»   » ಪತ್ರಿಕೆ-ಮಾಧ್ಯಮದವರು ದರ್ಶನ್ ನ ಕೀಳಾಗಿ ನೋಡ್ತಿದ್ದಾರಾ?

ಪತ್ರಿಕೆ-ಮಾಧ್ಯಮದವರು ದರ್ಶನ್ ನ ಕೀಳಾಗಿ ನೋಡ್ತಿದ್ದಾರಾ?

Posted By: ಹರಾ
Subscribe to Filmibeat Kannada
For Quick Alerts
ALLOW NOTIFICATIONS
For Daily Alerts

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ಪತ್ರಕರ್ತರು ಮತ್ತು ಮಾಧ್ಯಮದವರನ್ನ ಕಂಡ್ರೆ ಅಷ್ಟಕಷ್ಟೆ. ವೈಯುಕ್ತಿಕ ವಿಚಾರಕ್ಕೆ ದರ್ಶನ್ ಜೈಲು ಕದ ತಟ್ಟಿ ಬಂದಾಗಿನಿಂದ, ಪತ್ರಕರ್ತರು-ಮಾಧ್ಯಮದವರನ್ನ ಕಂಡ್ರೆ ಆಗೋಲ್ಲ.

  ಮುಂಚೆ ಎಲ್ಲರ ಜೊತೆ ಹರಟುತ್ತಿದ್ದ ದರ್ಶನ್, ಈಗ ಎಷ್ಟು ಬೇಕೋ ಅಷ್ಟೇ ಮಾತನಾಡುತ್ತಾರೆ. ಸಿನಿಮಾ ವಿಷಯ ಬಿಟ್ಟರೆ ಅಪ್ಪಿ ತಪ್ಪಿ ಕೂಡ ಬೇರೆ ವಿಚಾರದ ಬಗ್ಗೆ ತುಟಿ ಬಿಚ್ಚಲ್ಲ.

  ಈಗ ಅದೂ ಕಡಿಮೆ ಆಗೋಗಿದೆ. ತಮ್ಮ ಸಿನಿಮಾ ಕುರಿತಾಗಿಯೂ ದರ್ಶನ್ ಪತ್ರಿಕಾ ಮತ್ತು ಮಾಧ್ಯಮ ಮಿತ್ರರೊಂದಿಗೆ ಮಾತನಾಡುವುದು ಕಮ್ಮಿ. 'Mr.ಐರಾವತ' ಚಿತ್ರದ ಪ್ರಚಾರ ಕುರಿತಾಗಿ ಹೆಚ್ಚು ಪ್ರೆಸ್ ಮೀಟ್ ಕೂಡ ನಡೀಲಿಲ್ಲ. ಪ್ರಮೋಷನ್ ಸಲುವಾಗಿ ಎಲ್ಲಾ ಚಾನೆಲ್ ಗಳಲ್ಲಿ ದರ್ಶನ್ ಬಂದು ಕೂರಲೂ ಇಲ್ಲ. [ಚಿತ್ರ ವಿಮರ್ಶೆ : 'ಸುಂಟರಗಾಳಿ' ಬೀಸಿದ ದರ್ಶನ್ 'Mr.ಐರಾವತ']

  ಹಾಗಾದ್ರೆ, 'ದಾಸ' ದರ್ಶನ್ ಚಿತ್ರಗಳಿಗೆ ಪಬ್ಲಿಸಿಟಿ ಅಗತ್ಯ ಇಲ್ವಾ? 'Mr.ಐರಾವತ' ಸಿನಿಮಾ ಬಗ್ಗೆ ಪತ್ರಿಕೆಗಳಲ್ಲಿ ಬಂದಿರುವ ವಿಮರ್ಶೆಗಳನ್ನ ಓದಿ ದರ್ಶನ್ ಏನಂದ್ರು ಗೊತ್ತಾ? ಈ ಬಗ್ಗೆ ಸುವರ್ಣ ಸುದ್ದಿ ವಾಹಿನಿಗೆ ದರ್ಶನ್ ಚುಟುಕು ಸಂದರ್ಶನ ನೀಡಿದ್ದಾರೆ. ಅದರಲ್ಲಿ ಮಾಧ್ಯಮ ಹಾಗು ಪತ್ರಕರ್ತರ ವಿರುದ್ಧ ದರ್ಶನ್ ವ್ಯಂಗ್ಯವಾಡಿದ್ದಾರೆ. ಮುಂದೆ ಓದಿ.....

  ಜನರ ರೆಸ್ಪಾನ್ಸ್ ಕೇಳಿ ಖುಷಿ ಆಯ್ತು.!

  ''ಫಸ್ಟ್ ಶೋ ರೆಸ್ಪಾನ್ಸ್ ಕೇಳಿ ತುಂಬಾ ಖುಷಿ ಆಯ್ತು. ಬೆಳಗ್ಗೆನೇ ಶೋ ಸ್ಟಾರ್ಟ್ ಆಗಿತ್ತು. ರೆಸ್ಪಾನ್ಸ್ ಇಂದ ಖುಷಿ ಆಯ್ತು.'' ಅಂತ ದರ್ಶನ್ ಹೇಳ್ತಾರೆ. ಇದೇ 'Mr.ಐರಾವತ' ಸಿನಿಮಾದಲ್ಲಿ ಲಾಜಿಕ್ ಇಲ್ಲ ಅಂತ ತೂರಿಬಂದ ಪ್ರಶ್ನೆಗೆ ದರ್ಶನ್ ಕೊಟ್ಟ ಉತ್ತರ ಮುಂದಿನ ಸ್ಲೈಡ್ ನಲ್ಲಿದೆ....

  ಒಂದು ಇಡೀ ದಿನ ಸಿನಿಮಾ ತೋರಿಸೋಕೆ ಆಗತ್ತಾ?

  ''ಲಾಜಿಕಲ್ ಎಂಡ್ ಇಲ್ಲ ಅಂದ್ರೆ, ನಾವು ಇಡೀ ಸಿನಿಮಾನ ಎರಡುವರೆ ಗಂಟೆಯಲ್ಲಿ ಮಾಡಿ ತೋರಿಸಬೇಕು. ಐಪಿಎಸ್ ಎಕ್ಸಾಂ ಓದಿ, ಬರೆದು, ಪಾಸ್ ಮಾಡೋದನ್ನ ಎರಡುವರೆ ಗಂಟೆಯಲ್ಲಿ ತೋರಿಸುವುದಕ್ಕೆ ಸಾಧ್ಯನಾ? ಒಂದು ಇಡೀ ದಿನ ಸಿನಿಮಾ ತೋರಿಸಬೇಕು. ಅಷ್ಟು ಪೇಷನ್ಸ್ ಇದ್ಯಾ ಸಿನಿಮಾ ನೋಡೋಕೆ.'' ಅಂತಾರೆ ದರ್ಶನ್. ಲಾಜಿಕ್ ಬಗ್ಗೆ ಪ್ರಶ್ನೆ ಎದುರಾಗಿದ್ದಕ್ಕೆ ಪರಭಾಷೆಯ ಉದಾಹರಣೆ ಕೊಟ್ಟು ದರ್ಶನ್ ನೀಡಿದ ಉತ್ತರಕ್ಕಾಗಿ ಮುಂದಿನ ಸ್ಲೈಡ್ ಕ್ಲಿಕ್ ಮಾಡಿ...

  ಪರಭಾಷೆ ಸಿನಿಮಾಗೆ ಚಪ್ಪಾಳೆ ಹೊಡೀತಿರಾ?

  ''ಪರಭಾಷೆಯಲ್ಲಿ ಬೇರೆ ತರಹ ಲಾಜಿಕ್ ಇದ್ದಾಗ, ಅದಕ್ಕೆ ಚಪ್ಪಾಳೆ ಹೊಡೀತಿರಾ, ಅದಕ್ಕೆ ಪಬ್ಲಿಸಿಟಿ ಕೊಡ್ತೀರಾ ಹೇಗೆ. ಹೌ ಈಸ್ ಇಟ್ ಪಾಸಿಬಲ್.'' ಅಂತ ಪ್ರಶ್ನೆ ಹಾಕುತ್ತಾರೆ ದರ್ಶನ್.

  ''ಜನರೇ ಕೊಟ್ಟಿರುವ ಸ್ಟಾರ್''

  ''ಮೊದಲು ಮೂರು ಗಂಟೆ ಸಿನಿಮಾ ಇತ್ತು. ಈಗ ಎರಡುವರೆ ಗಂಟೆಗೆ ಬಂದಿದೆ. ಸಿನಿಮಾದಲ್ಲಿ ಕೇಳ್ತಾನೆ - ಹೆಗಲ ಮೇಲೆ ಸ್ಟಾರ್ ಇದ್ಯಾ ಅಂತ. ಆಗ ನಾನು ಹೇಳ್ತೀನಿ - ಜನರು ಕೊಟ್ಟಿರುವ ಸ್ಟಾರ್ ಹಣೆ ಮೇಲಿದೆ ಅಂತ. ಹಾಗೆಯೇ, ಪೇಪರ್ ನಲ್ಲಿ ಎಷ್ಟೇ ಸ್ಟಾರ್ ಕೊಟ್ಟರೂ ಕೂಡ....'' ಅಂತ ಪತ್ರಿಕೆಗಳಲ್ಲಿ ಪ್ರಕಟವಾಗಿರುವ ವಿಮರ್ಶೆ ಬಗ್ಗೆ ದರ್ಶನ್ ನೀಡಿರುವ ಪ್ರತಿಕ್ರಿಯೆ ಇದು. [ದರ್ಶನ್ 'Mr.ಐರಾವತ'ನಿಗೆ ವಿಮರ್ಶಕರಿಂದ ಸಿಕ್ಕ ಕಾಮೆಂಟ್ ಗಳಿವು.!]

  'ಸಂಗೊಳ್ಳಿ ರಾಯಣ್ಣ'ಗೂ ಹೀಗೆ ಆಗಿತ್ತು.!

  ''ಇದೇ 'ಸಂಗೊಳ್ಳಿ ರಾಯಣ್ಣ' ಸಿನಿಮಾಗೆ ಎರಡೇ ಸ್ಟಾರ್ ಕೊಟ್ಟಿದ್ದರು. ಒಂದು ವರ್ಷ ಸಿನಿಮಾ ಓಡ್ತಾ.?'' - ದರ್ಶನ್

  ''*'' ನೋಡಿ ಯಾರೂ ಸಿನಿಮಾಗೆ ಬರಲ್ಲ'

  ''ಸ್ಟಾರ್ ನೋಡ್ಕೊಂಡು, ಇನ್ನೊಂದು ನೋಡ್ಕೊಂಡು ಯಾರೂ ಸಿನಿಮಾಗೆ ಬರಲ್ಲ.'' - ದರ್ಶನ್

  4 ವರ್ಷದ ಹಿಂದೆ ಏನಾಗಿತ್ತು?

  ''ಇದೇ ನಾಲ್ಕು ವರ್ಷಗಳ ಹಿಂದೆ. ದರ್ಶನ್ ವಾಸ್ ಬಿಹೈನ್ಡ್ ದಿ ಬಾರ್ಸ್. ನೀವೇ (ಮಾಧ್ಯಮಗಳು) ಥಿಯೇಟರ್ ಮುಂದೆ ನಿಂತಿದ್ರಿ. ನೀವೇ ಆಡಿಯನ್ಸ್ ನ ಕೇಳಿದ್ರಿ. ಅವತ್ತೇನು ರಿವ್ಯೂ ಬಂತು. ಇವತ್ತೇನು ರಿವ್ಯು ಬರ್ತಿದೆ. ಜನ ಅಷ್ಟೆ ಸಾಕು ನಂಗೆ. ಯಾವ ರಿವ್ಯೂ ಏನೂ ಬೇಡ.'' - ದರ್ಶನ್

  ಕನ್ನಡ ಚಿತ್ರಕ್ಕೆ ಸಪೋರ್ಟ್ ಮಾಡಿ

  ''ನಾವು (ಸ್ಟಾರ್ ಗಳು) ನಿಮಗೆ (ಮಾಧ್ಯಮ-ಪತ್ರಿಕೆ) ಪಬ್ಲಿಸಿಟಿ ಕೊಡ್ತೀವಿ ಅಲ್ವಾ. ಆಡ್ಸ್ ಮಾಡ್ತೀರಾ. ಕಮರ್ಶಿಯಲ್ ಆಡ್ ತೆಗೆದುಕೊಳ್ತೀರಾ ಅಲ್ವಾ. ಸಪೋರ್ಟ್ ಮಾಡಿ ಕನ್ನಡ ಸಿನಿಮಾಗೆ.'' - ದರ್ಶನ್

  ''ನಮ್ಮನ್ನ ಕೇವಲವಾಗಿ ನೋಡ್ತೀರಾ''

