»   » ಅಂಬರೀಶ್, ದರ್ಶನ್ ಬೊಂಬಾಟ್ ನಿಕ್ಕರ್ ಡಾನ್ಸ್

ಅಂಬರೀಶ್, ದರ್ಶನ್ ಬೊಂಬಾಟ್ ನಿಕ್ಕರ್ ಡಾನ್ಸ್

Posted By:
Subscribe to Filmibeat Kannada

ಐಟಂ ಡಾನ್ಸ್ ಗಳ ಯುಗದಲ್ಲಿ ಇದೇನಪ್ಪಾ ಇದು ಚಡ್ಡಿ ಡಾನ್ಸ್ ಎಂದುಕೊಳ್ಳುತ್ತಿದ್ದೀರಾ. ಇಲ್ಲಿರುವ ಚಿತ್ರಗಳನ್ನು ನೋಡಿದರೆ ಇರಬಹುದೇನೋ ಎಂಬ ಅನುಮಾನ ಬರುತ್ತದೆ. ಆದರಿದು ಚಡ್ಡಿ ಡಾನ್ಸ್ ಅಲ್ಲ. ಇದು ಗಂಗ್ನಮ್ ಸ್ಟೈಲ್ ಡಾನ್ಸ್.

ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ರೆಬೆಲ್ ಸ್ಟಾರ್ ಅಂಬರೀಶ್ ಇಬ್ಬರೂ ಬುಲ್ ಬುಲ್ ಚಿತ್ರಕ್ಕಾಗಿ ಗಂಗ್ನಮ್ ಸ್ಟೈಲಲ್ಲಿ ಕುಣಿದಿದ್ದಾರೆ. ಬುಲ್ ಬುಲ್ ಚಿತ್ರದ ಹೈಲೈಟ್ ಗಳಲ್ಲಿ ಈ ಹಾಡೂ ಒಂದು.

ಈ ಹಾಡಿಗಾಗಿ ಸುಮಾರು ರು.80 ಲಕ್ಷ ಖರ್ಚು ಮಾಡಲಾಗಿದೆ. ಒಟ್ಟು ಆರು ದಿನಗಳ ಕಾಲ ಈ ಹಾಡಿನ ಚಿತ್ರೀಕರಣ ನಡೆದಿದೆ. ಅಂಬರೀಶ್, ದರ್ಶನ್ ಜೊತೆ ನೂರಕ್ಕೂ ಅಧಿಕ ನರ್ತಕರು ಅಭಿನಯಿಸಿದ್ದಾರೆ. ಹರ್ಷ ನೃತ್ಯ ನಿರ್ದೇಶನ ಈ ಹಾಡಿಗೆ.

ಕವಿರಾಜ್ ಸಾಹಿತ್ಯ, ವಿ ಹರಿಕೃಷ್ಣ ಸಂಗೀತ

ಕವಿರಾಜ್ ಅವರ ಸಾಹಿತ್ಯ ಚಿತ್ರಕ್ಕಿದ್ದು, ಅರಮನೆ ಆವರಣ, ಅಭಿಮಾನ್ ಸ್ಟುಡಿಯೋ ಹಾಗೂ ಮೀನಾಕ್ಷಿ ಮಾಲ್ ಮುಂತಾದ ಕಡೆ ಹಾಡಿನ ಚಿತ್ರೀಕರಣ ನಡೆಯಿತು. ಈ ಹಾಡಿನ ಕೆಲವು ದೃಶ್ಯಗಳನ್ನು ಸ್ಲೈಡ್ ಗಳಲ್ಲಿ ಸವಿಯಬಹುದು.

ದರ್ಶನ್ ನಿರ್ಮಾಣ ಸಂಸ್ಥೆಯ ಮೂರನೇ ಕಾಣಿಕೆ

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ನಿರ್ಮಾಣ ಸಂಸ್ಥೆಯಿಂದ ನಿರ್ಮಾಣವಾಗುತ್ತಿರುವ ಮೂರನೇ ಚಿತ್ರವಿದು. ತೂಗುದೀಪ ಪ್ರೊಡಕ್ಷನ್ಸ್ ನಿರ್ಮಾಪಕರಾದ ಮೀನಾ ತೂಗುದೀಪಶ್ರೀನಿವಾಸ್ 'ಬುಲ್ ಬುಲ್' ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ದಿನಕರ್ ತೂಗುದೀಪ ನಿರ್ಮಾಣದ ಜವಾಬ್ದಾರಿ ಹೊತ್ತಿದ್ದಾರೆ. ಈ ಚಿತ್ರವನ್ನು ಎಂ.ಡಿ.ಶ್ರೀಧರ್ ನಿರ್ದೇಶಿಸುತ್ತಿದ್ದಾರೆ.

ರೀಮೇಕ್ ಆದ್ರೂ ಒಂಚೂರು ಡಿಫರೆಂಟ್

ಈ ಚಿತ್ರದ ನಾಯಕಿ ರಚಿತಾ ರಾಮ್. ತೆಲುಗು 'ಡಾರ್ಲಿಂಗ್' ಚಿತ್ರದ ರೀಮೇಕ್ ಆದ ಈ ಚಿತ್ರವನ್ನು ಕನ್ನಡದ ನೆಟಿವಿಟಿಗೆ ತಕ್ಕಂತೆ ಬದಲಿಸಿ ತೆರೆಗೆ ತರಲಾಗುತ್ತಿದೆ.

ಬುಲ್ ಬುಲ್ ತಾಂತ್ರಿಕ ಬಳಗದ ವಿವರಗಳು

ವಿ.ಹರಿಕೃಷ್ಣ `ಬುಲ್‍ಬುಲ್' ಚಿತ್ರಕ್ಕೆ ಸಂಗೀತ ನೀಡುತ್ತಿದ್ದಾರೆ. ಕವಿರಾಜ್ ಗೀತರಚನೆ ಮಾಡುವುದರೊಂದಿಗೆ ಸಂಭಾಷಣೆಯನ್ನೂ ಬರೆದಿದ್ದಾರೆ. ಖ್ಯಾತ ಛಾಯಾಗ್ರಾಹಕ ಕೃಷ್ಣಕುಮಾರ್(ಕೆ ಕೆ) ಅವರ ಛಾಯಾಗ್ರಹಣ, ಸೌಂದರರಾಜ್ ಸಂಕಲನ, ಮಲ್ಲಿಕಾರ್ಜುನ್(ಗದಗ) ಸಹನಿರ್ದೇಶನ, ರವಿವರ್ಮ ಸಾಹಸ ನಿರ್ದೇಶನ, ಈಶ್ವರಿ ಕುಮಾರ್ ಕಲಾ ನಿರ್ದೇಶನ ಹಾಗೂ ರಂಗಸ್ವಾಮಿ, ಸುಂದರರಾಜ್ ನಿರ್ಮಾಣ ನಿರ್ವಹಣೆಯಿದೆ.

ಬುಲ್ ಬುಲ್ ಪಾತ್ರವರ್ಗದಲ್ಲಿ ಯಾರ್‍ಯಾರಿದ್ದಾರೆ?

ಈ ಚಿತ್ರದ ತಾರಾಬಳಗದಲ್ಲಿ ಅಂಬರೀಶ್, ದರ್ಶನ್, ರಚಿತ ರಾಮ್, ಅಶೋಕ್, ಚಿತ್ರಾಶೆಣೈ, ಶರಣ್, ರಮೇಶ್ ಭಟ್, ಸಿಹಿಕಹಿ ಚಂದ್ರು, ಸಾಧುಕೋಕಿಲಾ, ಟೆನ್ನಿಸ್ ಕೃಷ್ಣ ಮುಂತಾದವರಿದ್ದಾರೆ.

ಇಷ್ಟಕ್ಕೂ ಚಿತ್ರದಲ್ಲಿ ಅಂಬಿ ಅವರ ಪಾತ್ರವೇನು?

ಬಲ್ಲ ಮೂಲಗಳ ಪ್ರಕಾರ, ರೆಬೆಲ್ ಸ್ಟಾರ್ ಅಂಬರೀಶ್ ಅವರು ಚಿತ್ರದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ತಂದೆಯ ಪಾತ್ರವನ್ನು ಪೋಷಿಸಲಿದ್ದಾರೆ.

ಅಂಬಿ ಜೊತೆ ದರ್ಶನ್ ಇದೇ ಮೊದಲಲ್ಲ

ಈ ಹಿಂದೆ 'ಅಣ್ಣಾವ್ರು' ಚಿತ್ರದಲ್ಲಿ ಅಂಬರೀಷ್ ಜೊತೆ ದರ್ಶನ್ ಅಭಿನಯಿಸಿದ್ದರು. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮುಖ್ಯಭೂಮಿಕೆಯಲ್ಲಿದ್ದ 'ದೇವರ ಮಗ' ಚಿತ್ರದಲ್ಲೂ ಅಂಬರೀಷ್ ಜೊತೆ ದರ್ಶನ್ ಕಾಣಿಸಿಕೊಂಡಿದ್ದರು.

ಕವಿರಾಜ್ ಸಾಹಿತ್ಯ, ಸಂಭಾಷಣೆ

ಸಾಹಿತ್ಯ ಹಾಗೂ ಸಂಭಾಷಣೆಯ ಜವಾಬ್ದಾರಿಯನ್ನು ಕವಿರಾಜ್ ಅವರು ಹೊತ್ತಿದ್ದಾರೆ. ರಚಿತಾರ ಡೈಲಾಗ್ ಡೆಲೆವರಿ ಕೂಡ ಅದ್ಭುತ ಎಂಬ ಮಾತುಗಳು ಚಿತ್ರತಂಡದಿಂದ ಕೇಳಿಬಂದಿವೆ.

English summary
Challenging star Dashan's upcoming Kannada film Bulbul latest stills. The duo performs Gangnam style dance for the film. The film directed by M. D. Shridhar. Bulbul is the remake of Telugu film Darling Darshan and Ambarish will play the lead roles in the film.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada