For Quick Alerts
  ALLOW NOTIFICATIONS  
  For Daily Alerts

  ಅಭಿಷೇಕ್ ಅಂಬರೀಶ್ - ಅವಿವಾ ನಿಶ್ಚಿತಾರ್ಥ: ಶುಭಕೋರಿದ ಯಶ್ ಹಾಗೂ ದರ್ಶನ್

  |

  ಚಂದನವನದಲ್ಲಿ ಇತ್ತಿಚೆಗಷ್ಟೆ ಹರಿಪ್ರಿಯಾ ಹಾಗೂ ವಸಿಷ್ಠ ಸಿಂಹ ಜೋಡಿ ನಿಶ್ಚಿತಾರ್ಥ ಮಾಡಿಕೊಂಡ ಬೆನ್ನಲ್ಲೇ ಇದೀಗ ಮತ್ತೊಬ್ಬ ನಟ ತನ್ನ ಪ್ರೇಯಸಿ ಜತೆ ಉಂಗುರ ಬದಲಿಸಿಕೊಂಡಿದ್ದಾರೆ. ಹೌದು, ಕನ್ನಡದ ದಿಗ್ಗಜ ನಟ ಅಂಬರೀಶ್ ಪುತ್ರ ಅಭಿಷೇಕ್ ಅಂಬರೀಶ್ ತಮ್ಮ ಬಹುದಿನಗಳ ಗೆಳತಿ ಅವಿವಾ ಬಿದ್ದಪ್ಪ ಅವರ ಜತೆ ಎಂಗೇಜ್‌ಮೆಂಟ್ ಮಾಡಿಕೊಂಡ ಸಂಭ್ರಮದಲ್ಲಿದ್ದಾರೆ.

  ಬೆಂಗಳೂರಿನ ಫೋರ್ ಸೀಸನ್ಸ್ ಎಂಬ ಹೊಟೇಲ್‌ನಲ್ಲಿ ಅಭಿಷೇಕ್ ಅಂಬರೀಶ್ ಹಾಗೂ ಅವಿವಾ ಬಿದ್ದಪ್ಪ ನಿಶ್ಚಿತಾರ್ಥ ಇಂದು ( ಡಿಸೆಂಬರ್ 11 ) ನಡೆದಿದ್ದು, ಎರಡೂ ಕುಟುಂಬದ ಬಂಧುಗಳ ಜತೆಗೆ ಚಿತ್ರರಂಗದ ಹಲವಾರು ನಟ - ನಟಿಯರು, ನಿರ್ದೇಶಕರು ಹಾಗೂ ನಿರ್ಮಾಪಕರು ಸೇರಿದಂತೆ ರಾಜಕೀಯ ಕ್ಷೇತ್ರದ ಹಲವು ಪ್ರಮುಖರು ಈ ಕಾರ್ಯಕ್ರಮದಲ್ಲಿ ಹಾಜರಿದ್ದರು. ಇನ್ನು ನಿಶ್ಚಿತಾರ್ಥ ಆಯೋಜನೆಯಾಗಿರುವ ಸುದ್ದಿಯನ್ನು ಆಚೆ ಬಿಟ್ಟುಕೊಡದೇ ಇದ್ದ ಕುಟುಂಬಸ್ಥರು ಆಪ್ತರಿಗೆ ಮಾತ್ರ ಆಮಂತ್ರಣವನ್ನು ನೀಡಿತ್ತು.

  ನಿಶ್ಚಿತಾರ್ಥದ ಬಳಿಕ ಬಾವಿ ಪತಿ ಹುಡುಕೊಂಡು ಹೋದ ಹರಿಪ್ರಿಯಾ: ಕಡಲ ತೀರದಲ್ಲಿ 'ಲವ್ ಲಿ' ಜೋಡಿ! ನಿಶ್ಚಿತಾರ್ಥದ ಬಳಿಕ ಬಾವಿ ಪತಿ ಹುಡುಕೊಂಡು ಹೋದ ಹರಿಪ್ರಿಯಾ: ಕಡಲ ತೀರದಲ್ಲಿ 'ಲವ್ ಲಿ' ಜೋಡಿ!

  ಈ ಕಾರ್ಯಕ್ರಮಕ್ಕೆ ಅಭಿ‍ಷೇಕ್ ಅಂಬರೀಶ್ ಪಾಲಿನ ಅಣ್ಣ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೂಡ ಆಗಮಿಸಿದ್ದರು. ಅಭಿ‍ಷೇಕ್ ಹಾಗೂ ಅವಿವಾಗೆ ಶುಭ ಕೋರಿದ ದರ್ಶನ್ ಜೋಡಿ ಜತೆ ಫೋಟೊಗೆ ಪೋಸ್ ನೀಡಿದರು. ಇನ್ನು ಯಶ್ ಹಾಗೂ ರಾಧಿಕಾ ಪಂಡಿತ್ ದಂಪತಿ ಸಹ ಈ ನಿಶ್ಚಿತಾರ್ಥ ಕಾರ್ಯಕ್ರಮಕ್ಕೆ ಆಗಮಿಸಿ ಅಭಿಷೇಕ್ ಹಾಗೂ ಅವಿವಾ ಜೋಡಿಗೆ ಶುಭ ಹಾರೈಸಿದರು.

  ಸದ್ಯ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ರಾಕಿಂಗ್ ಸ್ಟಾರ್ ಯಶ್ ಇಬ್ಬರೂ ಸಹ ಅಭಿಷೇಕ್ ಅಂಬರೀಶ್ ಹಾಗೂ ಅವಿವಾ ಬಿದ್ದಪ್ಪ ನಿಶ್ಚಿತಾರ್ಥಕ್ಕೆ ಆಗಮಿಸಿದ್ದ ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಅಗಿದ್ದು, ನೆಟ್ಟಿಗರು ಜೋಡಿಗೆ ಕಾಮೆಂಟ್ ಮಾಡುವ ಮೂಲಕ ಶುಭ ಹಾರೈಸಿದ್ದಾರೆ.

  English summary
  Darshan and Yash attended Abhishek Ambareesh engagement. Read on
  Sunday, December 11, 2022, 17:44
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X