ದಂಡುಪಾಳ್ಯ, ದಂಡುಪಾಳ್ಯ-2 ಚಿತ್ರದ ನಂತರ ಈಗ ದಂಡುಪಾಳ್ಯ-3 ಸಿನಿಮಾ ಬಿಡುಗಡೆಗೆ ಸಿದ್ದವಾಗಿದೆ. ಈಗಾಗಲೇ ಟ್ರೈಲರ್ ಬಿಡುಗಡೆ ಮಾಡಿರುವ ಮೂರನೆ ಭಾಗ ಜನವರಿ ತಿಂಗಳಿನಲ್ಲಿ ತೆರೆಮೇಲೆ ಬರ್ತಿದೆ.
ಡಿಸೆಂಬರ್ ಅಂತ್ಯಕ್ಕೆ ತೆರೆಕಾಣುತ್ತೆ ಎನ್ನಲಾಗಿದ್ದ ದಂಡುಪಾಳ್ಯ-3 ಸಿನಿಮಾ ಜನವರಿ 19 ರಂದು ಬಿಗ್ ಸ್ಕ್ರೀನ್ ಮೇಲೆ ಅಬ್ಬರಿಸಲಿದೆ. ಮೊದಲ ಭಾಗದಲ್ಲಿ ದಂಡುಪಾಳ್ಯ ಹಂತಕರ ಕ್ರೌರ್ಯ, ರಕ್ತಪಾತ ತೋರಿಸಿದ್ದ ನಿರ್ದೇಶಕರು ಎರಡನೇ ಭಾಗದಲ್ಲಿ 'ದಂಡುಪಾಳ್ಯ' ಹಂತಕರು ಅಮಾಯಕರು, ಅಸಹಾಯಕರು, ಏನು ತಪ್ಪು ಮಾಡಿಲ್ಲ ಎಂದು ಬಿಂಬಿಸಿದ್ದರು. ಇದೀಗ, ಕಥೆಗೆ ಅಂತ್ಯ ಇದಾಗಿದ್ದು, ಯಾವ ರೀತಿಯ ಕ್ಲೈಮ್ಯಾಕ್ಸ್ ಮಾಡಬಹುದು ಎಂಬ ಕುತೂಹಲ ಹೆಚ್ಚಾಗಿದೆ.
ಟ್ರೈಲರ್: ಕ್ರೌರ್ಯದ ಪ್ರತಿರೂಪವಾಗಿ ಬರ್ತಿದೆ 'ದಂಡುಪಾಳ್ಯ-3'
ನಟಿ ಪೂಜಾ ಗಾಂಧಿ, ರವಿಕಾಳೆ, ಮಕರಂದ್ ದೇಶಪಾಂಡೆ, ರವಿಶಂಕರ್, ಸಂಜನಾ, ಶ್ರುತಿ, ಸೇರಿದಂತೆ ಹಲವರು ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿದ್ದಾರೆ. ಶ್ರೀನಿವಾಸು ರಾಜು ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು, ವೆಂಕಟ್ ನಿರ್ಮಾಣ ಮಾಡಿದ್ದಾರೆ.
ದಂಡುಪಾಳ್ಯ ಮೊದಲ ಭಾಗ 2012ರಲ್ಲಿ ತೆರೆಕಂಡಿತ್ತು. 2017ರ ಜುಲೈ 14 ರಂದು ದಂಡುಪಾಳ್ಯ-2 ಸಿನಿಮಾ ಬಿಡುಗಡೆಯಾಗಿತ್ತು. ಇವರೆಡು ಚಿತ್ರಗಳಲ್ಲಿಯೂ ಪೂಜಾ ಗಾಂಧಿ ಮುಖ್ಯ ಪಾತ್ರವನ್ನ ನಿರ್ವಹಿಸಿದ್ದರು.
ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ | Subscribe to Kannada Filmibeat.