»   » 'ದಳಪತಿ' ಆಗಮನಕ್ಕೆ ಕೂಡಿ ಬಂತು ಸಮಯ

'ದಳಪತಿ' ಆಗಮನಕ್ಕೆ ಕೂಡಿ ಬಂತು ಸಮಯ

Posted By:
Subscribe to Filmibeat Kannada

ನಾಲ್ಕು ವರ್ಷದ ಹಿಂದೆಯೇ ಸೆಟ್ಟೇರಿದ್ದ ದಳಪತಿ ಚಿತ್ರಕ್ಕೆ ಕಡೆಗೂ ಬಿಡುಗಡೆಯ ಭಾಗ್ಯ ಸಿಕ್ಕಿದೆ. ಕಳೆದ ಎರಡು ವರ್ಷಗಳಿಂದ ಸಿನಿಮಾ ಆಗ ರಿಲೀಸ್ ಆಗುತ್ತೆ ಈಗ ರಿಲೀಸ್ ಆಗುತ್ತೇ ಅಂತ ಸುದ್ದಿ ಆಗುತ್ತಲೇ ಇತ್ತು. ಆದರೆ ಚಿತ್ರ ಮಾತ್ರ ಬೆಳ್ಳಿ ತೆರೆ ಮೇಲೆ ಬಂದಿರಲಿಲ್ಲ. ಕಾತುರದಿಂದ ಕಾದಿದ್ದ ಅಭಿಮಾನಿಗಳಿಗೆ ನಿರ್ದೇಶಕ ಪ್ರಶಾಂತ್ ರಾಜ್ ಸಿಹಿ ಸುದ್ದಿ ನೀಡಿದ್ದಾರೆ.

ಕ್ರಿಸ್ ಮಸ್ ಹಬ್ಬದ ಸಂಭ್ರಮದಲ್ಲಿ 'ಡಿ-ಬಾಸ್' ಅಂಡ್ ಟೀಮ್

ಏರ್ಪಿಲ್ 13 ರಂದು ದಳಪತಿ ಸಿನಿಮಾ ಬಿಡುಗಡೆ ಆಗಲಿದೆ ಎಂದು ನಿರ್ದೇಶಕ ಪ್ರಶಾಂತ್ ರಾಜ್ ಘೋಷಣೆ ಮಾಡಿದ್ದಾರೆ. ಜಯಣ್ಣ ಕಂಬೈನ್ಸ್ ದಳಪತಿ ಚಿತ್ರದ ವಿತರಣೆ ಹಕ್ಕನ್ನು ಖರೀದಿ ಮಾಡಿದ್ದು. ಚಿತ್ರದಲ್ಲಿ ನೆನಪಿರಲಿ ಪ್ರೇಮ್ ಹಾಗೂ ಕೃತಿ ಅಭಿನಯಿಸಿದ್ದಾರೆ.

Dalapathi movie is going to be released April 13

ದಳಪತಿ ಸಿನಿಮಾಗೆ ಗೋಧಿಬಣ್ಣ ಸಾದಾರಣ ಮೈಕಟ್ಟು ಚಿತ್ರ ಖ್ಯಾತಿಯ ಚರಣ್ ರಾಜ್ ಸಂಗೀತ ನಿರ್ದೇಶನ ಮಾಡಿದ್ದಾರೆ. ಸಿನಿಮಾದ ಹಾಡುಗಳು ಸುಂದವಾಗಿ ಮೂಡಿಬಂದಿದೆ. ಈಗಾಗಲೇ ಬಿಡುಗಡೆ ಆಗಿರುವ ವಿಡಿಯೋ ಸಾಂಗ್ ನೋಡಿ ಅಭಿಮಾನಿಗಳು ಚಿತ್ರವನ್ನ ನೋಡಲು ಕಾತುರರಾಗಿದ್ದಾರೆ.

Dalapathi movie is going to be released April 13

ದಳಪತಿ ಮಾಸ್, ಎಂಟರ್ಟೈನ್ಮೆಂಟ್, ಲವ್ ಸ್ಟೋರಿ ಇರುವ ಚಿತ್ರ, ಪ್ರೇಮ್ ಹಾಗೂ ಕೃತಿ ಇದೇ ಮೊದಲ ಬಾರಿಗೆ ಒಟ್ಟಿಗೆ ಅಭಿನಯಿಸಿದ್ದು ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆಗಳಿತ್ತು. ಕಾರಣಾಂತರಗಳಿಂದ ಬಿಡುಗಡೆ ತಡವಾಗಿದ್ದು ಲೇಟ್ ಆಗಿ ಬಂದರು ಲೇಟೆಸ್ಟ್ ಆಗಿಯೇ ಬರುತ್ತಿದ್ದೇವೆ ಎನ್ನುವುದು ಚಿತ್ರತಂಡದ ಅಭಿಪ್ರಾಯ. ಒಟ್ಟಾರೆ ಏರ್ಪಿಲ್ ಎರಡನೇ ವಾರ ಸಿನಿಮಾ ಅಭಿಮಾನಿಗಳು ದಳಪತಿ ಚಿತ್ರವನ್ನ ನೋಡಿ ಎಂಜಾಯ್ ಮಾಡಬಹುದು.

English summary
Kannada Dalapathi movie is going to be released April 13, Nenapirali Prem and Kriti kharbanda acting in the film, prashanth raj is directing the movie

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X