For Quick Alerts
  ALLOW NOTIFICATIONS  
  For Daily Alerts

  ಡಿ-ಬಾಸ್ ದರ್ಶನ್ ಬರ್ತಡೇ ಪಾರ್ಟಿಯಲ್ಲಿ ಯಾರೆಲ್ಲ ಸೆಲೆಬ್ರಿಟಿಗಳು ಇದ್ದರು?

  |

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಬರ್ತಡೇ ಬಹಳ ಅದ್ಧೂರಿಯಾಗಿ ನೆರವೇರಿದೆ. ಈ ವರ್ಷ ಅಭಿಮಾನಿಗಳ ಜೊತೆ ಡಿ ಬಾಸ್ ತಮ್ಮ ಬರ್ತಡೇ ಸೆಲೆಬ್ರೆಟ್ ಮಾಡಿಕೊಳ್ಳಲು ಸಾಧ್ಯವಾಗಲಿಲ್ಲ. ಆದರೆ, ಸ್ನೇಹಿತರು, ಆಪ್ತರು ದರ್ಶನ್ ಅವರ ಜನುಮದಿನವನ್ನು ಸಡಗರದಿಂದ ಆಚರಿಸಿದ್ದಾರೆ.

  ಫೆಬ್ರವರಿ 16ರ ಸಂಜೆ ಖಾಸಗಿ ಸ್ಥಳದಲ್ಲಿ ದಾಸನ ಬರ್ತಡೇ ಆಚರಣೆ ಮಾಡಲಾಗಿದೆ. ರಾಬರ್ಟ್ ಚಿತ್ರತಂಡ ಸೇರಿದಂತೆ ದರ್ಶನ್ ಅವರ ಆಪ್ತರು, ಸ್ನೇಹಿತರು ಈ ಪಾರ್ಟಿಯಲ್ಲಿ ಭಾಗಿಯಾಗಿದ್ದರು. ಈ ಫೋಟೋಗಳು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಹಾಗಾದ್ರೆ, ಚಕ್ರವರ್ತಿಯ ಹುಟ್ಟುಹಬ್ಬದ ಪಾರ್ಟಿಯಲ್ಲಿ ಯಾರೆಲ್ಲ ಪಾಲ್ಗೊಂಡಿದ್ದರು ಎನ್ನುವುದನ್ನು ಫೋಟೋಗಳ ಸಮೇತ ನೋಡಿ. ಮುಂದೆ ಓದಿ...

  ಮರಿ ಟೈಗರ್ ವಿನೋದ್

  ಮರಿ ಟೈಗರ್ ವಿನೋದ್

  ದರ್ಶನ್ ಅವರ ಬರ್ತಡೇ ಪಾರ್ಟಿಯಲ್ಲಿ ಕುಚಿಕು ಗೆಳೆಯರು ಗಮನ ಸೆಳೆದರು. ಮರಿ ಟೈಗರ್ ವಿನೋದ್ ಪ್ರಭಾಕರ್ ಮತ್ತು ದರ್ಶನ್ ಒಟ್ಟಿಗೆ ಕಾಣಿಸಿಕೊಂಡಿರುವ ಫೋಟೋ ವೈರಲ್ ಆಗಿದೆ. ದರ್ಶನ್ ಅವರ ರಾಬರ್ಟ್ ಚಿತ್ರದಲ್ಲೂ ವಿನೋದ್ ನಟಿಸಿದ್ದಾರೆ.

  ಡಿ-ಬಾಸ್ ಹುಟ್ಟುಹಬ್ಬಕ್ಕೆ ಶುಭಕೋರಿದ ರಾಜಕಾರಣಿಗಳು, ಯಾರ್‌ ಯಾರು?

  ಪ್ರೇಮ್-ಧನ್ವೀರ್

  ಪ್ರೇಮ್-ಧನ್ವೀರ್

  ಡಿ ಬಾಸ್ ಬರ್ತಡೇಯಲ್ಲಿ ಆಪ್ತ ಸ್ನೇಹಿತರಾದ ನೆನಪಿರಲಿ ಪ್ರೇಮ್ ಹಾಗೂ ಯುವ ನಟ ಧನ್ವೀರ್ ಗೌಡ ಸಹ ಭಾಗಿಯಾಗಿದ್ದರು. ಈ ಇಬ್ಬರು ಕಲಾವಿದರು ದಾಸನ ಜೊತೆ ಬಹಳ ಆತ್ಮೀಯವಾಗಿದ್ದಾರೆ.

  ಅಮೂಲ್ಯ ದಂಪತಿ

  ಅಮೂಲ್ಯ ದಂಪತಿ

  ದರ್ಶನ್ ಅವರ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿರುವವರ ಪೈಕಿ ಅಮೂಲ್ಯ ದಂಪತಿ ಸಹ ಒಬ್ಬರು. ಹಾಗಾಗಿ, ಡಿ ಬಾಸ್ ಬರ್ತಡೇ ಸಂಭ್ರಮದಲ್ಲಿ ಅಮೂಲ್ಯ ಮತ್ತು ಪತಿ ಜಗದೀಶ್ ಸಹ ಪಾಲ್ಗೊಂಡಿದ್ದರು.

  ಲೆಜೆಂಡ್ ಬಾಲಯ್ಯ ಅಭಿಮಾನಿಗಳಿಂದ ಡಿ ಬಾಸ್ ಬರ್ತಡೇ ಆಚರಣೆ

  ಪ್ರಜ್ವಲ್ ದೇವರಾಜ್

  ಪ್ರಜ್ವಲ್ ದೇವರಾಜ್

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಹುಟ್ಟುಹಬ್ಬ ಸಂಭ್ರಮದಲ್ಲಿ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಹಾಗು ಅವರ ಅಭಿಮಾನಿಗಳು ಸಹ ಪಾಲ್ಗೊಂಡಿದ್ದರು. ಪ್ರಜ್ವಲ್ ಜೊತೆ ರಾಗಿಣಿ ಚಂದ್ರನ್ ಸಹ ಡಿ ಬಾಸ್‌ ಬರ್ತಡೇಯಲ್ಲಿದ್ದರು.

  ರಾಬರ್ಟ್ ಚಿತ್ರತಂಡ ಭಾಗಿ

  ರಾಬರ್ಟ್ ಚಿತ್ರತಂಡ ಭಾಗಿ

  ರಾಬರ್ಟ್ ಚಿತ್ರದ ನಿರ್ದೇಶಕ ತರುಣ್ ಸುಧೀರ್ ಮತ್ತು ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡ ಈ ಹುಟ್ಟುಹಬ್ಬದ ಸಂಭ್ರಮಕ್ಕೆ ಪ್ರಮುಖ ಕಾರಣ. ಮಾರ್ಚ್ 11 ರಂದು ರಾಬರ್ಟ್ ಸಿನಿಮಾ ಬಿಡುಗಡೆಯಾಗಲಿದೆ.

  ಸೌಂದರ್ಯ ಜಗದೀಶ್

  ಸೌಂದರ್ಯ ಜಗದೀಶ್

  ದರ್ಶನ್ ಅವರ ಆಪ್ತರು ಹಾಗೂ ಚಲನಚಿತ್ರ ನಿರ್ಮಾಪಕರಾದ ಸಂದೇಶ್ ನಾಗರಾಜ್ ಮತ್ತು ಸೌಂದರ್ಯ ಜಗದೀಶ್ ಸಹ ಡಿ ಬಾಸ್ ಬರ್ತಡೇ ಪಾರ್ಟಿಯಲ್ಲಿ ಪಾಲ್ಗೊಂಡಿದ್ದರು.

  ಪೊಗರು ಸ್ವಾರ್ಥ.. ಶಿವಣ್ಣನ ಕೆಂಗಣ್ಣಿಗೆ ಗುರಿಯಾಗ್ತಾರ ಧ್ರುವ ಸರ್ಜಾ..? | Filmibeat Kannada
  English summary
  Kannada actor Darshan Birthday Photos: Which celebrity was attend the Party?.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X