For Quick Alerts
  ALLOW NOTIFICATIONS  
  For Daily Alerts

  ಕೊರೊನಾ ಎಫೆಕ್ಟ್: ರಾಬರ್ಟ್ ಆಡಿಯೋ ರಿಲೀಸ್ ಕಾರ್ಯಕ್ರಮ ರದ್ದು?

  |

  ಸ್ಯಾಂಡಲ್ ವುಡ್ ನ ಬಹು ನಿರೀಕ್ಷೆಯ ರಾಬರ್ಟ್ ಸಿನಿಮಾದ ಆಡಿಯೋ ರಿಲೀಸ್ ಗೆ ಸಿದ್ಧತೆ ನಡೆಯುತ್ತಿದೆ. ಇದೆ ತಿಂಗಳು 21ಕ್ಕೆ ಚಿತ್ರದ ಆಡಿಯೋ ಅದ್ದೂರಿಯಾಗಿ ತೆರೆಗೆ ತರಲು ಚಿತ್ರತಂಡ ಪ್ಲಾನ್ ಮಾಡಿತ್ತು. ಆದರೀಗ ಕೊರೊನಾ ವೈರಸ್ ಪರಿಣಾಮ ಚಿತ್ರದ ಆಡಿಯೋ ರಿಲೀಸ್ ಅನ್ನು ರದ್ದು ಮಾಡಲಾಗಿದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.

  ರಾಬರ್ಟ್ ರಿಲೀಸ್ ಡೇಟ್ ಫಿಕ್ಸ್ | Darshan | Roberrt | FILMIBEAT KANNADA

  ಹೌದು, ರಾಬರ್ಟ್ ಸಿನಿಮಾದ ಆಡಿಯೋವನ್ನು ಇದೆ ತಿಂಗಳು 21ಕ್ಕೆ ಕಲಬುರಗಿಯಲ್ಲಿ ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿತ್ತು. ಈಗಾಗಲೆ ಎಲ್ಲಾ ತಯಾರಿ ಕೂಡ ನಡೆಸಲಾಗಿತ್ತಂತೆ. ಮಾರಣಾಂತಿಕ ಕೊರೊನಾ ಭೀತಿಯ ಕಾರಣ ಹೆಚ್ಚು ಜನರು ಸೇರಬಾರದು ಎನ್ನುವ ಕಾರಣಕ್ಕೆ ಕಾರ್ಯಕ್ರಮವನ್ನು ರದ್ದು ಮಾಡಿದ್ದಾರಂತೆ.

  ಕೊರೊನಾ ವೈರಸ್ ಭೀತಿ: ದೆಹಲಿ ಚಿತ್ರಮಂದಿರಗಳು ಬಂದ್, ಕರ್ನಾಟಕ?ಕೊರೊನಾ ವೈರಸ್ ಭೀತಿ: ದೆಹಲಿ ಚಿತ್ರಮಂದಿರಗಳು ಬಂದ್, ಕರ್ನಾಟಕ?

  ಚಿತ್ರತಂಡದಿಂದ ಯಾವುದೆ ಮಾಹಿತಿ ಇಲ್ಲ

  ಚಿತ್ರತಂಡದಿಂದ ಯಾವುದೆ ಮಾಹಿತಿ ಇಲ್ಲ

  ರಾಬರ್ಟ್ ಆಡಿಯೋ ರಿಲೀಸ್ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಲಿದೆ ಎನ್ನುವ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಆದರೆ ಆಡಿಯೋ ರಿಲೀಸ್ ಕಾರ್ಯಕ್ರಮದ ಬಗ್ಗೆ ಚಿತ್ರತಂಡ ಅಧಿಕೃತವಾಗಿ ಯಾವುದೆ ಮಾಹಿತಿ ನೀಡಿಲ್ಲ. ಈಗಾಗಲೆ ಚಿತ್ರದಿಂದ ಎರಡು ಹಾಡುಗಳು ರಿಲೀಸ್ ಆಗಿದ್ದು, ಅಭಿಮಾನಿಗಳ ಮನಗೆದ್ದಿವೆ.

  'ರಾಬರ್ಟ್' ಚಿತ್ರೀಕರಣ ಮುಕ್ತಾಯ: ಏಪ್ರಿಲ್ ಗೆ ಬರುವುದು ಪಕ್ಕಾ ಎಂದ ಡಿ ಬಾಸ್'ರಾಬರ್ಟ್' ಚಿತ್ರೀಕರಣ ಮುಕ್ತಾಯ: ಏಪ್ರಿಲ್ ಗೆ ಬರುವುದು ಪಕ್ಕಾ ಎಂದ ಡಿ ಬಾಸ್

  ರಾಬರ್ಟ್ ಏಪ್ರಿಲ್ ಗೆ ಬರುವುದು ಪಕ್ಕಾ

  ರಾಬರ್ಟ್ ಏಪ್ರಿಲ್ ಗೆ ಬರುವುದು ಪಕ್ಕಾ

  ಆಡಿಯೋವನ್ನು ಅದ್ದೂರಿಯಾರಿ ರಿಲೀಸ್ ಮಾಡದಿದ್ದರು. ಸಿನಿಮಾ ಏಪ್ರಿಲ್ ಗೆ ಬರುತ್ತೆ ಎಂದು ಚಿತ್ರತಂಡ ಅಧಿಕೃತವಾಗಿ ಹೇಳಿದೆ. ರಾಬರ್ಟ್ ಹಾಡಿನ ಚಿತ್ರೀಕರಣ ರದ್ದಾಗಿದ್ದ ಕಾರಣ ರಾಬರ್ಟ್ ಏಪ್ರಿಲ್ ತಿಂಗಳಿಗೆ ರಿಲೀಸ್ ಆಗುವುದು ಅನುಮಾನ ಎನ್ನುವ ಮಾತುಗಳು ಕೇಳಿ ಬರುತ್ತಿತ್ತು. ಜೊತೆಗೆ ಕೊರೊನಾ ವೈರಸ್ ಕಾರಣ ಚಿತ್ರ ರಿಲೀಸ್ ಡೇಟ್ ಅನ್ನು ಮುಂದಕ್ಕೆ ಹಾಕುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿತ್ತು. ಆದರೀಗ ದರ್ಶನ್ ಅವರೆ ಏಪ್ರಿಲ್ ಗೆ ರಿಲೀಸ್ ಆಗುತ್ತಿದೆ ಎಂದು ಹೇಳಿದ್ದಾರೆ.

  ಒಂದು ಶಿಕಾರಿಯ ಕಥೆ ಪ್ರದರ್ಶನ ರದ್ದು

  ಒಂದು ಶಿಕಾರಿಯ ಕಥೆ ಪ್ರದರ್ಶನ ರದ್ದು

  ಪ್ರಮೋದ್ ಶೆಟ್ಟಿ ಅಭಿನಯದ 'ಒಂದು ಶಿಕಾರಿಯ ಕಥೆ' ಸಿವಿಮಾವನ್ನು ರದ್ದು ಮಾಡಿರುವುದಾಗಿ ನಟ ರಕ್ಷಿತ್ ಶೆಟ್ಟಿ ಟ್ವೀಟ್ ಮಾಡಿದ್ದಾರೆ. "ಮಲ್ಟಿಫ್ಲಕ್ಸ್, ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳನ್ನು ಮಚ್ಚಲು ಸರ್ಕಾರ ಆದೇಶ ಹೊರಡಿಸಿದೆ. ನಮ್ಮಲ್ಲೂ ಮಾಲ್ ಗಳಲ್ಲಿ ಜನರು 70% ಕಡಿಮೆ ಆಗಿರುವುದು ಕಾಣುತ್ತಿದೆ.

  ಇಂದಿನಿಂದ ನಮ್ಮ ಚಿತ್ರ ಒಂದು ಶಿಕಾರಿಯ ಕಥೆ ಚಿತ್ರಮಂದಿರಗಳಲ್ಲಿ ಇರುವುದಿಲ್ಲ. ಪರಿಸ್ಥಿ ಸರಿ ಹೋದರೆ ಏಪ್ರಿಲ್ ನಲ್ಲಿ ಒಳ್ಳೆಯ ಸಮಯ ನೋಡಿ ಚಿತ್ರವನ್ನು ಮರು ಬಿಡುಗಡೆ ಮಾಡುವ ಯೋಜನೆ ಇದೆ" ಎಂದು ರಕ್ಷಿತ್ ಶೆಟ್ಟಿ ಬರೆದುಕೊಂಡಿದ್ದಾರೆ.

  ಪಿವಿಆರ್, ಮಲಯಾಲಂ, ದೆಹಲಿಯಲ್ಲಿ ಚಿತ್ರಪ್ರದರ್ಶನ ರದ್ದು

  ಪಿವಿಆರ್, ಮಲಯಾಲಂ, ದೆಹಲಿಯಲ್ಲಿ ಚಿತ್ರಪ್ರದರ್ಶನ ರದ್ದು

  ಈಗಾಗಲೆ ಮಲಯಾಳಂ ಚಿತ್ರ ಪ್ರದರ್ಶನವನ್ನು ರದ್ದು ಮಾಡಲಾಗಿದೆ. ಇದರ ಬೆನ್ನಲ್ಲೆ ಈಗ ದೆಹಲಿಯಲ್ಲಿಯೂ ಚಿತ್ರಮದಿರಗಳನ್ನು ರದ್ದು ಮಾಡಲಾಗಿದೆ. ಜೊತೆಗೆ ಪಿವಿಆರ್ ನಲ್ಲೂ ಸಿನಿಮಾ ರದ್ದುಮಾಡಲಾಗಿದೆ. ಇನ್ನೂ ಕರ್ನಾಟಕದಲ್ಲೂ ಚಿತ್ರಮಂದಿರಗಳನ್ನು ರದ್ದು ಮಾಡುವ ಬಗ್ಗೆ ಚರ್ಚೆ ಮಾಡಲಾಗುತ್ತಿದೆ.

  English summary
  Darshan sterrer Robert film audio release function cancelled for coronavirus.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X