»   » ಗಾಂಧಿನಗರದಲ್ಲಿ ಈ ವರ್ಷ ಸಿನಿಮಾ ಬೋರು, ಕಿರಿಕ್ ಜೋರು ಗುರು!

ಗಾಂಧಿನಗರದಲ್ಲಿ ಈ ವರ್ಷ ಸಿನಿಮಾ ಬೋರು, ಕಿರಿಕ್ ಜೋರು ಗುರು!

Posted By:
Subscribe to Filmibeat Kannada

2015 ಕ್ಕೆ ಗುಡ್ ಬೈ ಹೇಳುವ ಕಾಲ ಸಮೀಪಿಸುತ್ತಿದೆ. ಈ ವರ್ಷ ನಮ್ ಸ್ಯಾಂಡಲ್ ವುಡ್ ಕಡೆಯಿಂದ ಸಿನಿಮಾಗಳ ಜೊತೆ ಜೊತೆಗೆ ವಿವಾದಗಳಿಂದಲೂ ಸಖತ್ ಎಂಟರ್ ಟೇನ್ ಆಗಿದ್ದೀರಾ ಅಲ್ವಾ?!

ಪ್ರತಿ ವರ್ಷದಂತೆ ಈ ವರ್ಷ ಕೂಡ ಗಾಂಧಿನಗರದಲ್ಲಿ ವಿವಾದಗಳಿಗೇನು ಕಮ್ಮಿ ಇರ್ಲಿಲ್ಲ. ಅದರಲ್ಲಿ ಹೆಚ್ಚು ಬ್ರೇಕಿಂಗ್ ನ್ಯೂಸ್ ಮಾಡಿದವರು ನಮ್ಮ ನಿರ್ಮಾಪಕರು! ಡಬ್ಬಿಂಗ್ ವಿಚಾರವಾಗಿ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಅಲ್ಲೋಲ ಕಲ್ಲೋಲವೇ ಸೃಷ್ಟಿಯಾಯ್ತು. [2014ರ ವಾದ ವಿವಾದ, ಜಗಳ ಒಳಜಗಳ ರೌಂಡಪ್]

ಇನ್ನೂ ಸಾಮಾಜಿಕ ಜಾಲತಾಣಗಳಲ್ಲಿ ಸ್ಟಾರ್ ಹೀರೋ ಮತ್ತು ಅಭಿಮಾನಿಗಳ ನಡುವೆ ನಡೆದ ಸಮರ ಅಬ್ಬಬ್ಬಾ..!! ಎನ್ನುವಂಥದ್ದು.

2015 ರಲ್ಲಿ ಬೀದಿಗಿಳಿದು ಸೂಪರ್ ಮನರಂಜನೆ ನೀಡಿದ, ಗಾಂಧಿನಗರದ ಗದ್ದಲ-ಗಲಾಟೆಗಳ ಕಂಪ್ಲೀಟ್ ಸ್ಟೋರಿ ಹೇಳ್ತೀವಿ. ಕೆಳಗಿರುವ ಸ್ಲೈಡ್ ಗಳನ್ನು ಒಂದೊಂದೇ ಕ್ಲಿಕ್ಕಿಸುತ್ತಾ ಹೋಗಿ....

ದುನಿಯಾ ವಿಜಯ್ ವಿರುದ್ಧ ಜೀವ ಬೆದರಿಕೆ ದೂರು!

ಈ ವರ್ಷ ಸ್ಯಾಂಡಲ್ ವುಡ್ ನ ವಿವಾದಗಳು ಆರಂಭವಾಗಿದ್ದು ಬ್ಲಾಕ್ ಕೋಬ್ರಾ ದುನಿಯಾ ವಿಜಯ್ ಮೂಲಕ. ದುನಿಯಾ ವಿಜಯ್ ಅಭಿನಯದ 'ಜಾಕ್ಸನ್' ಚಿತ್ರದ ವಿತರಣೆ ಸಂಬಂಧ ಚಿತ್ರ ವಿತರಕ, ನಿರ್ಮಾಪಕ ಜಯಣ್ಣ ಮತ್ತು ದುನಿಯಾ ವಿಜಯ್ ನಡುವೆ ಕ್ಲಾಶ್ ಆಗಿತ್ತು. ಇದೇ ವಿಚಾರವಾಗಿ ದುನಿಯಾ ವಿಜಯ್, ನಿರ್ಮಾಪಕ ಜಯಣ್ಣರವರಿಗೆ ಧಮ್ಕಿ ಹಾಕಿದ್ದಾರೆ ಅಂತ ಸ್ವತಃ ಜಯಣ್ಣ ಸಿಸಿಬಿ ಪೊಲೀಸರಿಗೆ ದೂರು ನೀಡಿದ್ರು.[ನಟ ದುನಿಯಾ ವಿಜಯ್ ವಿರುದ್ಧ ಜೀವ ಬೆದರಿಕೆ ದೂರು]

ಆರಂಭಕ್ಕೂ ಮುನ್ನವೇ ನಿಂತುಹೋದ 'ಕನ್ವರ್ ಲಾಲ್'

ಬಾಲಿವುಡ್ ಹಿಟ್ ಸಿನಿಮಾ 'ದಬ್ಬಂಗ್' ಚಿತ್ರದ ಕನ್ನಡ ಅವತರಣಿಕೆ 'ಕನ್ವರ್ ಲಾಲ್' ಚಿತ್ರದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ನಟಿಸಬೇಕಿತ್ತು. ಆದ್ರೆ, ಚಿತ್ರ ಸೆಟ್ಟೇರುವ ಮುನ್ನವೇ ನಿರ್ದೇಶಕ ಎಂ.ಡಿ.ಶ್ರೀಧರ್ ಪ್ರಾಜೆಕ್ಟ್ ನಿಂದ ಹಿಂದೆ ಸರಿದರು. ಕೆಲವೇ ದಿನಗಳ ಅಂತರದಲ್ಲಿ ನಾಯಕ ಗಣೇಶ್ ಕೂಡ 'ಕನ್ವರ್ ಲಾಲ್' ಆಗುವುದಕ್ಕೆ ಒಪ್ಪಿಕೊಳ್ಳಲಿಲ್ಲ. ಈ ಸಂಬಂಧ ದಿನೇಶ್ ಗಾಂಧಿ ವಾಣಿಜ್ಯ ಮಂಡಳಿಗೆ ದೂರು ನೀಡಿದ್ರು.[ಗೋಲ್ಡನ್ ಸ್ಟಾರ್ ಗಣೇಶ್ 'ಕನ್ವರ್ ಲಾಲ್' ಕನಸು ಭಗ್ನ]

ಬ್ಯಾಂಕಾಕ್ ನಲ್ಲಿ ವನವಾಸ ಅನುಭವಿಸಿದ 'ಸಿಪಾಯಿ' ತಂಡ

ಥಾಯ್ ಲ್ಯಾಂಡ್ ಗೆ ತೆರಳಿದ್ದ 'ಸಿಪಾಯಿ' ಮತ್ತು 'ಸಿಂಧೂರ' ಚಿತ್ರತಂಡಗಳು ಫೆಬ್ರವರಿ 6 ರಂದು ಪಟ್ಟಾಯದ ನಿಕಿತಾ ಭವನ ಎಂಬಲ್ಲಿ ಚಿತ್ರೀಕರಣ ಮಾಡಿದೆ. ಅಲ್ಲಿಗೆ ಆಗಮಿಸಿದ ಎಮಿಗ್ರೇಷನ್ ಅಧಿಕಾರಿಗಳು ವರ್ಕ್ ಪರ್ಮಿಟ್ ಕೇಳಿದ್ದಾರೆ. ವರ್ಕ್ ಪರ್ಮಿಷನ್ ಇಲ್ಲದ ಕಾರಣ ಕಕ್ಕಾಬಿಕ್ಕಿಯಾದ ಚಿತ್ರತಂಡವನ್ನು ಎಮಿಗ್ರೇಷನ್ ಅಧಿಕಾರಿಗಳು ಬಂಧಿಸಿ, ಪಾಸ್ ಪೋರ್ಟ್ ಗಳನ್ನು ಜಪ್ತಿ ಮಾಡಿಕೊಂಡರು. 24 ದಿನಗಳ ನಂತರ ತಾಯ್ನಾಡಿಗೆ ಎರಡು ಚಿತ್ರತಂಡಗಳು ಮರಳಿದವು.
[ಬ್ಯಾಂಕಾಕ್ ನಲ್ಲಿ ವನವಾಸ ಅನುಭವಿಸಿ ಬಂದ 'ಸಿಪಾಯಿ']

ವಿವಾದದಲ್ಲಿ 'ಕೆಂಡಸಂಪಿಗೆ'

'ಕೆಂಡಸಂಪಿಗೆ' ಟ್ರೇಲರ್ ಲಾಂಚ್ ಮತ್ತು 'ಕೆಂಡಸಂಪಿಗೆ ಟ್ಯಾಲೆಂಟ್ ಹಂಟ್' ಬಗ್ಗೆ ದುನಿಯಾ ಸೂರಿ ಪತ್ರಿಕಾಗೋಷ್ಠಿ ಕರೆದಿದ್ದರು. ಅದರಲ್ಲಿ ಅವಕಾಶಕ್ಕಾಗಿ ನಿರ್ದೇಶಕರನ್ನು ಅರಸಿ ಬರುವ ಯುವಕರ ಬಗ್ಗೆ ಹಿಡನ್ ಕ್ಯಾಮರಾ ಬಳಸಿ ರೆಡಿಮಾಡಿದ್ದ ವಿಡಿಯೋ ಪ್ಲೇ ಮಾಡಿದರು. ಈ ವಿಡಿಯೋ ನೋಡಿ ಕೆಲ ಪತ್ರಕರ್ತರು ದುನಿಯಾ ಸೂರಿ ವಿರುದ್ಧ ಗರಂ ಆದರು.[ಏನಿದು ದುನಿಯಾ ಸೂರಿ 'ಕೆಂಡಸಂಪಿಗೆ' ವಿವಾದ, ವಿಷಾದ?]

ಚಾಲೆಂಜಿಂಗ್ ಸ್ಟಾರ್ ಮನೆಯಲ್ಲಿ ರಾದ್ಧಾಂತ.!

ಚಾಲೆಂಜಿಂಗ್ ಸ್ಟಾರ್ ದರ್ಶನ್ ಹುಟ್ಟುಹಬ್ಬದ ದಿನ, ಅವರ ರಾಜರಾಜೇಶ್ವರಿ ನಗರದ ಮನೆಯಲ್ಲಿ ಅಭಿಮಾನಿಗಳು ಮತ್ತು ಮಾಧ್ಯಮ ಮಿತ್ರರ ನಡುವೆ ದೊಡ್ಡ ಗಲಾಟೆ ನಡೆದಿತ್ತು.[ಹುಟ್ಟುಹಬ್ಬದ ದಿನ ಏನಿದು ರಾದ್ಧಾಂತ ಚಾಲೆಂಜಿಂಗ್ ಸ್ಟಾರ್?]

ಯಶ್ ವಿರುದ್ಧ ಬೀದಿಗಿಳಿದ ಮಂಡ್ಯ ರೈತರು

ಮಂಡ್ಯ ಮೂಲದ ಯುವ ಪ್ರತಿಭೆಗಳು 'ಮಂಡ್ಯ ಸ್ಟಾರ್' ಚಿತ್ರ ನಿರ್ಮಾಣಕ್ಕೆ ಕೈಹಾಕಿದ್ರು. ಅದರಲ್ಲಿನ ಚಿಕ್ಕ ಪಾತ್ರ ಪೋಷಣೆ ಮಾಡುವಂತೆ ಯಶ್ ರನ್ನ ಕೇಳಿಕೊಂಡಿದ್ದಾರೆ. ಆದ್ರೆ, ಅದಕ್ಕೆ ಯಶ್ ಕೊಟ್ಟ ಪ್ರತಿಕ್ರಿಯೆ ನೋಡಿ ರೊಚ್ಚಿಗೆದ್ದ ಮಂಡ್ಯ ರೈತರು ಬೀದಿಗಳಿದು ಹೋರಾಟ ಮಾಡಿದ್ರು.['ರಾಜಾಹುಲಿ' ಯಶ್ ವಿರುದ್ಧ ಅಣ್ತಮ್ಮಂದಿರು ತಿರುಗಿಬಿದ್ದಿರುವುದೇಕೆ?]

ದರ್ಶನ್ ತೋಟದ ಮನೆ ರಹಸ್ಯ!

ತಮ್ಮ ತೋಟದ ಕೆಲಸಕ್ಕಿದ್ದ ಮಹೇಶ್ ಅನಾರೋಗ್ಯದ ವಿಚಾರದಲ್ಲಿ ದರ್ಶನ್ ನಿರ್ಲಕ್ಷ್ಯ ವಹಿಸಿದ್ದಾರೆ ಎನ್ನುವ ಸುದ್ದಿ ಎಲ್ಲಾ ನ್ಯೂಸ್ ಚಾನೆಲ್ ಗಳಲ್ಲಿ ಬ್ರೇಕಿಂಗ್ ನ್ಯೂಸ್ ಆಗಿತ್ತು.[ದರ್ಶನ್ ತೋಟದ ಮನೆಯಲ್ಲಿ ಆಗಿದ್ದೇನು? ಫುಲ್ ಸ್ಟೋರಿ]

ದರ್ಶನ್ V/S ಶೇಷಾದ್ರಿ

'ಸಂಗೊಳ್ಳಿ ರಾಯಣ್ಣ' ಚಿತ್ರದಲ್ಲಿ ನೀಡಿದ ಅಮೋಘ ಅಭಿನಯಕ್ಕಾಗಿ ದರ್ಶನ್ ಗೆ 'ರಾಜ್ಯ ಪ್ರಶಸ್ತಿ' ಸಿಕ್ತು. ಇದೇ ಸಂದರ್ಭದಲ್ಲಿ 'ಉತ್ತಮ ಖಳನಟ'ರಿಗೂ ಪ್ರಶಸ್ತಿ ನೀಡಬೇಕೆಂದು ಸರ್ಕಾರದ ಮುಂದೆ ದರ್ಶನ್ ಬೇಡಿಕೆ ಇಟ್ಟರು. ಅದನ್ನ ಮುಖ್ಯಮಂತ್ರಿಗಳು ಪುರಸ್ಕರಿಸಿದರು. ಈ ಪ್ರಸ್ತಾವನೆ ಬಗ್ಗೆ ನಿರ್ದೇಶಕ ಪಿ.ಶೇಷಾದ್ರಿ ಚಕಾರ ಎತ್ತಿ ಸ್ಯಾಂಡಲ್ ವುಡ್ ನಲ್ಲಿ ಹೊಸ ವಿವಾದಕ್ಕೆ ನಾಂದಿ ಹಾಡಿದರು.[ಚಾಲೆಂಜಿಂಗ್ ಸ್ಟಾರ್ ಗೆ ಚಾಲೆಂಜ್ ಹಾಕಿದ ಪಿ.ಶೇಷಾದ್ರಿ]

ಶೇಷಾದ್ರಿ ವಿರುದ್ಧ ಸಿಡಿದೆದ್ದ ಜಗ್ಗೇಶ್

'ಉತ್ತಮ ವಿಲನ್' ಪ್ರಶಸ್ತಿ ಬಗ್ಗೆ ಪಿ.ಶೇಷಾದ್ರಿ ಆಕ್ಷೇಪಣೆ ಸಲ್ಲಿಸಿ ಸರ್ಕಾರಕ್ಕೆ ಪತ್ರ ಬರೆದಿದ್ದಕ್ಕೆ ಗರಂ ಆದ ಜಗ್ಗೇಶ್, ತಮ್ಮದೇ ಸ್ಟೈಲ್ ನಲ್ಲಿ ಟ್ವಿಟ್ಟರ್ ನಲ್ಲಿ ಶೇಷಾದ್ರಿಗೆ ಚಾಟಿ ಏಟು ಕೊಟ್ಟರು.[ಶೇಷಾದ್ರಿ ವಿರುದ್ಧ 'ನವರಸ ನಾಯಕ'ನ ಟ್ವಿಟ್ಟರ್ ಪ್ರಹಾರ]

ಎ.ಪಿ.ಅರ್ಜುನ್ v/s ದರ್ಶನ್ ಕಂಪನಿ

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'Mr.ಐರಾವತ' ಬಿಡುಗಡೆ ತಡವಾಗುತ್ತಿರುವುದಕ್ಕೆ ನಿರ್ದೇಶಕ ಎ.ಪಿ.ಅರ್ಜುನ್ ಕಾರಣ ಅಂತ್ಹೇಳಿ ಫೇಸ್ ಬುಕ್ ನಲ್ಲಿ ದರ್ಶನ್ ಅಫೀಶಿಯಲ್ ಅಭಿಮಾನಿಗಳ ಸಂಘ 'ಡಿ' ಕಂಪನಿ ಕಿಡಿಕಾರಿತ್ತು.[ಎ.ಪಿ.ಅರ್ಜುನ್ ವಿರುದ್ಧ ತಿರುಗಿಬಿದ್ದ ದರ್ಶನ್ ಕಂಪನಿ]

ಫೇಸ್ ಬುಕ್ ನಲ್ಲಿ ಲಿಂಗದೇವರು ಬಾಂಬ್!

62ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಕಟವಾದ ಬೆನ್ನಲ್ಲೇ, 'ನಾನು ಅವನಲ್ಲ...ಅವಳು' ಚಿತ್ರದ ನಿರ್ದೇಶಕ ಬಿ.ಎಸ್.ಲಿಂಗದೇವರು ನಟಿ ತಾರಾ ವಿರುದ್ಧ ಗಂಭೀರ ಆರೋಪ ಮಾಡಿ ದೊಡ್ಡ ವಿವಾದಕ್ಕೆ ಕಾರಣಕರ್ತರಾದರು.[ನಟಿ ತಾರಾ ವಿರುದ್ಧ ಲಿಂಗದೇವರು ಫೇಸ್ ಬುಕ್ ಬಾಂಬ್]

ಎ.ಪಿ.ಅರ್ಜುನ್ ಗೂಸಾ ತಿಂದಿದ್ರಾ?

'Mr.ಐರಾವತ' ಸಿನಿಮಾ ತಡವಾಗುತ್ತಿರುವ ಕಾರಣ ನಿರ್ದೇಶಕ ಎ.ಪಿ.ಅರ್ಜುನ್ ಗೆ ನಿರ್ಮಾಪಕ ಸಂದೇಶ್ ನಾಗರಾಜ್ ಗೂಸಾ ಕೊಟ್ಟಿದ್ದಾರೆ ಎನ್ನುವ ಗುಲ್ಲು ಗಾಂಧಿನಗರದಲ್ಲಿ ಹರಿದಾಡಿದ್ದಂತೂ ಸುಳ್ಳಲ್ಲ.['ಐರಾವತ' ಎಪಿ ಅರ್ಜುನ್ ಗೂಸಾ ತಿಂದದ್ದು ನಿಜಾನಾ?]

'ರಣವಿಕ್ರಮ' ನಡುವೆ 'ರನ್ನ'; ಸಿಡಿದೆದ್ದ ಫ್ಯಾನ್ಸ್!

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ 'ರಣವಿಕ್ರಮ' ಸಿನಿಮಾ ಇಂಟರ್ವಲ್ ನಲ್ಲಿ ಸುದೀಪ್ ಅಭಿನಯದ 'ರನ್ನ' ಟೀಸರ್ ಪ್ರದರ್ಶನ ಮಾಡಿದ್ದಕ್ಕೆ ರೊಚ್ಚಿಗೆದ್ದ ಅಪ್ಪು ಅಭಿಮಾನಿಗಳು ಥಿಯೇಟರ್ ನಲ್ಲಿ ದಾಂಧಲೆ ಎಬ್ಬಿಸಿದ ಸನ್ನಿವೇಶವನ್ನ ಮರೆಯೋಕೆ ಸಾಧ್ಯನಾ?['ರಣವಿಕ್ರಮ' ನಡುವೆ 'ರನ್ನ'ನ ಕಂಡು ರೊಚ್ಚಿಗೆದ್ದ ಅಭಿಮಾನಿಗಳು]

ಯಶ್ ಕಾರಿನ ಮೇಲೆ ದಾಳಿ!

'ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ' ಸಿನಿಮಾ ಹಿಟ್ ಆದ ಕೆಲವೇ ದಿನಗಳಲ್ಲಿ ಯಶ್ ಕಾರಿನ ಮೇಲೆ ಕಲ್ಲು ತೂರಿ ದಾಂಡಿಗರು ದಾಳಿ ನಡೆಸಿದ ಸುದ್ದಿ ಗಾಂಧಿನಗರದಲ್ಲಿ ದೊಡ್ಡ ಸೌಂಡ್ ಮಾಡಿತ್ತು.[ರಾಕಿಂಗ್ ಸ್ಟಾರ್ ಯಶ್ ಕಾರಿನ ಮೇಲೆ ದಾಳಿ ಮಾಡಿದವರಾರು?]

'ನಾಟಿಕೋಳಿ' ಕಿರಿಕ್

ತಾನು ರಾಗಿಣಿ ಬಾಯ್ ಫ್ರೆಂಡ್ ಅಂತ ಹೇಳಿಕೊಂಡು 'ಹುಲಿ' ಚಿತ್ರದ ನಿರ್ಮಾಪಕ ಶಿವಪ್ರಕಾಶ್, 'ನಾಟಿಕೋಳಿ' ನಿರ್ದೇಶಕ ಶ್ರೀನಿವಾಸ್ ರಾಜು ಮತ್ತು ನಿರ್ಮಾಪಕ ವೆಂಕಟ್ ಮೇಲೆ ಹಲ್ಲೆ ಮಾಡಿ ಬ್ರೇಕಿಂಗ್ ನ್ಯೂಸ್ ಕೊಟ್ಟರು. ನಂತರ ರಾಗಿಣಿ 'ನಾಟಿಕೋಳಿ'ಗೆ ಗುಡ್ ಬೈ ಹೇಳಿದ ಸುದ್ದಿ ಮೊನ್ನೆಮೊನ್ನೆವರೆಗೂ ಗಾಂಧಿನಗರದಲ್ಲಿ ಚಾಲ್ತಿಯಲ್ಲಿತ್ತು.[ರಾಗಿಣಿ ದ್ವಿವೇದಿ 'ನಾಟಿಕೋಳಿ' ಮೇಲೆ ಎರಗಿದ 'ಹುಲಿ']

ಬೀದಿಗಿಳಿದ ನಿರ್ಮಾಪಕರು!

''ಕನ್ನಡ ಟಿವಿ ವಾಹಿನಿಗಳು ಕನ್ನಡ ಚಿತ್ರಗಳ ಸ್ಯಾಟೆಲೈಟ್ ರೈಟ್ಸ್ ಕೊಂಡುಕೊಳ್ಳುತ್ತಿಲ್ಲ. ನಿರ್ಮಾಪಕರಿಗೆ ಸ್ಟಾರ್ ನಟರು ಕಾಲ್ ಶೀಟ್ ನೀಡುತ್ತಿಲ್ಲ. ಸ್ಟಾರ್ ಹೀರೋಗಳು ರಿಯಾಲಿಟಿ ಶೋಗಳಲ್ಲಿ ಬಿಜಿಯಾಗಿದ್ದಾರೆ. ನಿರ್ಮಾಪಕರು ಲಾಸ್ ನಲ್ಲಿದ್ದಾರೆ'' ಅಂತ್ಹೇಳಿ ನಿರ್ಮಾಪಕರು ಉಪವಾಸ ಸತ್ಯಾಗ್ರಹ ಕೈಗೊಂಡರು.[ಹೊಟ್ಟೆಪಾಡಿಗಾಗಿ ಬೀದಿಗಿಳಿದ ಕನ್ನಡ ನಿರ್ಮಾಪಕರು]

ನಿರ್ಮಾಪಕರ ಡೈಲಿ ಎಪಿಸೋಡ್

ರಿಯಾಲಿಟಿ ಶೋಗಳಲ್ಲಿ ಪಾಲ್ಗೊಂಡಿರುವ ಸ್ಟಾರ್ ಗಳ ವಿರುದ್ಧ ನಿರ್ಮಾಪಕರ ಧರಣಿ, ದಿನಕ್ಕೊಂದು ಮೀಟಿಂಗ್, ಮೀಟಿಂಗ್ ಗೆ ಲೇಟ್ ಆಗಿ ಬರುವ ಅಂಬರೀಶ್, ಕ್ಯಾರೇ ಎನ್ನದ ಸುದೀಪ್-ರಮೇಶ್-ಗಣೇಶ್, ಅಂಬರೀಶ್ ವಿರುದ್ಧ ಧಿಕ್ಕಾರ...ನಿರ್ಮಾಪಕರನ್ನ ಸಸ್ಪೆಂಡ್ ಮಾಡಬೇಕು ಅಂತ ಪಟ್ಟು ಹಿಡಿಯುವ ಕಲಾವಿದರ ಸಂಘ.....ಹೀಗೆ ಜೂನ್ ತಿಂಗಳಲ್ಲಿ ಗಾಂಧಿನಗರ ಸಿಕ್ಕಾಪಟ್ಟೆ ಸದ್ದು ಮಾಡ್ತು.[ರೆಬೆಲ್ ಸ್ಟಾರ್ ಅಂಬರೀಶ್ ತಂಟೆಗೆ ಬಂದ್ರೆ...ಹುಷಾರ್..!]

ನಿರ್ಮಾಪಕರು 'ಭಿಕ್ಷುಕರು'!

ನಿರ್ಮಾಪಕರ ಧರಣಿ ಮತ್ತೊಂದು ಲೆವೆಲ್ ಗೆ ಹೋಗಿದ್ದು 'ನಿರ್ಮಾಪಕರು ಭಿಕ್ಷುಕರು' ಅಂತ ರೆಬೆಲ್ ಸ್ಟಾರ್ ಅಂಬರೀಶ್ ಕಾಮೆಂಟ್ ಮಾಡಿದ ಮೇಲೆ.[''ನಿರ್ಮಾಪಕರು ಭಿಕ್ಷುಕರು'' - ಮಂಡ್ಯದ ಗಂಡು ಅಂಬರೀಶ್]

ಯಶ್ ಮನೆ ಬಾಡಿಗೆ ಡ್ರಾಮಾ!

ಸ್ಯಾಂಡಲ್ ವುಡ್ ನಲ್ಲಿ ಕೋಟಿ ಕೋಟಿ ಸಂಭಾವನೆ ಪಡೆಯುವ ರಾಕಿಂಗ್ ಸ್ಟಾರ್ ಯಶ್, ಬನಶಂಕರಿಯಲ್ಲಿ ಸದ್ಯ ವಾಸ ಇರುವ ಮನೆಗೆ ಬಾಡಿಗೆ ಕಟ್ಟಿಲ್ಲ ಅಂತ ಆರೋಪಿಸಿ ಮನೆ ಮಾಲೀಕರು ಸಿಟಿ ಸಿವಿಲ್ ಕೋರ್ಟ್ ನಲ್ಲಿ ದಾವೆ ಹೂಡಿದ್ರು.[ಬಯಲಾದ ಯಶ್ ಮನೆ ಬಾಡಿಗೆ 'ಡ್ರಾಮಾ']

ಪೂಜಾ ಗಾಂಧಿ ಹಾಕಿದ ಪಂಗನಾಮ!

'ಅಭಿನೇತ್ರಿ' ಸಿನಿಮಾ ಪೂರ್ಣಗೊಳಿಸುವುದಕ್ಕೆ ನಿರ್ಮಾಪಕ ಕಮ್ ಫೈನಾನ್ಶಿಯರ್ ಸುರೇಶ್ ಶರ್ಮಾ ರವರಿಂದ ಪೂಜಾ ಗಾಂಧಿ ಬರೋಬ್ಬರಿ 1 ಕೋಟಿ ರೂಪಾಯಿ ಹಣ ಪಡೆದು ವಾಪಸ್ ಮಾಡದೆ ಪಂಗನಾಮ ಹಾಕಿದ್ದಾರೆ ಎಂದು ಆರೋಪಿಸಿ ಸುರೇಶ್ ಶರ್ಮಾ ವಾಣಿಜ್ಯ ಮಂಡಳಿ ಮೆಟ್ಟಿಲೇರಿದ್ದರು.[ಕೋಟಿ ರೂಪಾಯಿ ಪಂಗನಾಮ ಹಾಕಿದ ಪೂಜಾಗಾಂಧಿ!?]

ರಚಿತಾ ರಾಮ್ ವಿರುದ್ಧ ಫೇಸ್ ಬುಕ್ ನಲ್ಲಿ ವಾರ್!

'ರನ್ನ'ನ ನಾಯಕಿ 'ಬುಲ್ ಬುಲ್' ರಚಿತಾ ರಾಮ್ ಅಪ್ಪು ಅಭಿನಯದ 'ಚಕ್ರವ್ಯೂಹ' ಸಿನಿಮಾಗೆ ಹೀರೋಯಿನ್ ಆಗ್ಬಾರ್ದು ಅಂತ ಫೇಸ್ ಬುಕ್ ನಲ್ಲಿ ಆದ ವಾರ್ ನ ಹೇಗೆ ತಾನೆ ಮರೆಯೋಕೆ ಸಾಧ್ಯ ಹೇಳಿ....[ರಚಿತಾ ರಾಮ್ ವಿರುದ್ಧ ಪುನೀತ್ ಫ್ಯಾನ್ಸ್ ಸಮರ]

ಜಗ್ಗೇಶ್ v/s ಉಪೇಂದ್ರ

''ಎಲ್ರ ಕಾಲೆಳಿತದೆ ಕಾಲ'' ಅಂತ 'ಉಪ್ಪಿ-2' ಚಿತ್ರದಲ್ಲಿ ಉಪೇಂದ್ರ ಹಾಡಿದ್ದೇ ತಡ, ಅದನ್ನ ಪರ್ಸನಲ್ ಆಗಿ ತೆಗೆದುಕೊಂಡ ಜಗ್ಗೇಶ್ ಟ್ವೀಟ್ ಪ್ರಹಾರ ನಡೆಸಿದರು. ಆಮೇಲೆ ಫೇಸ್ ಬುಕ್ ಮತ್ತು ಟ್ವಿಟ್ಟರ್ ನಲ್ಲಿ ಏನೇನೆಲ್ಲಾ ಆಯ್ತು ಎನ್ನುವುದಕ್ಕೆ ಜಗ್ಗೇಶ್ ಮತ್ತು ಉಪೇಂದ್ರ ಅಭಿಮಾನಿಗಳೇ ಸಾಕ್ಷಿ.[ಜಗ್ಗೇಶ್ ಬಾಯಲ್ಲಿ ಬ್ರಾಹ್ಮಣ V/S ಗೌಡ - ಟ್ವಿಟ್ಟರ್ ನಲ್ಲಿ ರಾದ್ಧಾಂತ.!]

ಪುನೀತ್ ಗೆ ಕನ್ನಡ ಬರಲ್ಲಾ?

