಯ 'ಲಕ್ಷ್ಮೀ ಬಾರಮ್ಮ' ಸೀರಿಯಲ್ ನಲ್ಲಿ ಕುಮುದ ಪಾತ್ರವನ್ನ ನಿರ್ವಹಿಸುತ್ತಿದ್ದಾರೆ.

  ಕಳೆದ ಹನ್ನೊಂದು ದಿನಗಳ ಹಿಂದೆ ಅನಿಖ ಸಿಂಧ್ಯಾ ಹಾಗೂ ಸಚಿನ್ ನಿಶ್ಚಿತಾರ್ಥ ನಡೆದಿತ್ತು. ನಿಶ್ಚಿತಾರ್ಥದ ಫೋಟೋಗಳನ್ನ ನೋಡಿದ ನಟಿ ಕಾರುಣ್ಯ, ಇದೀಗ ''ಸಚಿನ್... ನಾನು ಪ್ರೀತಿ ಮಾಡಿರುವ ಹುಡುಗ, ನಾನು ಆತನನ್ನೇ ಮದುವೆ ಆಗುತ್ತೇನೆ'' ಎಂದು ಸಚಿನ್ ಕುಟುಂಬಕ್ಕೆ ತೊಂದರೆ ಕೊಡುತ್ತಿದ್ದಾರಂತೆ.

  ಅಷ್ಟಕ್ಕೂ ಈ ತ್ರಿಕೋನ ಪ್ರೇಮ ಕತೆಗೆ ಕಾರಣ ಏನು? ಯಾರು ಯಾರನ್ನ ಮದುವೆಯಾಗಲಿದ್ದಾರೆ ? ಪ್ರೇಮ ಪ್ರಕರಣದ ಬಗ್ಗೆ ಮೂವರು ಏನು ಹೇಳುತ್ತಾರೆ.? ಎಂಬಿತ್ಯಾದಿ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ ಓದಿ....

  ಏನಿದು ಪ್ರಕರಣ.?

  ಏನಿದು ಪ್ರಕರಣ.?

  ನಟಿ ಕಾರುಣ್ಯ ರಾಮ್ ಹಾಗೂ ಉದ್ಯಮಿ ಸಚಿನ್ ಎಂಟು ವರ್ಷಗಳಿಂದ ಪ್ರೇಮಿಗಳು. ಇಬ್ಬರು ಸಾಕಷ್ಟು ವರ್ಷಗಳು ಪ್ರೇಮಿಗಳಾಗಿ ಕೈಕೈ ಹಿಡಿದುಕೊಂಡು ಸುತ್ತಾಡಿದ್ರು. ಮನೆಯಲ್ಲಿ ಮದುವೆ ಮಾತುಕತೆಗೆ ಬಂದಾಗ ಕಾರುಣ್ಯರನ್ನ ಸೊಸೆಯಾಗಿ ಒಪ್ಪಿಕೊಳ್ಳಲು ಸಚಿನ್ ಮನೆಯವರು ನಿರಾಕರಿಸಿದ್ದಾರೆ. ಈ ಕಾರಣದಿಂದ ಸಚಿನ್ ಕಳೆದ ವಾರ ಅನಿಖರ ಜೊತೆ ಮದುವೆಯಾಗಲು ಒಪ್ಪಿಗೆ ಸೂಚಿಸಿದ್ದಾರೆ.

  ಕಿರುತೆರೆ ಕಲಾವಿದೆ ಅನಿಖ

  ಕಿರುತೆರೆ ಕಲಾವಿದೆ ಅನಿಖ

  ಅನಿಖ ಸಿಂಧ್ಯಾ... ಸುಮಾರು ಹದಿನಾಲ್ಕು ವರ್ಷಗಳಿಂದ ಕಿರುತೆರೆಯಲ್ಲಿ ತಮ್ಮ ಅಭಿನಯದಿಂದ ಪ್ರಖ್ಯಾತಿ ಗಳಿಸಿರುವ ನಟಿ. ಕೇವಲ ಕಿರುತೆರೆ ಧಾರಾವಾಹಿಗಳಲ್ಲಿ ಮಾತ್ರವಲ್ಲದೆ ಸಿನಿಮಾಗಳಲ್ಲಿ ಸಣ್ಣ ಪುಟ್ಟ ಪಾತ್ರವನ್ನೂ ನಿರ್ವಹಿಸಿದ್ದಾರೆ ನಟಿ ಅನಿಖ ಸಿಂಧ್ಯಾ.

  ನಾವು ಸ್ನೇಹಿತರಲ್ಲ ಪ್ರೇಮಿಗಳು.!

  ನಾವು ಸ್ನೇಹಿತರಲ್ಲ ಪ್ರೇಮಿಗಳು.!

  ಕಾರುಣ್ಯ ರಾಮ್ ಹಾಗೂ ಸಚಿನ್ ಇಬ್ಬರೂ ಎಂಟು ವರ್ಷಗಳಿಂದ ಪ್ರೀತಿ ಮಾಡಿದ್ದಾರೆ. ಇಬ್ಬರಿಗೂ ಮ್ಯೂಚುವಲ್ ಫ್ರೆಂಡ್ಸ್ ಇರೋದ್ರಿಂದ ಇಬ್ಬರ ಪರಿಚಯವಾಗಿದೆ. ಇಬ್ಬರೂ ಇಷ್ಟ ಪಟ್ಟು ಮದುವೆಯಾಗಲು ನಿರ್ಧಾರ ಮಾಡಿದ್ರು.

  ಕಾರುಣ್ಯ ಬೇಡವೆಂದ ಸಚಿನ್

  ಕಾರುಣ್ಯ ಬೇಡವೆಂದ ಸಚಿನ್

  ಎಂಟು ವರ್ಷದ ಪ್ರೀತಿಗೆ ಸಚಿನ್ ಮತ್ತು ಕಾರುಣ್ಯ ಎಳ್ಳುನೀರು ಬಿಟ್ಟು ಮೂರು ವರ್ಷಗಳು ಕಳೆದಿವೆ. ಈಗ ಅನಿಖ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿರುವ ಸಚಿನ್, ಕಾರುಣ್ಯಳನ್ನ ಮದುವೆಯಾಗಲು ನಿರಾಕರಿಸಿದ್ದಾರೆ. ''ನಾನು ಅನಿಖಳನ್ನ ಮದುವೆಯಾಗುತ್ತಿದ್ದು, ಕಾರುಣ್ಯ ಪ್ರೀತಿ ನನಗೆ ಬೇಡ'' ಎಂದಿದ್ದಾರೆ.

  ದೊಡ್ಡ ಉದ್ಯಮಿ ಸಚಿನ್

  ದೊಡ್ಡ ಉದ್ಯಮಿ ಸಚಿನ್

  ಸಚಿನ್ ದೊಡ್ಡ ಉದ್ಯಮಿ. ಅನಿಖರ ತಂದೆ ಹಾಗೂ ಸಹೋದರನ ಜೊತೆ ಉದ್ಯಮದಲ್ಲಿ ಪಾಟರ್ನರ್ ಕೂಡ ಹೌದು. ಸಾಕಷ್ಟು ವರ್ಷದಿಂದ ಪರಿಚಯವಿರುವ ಹುಡುಗ ಎನ್ನುವ ಉದ್ದೇಶದಿಂದ ಅಳಿಯನನ್ನಾಗಿ ಮಾಡಿಕೊಳ್ಳಲು ಅನಿಖ ಸಿಂಧ್ಯಾ ಮನೆಯಲ್ಲಿ ಸಚಿನ್ ರನ್ನ ಒಪ್ಪಿಕೊಂಡಿದ್ದಾರೆ.

  English summary
  Complete information about Karunya Ram, Sachin and Anikha love triangle.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X