For Quick Alerts
  ALLOW NOTIFICATIONS  
  For Daily Alerts

  ದರ್ಶನ್ ಭೇಟಿ ಮಾಡಿದ 'ದಿ ವಿಲನ್' ನಿರ್ಮಾಪಕ ಮನೋಹರ್

  |

  ಒಬ್ಬ ಸ್ಟಾರ್ ನಟ, ಒಬ್ಬ ದೊಡ್ಡ ನಿರ್ಮಾಪಕ ಭೇಟಿ ಮಾಡಿದಾಗ ಇಬ್ಬರು ಸೇರಿ ಒಂದು ಸಿನಿಮಾ ಮಾಡುತ್ತಿದ್ದಾರಾ..? ಎನ್ನುವ ಕುತೂಹಲ ಹುಟ್ಟಿಕೊಳ್ಳುತ್ತದೆ. ಈಗ ಅದೇ ರೀತಿಯ ನಿರೀಕ್ಷೆ ಶುರುವಾಗಿದೆ.

  ನಟ ದರ್ಶನ್ ರನ್ನು ನಿರ್ಮಾಪಕ ಸಿ ಆರ್ ಮನೋಹರ್ ಭೇಟಿ ಮಾಡಿದ್ದಾರೆ. ದರ್ಶನ್ ಅವರ ರಾಜರಾಜೇಶ್ವರಿ ನಗರದ ನಿವಾಸಕ್ಕೆ ಸಿ ಆರ್ ಮನೋಹರ್ ಆಗಮಿಸಿದ್ದು, ಕೆಲಕಾಲ ಮಾತುಕತೆ ನಡೆಸಿದ್ದಾರೆ. ಈ ಫೋಟೋಗಳನ್ನು ಸಿ ಆರ್ ಮನೋಹರ್ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

  ಕಷ್ಟದಲ್ಲಿದ್ದ ಅಭಿಮಾನಿಗೆ ಆರ್ಥಿಕ ನೆರವು ನೀಡಿ ಮಾನವೀಯತೆ ಮೆರೆದ ದರ್ಶನ್

  ಈ ಫೋಟೋ ನೋಡಿದ ತಕ್ಷಣ ದರ್ಶನ್ ಜೊತೆಗೆ ಸಿ ಆರ್ ಮನೋಹರ್ ಸಿನಿಮಾ ಮಾಡುತ್ತಾರಾ ಎನ್ನವ ಪ್ರಶ್ನೆ ಮೂಡುತ್ತದೆ. ಆದರೆ, ಆ ರೀತಿಯ ಪ್ಲಾನ್ ಏನು ಇಲ್ಲವಂತೆ. ಇದೊಂದು ಸಹಜ ಭೇಟಿ ಅಷ್ಟೇ ಆಗಿದೆಯಂತೆ. ಕೆಲ ದಿನಗಳಿಂದ ಇಬ್ಬರು ಭೇಟಿ ಮಾಡಬೇಕು ಎಂದುಕೊಂಡಿದ್ದು, ನಿನ್ನೆ ಅದು ಕೂಡಿ ಬಂದಿದೆ.

  ಸದ್ಯಕ್ಕೆ, ಇಬ್ಬರು ಯಾವುದೇ ಸಿನಿಮಾ ಮಾಡುವ ಪ್ಲಾನ್ ನಲ್ಲಿ ಇಲ್ಲವಂತೆ. ದರ್ಶನ್ ಮೂರ್ನಾಲ್ಕು ಚಿತ್ರಗಳು ಬ್ಯುಸಿ ಇದ್ದಾರೆ, ಮನೋಹರ್ ಕೂಡ ಹೊಸ ಚಿತ್ರ ಶುರು ಮಾಡಿದ್ದಾರೆ. ಹೀಗಾಗಿ ಇದು ಸಿನಿಮಾದ ವಿಷಯ ಭೇಟಿ ಅಲ್ಲವಂತೆ.

  ಸದ್ಯಕ್ಕೆ ಇಲ್ಲ ಎಂದರೂ ಮುಂದೊಂದು ದಿನ ದರ್ಶನ್ ಸಿನಿಮಾವನ್ನು ಸಿ ಆರ್ ಮನೋಹರ್ ನಿರ್ಮಾಣ ಮಾಡುವ ಆಸೆ ಇದೆಯಂತೆ. ಅಂದಹಾಗೆ, ಈ ಹಿಂದೆ 'ದಿ ವಿಲನ್', 'ರೋಗ್', 'ವಜ್ರಕಾಯ', 'ಶಿವಂ' ಚಿತ್ರಗಳನ್ನು ಮನೋಹರ್ ನಿರ್ಮಾಣ ಮಾಡಿದ್ದರು.

  English summary
  'The Villain' movie producer CR Manohar met actor kannada actor Darshan.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X