'ಡಾ.ರಾಜ್ ಕುಮಾರ್ ಪುತ್ರ ಪುನೀತ್ ರಾಜ್ ಕುಮಾರ್ ಗೆ ಕನ್ನಡ ಓದುವುದಕ್ಕೆ ಬರುವುದಿಲ್ಲ' ಅಂತ ಆಂಗ್ಲ ಪತ್ರಿಕೆ ವರದಿ ಮಾಡಿತ್ತು. ಅದಕ್ಕೆ ಪುನೀತ್ ಗರಂ ಆಗಿದ್ದೇ ತಡ, ಆಂಗ್ಲ ಪತ್ರಿಕೆ ಕ್ಷಮೆ ಯಾಚಿಸ್ತು.[ಆಂಗ್ಲ ಪತ್ರಿಕೆ ವಿರುದ್ಧ ಪುನೀತ್ ರಾಜ್ ಕುಮಾರ್ ಸಖತ್ ಗರಂ]

ಶುರುವಾದ ಡಬ್ಬಿಂಗ್ ವಿವಾದ

ಸದ್ದಿಲ್ಲದೇ 'ಡಬ್ಬಿಂಗ್ ಚಲನಚಿತ್ರ ವಾಣಿಜ್ಯ ಮಂಡಳಿ' ತಲೆ ಎತ್ತಿದ ಪರಿಣಾಮ ಸ್ಯಾಂಡಲ್ ವುಡ್ ನಲ್ಲಿ ಮತ್ತೊಮ್ಮೆ 'ಡಬ್ಬಿಂಗ್ ವಿವಾದ' ಶುರುವಾಯ್ತು.[ಗಂಡಸುತನವಿದ್ದರೆ ಡಬ್ಬಿಂಗ್ ಮಾಡಲಿ : ವಾಟಾಳ್ ವಾರ್ನಿಂಗ್!]

ರೂಪಶ್ರೀ-ಮೈತ್ರಿಯಾ ಗೌಡ ಕೋಳಿ ಜಗಳ

ಕಾರ್ತಿಕ್ ಗೌಡ ಕೇಸ್ ಆಗುವುದಕ್ಕೆ ನಟಿ ರೂಪಶ್ರೀ ಕಾರಣ ಅಂತ ನೇರ ಆರೋಪ ಮಾಡಿ ನಟಿ ಮೈತ್ರಿಯಾ ಗೌಡ ಸದ್ದು ಮಾಡಿದರು. ರೂಪಶ್ರೀ ಸುಮ್ನೆ ಕೂರ್ಲಿಲ್ಲ. ಮೈತ್ರಿಯಾ ವಿರುದ್ಧ ವಾಣಿಜ್ಯ ಮಂಡಳಿಗೆ ದೂರು ನೀಡಿದರು.[ನಟಿ ರೂಪಶ್ರೀಯನ್ನು ಬಾಯಿಗೆ ಬಂದಂತೆ ಬೈದ ಮೈತ್ರಿಯಾ ಗೌಡ]

ಹುಚ್ಚ ವೆಂಕಟ್!

ಕಳೆದ ಎರಡು ತಿಂಗಳಿನಿಂದ ಸ್ಯಾಂಡಲ್ ವುಡ್ ನಲ್ಲಿ ಅತಿ ಹೆಚ್ಚು ಸದ್ದು-ಸುದ್ದಿ ಮಾಡಿದವರು ಹುಚ್ಚ ವೆಂಕಟ್. 'ಬಿಗ್ ಬಾಸ್' ಮನೆಗೆ ಹೋಗಿ ಅಲ್ಲಿಂದ ಸುದ್ದಿ ವಾಹಿನಿಗಳಿಗೆ ಬಂದು ನಂತರ ಸೆರೆ ವಾಸ ಅನುಭವಿಸಿದ ಹುಚ್ಚ ವೆಂಕಟ್ ಜೀವನದಲ್ಲಿ ಏನೇನೆಲ್ಲಾ ಆಯ್ತು ಅನ್ನೋದನ್ನ ನೀವೇ ನ್ಯೂಸ್ ಚಾನೆಲ್ ಗಳಲ್ಲಿ ಡೈಲಿ ಸೀರಿಯಲ್ ಹಾಗೆ ನೋಡಿದ್ದೀರಿ ಅಲ್ವೇ.!?[ಸುದೀಪ್ ಗೆ ಏಕವಚನ; ಹುಚ್ಚ ವೆಂಕಟ್ v/s ಕಿಚ್ಚ ಫ್ಯಾನ್ಸ್ ಸಮರ]

English summary
Not only for movies, Kannada Film Industry made Headlines this year for many controversies. Here, is the detailed report of Controversies of Sandalwood in 2015.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada