»   » 'ದರ್ಶನ್ ಜೊತೆ ಸಿನಿಮಾ ಮಾಡಿ' ಎಂದವರಿಗೆ ರಾಗಿಣಿ ಕೊಟ್ಟ ಉತ್ತರ ನೋಡಿ

'ದರ್ಶನ್ ಜೊತೆ ಸಿನಿಮಾ ಮಾಡಿ' ಎಂದವರಿಗೆ ರಾಗಿಣಿ ಕೊಟ್ಟ ಉತ್ತರ ನೋಡಿ

Posted By:
Subscribe to Filmibeat Kannada

ರಾಗಿಣಿ ದ್ವಿವೇದಿ ಕನ್ನಡದ ಯಶಸ್ವಿ ನಟಿ. ಕನ್ನಡದ ಬಹುತೇಕ ಸ್ಟಾರ್ ನಟರ ಜೊತೆ ತೆರೆ ಹಂಚಿಕೊಂಡಿರುವ ಖ್ಯಾತಿ ರಾಗಿಣಿ ಅವರದ್ದು. ಅದೆನೇ ಇದ್ದರು ರಾಗಿಣಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಜೊತೆ ಇನ್ನು ಒಂದು ಸಿನಿಮಾ ಮಾಡಿಲ್ಲ ಎನ್ನುವುದು ಅವರ ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ.

ತುಪ್ಪದ ಬೆಡಗಿ ರಾಗಿಣಿ ಐಟಂ ಸಾಂಗ್ ಮಾಡಲು ಇದೇ ಕಾರಣ.!

ಶಿವಣ್ಣ, ಉಪೇಂದ್ರ, ಸುದೀಪ್, ಸೇರಿದಂತೆ ಹಲವು ನಾಯಕ ನಟರ ಜೊತೆಗೆ ರಾಗಿಣಿ ನಟಿಸಿದ್ದಾರೆ. ಆದ್ರೆ, ದರ್ಶನ್ ಜೊತೆ ನಟಿಸುವ ಭಾಗ್ಯ ರಾಗಿಣಿಗೆ ಇನ್ನು ಸಿಕ್ಕಿಲ್ಲ. ಇತ್ತ ಅಭಿಮಾನಿಗಳು ಕೂಡ ಇಬ್ಬರ ಕಾಂಬಿನೇಶನ್ ಸಿನಿಮಾಗಾಗಿ ಕಾಯುತ್ತಿದ್ದಾರೆ.

'ಫಿಲ್ಮ್ ಫೇರ್' ವೇದಿಕೆಯಲ್ಲಿ ರಾಗಿಣಿ ಧರಿಸಿದ್ದ ಡ್ರೆಸ್ ಈಗ 'ಟಾಕ್ ಆಫ್ ದಿ ಟೌನ್'

ರಾಗಿಣಿ ದ್ವಿವೇದಿ ಈಗ ದರ್ಶನ್ ಅವರ ಜೊತೆ ಸಿನಿಮಾ ಮಾಡುವ ಬಗ್ಗೆ ಒಂದು ಸಣ್ಣ ಸೂಚನೆ ನೀಡಿದ್ದಾರೆ. ಅದೇನೂ ಎಂಬ ಕುತುಹಲ ಇದ್ದರೇ ಹಾಗೆ ಮುಂದೆ ಓದಿ....

ಅಭಿಮಾನಿಯ ಆಸೆ

ನಟಿ ರಾಗಿಣಿಗೆ ದರ್ಶನ್ ಅವರ ಅಭಿಮಾನಿಯೊಬ್ಬರು ಟ್ವಿಟ್ಟರ್ ನಲ್ಲಿ 'ಮೇಡಂ ನೀವು ನಮ್ಮ ಬಾಸ್ ದರ್ಶನ್ ಜೊತೆ ಸಿನಿಮಾ ಮಾಡಿ' ಅಂತ ಕೇಳಿಕೊಂಡಿದ್ದರು.

ರಾಗಿಣಿ ಪ್ರತಿಕ್ರಿಯೆ

ವಿಶೇಷ ಅಂದ್ರೆ, ದರ್ಶನ್ ಅಭಿಮಾನಿಯ ಈ ಪ್ರಶ್ನೆಗೆ ರಾಗಿಣಿ ಪ್ರತಿಕ್ರಿಯೆ ನೀಡಿದ್ದಾರೆ. ರಾಗಿಣಿ ದ್ವಿವೇದಿ ಇದಕ್ಕೆ ಸಕರಾತ್ಮಕವಾಗಿ ಉತ್ತರಿಸಿದ್ದಾರೆ.

ಅತಿ ಶೀಘ್ರದಲ್ಲೇ...

ಅಭಿಮಾನಿಯ ಪ್ರಶ್ನೆಗೆ ರಾಗಿಣಿ 'Soon' (ಶೀಘ್ರದಲ್ಲೇ) ಅಂತ ಉತ್ತರಿಸಿದ್ದಾರೆ. ಈ ಉತ್ತರದಿಂದ ರಾಗಿಣಿ ಮತ್ತು ದರ್ಶನ್ ಅಭಿಮಾನಿಗಳಿಗೆ ಸಖತ್ ಸಂತೋಷವಾಗಿದೆ.

ದರ್ಶನ್ ಫ್ಯಾನ್ಸ್ ಆಸೆ

ರಾಗಿಣಿ ದ್ವಿವೇದಿ ಅವರ ಅಧಿಕೃತ ಟ್ವಿಟ್ಟರ್ ಖಾತೆಯನ್ನು ನೋಡಿದರೆ ಅಲ್ಲಿ ದರ್ಶನ್ ಅವರ ಅನೇಕ ಅಭಿಮಾನಿಗಳ ಟ್ವೀಟ್ ಕಾಣಿಸುತ್ತದೆ. 'ದರ್ಶನ್ ಜೊತೆ ಸಿನಿಮಾ ಮಾಡಿ' ಅಂತ ಹೇಳಿರುವ ಆ ಎಲ್ಲ ಅಭಿಮಾನಿಗಳಿಗೆ ರಾಗಿಣಿ ಪಾಸಿಟಿವ್ ಆಗಿಯೇ ಪ್ರತಿಕ್ರಿಯೆ ನೀಡಿದ್ದಾರೆ.

ರಾಗಿಣಿ ಸಿನಿಮಾಗಳು

ಬಹುತೇಕ ಸ್ಟಾರ್ ನಟರ ಜೊತೆ ನಟಿಸಿರುವ ರಾಗಿಣಿ ಸದ್ಯ ಮಹಿಳಾ ಪ್ರಧಾನ ಚಿತ್ರದಲ್ಲಿಯೇ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

English summary
Actress Ragini Dwivedi gave positive response about to do a movie with Darshan.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada