ಮಲೆಮಾದೇಶ್ವರ ಅರಣ್ಯದಲ್ಲಿ ದರ್ಶನ್, ಚಿಕ್ಕಣ್ಣ ಸುತ್ತಾಟ

ನಟ ದರ್ಶನ್ ಮತ್ತೆ ಕಾಡು ಸೇರಿದ್ದಾರೆ. ಕಾಡು ಸುತ್ತುವುದು, ಕಾಡುಪ್ರಾಣಿಗಳ ಚಿತ್ರ ತೆಗೆಯುವುದು ದರ್ಶನ್ ರೂಢಿಸಿಕೊಂಡಿರುವ ಹವ್ಯಾಸ.

Recommended Video

Deepika Padukone a create record in Indian film industry | Filmibeat Kannada

ದರ್ಶನ್ ಪ್ರಾಣಿ ಪ್ರೇಮದ ಬಗ್ಗೆ ಅಭಿಮಾನಿಗಳಿಗೆ ಗೊತ್ತಿರುವಂಥಹದ್ದೆ. ದರ್ಶನ್ ಪ್ರಕೃತಿ ಪ್ರೇಮಿ ಸಹ. ಕಾಡು ಪ್ರಾಣಿಗಳ ಚಿತ್ರ ತೆಗೆಯಲು ದೇಶದ ಉತ್ತಮ ಕಾಡುಗಳನ್ನು ಸುತ್ತಿತ್ತುತ್ತಾರೆ ದರ್ಶನ್. ಸ್ವಾಭಾವಿಕವಗಿ ಪ್ರಕೃತಿ ಪ್ರೇಮ ದರ್ಶನ್ ಒಳಗೆ ಮೊಳೆತಿದೆ.

ಇದೇ ಕಾರಣಕ್ಕೆ ದರ್ಶನ್ ಅವರನ್ನು ರಾಜ್ಯದ ಅರಣ್ಯ ಇಲಾಖೆ ರಾಯಭಾರಿಯನ್ನಾಗಿ ಮಾಡಿಕೊಂಡಿದೆ. ದರ್ಶನ್ ಸಹ ಪ್ರೀತಿಯಿಂದಲೇ ಗೌರವವನ್ನು ಒಪ್ಪಿಕೊಂಡಿದ್ದಾರೆ. ಇದರ ಭಾಗವಾಗಿಯೇ ದರ್ಶನ್ ಮಲೆಮಹದೇಶ್ವರ ಅರಣ್ಯ ಪ್ರದೇಶ ವ್ಯಾಪ್ತಿಗೆ ಭೇಟಿ ನೀಡಿದ್ದಾರೆ.

ದರ್ಶನ್ ಜೊತೆ ಚಿಕ್ಕಣ್ಣ ಭೇಟಿ

ದರ್ಶನ್ ಜೊತೆ ಚಿಕ್ಕಣ್ಣ ಭೇಟಿ

ದರ್ಶನ್ ಹಾಗೂ ನಟ ಚಿಕ್ಕಣ್ಣ ಅವರು ಮಲೆಮಹದೇಶ್ವರ ಅರಣ್ಯ ಪ್ರದೇಶ ವ್ಯಾಪ್ತಿಯ ದೊಡ್ಡಮಕ್ಕಳಿ ವ್ಯಾಪ್ತಿಯಲ್ಲಿರುವ ಎಪಿಸಿ ಶಿಬಿರಕ್ಕೆ ಭೇಟಿ ನೀಡಿ ಸಸಿ ನೆಟ್ಟು ಅರಣ್ಯ ಪ್ರಸ್ತಾಹ ಯೋಜನೆಗೆ ಚಾಲನೆ ನೀಡಿದ್ದಾರೆ. ದರ್ಶನ್ ಅವರೊಟ್ಟಿಗೆ ನಟ ಚಿಕ್ಕಣ್ಣ ಸಹ ಇದ್ದು, ದರ್ಶನ್ ಜೊತೆ ಕೈಜೋಡಿಸಿದ್ದಾರೆ.

ಕೆಲ ಕಾಲ ಸುತ್ತಾಟ ಸಹ ನಡೆಸಿದ್ದಾರೆ

ಕೆಲ ಕಾಲ ಸುತ್ತಾಟ ಸಹ ನಡೆಸಿದ್ದಾರೆ

ದರ್ಶನ್ ಹಾಗೂ ಚಿಕ್ಕಣ್ಣ ಅವರು ಮಲೆಮಹದೇಶ್ವರ ಅರಣ್ಯ ವ್ಯಾಪ್ತಿಯಲ್ಲಿ ಕೆಲ ಕಾಲ ಸುತ್ತಾಟ ನಡೆಸಿ ಅರಣ್ಯದ ಅನುಭವ ಸವಿದಿದ್ದಾರೆ. ಇವರೊಂದಿಗೆ ಕೆಲ ಅರಣ್ಯಾಧಿಕಾರಿಗಳು ಸಹ ಸಾಥ್ ನೀಡಿದ್ದಾರೆ.

ಫಾರೆಸ್ಟ್ ವಾಚರ್‌ಗಳೊಂದಿಗೆ ಸಂವಹನ

ಫಾರೆಸ್ಟ್ ವಾಚರ್‌ಗಳೊಂದಿಗೆ ಸಂವಹನ

ನಂತರ ದರ್ಶನ್ ಅವರು ಫಾರೆಸ್ಟ್ ವಾಚರ್‌ಗಳೊಟ್ಟಿಗೆ ಮಾತುಕತೆ ನಡೆಸಿ ಅವರಿಗೆ ಸ್ಪೂರ್ತಿ ತುಂಬವ ಕಾರ್ಯ ಮಾಡಿದ್ದಾರೆ. ಈ ಹಿಂದೆಯೂ ದರ್ಶನ್ ಅವರು ವಾಚರ್ಸ್‌ಗಳೊಟ್ಟಿಗೆ ಮಾತುಕತೆ ನಡೆಸಿದ್ದರು. ಅವರೊಂದಿಗೆ ಚಿತ್ರಗಳನ್ನು ತೆಗೆಸಿಕೊಂಡಿದ್ದರು.

ವನ್ಯಜೀವಿ ಚಿತ್ರಗಳನ್ನು ಹರಾಜು ಹಾಕುತ್ತಾರೆ

ವನ್ಯಜೀವಿ ಚಿತ್ರಗಳನ್ನು ಹರಾಜು ಹಾಕುತ್ತಾರೆ

ದರ್ಶನ್ ಅವರು ತೆಗೆದ ವನ್ಯಜೀವಿ ಚಿತ್ರಗಳನ್ನು ಹರಾಜು ಹಾಕಿ ಅದರಿಂದ ಬಂದ ಹಣವನ್ನು ಅರಣ್ಯಾಭಿವೃದ್ಧಿ ಹಾಗೂ ಇನ್ನೂ ಹಲವು ಉತ್ತಮ ಕಾರ್ಯಗಳಿಗೆ ಬಳಸಿಕೊಳ್ಳುತ್ತಾರೆ. ಚಿಕ್ಕಣ್ಣ ಅವರು ಈ ಹಿಂದೆ ದರ್ಶನ್ ತೆಗೆದ ಚಿತ್ರವನ್ನು ದೊಡ್ಡ ಮೊತ್ತಕ್ಕೆ ಖರೀದಿಸಿದ್ದರು.

More from Filmibeat

English summary
Actor Darshan and Chikkanna visited Malemadeshwara forest and participated in Forest department program.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X