twitter
    For Quick Alerts
    ALLOW NOTIFICATIONS  
    For Daily Alerts

    'ಧನಂಜಯ್ ಬರೀ ರೌಡಿಸಂ ಸಿನಿಮಾ ಮಾಡ್ತಾನೆ ಅಂತ ಆರೋಪವಿತ್ತು': 'ಬಡವ ರಾಸ್ಕಲ್' ಬೇರೆ ಸಿನಿಮಾ

    |

    ಡಿಸೆಂಬರ್‌ನಲ್ಲಿ ರಿಲೀಸ್ ಆಗುತ್ತಿರುವ ಸಿನಿಮಾಗಳಲ್ಲಿ ಬಡವ ರಾಸ್ಕಲ್ ಕೂಡ ಒಂದು. ಕ್ರಿಸ್‌ಮಸ್ ಹಬ್ಬದ ಸಂಭ್ರಮದಲ್ಲಿ ಈ ಸಿನಿಮಾ 300ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಕೆಆರ್‌ಜಿ ಸ್ಟುಡಿಯೋ ಈ ಸಿನಿಮಾವನ್ನು ವಿತರಣೆ ಮಾಡುತ್ತಿದೆ. 'ರತ್ನನ್ ಪ್ರಪಂಚ' ಬಳಿಕ ಡಾಲಿ ಧನಂಜಯ್ ನಟಿಸಿ 'ಬಡವ ರಾಸ್ಕಲ್' ಭಾವನಾತ್ಮಕ ಕಥೆಯನ್ನು ಹೊತ್ತು ತರುತ್ತಿದೆ.

    'ಬಡವ ರಾಸ್ಕಲ್' ಅಣ್ಣಾವ್ರ ಸಿನಿಮಾದ ಫೇಮಸ್ ಡೈಲಾಗ್. ಇದೇ ಸಿನಿಮಾ ಟೈಟಲ್ ಆಗಿದೆ. ಹಾಗಂತ ಇದು ರೌಡಿಸಂ ಸಿನಿಮಾನಾ? ರತ್ನನ್ ಪ್ರಪಂಚ ಸಿನಿಮಾದಂತಹ ಕಥೆ ಇದೆಯಾ? ಹೀಗೆ ಒಂದಿಷ್ಟು ಗೊಂದಲ ಡಾಲಿ ಅಭಿಮಾನಿಗಳಿಗಿದೆ. ಧನಂಜಯ್ ಬರೀ ರೌಡಿಸಂ ಸಿನಿಮಾ ಮಾಡ್ತಾನೆ ಅಂತ ಆರೋಪ 'ಬಡವ ರಾಸ್ಕಲ್' ಅಂತಿರೋ ಡಾಲಿ ತಮ್ಮ ಸಿನಿಮಾ ಬಗ್ಗೆ ಫಿಲ್ಮಿ ಬೀಟ್ ಜೊತೆ ಮನಬಿಚ್ಚಿ ಮಾತಾಡಿದ್ದಾರೆ.

    ಸಿನಿಮಾದ ಪ್ರಚಾರನೇ ವಿಭಿನ್ನವಾಗಿದೆಯಲ್ಲಾ?

    ಸಿನಿಮಾದ ಪ್ರಚಾರನೇ ವಿಭಿನ್ನವಾಗಿದೆಯಲ್ಲಾ?

    ಪ್ರಶ್ನೆ: ಬಡವ ರಾಸ್ಕಲ್ ಡಿಸೆಂಬರ್ 24ಕ್ಕೆ ರಿಲೀಸ್ ಮಾಡುತ್ತಿದ್ದೀರಿ. ಸಿನಿಮಾದ ಪ್ರಚಾರನೇ ವಿಭಿನ್ನವಾಗಿದೆಯಲ್ಲಾ? ಇದೆಲ್ಲಾ ಹೇಗೆ ಶುರುವಾಯ್ತು?

