»   » 2000 ಕೋಟಿ ಗಳಿಸಿದ 'ದಂಗಲ್': ಸಾರ್ವಕಾಲಿಕ ದಾಖಲೆ ಬರೆದ ಅಮೀರ್

2000 ಕೋಟಿ ಗಳಿಸಿದ 'ದಂಗಲ್': ಸಾರ್ವಕಾಲಿಕ ದಾಖಲೆ ಬರೆದ ಅಮೀರ್

Posted By:
Subscribe to Filmibeat Kannada

ಅಮೀರ್ ಖಾನ್ ಅಭಿನಯದ 'ದಂಗಲ್' ಸಿನಿಮಾ ಈಗ ಇಡೀ ಭಾರತ ಚಿತ್ರರಂಗದಲ್ಲೇ ದೊಡ್ಡ ದಾಖಲೆಯನ್ನು ನಿರ್ಮಿಸಿದೆ. 'ದಂಗಲ್' ದಾಖಲೆಯನ್ನು ಕೇಳಿದರೆ ಎಲ್ಲರೂ ಒಂದು ಕ್ಷಣ ಬೆರಗಾಗುತ್ತಾರೆ. ಯಾಕಂದ್ರೆ 'ದಂಗಲ್' ಈಗ ಬಾಕ್ಸ್ ಆಫೀಸ್ ನಲ್ಲಿ 2000 ಕೋಟಿ ಕಲೆಕ್ಷನ್ ಮಾಡಿದೆ.

'ಬಾಹುಬಲಿ 2' ಮತ್ತು 'ದಂಗಲ್' ಸಿನಿಮಾದ ಬಾಕ್ಸ್ ಆಫೀಸ್ ಫೈಟ್ ಜೋರಾಗಿತ್ತು. ಒಮ್ಮೆ 'ದಂಗಲ್' ದಾಖಲೆಯನ್ನು 'ಬಾಹುಬಲಿ 2' ಹಿಂದೆ ಹಾಕಿದ್ದರೆ, ಇನ್ನೊಮ್ಮೆ 'ಬಾಹುಬಲಿ 2' ಚಿತ್ರವನ್ನು 'ದಂಗಲ್' ಮೀರಿಸುತಿತ್ತು. ಆದರೆ, ಈಗ ಅಮೀರ್ 'ದಂಗಲ್' ಯಾವ ಸಿನಿಮಾದ ಕೈಗೂ ಸಿಗದ ಮಟ್ಟಿಗೆ ಮುಂದೆ ಹೋಗಿದೆ.

ವರ್ಲ್ಡ್ ವೈಡ್ 5ನೇ ಸ್ಥಾನ ಪಡೆದ ಅಮೀರ್ ಖಾನ್ 'ದಂಗಲ್'

ಸದ್ಯ 2000 ಕೋಟಿ ಗಳಿಸಿರುವ 'ದಂಗಲ್' ಸಿನಿಮಾದ ಮೂಲಕ ಅಮೀರ್ ಖಾನ್ ಭಾರತ ಚಿತ್ರರಂಗದ ಸಾಮ್ರಾಟ ಎಂಬುದು ಸಾಬೀತು ಆಗಿದೆ. ಮುಂದೆ ಓದಿ..

2000 ಕೋಟಿ ಗಳಿಸಿದ 'ದಂಗಲ್'

'ದಂಗಲ್' ಸಿನಿಮಾ ಈಗ 2000 ಕೋಟಿ ಗಳಿಸಿದೆ. ಈ ಮೂಲಕ ಭಾರತದ ಅತಿ ಹೆಚ್ಚು ಗಳಿಕೆ ಮಾಡಿರುವ ಸಿನಿಮಾ 'ದಂಗಲ್' ಎಂಬ ಹೆಗ್ಗಳಿಕೆ ಪಡೆದಿದೆ. 'ಬಾಹುಬಲಿ 2' ಸಿನಿಮಾ ಸದ್ಯ 1725 ಕೋಟಿ ಗಳಿಸಿ ಎರಡನೇ ಸ್ಥಾನದಲ್ಲಿದೆ.

ಅಮೀರ್ ಖಾನ್ 'ಹಿಸ್ಟರಿ'

ಇಂಡಿಯನ್ ಸಿನಿಮಾದ ಬಾಕ್ಸ್ ಆಫೀಸ್ ಕಿಂಗ್ 'ಅಮೀರ್ ಖಾನ್'. ಯಾಕಂದ್ರೆ, ಅತಿ ಹೆಚ್ಚು ಗಳಿಕೆ ಮಾಡಿರುವ ಭಾರತದ ಸಿನಿಮಾಗಳ ಟಾಪ್ 10 ಪಟ್ಟಿಯಲ್ಲಿ ಅಮೀರ್ ಖಾನ್ ನಟಿಸಿರುವ 3 ಸಿನಿಮಾಗಳೆ ಇವೆ.

ಪ್ರಭಾಸ್ ಮತ್ತು ಅಮೀರ್ ನಡುವೆ ಮೆಗಾಫೈಟ್.! ಭಾರತದ ನಂ.1 ನಟ ಯಾರು?

'ಪಿಕೆ' ಗಳಿಸಿದ್ದು 792 ಕೋಟಿ

'ಅಮೀರ್ ಖಾನ್' ನಟನೆಯಲ್ಲಿ ಬಂದ 'ಪಿ.ಕೆ' ಸಿನಿಮಾ 792 ಕೋಟಿ ಗಳಿಸಿ ಭಾರತದಲ್ಲಿಯೇ ಅತಿ ಹೆಚ್ಚು ಗಳಿಕೆ ಮಾಡಿದ ಸಿನಿಮಾವಾಗಿತ್ತು. ನಂತರ ಆ ದಾಖಲೆಯನ್ನು 'ಬಾಹುಬಲಿ 2' ಮುರಿದಿದ್ದು, 'ಪಿ.ಕೆ' ಚಿತ್ರ ಈಗ ಮೂರನೇ ಸ್ಥಾನಕ್ಕೆ ಇಳಿದಿದೆ

'ಧೂಮ್-3' ದೊಚ್ಚಿದ್ದು 585 ಕೋಟಿ

ಅಮೀರ್ ಖಾನ್ ನಟನೆಯ 'ಧೂಮ್ 3' ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ 585 ಕೋಟಿ ಗಳಿಸಿದ್ದು, ಭಾರತದ 6ನೇ ಅತಿ ದೊಡ್ಡ ಸಿನಿಮಾವಾಗಿದೆ.

'ದಂಗಲ್' ಚಿತ್ರದ ಬಗ್ಗೆ

'ದಂಗಲ್' ಸಿನಿಮಾ ಅಮೀರ್ ಖಾನ್ ವೃತ್ತಿ ಜೀವನದಲ್ಲಿ ದೊಡ್ಡ ಮಟ್ಟದ ಹೆಸರು ಹಣ ಎರಡನ್ನೂ ತಂದು ಕೊಟ್ಟ ಸಿನಿಮಾ. ನಿತೀಶ್ ತಿವಾರಿ ನಿರ್ದೇಶನ ಮಾಡಿರುವ ಈ ಸಿನಿಮಾ ಶ್ರೇಷ್ಟ ಕುಸ್ತಿಪಟು ಮಹಾವೀರ್ ಸಿಂಗ್ ಫೋಗಾಟ್ ಅವರ ಜೀವನ ಚರಿತ್ರೆ ಆಧರಿಸಿದ ಚಿತ್ರ ಆಗಿದೆ.

English summary
Aamir Khan's 'Dangal' is the only Indian film to have made an enviable Rs. 2,000 crore worldwide.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada