Just In
Don't Miss!
- News
ಅಸ್ಸಾಂ ಚುನಾವಣಾಪೂರ್ವ ಸಮೀಕ್ಷೆ: ಕಷ್ಟಪಟ್ಟು ಅಧಿಕಾರಕ್ಕೆ ಬರಲಿದೆ ಬಿಜೆಪಿ
- Education
Bangalore Rural Zilla Panchayat Recruitment 2021: 9 ತಾಂತ್ರಿಕ ಸಿಬ್ಬಂದಿ ಹುದ್ದೆಗಳಿಗೆ ಅರ್ಜಿ ಆಹ್ವಾನ
- Sports
ಪಂಜಾಬ್ನಲ್ಲಿ ಐಪಿಎಲ್ ಪಂದ್ಯಗಳೇಕಿಲ್ಲ?: ಬಿಸಿಸಿಐಗೆ ಬಿಸಿ ಮುಟ್ಟಿಸಿ ಪತ್ರ!
- Automobiles
ಟೊಯೊಟಾ ಕಾರುಗಳ ಖರೀದಿ ಮೇಲೆ ಮಾರ್ಚ್ ಅವಧಿಯ ಆಫರ್ ಘೋಷಣೆ
- Lifestyle
ಶಿವರಾತ್ರಿಗೆ ಉಪವಾಸ ಮಾಡುವವರು ಪಾಲಿಸಲೇಬೇಕಾದ ವ್ರತದ ನಿಯಮಗಳಿವು
- Finance
ಎಲ್ಪಿಜಿ ಸಿಲಿಂಡರ್ ಬೆಲೆ 7 ವರ್ಷದಲ್ಲಿ ದುಪ್ಪಟ್ಟು ಏರಿಕೆ: ತೈಲದ ಮೇಲಿನ ತೆರಿಗೆ ಸಂಗ್ರಹ 459% ಹೆಚ್ಚಳ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಶಿವಣ್ಣನಿಗೆ ಕೃಷ್ಣ-ಮಿಲನಾ ಜೋಡಿಯ ಮದುವೆ ಆಮಂತ್ರಣ- ಡಿ ಬಾಸ್ ಗೆ ಯಾವಾಗ ಕೊಡ್ತೀರಾ ಎನ್ನುತ್ತಿದ್ದಾರೆ ಅಭಿಮಾನಿಗಳು
ಸ್ಯಾಂಡಲ್ ವುಡ್ ನ ಸುಂದರ ಜೋಡಿಗಳಲ್ಲಿ ಒಂದಾಗಿರುವ ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್ ಹಸೆಮಣೆ ಏರುವ ತಯಾರಿಯಲ್ಲಿದ್ದಾರೆ. ಈಗಾಗಲೇ ಮದುವೆ ಆಮಂತ್ರಣ ನೀಡುತ್ತಿರುವ ಈ ಜೋಡಿ ಸ್ಯಾಂಡಲ್ ವುಡ್ ನ ಅನೇಕ ಕಲಾವಿದರಿಗೆ ಮದುವೆಯ ಮಮತೆಯ ಕರೆಯೋಲೆ ಮಾಡಿದ್ದಾರೆ.
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್, ಸುದೀಪ್ ಸೇರಿದಂತೆ ಅನೇಕರಿಗೆ ಮದುವೆ ಆಮಂತ್ರಣ ಹೋಗಿದೆ. ಇತ್ತೀಚಿಗಷ್ಟೆ ರಾಕಿಂಗ್ ಸ್ಟಾರ್ ಮನೆಗೂ ತೆರಳಿ ಕೃಷ್ಣ ಮತ್ತು ಮಿಲನಾ ಮದುವೆ ಆಮಂತ್ರಣ ನೀಡಿದ್ದಾರೆ. ಇದೀಗ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮನೆಗೆ ತೆರಳಿ ಮದುವೆಗೆ ಪ್ರೀತಿಯ ಆಹ್ವಾನ ನೀಡಿದ್ದಾರೆ.
ರಾಕಿಂಗ್ ಸ್ಟಾರ್ ಯಶ್ ಗೆ ಮದುವೆ ಆಮಂತ್ರಣ ನೀಡಿದ ಕೃಷ್ಣ-ಮಿಲನಾ ಜೋಡಿ
ಶಿವಣ್ಣ ಅವರಿಗೆ ಮದುವೆಗೆ ಆಹ್ವಾನ ನೀಡುತ್ತಿರುವ ಫೋಟೋವನ್ನು ಕೃಷ್ಣ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಬಹುತೇಕ ಕಲಾವಿದರಿಗೆ ಮದುವೆಯ ಪ್ರೀತಿಯ ಆಮಂತ್ರಣ ನೀಡಿದ್ದಾರೆ. ಆದರೆ ಡಿ ಬಾಸ್ ಗೆ ಆಮಂತ್ರಣ ನೀಡುವ ಬಗ್ಗೆ ಅಭಿಮಾನಿಗಳು ಪ್ರಶ್ನೆ ಮಾಡುತ್ತಿದ್ದಾರೆ.
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಮದುವೆ ಆಮಂತ್ರಣ ಯಾವಾಗ ನೀಡುತ್ತೀರಿ ಎಂದು ಅಭಿಮಾನಿಗಳು ಕೇಳುತ್ತಿದ್ದಾರೆ. ದರ್ಶನ್ ಯಾವುದೇ ಮದುವೆ ಸಮಾರಂಭದಲ್ಲಿ ಕಾಣಿಸಿಕೊಳ್ಳುವುದಿಲ್ಲ. ಮಿಲನಾ ಮತ್ತು ಕೃಷ್ಣ ಮದುವೆಗೆ ದರ್ಶನ್ ಬರ್ತಾರಾ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಮನೆ ಮಾಡಿದೆ. ಅಲ್ಲದೆ ಮದುವೆ ಆಮಂತ್ರಣ ದರ್ಶನ್ ಕೈ ಸೇರಿದಿಯಾ, ಯಾವಾಗ ಆಹ್ವಾನ ನೀಡುತ್ತಾರೆ ಎನ್ನುವುದು ಅಭಿಮಾನಿಗಳ ಸದ್ಯದ ಕುತೂಹಲ.
ಅಂದಹಾಗೆ ಕೃಷ್ಣ ಮತ್ತು ಮಿಲನಾ ಜೋಡಿ ಫೆಬ್ರವರಿ 14 ಪ್ರೇಮಿಗಳ ದಿನಾಚರಣೆ ದಿನ ಹಸೆಮಣೆ ಏರುತ್ತಿದ್ದಾರೆ. ಈಗಾಗಲೇ ಮದುವೆಗೆ ಭರ್ಜರಿ ಸಿದ್ಧತೆ ಮಾಡಿಕೊಳ್ಳುತ್ತಿರುವ ಈ ಜೋಡಿ ಸದ್ಯ ಸಿನಿಮಾದಲ್ಲೂ ಬ್ಯುಸಿಯಾಗಿದ್ದಾರೆ. ಲವ್ ಮಾಕ್ ಟೇಲ್-2 ಸಿನಿಮಾದ ಚಿತ್ರೀಕರಣ ಸಹ ನಡೆಯತ್ತಿದೆ. ಸಿನಿಮಾ ಕೆಲಸಗಳ ನಡುವೆಯೂ ವಿವಾಹ ಆಮಂತ್ರಣ ನೀಡುತ್ತಿದ್ದಾರೆ. ಚಂದನವನದ ಈ ಸುಂದರ ಜೋಡಿಯ ಮದುವೆ ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.