    "ಅದು ಶುರುವಾಗಿದ್ದು ನನ್ನ ಮೇಕಪ್ ಮ್ಯಾನ್‌ ಗಣೇಶ್ ಎನ್ನುವವರಿಂದ. ನಮ್ಮ ಸಿನಿಮಾದ ಒಂದು ಟೀಸರ್ ಬಿಟ್ಟಿದ್ವಿ. ನಮ್ಮ ನಿಕ್ ನೇಮ್ ಬರೆದಿರುವ ಸ್ಲೇಟ್ ಹಿಡ್ಕೊಂಡಿದನ್ನು ಬಿಟ್ಟಿದ್ವಿ. ಅಲ್ಲಿಂದ ಶುರುವಾಗಿತ್ತು. ಅವನು ಎಳನೀರು ಅಂಗಡಿಯಲ್ಲಿ ರೇಟ್ ಬರೆದಿರುವಂತೆ ಸ್ಲೇಟ್‌ನಲ್ಲಿ ರಿಲೀಸ್ ಡೇಟ್ ಬರೆದು ಫೋಟೊ ತೆಗೆದು ಕಳಿಸಿದ್ದ. ಅದನ್ನು ನಾನು ಶೇರ್ ಮಾಡಿದ್ದೆ. ಆ ಎರಡು ಫೋಟೊ ಶೇರ್ ಆಗಿದ್ದು, ಅಭಿಮಾನಿಗಳೇ ಕ್ರಿಯೇಟಿವ್ ಆಗಿ ಈ ಪ್ರಚಾರದಲ್ಲಿ ಭಾಗವಹಿಸಿದ್ರು. ಅವರೇ ಪಿಕ್ ಮಾಡಿ, ಕರ್ನಾಟಕದ ಎಲ್ಲಾ ಕಡೆಯಿಂದ ಅವರೇ ಬರೆದು ಪೋಸ್ಟ್ ಮಾಡಲು ಶುರುಮಾಡಿದ್ರು. ಅವರದ್ದೇ ಸಿನಿಮಾವನ್ನು ಪ್ರಮೋಷನ್ ಮಾಡುವಂತೆ ಭಾಗವಹಿಸಲು ಶುರುಮಾಡಿದ್ರು. ತುಂಬಾ ಖುಷಿ ಕೊಟ್ಟಿದೆ"

    ಪ್ರೇಕ್ಷಕರೇ ಪ್ರಚಾರಕ್ಕೆ ಇಳಿದಿರುವುದು

    ಪ್ರೇಕ್ಷಕರೇ ಪ್ರಚಾರಕ್ಕೆ ಇಳಿದಿರುವುದು

    ಪ್ರಶ್ನೆ: ನಿಮ್ಮ ಸಿನಿಮಾವನ್ನು ಜನರೇ ಹೆಗಲ ಮೇಲೆತ್ತುಕೊಂಡು ಹೋಗ್ತಿದ್ದಾರಲ್ಲಾ ಏನಂತಿರಾ?

    "83 ಅಂತ ಸಿನಿಮಾ ರಿಲೀಸ್ ಆಗ್ತಿದೆ. ತೆಲುಗಿನಲ್ಲಿ ಶ್ಯಾಮ್ ಸಿಂಘ ರಾಯ್ ರಿಲೀಸ್ ಆಗುತ್ತಿದೆ. ಇದರ ಮಧ್ಯೆ ನಾನು ದುಡಿದಿದ್ದು ಎಲ್ಲವನ್ನೂ ಹಾಕಿ ಸಿನಿಮಾ ಮಾಡಿದ್ದೇನೆ. ಆಮೇಲೆ ನಮ್ಮದೇ ಟೀಮ್. ಎಲ್ಲರೂ ಕಷ್ಟ ಪಟ್ಟು ಬಂದಿರುವಂತಹ ಬಡವ ರಾಸ್ಕಲ್‌ಗಳೆಲ್ಲಾ ಸೇರಿಕೊಂಡು ಮಾಡಿರುವಂತಹ ಸಿನಿಮಾ. ಇದನ್ನು ದೊಡ್ಡ ದೊಡ್ಡ ಸಿನಿಮಾಗಳ ಜೊತೆ ಪೈಪೋಟಿ ಮಾಡುವುದು ತುಂಬಾನೇ ಕಷ್ಟವಿದೆ. ಆದರೆ, ಪ್ರೇಕ್ಷಕರೇ ಪ್ರಚಾರಕ್ಕೆ ಇಳಿದಿರುವುದು ತುಂಬಾನೇ ಖುಷಿ."

    ದೊಡ್ಡ ದೊಡ್ಡ ಸಿನಿಮಾಗಳು ಇದ್ದೇ ಇದೆ

    ದೊಡ್ಡ ದೊಡ್ಡ ಸಿನಿಮಾಗಳು ಇದ್ದೇ ಇದೆ

    ಪ್ರಶ್ನೆ: ನೀವೇ ಹೇಳಿದ್ರಿ, ಇಷ್ಟೊಂದು ಕಾಂಪಿಟೇಷನ್ ಇರುವಾಗ ಡಿಸೆಂಬರ್ 24ಕ್ಕೆ ಯಾಕೆ?

    "ಈಗ ಕರ್ನಾಟಕದಲ್ಲಿ ನಮ್ಮ ಸಿನಿಮಾಗಳೇ ಜಾಸ್ತಿ ಇದ್ದು, ನಮಗೆ ಅಪೋಸಿಟ್ ಆಗಿ ತುಂಬಾ ಸಿನಿಮಾಗಳು ಬರುತ್ತಿದ್ದರೆ ಅದು ತಪ್ಪು ಅನ್ನಬಹುದು. ಆದರೆ, ಇಲ್ಲಿ ಬೇರೆ ಭಾಷೆಯ ಸಿನಿಮಾಗಳಿವೆ ಅಂತ ನಮ್ಮ ಭಾಷೆಯ ಸಿನಿಮಾ ರಿಲೀಸ್ ಮಾಡಲ್ಲ ಅನ್ನೋದು ಇದ್ಯಲ್ಲಾ ಅದು ಸರಿಯಲ್ಲ. ಇನ್ನು ಡಿಸೆಂಬರ್ 24 ಒಳ್ಳೆ ವಾರ ಕೂಡ. ರಜೆಗಳಿರುವ ವಾರ. ಇನ್ನು ಎರಡು ವಾರಕ್ಕೆ RRR ಇದೆ. ದೊಡ್ಡ ದೊಡ್ಡ ಸಿನಿಮಾಗಳು ಇದ್ದೇ ಇದೆ. ಇದರ ಮಧ್ಯೆ ಎರಡು ವರ್ಷದ ಹಿಂದೆ ಶುರುಮಾಡಿದ್ದ ನಮ್ಮ ಸಿನಿಮಾವನ್ನು ಕೊವಿಡ್‌ ಇಂದ ಮುಂದಕ್ಕೆ ಹಾಕಿ ಈಗ ರಿಲೀಸ್‌ಗೆ ಬಂದು ನಿಂತಿದೆ. ಇನ್ನುಮುಂದಕ್ಕೆ ತಳ್ಳಲು ಆಗಲ್ಲ. ಅದು ರಿಲೀಸ್ ವೀಕ್. ಎಲ್ಲಕ್ಕಿಂತ ಹೆಚ್ಚಾಗಿ ಬೇರೆ ಭಾಷೆ ಸಿನಿಮಾ ಬರ್ತಿದೆ ಅಂತ ಹೆದರುವುದರಲ್ಲಿ ಅರ್ಥವಿಲ್ಲ."

    ನಾವು ಸಿನಿಮಾ ರಿಲೀಸ್ ಮಾಡುತ್ತಿದ್ದೇವೆ

    ನಾವು ಸಿನಿಮಾ ರಿಲೀಸ್ ಮಾಡುತ್ತಿದ್ದೇವೆ

    ಪ್ರಶ್ನೆ: ಆದರೂ ಕಾಂಪಿಟೇಷನ್ ಅಂತ ಬಂದಾಗ ಕಾನ್ಪಿಡೆನ್ಸ್ ಇರಲೇ ಬೇಕಲ್ಲವೇ?

    "ಮಧ್ಯಮ ವರ್ಗದ ರತ್ನಾಕರನ ಕಥೆಯನ್ನು ಇಟ್ಕೊಂಡು ಹೇಗೆ ಸಿನಿಮಾ ಮಾಡಿದ್ದೆವೋ ಹಾಗೇ ಇಲ್ಲಿ ಕೂಡ ಮಧ್ಯ ವರ್ಗದ ಕಥೆಯಿದೆ. ಮಧ್ಯಮ ವರ್ಗದ ಹುಡುಗನ ಬದುಕು,ಇಲ್ಲೂ ತಂದೆ-ತಾಯಿ ಮೌಲ್ಯಗಳು ಇವೆ. ನಮ್ಮ ಕತೆ, ನಮ್ಮ ಸಿನಿಮಾ ಬಗ್ಗೆ ನಾವು ಕಾನ್ಫಿಡೆಂಟ್ ಆಗಿ ಇದ್ದೇವೆ. ಎಲ್ಲರಿಗೂ ಈ ಸಿನಿಮಾ ಕನೆಕ್ಟ್ ಆಗುತ್ತೆ. ನಮ್ದು ಬೇರೆ ತರಹದ ಸಿನಿಮಾ. ನಾವು ಬರಲೇ ಬೇಕು. ನಾವು ಸಿನಿಮಾ ರಿಲೀಸ್ ಮಾಡುತ್ತಿದ್ದೇವೆ."

    ತುಂಬಾ ಚೆನ್ನಾಗಿ ಸ್ವೀಕರಿಸಿದ್ದಾರೆ

    ತುಂಬಾ ಚೆನ್ನಾಗಿ ಸ್ವೀಕರಿಸಿದ್ದಾರೆ

    ಪ್ರಶ್ನೆ:ಬಡವ ರಾಸ್ಕಲ್ ಹಾಡುಗಳನ್ನು ನೀವೆ ಬರೆದಿದ್ದೀರಿ.. ಹೇಗಿದೆ ರೆಸ್ಪಾನ್ಸ್?

    "ಉಡುಪಿ ಹೊಟೇಲ್ ನಾನೇ ಬರೆದಿರುವ ಸಾಂಗ್, ಆಗಾಗ ನೆನಪಾಗುತ್ತಾಳೆ ಕೂಡ ನಾನೇ ಬರೆದಿರುವ ಹಾಡು. ಎರಡನ್ನೂ ಅಷ್ಟೇ ಚೆನ್ನಾಗಿ ರಿಸೀವ್ ಮಾಡಿಕೊಂಡಿದ್ದಾರೆ. ಆಮೇಲೆ ಆರ್ಗಾನಿಕ್ ವೀವ್ಸ್ ಬಂದಿರೋದು. ನಾವು ಎಲ್ಲೂ ಪ್ರಮೋಟ್ ಮಾಡಲು ಹೋಗಿಲ್ಲ.ನಮ್ದು 50 ಮಿಲಿಯನ್ , 100 ಮಿಲಿಯನ್ ಎಲ್ಲಾ ಇಲ್ಲ. ಯಾರು ನೋಡಬೇಕೋ ಅವರು ನೋಡಿದ್ದಾರೆ. ತುಂಬಾ ಚೆನ್ನಾಗಿ ಸ್ವೀಕರಿಸಿದ್ದಾರೆ. ವಾಸುಕಿ ವೈಭವ್ ಒಂದು ವೇದಿಕೆ ಮೇಲೆ ಉಡುಪಿ ಹೋಟೆಲ್ ಸಾಂಗ್ ಶುರು ಮಾಡಿದ್ರೆ, ಎಲ್ಲಾ ಸಾಲುಗಳನ್ನು ಪ್ರೇಕ್ಷಕರೇ ಹಾಡುತ್ತಿದ್ದರು. ಆ ಮಟ್ಟಕ್ಕೆ ಹಾಡುಗಳು ರೀಚ್ ಆಗಿವೆ."

    ಇಲ್ಲಿ ತಂದೆ-ತಾಯಿ ಎಲ್ಲರೂ ಇರ್ತಾರೆ

    ಇಲ್ಲಿ ತಂದೆ-ತಾಯಿ ಎಲ್ಲರೂ ಇರ್ತಾರೆ

    ಪ್ರಶ್ನೆ: ಬಡವ ರಾಸ್ಕಲ್ ನಿಮ್ಮ ರತ್ನನ್ ಪ್ರಪಂಚದಷ್ಟೇ ಭಾವನಾತ್ಮಕವಾಗಿ ಇರುತ್ತಾ?

    ರತ್ನನ್ ಪ್ರಪಂಚದಲ್ಲಿ ಒಬ್ಬ ತಾಯಿಯನ್ನು ಇಟ್ಕೊಂಡು ಮಾತಾಡಿದ್ವಿ. ಇಲ್ಲಿ ತಂದೆ-ತಾಯಿ ಎಲ್ಲರೂ ಇರ್ತಾರೆ. ಅಲ್ಲಿ ರತ್ನಾಕರ ಒಬ್ಬ ಡಿಸ್ಟರ್ಬ್ ಆಗಿರುವಂತಹ ಕ್ಯಾರೆಕ್ಟರ್ ಅದು. ಅವರ ಜರ್ನಿ ಎಲ್ಲವೂ ಇದೆ. ಆದರೆ ಇಲ್ಲಿ, ಎಲ್ಲರ ಬದುಕಿನಲ್ಲೂ ಒಂದು ಹಂತ ಅಂತ ಇರುತ್ತೆ. ಶಿಕ್ಷಣ ಮುಗಿಸಿದ ಹುಡುಗನಿಗೆ ತುಂಬಾ ಗೊಂದಲಗಳಿರುತ್ತೆ. ಕಷ್ಟಗಳಿರುತ್ತೆ. ಏನೇನೋ ಕಳೆದುಕೊಳ್ಳುತ್ತೇವೆ. ತುಂಬಾ ಕಲಿತು ಕೊಳ್ಳುತ್ತೇವೆ. ಆ ಹಂತದಲ್ಲಿ ನಡೆಯುವ ಕಥೆಯೇ ಬಡವ ರಾಸ್ಕಲ್. ಅಂದರೆ, ಸಣ್ಣದಾಗಿ ದಾರಿ ತಪ್ಪಿರುವ ಹುಡುಗನ ಕಥೆ ಅಂತ ಹೇಳಬಹುದು."

    ಖಂಡಿತಾ ಬಡವ ರಾಸ್ಕಲ್ ಅಂತ ಹೇಳ್ಬಹುದು

    ಖಂಡಿತಾ ಬಡವ ರಾಸ್ಕಲ್ ಅಂತ ಹೇಳ್ಬಹುದು

    ಪ್ರಶ್ನೆ: ಧನಂಜಯ್ ಬರೀ ರೌಡಿಸಂ ಸಿನಿಮಾ ಮಾಡುತ್ತಾರೆ ಅಂತ ನಿಮ್ಮ ಮೇಲೆ ಆರೋಪವಿದೆ. ಈ ಬಗ್ಗೆ ಏನು ಹೇಳುತ್ತೀರಾ?

    "ರತ್ನನ್ ಪ್ರಪಂಚ ಸಿನಿಮಾಗಿಂತ ಮುನ್ನ ನನ್ನ ಮೇಲೊಂದು ದೂರಿತ್ತು. ಬರೀ ರೌಡಿಸಂ ಸಿನಿಮಾ ಮಾಡ್ತಾನೆ. ಸಮಾಜಕ್ಕೆ ಏನ್ ಹೇಳ್ತಾನೆ ಅಂತ. ಬಡವ ರಾಸ್ಕಲ್‌ನಲ್ಲಿ ಸಮಾಜಕ್ಕೆ ಅಥವಾ ಸಣ್ಣದಾಗಿ ದಾರಿ ತಪ್ಪಿರುವ ಎಲ್ಲಾ ಹುಡುಗರಿಗೂ ಒಳ್ಳೆಯ ಮೌಲ್ಯಗಳನ್ನು ಹೇಳುತ್ತೇನೆ. ರತ್ನಾಕರ ಅಂದರೋ ಖಂಡಿತಾ ಬಡವ ರಾಸ್ಕಲ್ ಅಂತ ಹೇಳ್ಬಹುದು."

    English summary
    Daali Dhanajay Interview about his new movie badava rascal. He spoke about film story, promotion, rowdism character and many more.
    Saturday, December 4, 2021, 14:49
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X