»   » 'ಮುಂಗಾರು ಮಳೆ'ಯಲಿ ಗೋಲ್ಡನ್ ಸ್ಟಾರ್ ಜೊತೆಯಲಿ ಕ್ರೇಜಿ ಸ್ಟಾರ್!

'ಮುಂಗಾರು ಮಳೆ'ಯಲಿ ಗೋಲ್ಡನ್ ಸ್ಟಾರ್ ಜೊತೆಯಲಿ ಕ್ರೇಜಿ ಸ್ಟಾರ್!

Posted By:
Subscribe to Filmibeat Kannada

ಬೆಂಗಳೂರಿನಲ್ಲಿ ಮಳೆಯ ಆರ್ಭಟ ಜೋರಾಗಿದೆ. ಹಾಗೇ, ಸ್ಯಾಂಡಲ್ ವುಡ್ ನಲ್ಲೂ ಮತ್ತೊಮ್ಮೆ 'ಮುಂಗಾರು ಮಳೆ'ಯ ಅಬ್ಬರ ಶುರುವಾಗಿದೆ. 'ಕೃಷ್ಣಲೀಲಾ' ಸಿನಿಮಾ ಹಿಟ್ ಆಯ್ತು. ಅದರ ಬೆನ್ನಲ್ಲೇ ಶಶಾಂಕ್ 'ಮುಂಗಾರು ಮಳೆ-2' ಚಿತ್ರಕ್ಕೆ ಚಾಲನೆ ನೀಡಿದ್ದಾರೆ.

ಇ.ಕೆ.ಪ್ರೊಡಕ್ಷನ್ಸ್ ಬ್ಯಾನರ್ ನಲ್ಲಿ ರೆಡಿಯಾಗುತ್ತಿರುವ 'ಮುಂಗಾರು ಮಳೆ-2' ಚಿತ್ರದ ಸಾಂಗ್ ರೆಕಾರ್ಡಿಂಗ್ ಕಾರ್ಯಕ್ರಮ ಇಂದು ಬೆಳ್ಳಗ್ಗೆ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಅವರ ಸ್ಟುಡಿಯೋದಲ್ಲಿ ನೆರವೇರಿತು.


mungaru male

ಮತ್ತೊಮ್ಮೆ ಮಳೆಯಲ್ಲಿ ನೆನೆಯುವ ಉತ್ಸಾಹದಿಂದ ಗೋಲ್ಡನ್ ಸ್ಟಾರ್ ಗಣೇಶ್, ನಿರ್ದೇಶಕ ಶಶಾಂಕ್, ನಿರ್ಮಾಪಕ ಗಂಗಾಧರ್ ಸೇರಿದಂತೆ ಇಡೀ ಚಿತ್ರತಂಡ ಸ್ವರ ಸಂಯೋಜನೆಯ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿತ್ತು. [ಗಣೇಶ್ 'ಮುಂಗಾರು ಮಳೆ 2'ಕ್ಕೆ ಮುಹೂರ್ತ ಫಿಕ್ಸ್]


ವಿಶೇಷ ಅಂದ್ರೆ, 'ಮುಂಗಾರು ಮಳೆ-2' ಚಿತ್ರದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಜೊತೆ ಕ್ರೇಜಿ ಸ್ಟಾರ್ ರವಿಚಂದ್ರನ್ ನಟಿಸುತ್ತಿದ್ದಾರೆ. ಮಳೆಯಲ್ಲಿ ರವಿಚಂದ್ರನ್ ಪಾಡೇನು ಅಂತ ನಿರ್ದೇಶಕ ಶಶಾಂಕ್ ಬಿಟ್ಟುಕೊಟ್ಟಿಲ್ಲ.


mungaru male

ಹೆಸರಿಗೆ ಇದು 'ಮುಂಗಾರು ಮಳೆ-2' ಆಗಿದ್ದರೂ, 'ಮುಂಗಾರು ಮಳೆ' ಚಿತ್ರದ ಮುಂದುವರಿದ ಭಾಗ ಅಲ್ಲ. ಬೇರೆ ಕಥೆಯನ್ನ ಖುದ್ದು ರಚಿಸುತ್ತಿದ್ದಾರೆ ನಿರ್ದೇಶಕ ಶಶಾಂಕ್. ಸದ್ಯಕ್ಕೆ ಗೋಲ್ಡನ್ ಸ್ಟಾರ್ ಜೊತೆ ಕ್ರೇಜಿ ಸ್ಟಾರ್ ಒಂದಾಗುತ್ತಿರುವ ಸುದ್ದಿಯನ್ನ ಬ್ರೇಕ್ ಮಾಡಿರುವ ಚಿತ್ರತಂಡ, ಬಾಕಿ ತಾರಾಗಣವನ್ನ ಸಸ್ಪೆನ್ಸ್ ನಲ್ಲೇ ಇಟ್ಟಿದೆ. [ಸದ್ದಿಲ್ಲದೇ ಶುರುವಾಯ್ತು 'ಮುಂಗಾರು ಮಳೆ' ಅಬ್ಬರ]


mungaru male

ಬಹುತೇಕ ಮಳೆಯಲ್ಲೇ ಚಿತ್ರೀಕರಣವಿರುವುದರಿಂದ ಮುಂಗಾರು ಮಳೆಯ ಆಗಮನಕ್ಕಾಗಿ ಚಿತ್ರತಂಡ ಕಾಯುತ್ತಿದೆ. (ಫಿಲ್ಮಿಬೀಟ್ ಕನ್ನಡ)

English summary
Golden Star Ganesh starrer 'Mungaru Male-2' song recording pooja happened today (May 29th) morning. On this ocassion, director Shashank announced that Crazy Star V.Ravichandran is going to share screen space with Ganesh in this movie.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada