»   » ಕ್ರೇಜಿಸ್ಟಾರ್ ರವಿಚಂದ್ರನ್ ಟೋಪಿ ರಹಸ್ಯ ಬಯಲು!

ಕ್ರೇಜಿಸ್ಟಾರ್ ರವಿಚಂದ್ರನ್ ಟೋಪಿ ರಹಸ್ಯ ಬಯಲು!

By: ಉದಯರವಿ
Subscribe to Filmibeat Kannada

ಕನಸುಗಾರ, ಕ್ರೇಜಿಸ್ಟಾರ್ ರವಿಚಂದ್ರನ್ ಅವರು ಈಗಾಗಲೆ ತಮ್ಮ ಸೋಲು ಗೆಲುವುಗಳನ್ನು ಅನೇಕ ವೇದಿಕೆಗಳಲ್ಲಿ ಹಂಚಿಕೊಂಡಿದ್ದಾರೆ. ಅವರ ಸಿನಿಪಯಣದ ಬಗ್ಗೆ ಒಂದು ಮಹಾನ್ ಗ್ರಂಥವನ್ನೇ ಬರೆಯಬಹುದು. ಕರ್ನಾಟಕ ಚಲನಚಿತ್ರ ಅಕಾಡೆಮಿ ರವೀಂದ್ರ ಕಲಾಕ್ಷೇತ್ರದಲ್ಲಿ ಏರ್ಪಡಿಸಿದ್ದ 50ನೇ ಬೆಳ್ಳಿಹೆಜ್ಜೆ ಸಂವಾದ ಕಾರ್ಯಕ್ರಮದಲ್ಲಿ ರವಿಚಂದ್ರನ್ ತಮ್ಮ ಮನದಾಳ ಪುಟಗಳನ್ನು ಮತ್ತೊಮ್ಮೆ ಅಭಿಮಾನಿಗಳ ಮುಂದೆ ತೆರೆದಿಟ್ಟರು.

ಕಿಕ್ಕಿರಿದ ರವೀಂದ್ರ ಕಲಾಕ್ಷೇತ್ರದಲ್ಲಿ ಅವರು ಅಭಿಮಾನಿಗಳನ್ನು ನೋಡುತ್ತಿದ್ದಂತೆ ಭಾವಪರವಶರಾದರು. ತನ್ನಪ್ಪನಾಣೆಗೂ ನನಗೆ ಇಂದು ಮಾತೇ ಬರುತ್ತಿಲ್ಲ ಎಂದರು. ನಿಮ್ಮನ್ನೆಲ್ಲಾ ನೋಡುತ್ತಿದ್ದರೆ ಅಪ್ಪ ಇನ್ನೂ ತೀರ್ಕೊಂಡಿಲ್ಲ ಅನ್ನಿಸುತ್ತದೆ ಎಂದರು. ಅಭಿಮಾನಿಗಳ ಚಪ್ಪಾಳೆ, ಶಿಳ್ಳೆ, ಕೇಕೆಯಲ್ಲಿ ವೀರಸ್ವಾಮಿ ಇನ್ನೂ ಜೀವಂತವಾಗಿದ್ದಾರೆ ಎಂದರು. [ಹೆಚ್ಚಾಗಿ ನೋವನ್ನೇ ಉಂಡ 'ನೀಲಕಂಠ' ರವಿಚಂದ್ರನ್]

ಒಳ್ಳೆಯ ಸಿನಿಮಾಗಳನ್ನೇ ಮಾಡಬೇಕು ಎಂಬ ಗುರಿ ಇಟ್ಟುಕೊಂಡು ನಾನು ಮುಂದಡಿ ಇಟ್ಟವನು. ಈ ಪಯಣದಲ್ಲಿ ಸಾಕಷ್ಟು ಕಷ್ಟನಷ್ಟಗಳನ್ನು ಅನುಭವಿಸಿದ್ದೇನೆ. ಕೋಟ್ಯಾಂತರ ಹಣ ಕಳೆದುಕೊಂಡಿದ್ದೇನೆ. ಆದರೆ ಹೆಂಡತಿಯನ್ನು ಉಳಿಸಿಕೊಂಡಿದ್ದೇನೆ, ಮನೆ ಮಾರಿಲ್ಲ, ಈ ಹೋರಾಟದಲ್ಲಿ ಭಯ ಅಂದ್ರೆ ಏನು ಎಂಬುದನ್ನೇ ಮರೆತಿದ್ದೇನೆ ಎಂದರು.

ಸೃಜನಶೀಲತೆಯ ಗುಟ್ಟು ಯೌವನದ ಪಟ್ಟು

ನನ್ನ ಮನಸ್ಸು ಹಾಗೂ ಹೃದಯ ಎರಡೂ ಇಂದಿಗೂ ಶುದ್ಧವಾಗಿವೆ. ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸಿಕೊಂಡು ಬಂದಿದ್ದೇನೆ. ಇದೇ ನನ್ನ ಸೃಜನಶೀಲತೆಯ ಗುಟ್ಟು. ಯೌವನದಲ್ಲಿ ಲವ್ ಫೇಲೂರ್ ಆದಕಾರಣ ತಾವು ಚಿತ್ರರಂಗಕ್ಕೆ ಅಡಿಯಿಟ್ಟೆ ಎಂದು ಎಲ್ಲರನ್ನೂ ನಗಿಸಿದರು.

ರವಿ ಓದದೇ ಇದ್ದದ್ದೇ ಒಳ್ಳೆಯದಾಯಿತು

ತಮ್ಮ ಫಿಲಂ ಸಿಟಿ ಕನಸು, ಪರಭಾಷಾ ಚಿತ್ರಗಳೊಂದಿಗೆ ಸ್ಪರ್ಧಿಸುವಂತಹ ಚಿತ್ರಗಳು ನಿರ್ಮಾಣವಾಗಬೇಕು, ದೊಡ್ಡ ದೊಡ್ಡ ಸ್ಟಾರ್ಸ್ ಜೊತೆಯಾಗಿ ಅಭಿನಯಿಸಿದರೆ ಕನ್ನಡ ಚಿತ್ರರಂಗ ಉಳಿಯುತ್ತದೆ, ಬೆಳೆಯುತ್ತದೆ ಎಂದರು. ರವಿಚಂದ್ರನ್ ಅವರು ಶಾಲೆಗೆ ಹೋಗಲಿಲ್ಲ ಎಂಬುದು ಒಳ್ಳೆಯದೇ ಆಯಿತು. ಒಂದು ವೇಳೆ ಅವರು ಓದಿದ್ದರೆ ಈ ರೀತಿಯ ಚಿತ್ರಗಳನ್ನು ನಮಗೆ ಕೊಡಲು ಸಾಧ್ಯವಾಗುತ್ತಿರಲಿಲ್ಲ ಎಂದರು ಮುಖ್ಯಮಂತ್ರಿ ಸಿದ್ದರಾಮಯ್ಯ.

ಅಹಂ ಪ್ರೇಮಾಸ್ಮಿಗಾಗಿ ಒಂದು ಕೋಟಿ ಸಾಲ

ಇದೇ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರು ಹಣಕಾಸು ಸಚಿವರಾಗಿದ್ದಾಗಿನ ಒಂದು ಘಟನೆಯನ್ನು ರವಿಚಂದ್ರನ್ ಸ್ಮರಿಸಿದರು. 'ಅಹಂ ಪ್ರೇಮಾಸ್ಮಿ' ಚಿತ್ರಕ್ಕಾಗಿ ಬ್ಯಾಂಕ್ ನಲ್ಲಿ ರು.1 ಕೋಟಿ ಸಾಲ ಪಡೆದಿದ್ದೆ. ಸಾಲ ಮರುಪಾವತಿಸಲು ಬ್ಯಾಂಕ್ ನವರು ತಮ್ಮನ್ನು ಕೂರಿಸಿಕೊಂಡಿದ್ದರು. ಆಗ ಅಲ್ಲಿಗೆ ಬಂದ ಸಿದ್ದರಾಮಯ್ಯ ಅವರು ಬ್ಯಾಂಕ್ ಸಿಬ್ಬಂದಿಯನ್ನು ಒಂದು ಕೋಟಿಗಾಗಿ ರವಿಚಂದ್ರನ್ ಅವರನ್ನು ಇಲ್ಲಿ ಕೂರಿಸಿಕೊಂಡಿದ್ದೀರಲ್ಲಾ. ಮೊದಲು ಅವರನ್ನು ಕಳುಹಿಸಿ ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದ್ದನ್ನು ನೆನಪಿಸಿಕೊಂಡರು.

ರಿಮೇಕ್ ನಿಷೇಧಿಸಿದರೆ ಮಾಡಲ್ಲ ಆದರೆ

ಒಂದು ವೇಳೆ ರೀಮೇಕ್ ಚಿತ್ರಗಳನ್ನು ನಿಷೇಧಿಸಿದರೆ ತಾವು ಅದನ್ನು ಮಾಡಲ್ಲ. ಹಾಗಂತ ರೀಮೇಕ್ ಸಿನಿಮಾ ಮಾಡ್ಬೇಡಿ ಎಂದು ಹೇಳಬೇಡಿ ಎಂದು ಹಾಸ್ಯ ಚಟಾಕಿ ಸಿಡಿಸಿರು.

ನಾಯಕಿ ಹೊಕ್ಕುಳ ಮೇಲೆ ದ್ರಾಕ್ಷಿ ಯಾಕಿಲ್ಲ!

ಹೀರೋಯಿನ್ ಹೊಕ್ಕುಳ ಮೇಲೆ ದ್ರಾಕ್ಷಿ ಹಾಕಿದಾಗ ಒಳ್ಳೆಯ ಸಿನಿಮಾ ಕೊಡಿ ಎಂದ್ರು. ಈಗ ಒಳ್ಳೆ ಸಿನಿಮಾ ಕೊಟ್ರೆ ನಾಯಕಿ ಹೊಕ್ಕುಳ ಮೇಲೆ ದ್ರಾಕ್ಷಿ ಯಾಕೆ ಹಾಕುತ್ತಿಲ್ಲ ಎಂದು ಕೇಳ್ತಿದ್ದೀರಾ. ನಾನೇನು ಮಾಡಬೇಕು ಹೇಳಿ ಎಂದಾಗ ಇಡೀ ಸಭೆ ನಗೆಗಡಲಲ್ಲಿ ತೇಲಾಡಿತು.

ಕ್ಯಾಪ್ ತೆಗೆಯಬೇಕಾ ಸಲೂಗೆ ಬನ್ನಿ

ಎಲ್ಲರೂ ನನ್ನ ಕ್ಯಾಪ್ ಬಗ್ಗೆಯೇ ಮಾತನಾಡುತ್ತಾರೆ. ಅದನ್ನು ತೆಗೆದು ತೋರಿಸಬೇಕು ಎಂದರೆ ಸಲೂನ್ ಗೆ ಬನ್ನಿ. ನಿಮಗೆ ಏನೇನೂ ಸಿಗಲ್ಲ. ತಲೆಯಲ್ಲಿ ವಿಚಾರಗಳನ್ನು ನಾನು ತುಂಬಾ ದಿನ ಉಳಿಸಿಕೊಳ್ಳಲ್ಲ. ಅದೇ ರೀತಿ ಜೇಬಲ್ಲ ದುಡ್ಡನ್ನು ಎಂದರು.

ಇನ್ನೂ ಮೂರು ಚಿತ್ರಗಳನ್ನು ಗೆಲ್ಲಿಸಿ

ಇನ್ನೂ ನಾಲ್ಕೆದು ಸಿನಿಮಾಗಳನ್ನು ಗೆಲ್ಲಿಸಿ. ಅದಾದ ಮೇಲೆ 'ಮಂಜಿನ ಹನಿ' ಚಿತ್ರ ನೋಡಿ ಎಂದರು. ಅವಕಾಶ ಸಿಕ್ಕಿದರೆ ಪೌರಾಣಿಕ ಪಾತ್ರಗಳನ್ನು ಮಾಡ್ತೀನಿ. ತುಂಬ ದಪ್ಪ ಆಗಿರುವ ಕಾರಣ ಭೀಮನ ಪಾತ್ರ ಮಾಡಬಹುದು. ಸಿಕ್ಸ್ ಪ್ಯಾಕ್ ಸಹ ಮಾಡ್ತೀನಿ. ಈಗಿರುವ ಟೆಕ್ನಾಲಜಿ ಬಹಸಿಕೊಂಡು ಸಿಕ್ಸ್ ಪ್ಯಾಕ್ ಮಾಡುವುದೇನು ಕಷ್ಟವಲ್ಲ ಎಂದರು.

ರವಿಚಂದ್ರನ್ ಗೆ ಹಂಸಲೇಖ ಕೇಳಿದ ಪ್ರಶ್ನೆ

ಇದೇ ಸಂದರ್ಭದಲ್ಲಿ ಹಂಸಲೇಖವರು ಒಂದು ಪ್ರಶ್ನೆಯ ಬಾಣವನ್ನು ಎಸೆದರು. ಇತ್ತೀಚೆಗೆ ತಮ್ಮ ಮುಖದಲ್ಲಿ ನಗು ಕಾಣಿಸುತ್ತಿಲ್ಲವಲ್ಲಾ ಎಂದಾಗ, ರವಿ ಮಾತನಾಡುತ್ತಾ, ನೀವು ಜೊತೆಗಿಲ್ಲವಲ್ಲಾ ಅದಕ್ಕೆ ಎಂದರು. ಆದರೆ ತಾವಿಬ್ಬರೂ ಮತ್ತೆ ಒಂದಾಗುವ ಮಾತನ್ನು ರವಿ ಸಾರಾಸಗಟಾಗಿ ನಿರಾಕಸಿದರು. ಖಡಾಖಂಡಿತವಾಗಿ ಅದು ಸಾಧ್ಯವಿಲ್ಲ ಎಂದರು ಹೇಳಿದರು.

English summary
Sandalwood dream marchant Crazy Star Ravichandran shares his ups and downs with fans in an event organised by The Karnataka Chalanachitra Academy 50th Belli Hejje programme at the Ravindra Kalakshetra here on Friday. I don’t know anything else except making good films said Ravichandran.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada