For Quick Alerts
  ALLOW NOTIFICATIONS  
  For Daily Alerts

  'ದಾಸ' ದರ್ಶನ್ ಚಿತ್ರಕ್ಕೂ ತಟ್ಟಿತು ಕೊರೊನಾ ವೈರಸ್ ಭೀತಿ.!

  |

  ಮಾರಣಾಂತಿಕ ಕೊರೊನಾ ವೈರಸ್ ಇಡೀ ವಿಶ್ವವನ್ನೇ ಬೆಚ್ಚಿಬೀಳಿಸಿದೆ. ಕೊರೊನಾ ವೈರಸ್ ನಿಂದಾಗಿ ಚೀನಾದಲ್ಲಿ ಸಾವಿನ ಸಂಖ್ಯೆ ಏರುತ್ತಲೇ ಇದೆ. ಭಾರತದಲ್ಲೂ ಸೋಂಕು ಹಬ್ಬುವ ಭೀತಿ ಇದ್ದು, ಸೋಂಕು ಹರಡದಂತೆ ವಿವಿಧ ಕ್ರಮಗಳನ್ನು ಕೈಗೊಳ್ಳಲಾಗಿದೆ.

  ಇದೆಲ್ಲದರ ನಡುವೆ ಡೆಡ್ಲಿ ಕೊರೊನಾ ವೈರಸ್ ಭೀತಿ 'ದಾಸ' ದರ್ಶನ್ ಚಿತ್ರಕ್ಕೂ ತಟ್ಟಿದೆ. ಕೊರೊನಾ ವೈರಸ್ ನಿಂದಾಗಿ ದರ್ಶನ್ ಅಭಿನಯದ 'ರಾಬರ್ಟ್' ಚಿತ್ರದ ಶೂಟಿಂಗ್ ಗೆ ಸಮಸ್ಯೆ ಉಂಟಾಗಿದೆ.

  ಅರ್ಜುನ್ ಜನ್ಯ ಅನಾರೋಗ್ಯ: 'ರಾಬರ್ಟ್' ಆಡಿಯೋ ರಿಲೀಸ್ ಗೆ ಸಮಸ್ಯೆ ಆಗಲ್ಲ ಎಂದ ನಿರ್ದೇಶಕ.!ಅರ್ಜುನ್ ಜನ್ಯ ಅನಾರೋಗ್ಯ: 'ರಾಬರ್ಟ್' ಆಡಿಯೋ ರಿಲೀಸ್ ಗೆ ಸಮಸ್ಯೆ ಆಗಲ್ಲ ಎಂದ ನಿರ್ದೇಶಕ.!

  'ರಾಬರ್ಟ್' ಚಿತ್ರದ ಶೂಟಿಂಗ್ ಇನ್ನೂ ಕಂಪ್ಲೀಟ್ ಆಗಿ ಮುಗಿದಿಲ್ಲ. ಹಾಡುಗಳ ಚಿತ್ರೀಕರಣ ಬಾಕಿ ಇದೆ. ಸಾಂಗ್ಸ್ ಶೂಟಿಂಗ್ ಗಾಗಿ ವಿದೇಶಕ್ಕೆ ಹೋಗಲು ಚಿತ್ರತಂಡ ಪ್ಲಾನ್ ಮಾಡಿತ್ತು. ಸ್ಪೇನ್ ನಲ್ಲಿ ಹಾಡೊಂದನ್ನು ಚಿತ್ರೀಕರಣ ಮಾಡಲು ತಯಾರಿ ನಡೆದಿತ್ತು. ಆದ್ರೆ, ಕೊರೊನಾ ವೈರಸ್ ಭೀತಿಯಿಂದಾಗಿ ಅದು ಕ್ಯಾನ್ಸಲ್ ಆಗಿದೆ.

  ಸಂಭಾವನೆ ವಿಷ್ಯದಲ್ಲಿ ನಿರ್ಮಾಪಕರಿಗೆ 'ಹೀಗೂ' ಹೇಳಿದ್ದಾರೆ ನಟ ದರ್ಶನ್.!ಸಂಭಾವನೆ ವಿಷ್ಯದಲ್ಲಿ ನಿರ್ಮಾಪಕರಿಗೆ 'ಹೀಗೂ' ಹೇಳಿದ್ದಾರೆ ನಟ ದರ್ಶನ್.!

  ಸ್ಪೇನ್ ಬದಲು ಬೇರೆಡೆ ಚಿತ್ರೀಕರಣ ಮಾಡುವ ಬಗ್ಗೆ ಚಿತ್ರತಂಡ ಯೋಚಿಸುತ್ತಿದೆ. ಆದಷ್ಟು ಬೇಗ ಶೂಟಿಂಗ್ ಕಂಪ್ಲೀಟ್ ಮಾಡಿ ಏಪ್ರಿಲ್ 9 ರಂದು 'ರಾಬರ್ಟ್' ಚಿತ್ರವನ್ನು ತೆರೆಗೆ ತರಲು ಚಿತ್ರತಂಡ ಶ್ರಮಿಸುತ್ತಿದೆ. ಅಂದ್ಹಾಗೆ, ತರುಣ್ ಸುಧೀರ್ ನಿರ್ದೇಶನದ ದರ್ಶನ್, ಆಶಾ ಭಟ್ ಅಭಿನಯದ ಅರ್ಜುನ್ ಜನ್ಯ ಸಂಗೀತ ನಿರ್ದೇಶನದ 'ರಾಬರ್ಟ್' ಕನ್ನಡ ಮತ್ತು ತೆಲುಗಿನಲ್ಲಿ ರಿಲೀಸ್ ಆಗಲಿದೆ.

  English summary
  Corona Virus effect: Roberrt song shooting cancelled.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X