  ''ಬೇರೆ ಭಾಷೆಯವರು ಸಿಕ್ತಾರಾ ನಿಮಗೆ (ಮಾಧ್ಯಮ) ಇಂಟರ್ವ್ಯೂಗೆ. 'ಬಾಹುಬಲಿ' ಸಿನಿಮಾಗೆ ಅಷ್ಟೊಂದು ಪಬ್ಲಿಸಿಟಿ ಕೊಟ್ರಿ. ಪ್ರಭಾಸ್ ಸಿಕ್ಕಿದ್ರಾ ಇಂಟರ್ವ್ಯೂಗೆ. ಆಗಲ್ಲ ಅಲ್ವಾ? ಮತ್ತೆ ಅವರಿಗೆ ಮಾತ್ರ ಬೆಟ್ಟ ತೋರಿಸ್ತೀರಾ. ನಾವು ಸಿಕ್ತೀವಿ ನಮ್ಮನ್ನ ಕೇವಲವಾಗಿ ನೋಡ್ತೀರಾ.'' - ದರ್ಶನ್

  ಜನ ನೋಡಿದಷ್ಟು ದಿನ ಥಿಯೇಟರ್ ನಲ್ಲಿ

  ''ಐರಾವತ ಸಿನಿಮಾ ಓಡ್ತಾಯಿದೆ. ನಿರ್ಮಾಪಕರು ಖುಷಿಯಾಗಿದ್ದಾರೆ. ಟೆಕ್ನೀಷಿಯನ್ಸ್ ಕೂಡ ಖುಷಿಯಾಗಿದ್ದಾರೆ. ಜನರು ಎಲ್ಲಿಯವರೆಗೆ ನೋಡೋಕೆ ಇಷ್ಟಪಡ್ತಾರೋ, ಅಲ್ಲಿವರೆಗೆ ಸಿನಿಮಾ ಥಿಯೇಟರ್ ನಲ್ಲಿರುತ್ತೆ.'' - ದರ್ಶನ್

  ಮುಂದೆ ಕಾಯ್ಸಲ್ಲ

  ''ಮುಂದಿನ ಸಿನಿಮಾ ಬೇಗ ಬರ್ತೀನಿ. ಕಾಯ್ಸಲ್ಲ ಈ ಬಾರಿ.'' ಅಂತ ದರ್ಶನ್ ಹೇಳಿದ್ದಾರೆ.

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಣ್ಣ ಕಡೆಗೂ ತಮ್ಮ ಅಭಿಪ್ರಾಯವನ್ನು ಸುವರ್ಣ ವಾಹಿನಿ ಯೊಂದಿಗೆ ಹಂಚಿ ಕೊಂಡಿದರೆ , ಜನಗಳು ಕೊಟ್ಟಿರೋ ಸ್ಟಾರ್ ಹಣ್ಣೆ ಮೇಲೆ ಇದೆ , ಇದ್ದು ಜಸ್ಟ್ ಅದರ ರಿಫ್ಲೆಕ್ಸ್ ನ್ ಅಷ್ಟೇ .ಅಭಿಮಾನಿಗಳೇ ಚಿತ್ರ ನ ಜಯ್ಸೋದು , ಮಧ್ಯಮದವರಲ !! ದುಡ್ಡು ಕೊಟ್ಟು ಪಬ್ಲಿಸಿಟಿ ಮಾಡಿಸ್ಕೊಲೋ ಜಾಯಮಾನ ನಮ್ಮದಲ್ಲ ,ಫ್ಯಾನ್ಸ್ ಗಳು ಹಾರ ಹಾಕಿ ,ಪಬ್ಲಿಸಿಟಿ ತಗೊಂಡಿರೋದು ಇದ್ದಕೆ ಅಯಿಸ್ಸು ಜಾಸ್ತಿ !!HATERS RIP Regards Team D CompanyThe official page of D Brothers

  Posted by D company on Monday, October 5, 2015

  ದರ್ಶನ್ ಮಾತನಾಡಿರುವ ವಿಡಿಯೋ ಇಲ್ಲಿದೆ ನೋಡಿ....

  ಸುವರ್ಣ ಸುದ್ದಿ ವಾಹಿನಿಯೊಂದಿಗೆ ದರ್ಶನ್ ಮಾತನಾಡಿರುವ ವಿಡಿಯೋ ಇಲ್ಲಿದೆ ನೋಡಿ....

  English summary
  Kannada Actor Darshan has made a bold statement that he doesn't care about reviews published in News Papers, during an interview to Suvarna News Channel. Check out what Darshan spoke about Media and Press.

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more