»   » ಮತ್ತೆ ಸ್ನೇಹಿತನ ಪರವಾಗಿ ನಿಂತ 'ಚಾಲೆಂಜಿಂಗ್ ಸ್ಟಾರ್' ದರ್ಶನ್

ಮತ್ತೆ ಸ್ನೇಹಿತನ ಪರವಾಗಿ ನಿಂತ 'ಚಾಲೆಂಜಿಂಗ್ ಸ್ಟಾರ್' ದರ್ಶನ್

Posted By:
Subscribe to Filmibeat Kannada

'ಚಾಲೆಂಜಿಂಗ್ ಸ್ಟಾರ್' ದರ್ಶನ್ ಇತ್ತೀಚೆಗಷ್ಟೇ ಸಹೋದರಿಯಂತೆ ಕಾಣುವ 'ರತ್ನ ಶ್ರೀಧರ್' ಅವ್ರ ಸಿನಿಮಾಗೆ ಕ್ಲಾಪ್ ಮಾಡಿ ಅಕ್ಕನಿಗೆ ಆಸರೆಯಾಗಿದ್ರು. ಈಗ ಚಾಲೆಂಜಿಂಗ್ ಸ್ನೇಹಿತನಿಗೆ ಸಾಥ್ ನೀಡಿದ್ದಾರೆ.

ಎಲ್ಲರಿಗೂ ತಿಳಿದಿರುವಂತೆ 'ದರ್ಶನ್' ತಮ್ಮ ಸುತ್ತ-ಮುತ್ತಲಿನ ಜನರು ಹಾಗೂ ಸ್ನೇಹಿತರಿಗೆ ಒಂದಲ್ಲಾ ಒಂದು ರೀತಿಯಲ್ಲಿ ನೆರವಾಗುತ್ತಾರೆ. ಅದೇ ರೀತಿಯಲ್ಲಿ 'ದಾಸ', ವಿನೋದ್ ಪ್ರಭಾಕರ್ ಗೆ ಶುಭ ಹಾರೈಕೆ ಮಾಡಿದ್ದಾರೆ.

ವಿನೋದ್ ಪ್ರಭಾಕರ್ ಸಿನಿಮಾಗೆ 'ಚಾಲೆಂಜಿಂಗ್ ಸ್ಟಾರ್'

ವಿನೋದ್ ಪ್ರಭಾಕರ್ ಮತ್ತು ದರ್ಶನ್... ಇಬ್ಬರೂ ಕೂಡ ಸಾಕಷ್ಟು ವರ್ಷಗಳಿಂದ ಸ್ನೇಹಿತರಾಗಿದ್ದವರು. 'ನವಗ್ರಹ' ಸಿನಿಮಾದಲ್ಲಿ ಒಟ್ಟಿಗೆ ಸ್ಕ್ರೀನ್ ಶೇರ್ ಕೂಡ ಮಾಡಿದ್ರು. ಇದೇ ವಿಶ್ವಾಸವನ್ನ ಕಾಪಾಡಿಕೊಂಡಿರುವ ಇಬ್ಬರು ಇಂದಿಗೆ ಆತ್ಮೀಯ ಗೆಳೆಯರು. ಗೆಳೆಯನ ಸಿನಿಮಾಗೆ ದರ್ಶನ್ ಇಂದು ಕ್ಲಾಪ್ ಮಾಡಿ ಶುಭಹಾರೈಸಿದ್ದಾರೆ.

ಸಿನಿಮಾ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ದರ್ಶನ್

ದರ್ಶನ್ ಸ್ನೇಹಿತನ ಪರವಾಗಿ ನಿಂತಿರೋದು ಇದೇ ಮೊದಲಬಾರಿ ಅಲ್ಲ. ಈ ಹಿಂದೆ 'ವಿನೋದ್ ಪ್ರಭಾಕರ್' ಅಭಿನಯದ 'ಕ್ರ್ಯಾಕ್' ಸಿನಿಮಾ ನೋಡಿ ಮೆಚ್ಚುಗೆಯ ಮಾತುಗಳನ್ನಾಡಿದ್ರು. ಚಿತ್ರದಲ್ಲಿ ವಿನೋದ್ ಅಭಿನಯವನ್ನ ಇಷ್ಟಪಟ್ಟಿದ್ರು.

ವಿನೋದ್ ಅಭಿನಯದ ಹೊಸ ಚಿತ್ರ

'ರಗಡ್' ವಿನೋದ್ ಪ್ರಭಾಕರ್ ಅಭಿನಯದ ಹೊಸ ಸಿನಿಮಾ. ನವ ನಿರ್ದೇಶಕ ಮಹೇಶ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಚೈತ್ರ ಎನ್ನುವ ಹೊಸ ನಾಯಕಿ ವಿನೋದ್ ಜೊತೆಯಾಗಲಿದ್ದಾರೆ. ಟೈಟಲ್ ಹೇಳುವಂತೆ ಔಟ್ ಅಂಡ್ ಔಟ್ ಆಕ್ಷನ್ ಕಮ್ ಲವ್ ಸ್ಟೋರಿ ಇರೋ ಸಿನಿಮಾ ಸದ್ಯ ಮುಹೂರ್ತ ಮುಗಿಸಿದೆ. ಇದೇ ತಿಂಗಳಲ್ಲಿ ಚಿತ್ರೀಕರಣ ಪ್ರಾರಂಭ ಆಗಲಿದೆ.

ಹೊಸ ನಿರ್ದೇಶಕನ ಕಮರ್ಷಿಯಲ್ ಸಿನಿಮಾ

'ರಗಡ್' ಚಿತ್ರದ ನಿರ್ದೇಶಕ ಮಹೇಶ್, ಸುಮಾರು ಹತ್ತು ಸಿನಿಮಾಗಳಿಗೆ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದ್ದಾರೆ. ವಿಶೇಷ ಅಂದ್ರೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಐದು ಸಿನಿಮಾಗಳಲ್ಲಿ ಅಸಿಸ್ಟೆಂಟ್ ಆಗಿ ಕಾರ್ಯ ನಿರ್ವಹಿಸಿದ್ದಾರೆ.

English summary
Darshan claps for Vinod Prabhakar's new film 'Ragad'. ವಿನೋದ್ ಪ್ರಭಾಕರ್ ಅಭಿನಯದ 'ರಗಡ್' ಸಿನಿಮಾಗೆ ಕ್ಲಾಪ್ ಮಾಡಿದ ದರ್ಶನ್

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada