»   » ಚಾಲೆಂಜಿಂಗ್ ಸ್ಟಾರ್ ದರ್ಶನ್ ಮೆಚ್ಚಿದ ಆ ವಿಲನ್ ಯಾರು.?

ಚಾಲೆಂಜಿಂಗ್ ಸ್ಟಾರ್ ದರ್ಶನ್ ಮೆಚ್ಚಿದ ಆ ವಿಲನ್ ಯಾರು.?

Posted By:
Subscribe to Filmibeat Kannada

ಚಾಲೆಂಜಿಂಗ್ ಸ್ಟಾರ್ ದರ್ಶನ್ ಕನ್ನಡ ಸಿನಿಮಾರಂಗದ ವಿಲನ್ ಒಬ್ಬರನ್ನ ಮೆಚ್ಚಿಕೊಂಡಿದ್ದಾರೆ. ಖಳನಾಯಕರ ಪಾತ್ರ ಚಾಲೆಂಜಿಂಗ್ ಅಂತ ನಂಬಿರುವ ದರ್ಶನ್, ಇತ್ತೀಚಿಗಷ್ಟೇ ಬಿಡುಗಡೆಯಾದ 'ಆ' ನಟನ ಸಿನಿಮಾ ನೋಡಿ ಸಖತ್ ಇಂಪ್ರೆಸ್ ಆಗಿದ್ದಾರೆ.

ಕೇವಲ ಚಿತ್ರರಂಗದಲ್ಲಿ ನಟನಾಗಿ ಮಾತ್ರವಲ್ಲದೇ, ದಾಸನಿಗೆ ಆಪ್ತ ಸ್ನೇಹಿತನಾಗಿರುವ 'ಆ' ನಟ ನಿರ್ವಹಿಸಿರುವ ಪಾತ್ರಗಳ ಬಗ್ಗೆ ಹೆಮ್ಮೆಯಿಂದ ಕೊಂಡಾಡಿದ್ದಾರೆ. ಹಾಗಾದ್ರೆ ಆ ನಟ ಯಾರು? ಆ ಕಲಾವಿದನನ್ನ ದರ್ಶನ್ ಮೆಚ್ಚಿಕೊಳ್ಳುವುದಕ್ಕೆ ಕಾರಣವೇನು.? ಮುಂದೆ ಓದಿ.....

'ಕಾಲೇಜ್ (ಶಿವ)ಕುಮಾರ'ನಿಗೆ ದರ್ಶನ್ ಕ್ಲೀನ್ ಬೋಲ್ಡ್

'ದರ್ಶನ್' ಮೆಚ್ಚಿಕೊಂಡಿರುವ ಕಲಾವಿದ ಬೇರಾರೂ ಅಲ್ಲ, ಆರುಮುಗ ರವಿಶಂಕರ್. 'ಕಾಲೇಜ್ ಕುಮಾರ' ಸಿನಿಮಾ ನೋಡಿ ರವಿಶಂಕರ್ ಅವ್ರ ಅಭಿನಯವನ್ನ ಮೆಚ್ಚಿಕೊಂಡಿರುವ ಚಾಲೆಂಜಿಂಗ್ ಸ್ಟಾರ್ ಸಿನಿಮಾ ತುಂಬಾ ಇಷ್ಟವಾಯ್ತು ಎಂದಿದ್ದಾರೆ.

ಆತ್ಮೀಯ ಸ್ನೇಹಿತ ರವಿ

ರವಿಶಂಕರ್ ಒಳ್ಳೆಯ ಕಲಾವಿದ. ಅದಕ್ಕಿಂತ ಹೆಚ್ಚಾಗಿ ನನ್ನ ಆತ್ಮೀಯ ಸ್ನೇಹಿತ. ಸಾಕಷ್ಟು ಪಾತ್ರಗಳಲ್ಲಿ ರವಿಯನ್ನ ನೋಡಿದ್ದೇನೆ ಆದ್ರೆ ಕಾಲೇಜ್ ಕುಮಾರ ಸಿನಿಮಾದಲ್ಲಿ ಮನಸ್ಸಿಗೆ ಹತ್ತಿರವಾಗುವಂತೆ ನಟಿಸಿದ್ದಾರೆ. ರವಿಶಂಕರ್ ಇಂತಹ ಪಾತ್ರಗಳಲ್ಲಿ ಮತ್ತೆ ಮತ್ತೆ ಕಾಣಿಸಿಕೊಳ್ಳಲಿ ಎಂದು ಶುಭಕೋರಿದ್ದಾರೆ ಸ್ಯಾಂಡಲ್ ವುಡ್ ನ ದಾಸ.

ಎಲ್ಲಾ ರೀತಿಯ ಪಾತ್ರಕ್ಕೂ ಸೈ

ನಿನ್ನೆಯಷ್ಟೇ 'ಕಾಲೇಜ್ ಕುಮಾರ' ಸಿನಿಮಾ ನೋಡಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್, ರವಿಶಂಕರ್ ಹಾಗೂ ಶ್ರುತಿಯವರ ಅಭಿನಯವನ್ನ ಮೆಚ್ಚಿಕೊಂಡಿದ್ದಾರೆ. ಸೆಂಟಿಮೆಂಟ್ ಪಾತ್ರಗಳಷ್ಟೇ ಅಲ್ಲದೆ ಕಾಮಿಡಿ ಪಾತ್ರವನ್ನೂ ರವಿಶಂಕರ್ ತುಂಬಾ ಚೆನ್ನಾಗಿ ನಿರ್ವಹಿಸುತ್ತಾರೆ. ರವಿಶಂಕರ್ ಇಂತಹ ಮತ್ತಷ್ಟು ಪಾತ್ರಗಳಲ್ಲಿ ಅಭಿನಯಿಸಲಿ ಎಂದಿದ್ದಾರೆ.

ಕುಮಾರನ ಕತೆಯನ್ನ ಇಷ್ಟಪಟ್ಟ ಸ್ಟಾರ್ಸ್

'ಕಾಲೇಜ್ ಕುಮಾರ' ಸಿನಿಮಾವನ್ನ ಪ್ರತಿಯೊಬ್ಬರು ಇಷ್ಟ ಪಟ್ಟಿದ್ದಾರೆ. ಸಾಮಾನ್ಯ ಪ್ರೇಕ್ಷಕರ ಜೊತೆಗೆ ಸ್ಯಾಂಡಲ್ ವುಡ್ ನ ಕಲಾವಿದರು ಸಿನಿಮಾವನ್ನ ನೋಡಿ ಒಳ್ಳೆಯ ಅಭಿಪ್ರಾಯವನ್ನೂ ತಿಳಿಸಿದ್ದಾರೆ. ಚಿತ್ರದಲ್ಲಿ ರವಿಶಂಕರ್ ಮತ್ತು ಶ್ರುತಿ ಪಾತ್ರಕ್ಕೆ ಹೆಚ್ಚಿನ ಪ್ರಶಂಸೆ ವ್ಯಕ್ತವಾಗುತ್ತಿದೆ.

English summary
Kannada Actor Darshan appreciate Ravi Shankar's Performance in 'College Kumara' movie.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada