For Quick Alerts
  ALLOW NOTIFICATIONS  
  For Daily Alerts

  ಕನ್ನಡಕ್ಕೆ ಡೇನಿಯಲ್ ಬಾಲಾಜಿ ಪುನರಾಗಮನ

  By Rajendra
  |
  ರಾಕಿಂಗ್ ಸ್ಟಾರ್ ಯಶ್ ಮುಖ್ಯಭೂಮಿಕೆಯಲ್ಲಿದ್ದ 'ಕಿರಾತಕ'ಚಿತ್ರದಲ್ಲಿ ಸಣ್ಣ ಪಾತ್ರ ಪೋಷಿಸಿದ್ದ ಡೇನಿಯಲ್ ಬಾಲಾಜಿ ಈಗ ಮತ್ತೊಂದು ಕನ್ನಡ ಚಿತ್ರಕ್ಕೆ ಸಹಿ ಹಾಕಿದ್ದಾರೆ. ಬೆಂ.ಕೋ. ಶ್ರೀ ಅವರ 'ಡವ್' ಚಿತ್ರದಲ್ಲಿ ಖಳನಟನಾಗಿ ಡೇನಿಯಲ್ ಪುನರಾಗಮನವಾಗುತ್ತಿದೆ.

  ಕಮಲ್ ಹಾಸನ್ ಅವರ 'ವೆಟ್ಟೈಯಾಡು ವಿಲ್ಲಯಾಡು' ಚಿತ್ರದಲ್ಲಿ ಅಭಿನಯಿಸಿರುವ ಡೇನಿಯಲ್ ಎಲ್ಲರ ಮೆಚ್ಚುಗೆ ಪಾತ್ರರಾಗಿದ್ದರು. ಈಗ ಅವರು ಪೂರ್ಣ ಪ್ರಮಾಣದ ಖಳನಟನಾಗಿ ಕನ್ನಡಕ್ಕೆ ಮತ್ತೊಮ್ಮೆ ಅಡಿಯಿಡುತ್ತಿದ್ದಾರೆ.

  ಅನೂಪ್ ಸಾರಾ ಗೋವಿಂದು ಹಾಗೂ ಅದಿತಿ ರಾವ್ ಪ್ರಮುಖ ಪಾತ್ರಗಳನ್ನು ಪೋಷಿಸುತ್ತಿರುವ 'ಡವ್' ಚಿತ್ರಕ್ಕೆ 'ಅಲೆಮಾರಿ' ಸಂತು ಆಕ್ಷನ್ ಕಟ್ ಹೇಳಿದ್ದಾರೆ. ಅರ್ಜುನ್ ಜನ್ಯಾ ಸಂಗೀತ ಹಾಗೂ ಕೆಎಸ್ ಚಂದ್ರಶೇಖರ್ ಛಾಯಾಗ್ರಹಣ ಚಿತ್ರಕ್ಕಿದೆ.

  ಡೇನಿಯಲ್ ಅಭಿನಯದ ತೆಲುಗು, ತಮಿಳು ಚಿತ್ರಗಳನ್ನು ವೀಕ್ಷಿಸಿರುವ ಚಿತ್ರದ ನಿರ್ಮಾಪಕರು ಅವರ ಅಭಿನಯಕ್ಕೆ ಬೆರಗಾಗಿ 'ಡವ್' ಚಿತ್ರದಲ್ಲಿ ಅವಕಾಶ ನೀಡಿದ್ದಾರೆ. ಡೇನಿಯಲ್ ಕೂಡ ಅವರ ಆಹ್ವಾನವನ್ನು ಸ್ವೀಕರಿಸಿದ್ದಾರೆ. ಅಂದಹಾಗೆ ಡೇನಿಯಲ್ ಅವರು ಖ್ಯಾತ ನಿರ್ದೇಶಕ ಸಿದ್ದಲಿಂಗಯ್ಯ ಅವರ ದೂರದ ಸಂಬಂಧಿಯೂ ಹೌದು.

  ಕನ್ನಡದ ಯಾವುದೇ ಚಿತ್ರಗಳನ್ನು ಒಪ್ಪಿಕೊಳ್ಳುವ ಮುನ್ನ ಸಿದ್ದಲಿಂಗಯ್ಯ ಅವರ ಸಲಹೆ ಸೂಚನೆಗಳನ್ನು ಕೇಳುತ್ತಿದ್ದರಂತೆ. ಹೊಸ ಪ್ರತಿಭೆಗಳಿಗೆ, ಹೊಸಬರಿಗೆ ಕನ್ನಡ ಚಿತ್ರರಂಗ ಸದಾ ಬಾಗಿಲು ತೆರೆದೆ ಇರುತ್ತದೆ ಎನ್ನುತ್ತಾರೆ ಡೇನಿಯಲ್.

  ತೆಲುಗು, ತಮಿಳು ಹಾಗೂ ಮಲಯಾಳಂ ಚಿತ್ರಗಳಲ್ಲಿ ಡೇನಿಯಲ್ ಗುರುತಿಸಿಕೊಂಡಿದ್ದರೂ ಕನ್ನಡವನ್ನು ನಿರರ್ಗಳವಾಗಿ ಮಾತನಾಡುತ್ತಾರೆ. ಹಾಗಾಗಿ 'ಡವ್' ಚಿತ್ರಕ್ಕೆ ಅವರೇ ಡಬ್ಬಿಂಗ್ ಹೇಳುತ್ತಿರುವುದು ವಿಶೇಷ. (ಏಜೆನ್ಸೀಸ್)

  English summary
  South Indian actor Daniel Balaji re-enters into Sandalwood films. The actor has signed BK Srinivas’s Dove, which will have actors Anoop Sa Ra Govindu and Aditi Rao in lead roles. Earlier Daniel played as small role in 'Kirataka'.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X