For Quick Alerts
  ALLOW NOTIFICATIONS  
  For Daily Alerts

  ಫೆಬ್ರವರಿಯಿಂದ ಸೆಲೆಬ್ರಿಟಿ ಕ್ರಿಕೆಟ್ ಲೀಗ್ 4 ಶುರು

  By Rajendra
  |

  ಸಿನಿಮಾ ಜಗತ್ತಿನ ತಾರೆಗಳು ಮತ್ತೆ ಮೈದಾನಕ್ಕೆ ಇಳಿಯುವ ಸಮಯ ಬಂದಿದೆ. ಸೆಲೆಬ್ರಿಟಿ ಕ್ರಿಕೆಟ್ ಲೀಗ್ (ಸಿಸಿಎಲ್) ನಾಲ್ಕನೇ ಆವೃತ್ತಿಗೆ ವೇದಿಕೆ ಸಿದ್ಧವಾಗಿದೆ. ಎಲ್ಲವೂ ಸುಸೂತ್ರವಾಗಿ ನಡೆದರೆ 2014ರ ಜನವರಿ ಕೊನೆಗೆ ಆಟ ಶುರುವಾಗಲಿದೆ.

  ಫೈನಲ್ ಮ್ಯಾಚ್ ಫೆಬ್ರವರಿ ಕೊನೆಗೆ ನಡೆಯಲಿದೆ. ಇದೊಂದು ನಾನ್ ಪ್ರೊಫೆಷನಲ್ ಪುರುಷರ ಕ್ರಿಕೆಟ್ ಮ್ಯಾಚ್ ಅನ್ನಿಸಿಕೊಂಡಿದ್ದರೂ, ನಾವೂ ಯಾರಿಗೂ ಕಮ್ಮಿ ಇಲ್ಲ ಎಂಬಂತೆ ತಾರೆಗಳು ಆಡಿದ್ದಾರೆ. ಪಕ್ಕಾ ಪ್ರೊಫೆಷನಲ್ ಆಟ ಅಲ್ಲದಿದ್ದರೂ ಒಂದು ಮಟ್ಟಕ್ಕೆ ಅಭಿಮಾನಿಗಳನ್ನು ರಂಜಿಸಿದ್ದಾರೆ.

  2011ರಲ್ಲಿ ಆರಂಭವಾದ ಸಿಸಿಎಲ್ ಲೀಗ್ ಗಳು ಬರುಬರುತ್ತಾ ಜನಪ್ರಿಯತೆ ಗಳಿಸಿಕೊಂಡವು. ಐಸಿಸಿ ಕ್ರಿಕೆಟ್ ಮ್ಯಾಚ್ ಗಳಿಗೂ ಇದರಿಂದ ಕೊಂಚ ಹೊಡೆತಬಿತ್ತು. ಸಿಸಿಎಲ್ ಮ್ಯಾಚ್ ಗಳಿಗೆ ಮಾಧ್ಯಮಗಳು ಸಾಕಷ್ಟು ಪ್ರಚಾರ ಕೊಡುವ ಮೂಲಕ ಇನ್ನಷ್ಟು ಜನಪ್ರಿಯತೆ ಸಿಕ್ಕಿತು.

  ಸಿಸಿಎಲ್ 3 ಕಪ್ ಗೆದ್ದ ಕರ್ನಾಟಕ ಬುಲ್ಡೋಜರ್ಸ್

  ಸಿಸಿಎಲ್ 3 ಕಪ್ ಗೆದ್ದ ಕರ್ನಾಟಕ ಬುಲ್ಡೋಜರ್ಸ್

  ಇದುವರೆಗೂ ನಡೆದ ಮೂರು ಆವೃತ್ತಿಗಳಲ್ಲಿ ಕರ್ನಾಟಕ ಬುಲ್ಡೋಜರ್ಸ್ ತಂಡ ಫೈನಲ್ ತಲುಪಿರುವುದು ವಿಶೇಷ. 2013ರಲ್ಲಿ ನಡೆದ ಮೂರನೇ ಆವೃತ್ತಿಯಲ್ಲಿ ತೆಲುಗು ವಾರಿಯರ್ಸ್ ತಂಡವನ್ನು ಮಣ್ಣುಮುಕ್ಕಿಸಿ ಸಿಸಿಎಲ್ ಕಪ್ ಗೆದ್ದಿತ್ತು.

  ಪ್ರಸ್ತುತ ಎಂಟು ತಂಡಗಳ ನಡುವೆ ಪೈಪೋಟಿ

  ಪ್ರಸ್ತುತ ಎಂಟು ತಂಡಗಳ ನಡುವೆ ಪೈಪೋಟಿ

  ಕರ್ನಾಟಕ ಬುಲ್ಡೋಜರ್ಸ್ ಸೇರಿದಂತೆ ಸಿಸಿಎಲ್ ನಲ್ಲಿ ಪ್ರಸ್ತುತ ಎಂಟು ತಂಡಗಳಿವೆ. ಚೆನ್ನೈ ರೈನೋಸ್, ತೆಲುಗು ವಾರಿಯರ್ಸ್, ಮುಂಬೈ ಹೀರೋಸ್, ಬೆಂಗಾಲ್ ಟೈಗರ್ಸ್, ಭೋಜ್ ಪುರಿ ದಬಾಂಗ್ಸ್, ವೀರ್ ಮರಾಠಿ.

  ಚೆನ್ನೈ ರೈನೋಸ್ ಎರಡು ಬಾರಿ ಚಾಂಪಿಯನ್

  ಚೆನ್ನೈ ರೈನೋಸ್ ಎರಡು ಬಾರಿ ಚಾಂಪಿಯನ್

  ಇನ್ನು ಚೆನ್ನೈ ರೈನೋಸ್ ತಂಡ ಇದುವರೆಗೂ ಎರಡು ಬಾರಿ (2011 ಮತ್ತು 2012) ಚಾಂಪಿಯನ್ ಅನ್ನಿಸಿಕೊಂಡಿದೆ. 2013ರ ಮೂರನೇ ಆವೃತ್ತಿಯಲ್ಲಿ ಎರಡು ಹೊಸತಂಡಗಳು ವೀರ್ ಮರಾಠಿ ಹಾಗೂ ಭೋಜ್ ಪುರಿ ದಬಾಂಗ್ಸ್ ಸೇರ್ಪಡೆಯಾದವು.

  ಕರ್ನಾಟಕ ಬುಲ್ಡೋಜರ್ಸ್ ನಲ್ಲಿ ಯುವನಟರು

  ಕರ್ನಾಟಕ ಬುಲ್ಡೋಜರ್ಸ್ ನಲ್ಲಿ ಯುವನಟರು

  ಈ ಬಾರಿಯ ಸಿಸಿಎಲ್ 4ನೇ ಆವೃತ್ತಿಯಲ್ಲಿ ಕರ್ನಾಟಕ ಬುಲ್ಡೋಜರ್ಸ್ ತಂಡದಲ್ಲಿ ಯಾರ್ಯಾರು ಇರುತ್ತಾರೆ ಎಂಬ ಬಗ್ಗೆ ಕುತೂಹಲವಿದ್ದೇ ಇದೆ. ಈ ಹಿಂದೆ ಕಿಚ್ಚ ಸುದೀಪ್ ನಾಯಕತ್ವದಲ್ಲಿ ತಂಡ ಮುನ್ನುಗ್ಗುತ್ತಿತ್ತು.

  ಕರ್ನಾಟಕ ಬುಲ್ಡೋಜರ್ಸ್ ತಂಡದಲ್ಲಿರುವ ಯುವಪಡೆ

  ಕರ್ನಾಟಕ ಬುಲ್ಡೋಜರ್ಸ್ ತಂಡದಲ್ಲಿರುವ ಯುವಪಡೆ

  ಚಿರಂಜೀವಿ ಸರ್ಜಾ, ಧ್ರುವ್ ಶರ್ಮಾ, ಪ್ರದೀಪ್, ತರುಣ್ ಚಂದ್ರ ಸೇರಿದಂತ ಹಲವು ಯುವ ಹೀರೋಗಳು ಕರ್ನಾಟಕ ಬುಲ್ಡೋಜರ್ಸ್ ತಂಡದಲ್ಲಿ ಮಿಂಚಿದ್ದಾರೆ.

  English summary
  Countdown starts for the fourth edition of Celebrity Cricket League 2014 (CCL 4) is likely to start in the last week of January 2014. The final would take place in February end.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X