»   » ಮಧ್ಯರಾತ್ರಿ 'ಚಕ್ರವರ್ತಿ'ಯ ಬರ್ತ್ ಡೇ ಸೆಲೆಬ್ರೇಷನ್: ದರ್ಶನ್ ಮನೆ ಮುಂದೆ ಜಾತ್ರೆ

ಮಧ್ಯರಾತ್ರಿ 'ಚಕ್ರವರ್ತಿ'ಯ ಬರ್ತ್ ಡೇ ಸೆಲೆಬ್ರೇಷನ್: ದರ್ಶನ್ ಮನೆ ಮುಂದೆ ಜಾತ್ರೆ

Posted By:
Subscribe to Filmibeat Kannada
ಚಾಲೆಂಜಿಂಗ್ ಸ್ಟಾರ್, ಚಕ್ರವರ್ತಿ, ಅಭಿಮಾನಿಗಳ ಪ್ರೀತಿಯ 'ದಾಸ' ದರ್ಶನ್ ಗೆ ಇಂದು (ಫೆಬ್ರವರಿ 16) ಹುಟ್ಟುಹಬ್ಬದ ಸಂಭ್ರಮ. 40ನೇ ವಸಂತಕ್ಕೆ ಕಾಲಿಟ್ಟಿರುವ 'ಜಗ್ಗುದಾದ'ನ ಬರ್ತ್ ಡೆಯನ್ನ ಅವರು ಅಭಿಮಾನಿಗಳು ಅದ್ಧೂರಿಯಾಗಿ ಆಚರಿಸಿದ್ದಾರೆ.[ದರ್ಶನ್ ಹುಟ್ಟು ಹಬ್ಬಕ್ಕೆ ಬೆಳ್ಳಿತೆರೆಯ ಯಾರೆಲ್ಲಾ ವಿಶ್ ಮಾಡಿದ್ದಾರೆ..?]

ಮಧ್ಯರಾತ್ರಿ 12 ಘಂಟೆಗೆ ದರ್ಶನ್ ಅವರ ರಾಜರಾಜೇಶ್ವರಿ ನಗರದಲ್ಲಿರುವ ನಿವಾಸದ ಬಳಿ, ನೂರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಜಮಾಯಿಸಿದ್ದು, ಕೇಕ್ ಕತ್ತರಿಸಿ, ಪಟಾಕಿ ಸಿಡಿಸಿ ಸಂಭ್ರಮಿಸಿದರು. ಮುಂದೆ ಓದಿ....

'ದಾಸ'ನ 40ನೇ ಹುಟ್ಟುಹಬ್ಬ

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ 40ನೇ ಹುಟ್ಟುಹಬ್ಬದ ಹಿನ್ನಲೆ ಮಧ್ಯರಾತ್ರಿ ಅವರು ಅಭಿಮಾನಿಗಳು ಕೇಕ್ ಕತ್ತರಿಸಿ ಸಂಭ್ರಮಿಸಿದ್ದಾರೆ.[ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಡ್ಡದಿಂದ ಬಂದ ತಾಜಾ ಸುದ್ದಿ ಇದು.!]

ದರ್ಶನ್ ಮನೆ ಮುಂದೆ ಜನಸಾಗರ

ತಮ್ಮ ನೆಚ್ಚಿನ ನಟನಿಗೆ ಶುಭಾಶಯ ಕೋರಲು ರಾಜ್ಯದ ಮೂಲೆ ಮೂಲೆಗಳಿಂದ ಅಭಿಮಾನಿಗಳು ಆಗಮಿಸಿದ್ದು, ರಾಜ ರಾಜೇಶ್ವರಿ ನಗರದಲ್ಲಿರುವ ದರ್ಶನ್ ಅವರ ನಿವಾಸದ ಮುಂದೆ ಹಬ್ಬವನ್ನ ಉಂಟು ಮಾಡಿದ್ದರು.['ದಾಸ' ದರ್ಶನ್ ಬಗ್ಗೆ ಹರಿದಾಡುತ್ತಿದೆ ಹೊಸ ಸುದ್ದಿ: ನಿಜವೋ, ಸುಳ್ಳೋ.?]

ವಿಕಲಚೇತನರೊಂದಿಗೆ ಹುಟ್ಟುಹಬ್ಬ ಆಚರಣೆ

ಚಾಲೆಂಜಿಂಗ್ ಸ್ಟಾರ್ ತಮ್ಮ 40ನೇ ಹುಟ್ಟುಹಬ್ಬವನ್ನ ವಿಕಲಚೇತನ ಮಕ್ಕಳೊಂದಿಗೆ ಕೇಕ್ ಕತ್ತರಿಸಿ ಆಚರಿಸಿಕೊಂಡರು.

'ದಾಸ'ನಿಗೆ ವಿಶ್ ಮಾಡಿದ ಯುವತಿಯರು

ದರ್ಶನ್ ಅವರಿಗೆ ಹೆಣ್ಣು ಮಕ್ಕಳು ಹೆಚ್ಚು ಅಭಿಮಾನಿಗಳಿದ್ದಾರೆ ಎಂಬುದಕ್ಕೆ ದರ್ಶನ್ ಅವರ ಬರ್ತ್ ಡೇ ಸಾಕ್ಷಿಯಾಯಿತು. ತಡರಾತ್ರಿ ದರ್ಶನ್ ಅವರ ಹುಟ್ಟುಹಬ್ಬವನ್ನ ಆಚರಿಸಿದ ಯುವತಿಯರು ಕೇಕ್ ಕತ್ತರಿಸಿ ಸಂಭ್ರಮಿಸಿದರು.

ಗಮನ ಸೆಳೆದ ಕೇಕ್ ಗಳು

ತಮ್ಮ ನೆಚ್ಚಿನ ನಟನಿಗಾಗಿ ಬಗೆ ಬಗೆಯ ಕೇಕ್ ಗಳನ್ನ ಮಾಡಿಸಲಾಗಿತ್ತು. ಈ ವೇಳೆ ದರ್ಶನ್ ಗಾಗಿ 'ಲಾಂಗ್' ಮಾದರಿ ಕೇಕ್ ತಂದಿದ್ದು ವಿಶೇಷವಾಗಿ ಗಮನ ಸೆಳೆಯಿತು.

ಪಟಾಕಿ ಸಿಡಿಸಿ ಸಂಭ್ರಮ

ರಾತ್ರಿ 12 ಗಂಟೆಯಾಗುತ್ತಿದ್ದಂತೆ ಬಾನಂಗಳದಲ್ಲಿ ಪಟಾಕಿಗಳ ಸದ್ದು ಆರ್ಭಟಿಸಿತ್ತು. ದರ್ಶನ್ ಅವರ ಮನೆ ಮುಂದೆ ಬೆಳ್ಳಿಹಬ್ಬವೆಂಬ ರೀತಿ ಪಟಾಕಿ, ರಾಕೆಟ್ ಗಳು ಸಿಡಿದವು.

ಕಟೌಟ್, ಪೋಸ್ಟರ್ ಗಳಿಂದ ಅಲಂಕಾರ

ದರ್ಶನ್ ಹುಟ್ಟುಹಬ್ಬದ ಹಿನ್ನಲೆ ಇಡೀ ದರ್ಶನ್ ನಿವಾಸದ ಸುತ್ತ ಮುತ್ತಾ, 'ಚಕ್ರವರ್ತಿ'ಯ ಕಟೌಟ್ ಗಳಿಂದ ಅಲಂಕಾರಗೊಂಡಿದೆ. ಮನೆ ಮನೆಗಳ ಮೇಲೂ ದಾಸನ ಪೋಸ್ಟರ್ ಗಳು ರಾರಾಜಿಸುತ್ತಿದೆ.

'ಸಾರಥಿ'ಗೆ ಬಂತು 'ಭರ್ಜರಿ ಗಿಫ್ಟ್'

ಇನ್ನೂ ಸಾರಥಿಯ ಜನುಮದಿನದ ವಿಶೇಷವಾಗಿ ಅವರ ಅಭಿಮಾನಿಗಳು ಹಲವು ಬಗೆಯ ಉಡುಗೊರೆಗಳನ್ನ ನೀಡಿದ್ರು. ಪುಟ್ಟ ಹಸು, ಮೊಲ, ಫೋಟೋಗಳು ನೀಡಿ ಖುಷಿ ಪಟ್ಟರು.

ಫೆಬ್ರವರಿ 16 'ದರ್ಶನ್ ಹಬ್ಬ'

ಫೆಬ್ರವರಿ 16 ಇಡೀ ದಿನ ದರ್ಶನ್ ಅಭಿಮಾನಿಗಳು 'ಜಗ್ಗುದಾದ'ನ ಬರ್ತ್ ಡೇ ಯಲ್ಲಿ ಮುಳುಗಿ ಹೋಗಿರುತ್ತಾರೆ. ರಾತ್ರಿಯಿಂದ ದರ್ಶನ್ ಅವರ ಮನೆಮುಂದೆ ಕಾಯುತ್ತಿರುವ ಫ್ಯಾನ್ಸ್ ದಿನ ಪೂರ್ತಿ ದಾಸನ ಸಂಭ್ರಮದಲ್ಲಿ ತೇಲಾಡುತ್ತಿದ್ದಾರೆ.

English summary
Challenging Star, Darshan celebrates his 40th birthday today ( February 16) at Raja Rajeshwari House.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada