»   » ತಮಿಳು ಸೆಂಟರ್ ನಟರಾಜ ಚಿತ್ರಮಂದಿರದಲ್ಲಿ ಸಿನಿಮಾ ಪ್ರದರ್ಶನ ಸ್ಥಗಿತ

ತಮಿಳು ಸೆಂಟರ್ ನಟರಾಜ ಚಿತ್ರಮಂದಿರದಲ್ಲಿ ಸಿನಿಮಾ ಪ್ರದರ್ಶನ ಸ್ಥಗಿತ

Posted By:
Subscribe to Filmibeat Kannada

ಬೆಂಗಳೂರಿನ ಪ್ರಮುಖ ಚಿತ್ರಮಂದಿರಗಳಲ್ಲಿ ನಟರಾಜ ಥಿಯೇಟರ್ ಕೂಡ ಒಂದು. 49 ವರ್ಷಗಳ ಇತಿಹಾಸ ಇರುವ ಈ ಚಿತ್ರಮಂದಿರಕ್ಕೆ ಈಗ ಬೀಗ ಹಾಕುವ ಪರಿಸ್ಥಿತಿ ಬಂದಿದೆ. ಸದ್ಯ ನಟರಾಜ ಚಿತ್ರಮಂದಿರದಲ್ಲಿ ಯಾವುದೇ ಸಿನಿಮಾಗಳು ಪ್ರದರ್ಶನ ಆಗುತ್ತಿಲ್ಲ.

ಚಿತ್ರಮಂದಿರದ ಮಾಲೀಕರ ಮತ್ತು ಬಾಡಿಗೆದಾರರ ನಡುವಿನ ಲೀಸ್ ಅವಧಿ ಮುಗಿದಿದ್ದು, ಈ ಕಾರಣದಿಂದ ಚಿತ್ರ ಪ್ರದರ್ಶನ ಅಂತ್ಯವಾಗಿದೆ. ಜೊತೆಗೆ ಥಿಯೇಟರ್ ಈಗ ಒಳ್ಳೆಯ ಸ್ಥಿತಿಯಲ್ಲಿ ಇಲ್ಲ. ಚಿತ್ರಮಂದಿರದ ಪ್ರೊಜೆಕ್ಟರ್, ಪರದೆ, ಕುರ್ಚಿಗಳು ಸೇರಿದಂತೆ ಎಲ್ಲ ಉಪಕರಣಗಳು ಸಾಕಷ್ಟು ಹಳೆಯದಾಗಿದೆ. ಇವುಗಳನ್ನು ಮತ್ತೆ ನವೀಕರಿಸುವ ಆಸಕ್ತಿ ತೋರದ ಮಾಲೀಕರು ಚಿತ್ರ ಪ್ರದರ್ಶನವನ್ನು ನಿಲ್ಲಿಸಿದ್ದಾರೆ.

ಮುಗಿಯಿತು 'ಕಪಾಲಿ' ಆಯಸ್ಸು : ನೆಲಕ್ಕುರುಳಲಿದೆ ಗಾಂಧಿನಗರದ ಮತ್ತೊಂದು ಚಿತ್ರಮಂದಿರ !

ಜೊತೆಗೆ ಚಿತ್ರಮಂದಿರ ಮಾಲೀಕರು ಸಾಕಷ್ಟು ತೊಂದರೆಗಳನ್ನು ಎದುರಿಸುತ್ತಿದ್ದಾರೆ. ಶ್ರೀರಾಂಪುರ ಸೇರಿದಂತೆ ಚಿತ್ರಮಂದಿರದ ಸಮೀಪದಲ್ಲಿ ಹೆಚ್ಚಾಗಿ ತಮಿಳು ಮಾತನಾಡುವ ಜನರೇ ಇದ್ದು, ಇಲ್ಲಿ ಯಾವಾಗಲೂ ತಮಿಳು ಸಿನಿಮಾಗಳನ್ನೇ ಹೆಚ್ಚಾಗಿ ಹಾಕುತ್ತಿದ್ದರಂತೆ. ಅಲ್ಲದೆ ಕಾವೇರಿ ಗಲಾಟೆ ಆದ ಸಂದರ್ಭದಲ್ಲಿ ಚಿತ್ರಮಂದಿರವನ್ನು ಸಂಪೂರ್ಣವಾಗಿ ಮುಚ್ಚಬೇಕಿತ್ತು.

Curtains down for Nataraja theatre Bengaluru

ಇವುಗಳ ನಡುವೆ ಈ ಆಸ್ತಿ ಜೆ.ಚೆನ್ನಪ್ಪ ಅವರಿಗೆ ಸೇರಿದ್ದು, ಅವರ ಮೂರು ಮಕ್ಕಳ ನಡುವಿನ ಆಸ್ತಿ ಹಂಚಿಕೆಯ ಬಿಕ್ಕಟ್ಟು ಕೂಡ ಇದೆ. ಈ ಎಲ್ಲ ಸಮಸ್ಯೆಗಳಿಂದ ಚಿತ್ರಮಂದಿರದ ಪ್ರದರ್ಶನ ಅಂತ್ಯವಾಗಿದೆ. ಮತ್ತೆ ಇಲ್ಲಿ ಪ್ರದರ್ಶನ ಶುರು ಆಗುವುದು ಕೂಡ ಬಹುತೇಕ ಡೌಟ್ ಆಗಿದೆ. ಅಂದಹಾಗೆ, ನಟರಾಜ ಚಿತ್ರಮಂದಿರದಲ್ಲಿ 1970 ರಲ್ಲಿ ಮೊದಲ ಬಾರಿಗೆ ಚಿತ್ರ ಪ್ರದರ್ಶನ ಆರಂಭವಾಗಿತ್ತು. ಬೆಂಗಳೂರಿನ ದೊಡ್ಡ ಚಿತ್ರಮಂದಿರಗಳಲ್ಲಿ ಒಂದಾಗಿದ್ದು, 1100 ಜನರು ಸಿನಿಮಾ ನೋಡುವ ವ್ಯವಸ್ಠೆ ಇಲ್ಲಿ ಇತ್ತು.

English summary
Curtains down for Nataraja theatre. Nataraja is one of the largest theatre in Bengaluru.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X