»   » ಬ್ರೇಕಿಂಗ್ ನ್ಯೂಸ್: ಡಾ.ವಿಷ್ಣುವರ್ಧನ್ ಸ್ಮಾರಕ ಮೈಸೂರಿನಲ್ಲಿ ಖಾತ್ರಿ!

ಬ್ರೇಕಿಂಗ್ ನ್ಯೂಸ್: ಡಾ.ವಿಷ್ಣುವರ್ಧನ್ ಸ್ಮಾರಕ ಮೈಸೂರಿನಲ್ಲಿ ಖಾತ್ರಿ!

Posted By:
Subscribe to Filmibeat Kannada

ಸಾಹಸ ಸಿಂಹ ಡಾ.ವಿಷ್ಣುವರ್ಧನ್ ರವರ ಸ್ಮಾರಕ ಸ್ಥಳಾಂತರ ವಿರೋಧಿಸಿ ಎರಡು ತಿಂಗಳ ಹಿಂದೆಯಷ್ಟೇ 'ಡಾ.ವಿಷ್ಣು ಸೇನಾ ಸಮಿತಿ' ಬೃಹತ್ ಪ್ರತಿಭಟನೆ ಮಾಡಿತ್ತು.

ಕನ್ನಡ ಪರ ಸಂಘಟನೆಗಳ ಜೊತೆಗೂಡಿದ ಡಾ.ವಿಷ್ಣು ಅಭಿಮಾನಿಗಳು ಬೆಂಗಳೂರಿನ ಟೌನ್ ಹಾಲ್ ಎದುರು ಮೆರವಣಿಗೆ ನಡೆಸಿದ್ರು. ಆದ್ರೀಗ ಏನು ಬಂತು ಪ್ರಯೋಜನ.? ಕೊನೆಗೂ ಡಾ.ವಿಷ್ಣುವರ್ಧನ್ ರವರ ಸ್ಮಾರಕ ಮೈಸೂರಿನಲ್ಲಿ ತಲೆ ಎತ್ತಲಿದೆ.! [ವಿಷ್ಣು ಸ್ಮಾರಕ ಸ್ಥಳಾಂತರ ಗುಲ್ಲು; ಅಭಿಮಾನಿಗಳ ಬೃಹತ್ ಪ್ರತಿಭಟನೆ]

ಮೈಸೂರಿನಲ್ಲಿ ಡಾ.ವಿಷ್ಣುವರ್ಧನ್ ರವರ ಸ್ಮಾರಕ ನಿರ್ಮಾಣಕ್ಕೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅಸ್ತು ಎಂದಿದ್ದಾರೆ ಎಂಬುದು ಸದ್ಯದ ಬಿಗ್ ಬ್ರೇಕಿಂಗ್ ನ್ಯೂಸ್. ಮುಂದೆ ಓದಿ....

ಮೈಸೂರಿನಲ್ಲಿ ಡಾ.ವಿಷ್ಣು ಸ್ಮಾರಕ ಖಾತ್ರಿ!

ಮೈಸೂರಿನಲ್ಲಿ ಡಾ.ವಿಷ್ಣುವರ್ಧನ್ ರವರ ಸ್ಮಾರಕ ನಿರ್ಮಾಣಕ್ಕೆ ಅಗತ್ಯ ಪ್ರಕ್ರಿಯೆ ಕೈಗೊಳ್ಳುವಂತೆ ಇಂದು (ಆಗಸ್ಟ್ 23) ಬೆಳಗ್ಗೆ ನಡೆದ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಸೂಚನೆ ನೀಡಿದ್ದಾರೆ. [ವಿಷ್ಣುವರ್ಧನ್ ಸ್ಮಾರಕದ ಕಥೆ ಹೇಳುವೆ, ನಿನ್ನ ಕಥೆ ಹೇಳುವೆ!]

ಡಾ.ವಿಷ್ಣು ಹುಟ್ಟುಹಬ್ಬದಂದು ಭೂಮಿ ಪೂಜೆ

ಡಾ.ವಿಷ್ಣುವರ್ಧನ್ ರವರ ಹುಟ್ಟುಹಬ್ಬದಂದು (ಸೆಪ್ಟೆಂಬರ್ 18) ಮೈಸೂರಿನಲ್ಲಿ ಸ್ಮಾರಕದ ಭೂಮಿ ಪೂಜೆ ನಡೆಸಲಾಗುವುದು. [ವಿಷ್ಣು ಸ್ಮಾರಕ ಸ್ಥಳಾಂತರ ಬಗ್ಗೆ ಕೊನೆಗೂ ಬಾಯ್ಬಿಟ್ಟ ಸುದೀಪ್]

ಇದು ಭಾರತಿ ವಿಷ್ಣುವರ್ಧನ್ ಆಶಯ

ಸೆಪ್ಟೆಂಬರ್ 18 ರಂದು ಡಾ.ವಿಷ್ಣುವರ್ಧನ್ ರವರ ಹುಟ್ಟುಹಬ್ಬದ ವೇಳೆ ಮೈಸೂರಿನಲ್ಲಿ ಸ್ಮಾರಕದ ಭೂಮಿ ಪೂಜೆ ಆಗಬೇಕೆಂಬ ಆಶಯ ವ್ಯಕ್ತ ಪಡಿಸಿದ್ರು ಭಾರತಿ ವಿಷ್ಣುವರ್ಧನ್. ಇದಕ್ಕೆ ಸಿ.ಎಂ ಸಿದ್ಧರಾಮಯ್ಯ ಸಮ್ಮತಿ ನೀಡಿದ್ದಾರೆ. [ವಿಷ್ಣು ಸ್ಮಾರಕದ ಕುರಿತು ಭಾರತಿ ವಿಷ್ಣುವರ್ಧನ್ ನೋವಿನ ನುಡಿ]

'ಫಿಲ್ಮಿಬೀಟ್ ಕನ್ನಡ' ಜೊತೆ ಅನಿರುದ್ಧ ಮಾತು

''ಸೆಪ್ಟೆಂಬರ್ 18 ರಂದು ಮೈಸೂರಿನಲ್ಲಿ ಭೂಮಿ ಪೂಜೆ ಆಗಲಿದೆ'' ಅಂತ 'ಫಿಲ್ಮಿಬೀಟ್ ಕನ್ನಡ' ಗೆ ಅನಿರುದ್ಧ ತಿಳಿಸಿದ್ದಾರೆ.

ಮೈಸೂರಿನಲ್ಲಿ ಸ್ಮಾರಕ ಎಲ್ಲಿ?

ಮೈಸೂರಿನ ಹೆಚ್.ಡಿ.ಕೋಟೆಯಿಂದ ಐದು ಕಿ.ಮೀ ದೂರದಲ್ಲಿ ಡಾ.ವಿಷ್ಣು ಸ್ಮಾರಕ ನಿರ್ಮಾಣಕ್ಕೆ ಜಾಗ ಗುರುತು ಮಾಡಲಾಗಿದೆ.

ಬೆಂಗಳೂರಿನಲ್ಲಿ ಯಾಕೆ ಬೇಡ?

''ಸ್ಮಾರಕ ನಿರ್ಮಾಣ ವಿಚಾರದಲ್ಲಿ ಪ್ರತಿಫಲ ಸಿಗುತ್ತಿಲ್ಲ. ನಟ ಬಾಲಕೃಷ್ಣ ರವರ ಪುತ್ರ ಹಗುರವಾಗಿ ಮಾತನಾಡಿರುವುದು ಮನಸ್ಸಿಗೆ ತುಂಬಾ ನೋವಾಗಿದೆ. ಹೀಗಾಗಿ ಬೆಂಗಳೂರಿನಲ್ಲಿ ಬೇಡವೇ ಬೇಡ'' ಅಂತ ಹಿಂದೊಮ್ಮೆ ನಡೆದ ಪತ್ರಿಕಾಗೋಷ್ಟಿಯಲ್ಲಿ ಭಾರತಿ ವಿಷ್ಣುವರ್ಧನ್ ಹೇಳಿದ್ದರು.

ಮೈಸೂರು ಅಂದ್ರೆ ಇಷ್ಟ!

''ವಿಷ್ಣು ಹುಟ್ಟಿದ್ದು ಮೈಸೂರಿನಲ್ಲಿ. ಕೊನೆಯುಸಿರೆಳೆದದ್ದು ಮೈಸೂರಿನಲ್ಲೇ. ಮೈಸೂರು ಅಂದ್ರೆ ವಿಷ್ಣುಗೆ ಇಷ್ಟ. ಹೀಗಾಗಿ ಅಲ್ಲೇ ಸ್ಮಾರಕ ನಿರ್ಮಾಣ ಆಗಲಿ'' - ಭಾರತಿ ವಿಷ್ಣುವರ್ಧನ್.

ವಿಷ್ಣು ಅಭಿಮಾನಿಗಳು ಏನಂತಾರೆ?

''ಮೈಸೂರಿನಲ್ಲೇ ಸ್ಮಾರಕ ನಿರ್ಮಾಣ ವಿಷಯ ಇನ್ನೂ ನನಗೆ ಗೊತ್ತಾಗಿಲ್ಲ. ಹಾಗೇನಾದರೂ, ಮೈಸೂರಿನಲ್ಲಿ ಮಾಡಿದರೆ ನಾವು ಅಭಿಮಾನಿಗಳು ಖಂಡಿತ ಪ್ರತಿಭಟನೆ ಮಾಡುತ್ತೇವೆ'' ಎನ್ನುತ್ತಾರೆ ಡಾ.ವಿಷ್ಣು ಸೇನಾ ಸಮಿತಿ ಅಧ್ಯಕ್ಷ ವೀರಕಪುತ್ರ ಶ್ರೀನಿವಾಸ. [ಡಾ.ವಿಷ್ಣು ಅಭಿಮಾನಿಗಳು ತಪ್ಪದೇ ಓದಬೇಕಾದ ಪತ್ರ ಇದು]

English summary
Karnataka Chief Minister Siddaramaiah has given nod to build Late Dr.Vishnuvardhan's Memorial in Mysuru. Bhoomi Pooja of the Memorial will take place on Vishnu's Birth Anniversary (Sept 18th, 2016).

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada