For Quick Alerts
  ALLOW NOTIFICATIONS  
  For Daily Alerts

  ಕನ್ನಡ ಚಿತ್ರದಲ್ಲಿ ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ

  By Rajendra
  |

  ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರ ಬಾಲ್ಯದ ಮಿತ್ರ ವಿನೋದ್ ಕಾಂಬ್ಳಿ ಕನ್ನಡ ಚಿತ್ರರಂದಲ್ಲಿ ಅಭಿನಯಿಸಲಿದ್ದಾರೆ. ಈಗವರು ಕ್ರಿಕೆಟ್ ಆಡದೇ ಇದ್ದರೂ ಕಿರುತೆರೆಯ ರಿಯಾಲಿಟಿ ಶೋಗಳಲ್ಲಿ, ಕ್ರಿಕೆಟ್ ಕಾಮೆಂಟ್ರಿಯಲ್ಲಿ ಬಿಜಿಯಾಗಿದ್ದಾರೆ.

  ಈಗವರು ಕನ್ನಡಕ್ಕೆ ಅಡಿಯಿಡುತ್ತಿರುವುದು 'ಸಿಲ್ಕ್' ಖ್ಯಾತಿಯ ಅಕ್ಷಯ್ ನಾಯಕ ನಟನಾಗಿ ಅಭಿನಯಿಸುತ್ತಿರುವ ಬೆತ್ತನಗೆರೆ ಚಿತ್ರದಲ್ಲಿ. ಈ ಬಗ್ಗೆ ಚಿತ್ರತಂಡ ಜಾಹೀರಾತನ್ನೂ ಕೊಟ್ಟಿದೆ.

  ಈ ಚಿತ್ರದಲ್ಲಿ ವಿನೋದ್ ಕಾಂಬ್ಳಿ ಅವರದು ಅತಿಥಿ ಪಾತ್ರವೋ ಅಥವಾ ವಿಶೇಷ ಪಾತ್ರವೋ ಗೊತ್ತಿಲ್ಲ. ಈ ಬಗ್ಗೆ ಚಿತ್ರದ ನಿರ್ದೇಶಕ ಮೋಹನ್ ಗೌಡ ಹೇಳುವುದೇನೆಂದರೆ, "ಅವರದು ವಿಭಿನ್ನ ಪಾತ್ರ. ಇದಕ್ಕೆ ಅವರೇ ಸೂಕ್ತ ಎನ್ನಿಸಿ ಸಂಪರ್ಕಿಸಿದೆವು. ಇಂಪ್ರೆಸ್ ಆದ ಅವರು ಒಪ್ಪಿಕೊಂಡಿದ್ದಾರೆ" ಎಂದಿದ್ದಾರೆ.

  ಬೆತ್ತನಗೆರೆ ಚಿತ್ರದ ಮತ್ತೊಬ್ಬ ನಾಯಕ ನಟ ಸುಮಂತ್. ದೆಹಲಿ ಮೂಲಕ ನಯನಾ ಚಿತ್ರದ ನಾಯಕಿ. ಇದು ನೈಜ ಘಟನೆ ಆಧಾರಿತ ಚಿತ್ರ. ಇದೇ ಅ.31ರಂದು ಚಿತ್ರ ಸೆಟ್ಟೇರುತ್ತಿದೆ.

  ಬೆತ್ತನಗೆರೆಯ ಸೀನನ ಎನ್ ಕೌಂಟರ್ ಆದದ್ದೇ ತಡ ಸ್ಯಾಂಡಲ್ ವುಡ್ ನಲ್ಲಿ ಬೆತ್ತನಗೆರೆ ಅನ್ನೋ ಟೈಟಲ್ ಗಾಗಿ ಕಿತ್ತಾಟಗಳೇ ಶುರುವಾಗಿದ್ವು. ಅಶ್ವಿನಿ ಆಡಿಯೋದ ಅಶ್ವಿನಿ ರಾಮ್ ಪ್ರಸಾದ್ ಸೇರಿದಂತೆ ಆರೇಳು ನಿರ್ಮಾಪಕರು ಈ ಒಂದೇ ಟೈಟಲ್ ಗೆ ಮುಗಿಬಿದ್ದಿದ್ರು ಮುಂದೆ ಓದಿ...(ಏಜೆನ್ಸೀಸ್)

  English summary
  Master Blaster Sachin Tendulkar childhood friend cricket expert and commentator Vinod Kambli is all set to make his debut in Kannada with Ninnale Naanu. Bettanagere. Silk Sakkat Hot fame Akshay playing role of Bettanagere.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X