»   » ಚಿತ್ರ ಬಿಡುಗಡೆ ಆದ ಮೇಲೆ ಪೋಸ್ಟ್ ಮಾರ್ಟಂ ಮಾಡಬೇಡಿ: ದರ್ಶನ್

ಚಿತ್ರ ಬಿಡುಗಡೆ ಆದ ಮೇಲೆ ಪೋಸ್ಟ್ ಮಾರ್ಟಂ ಮಾಡಬೇಡಿ: ದರ್ಶನ್

Posted By:
Subscribe to Filmibeat Kannada

ಸಿನಿಮಾ ಬಿಡುಗಡೆ ಆದ ಮೇಲೆ ಚಿತ್ರ ದೊಡ್ಡದಾಯಿತು, ಅದರಲ್ಲಿ 'ಆ' ಸೀನ್ ಬೇಡದಿತ್ತು. ಅಂತ ವಿಮರ್ಶಕರಿಂದ ಹಾಗೂ ಪ್ರೇಕ್ಷಕರಿಂದ ಅಭಿಪ್ರಾಯ ಬಂದ ನಂತರ ಸಿನಿಮಾವನ್ನು ಕೊಂಚ ಟ್ರಿಮ್ ಮಾಡೋದು ಇತ್ತೀಚೆಗೆ ಒಂಥರಾ ಟ್ರೆಂಡ್ ಆದಂತಿದೆ.

ಆದರೆ ಈ ಸಂಪ್ರದಾಯ ಬೇಡ ಎನ್ನುತ್ತಾರೆ ಚಾಲೆಂಜಿಂಗ್ ಸ್ಟಾರ್ ದರ್ಶನ್. ಸಿನಿಮಾ ಬಿಡುಗಡೆ ಆದ ನಂತರ ಚಿತ್ರದ ಕೆಲವು ದೃಶ್ಯಗಳನ್ನು ಪೋಸ್ಟ್ ಮಾರ್ಟಂ ಮಾಡೋದು ತಪ್ಪು ಎಂದು 'ವಿರಾಟ್' ಸಿನಿಮಾದ ಸುದ್ದಿಗೋಷ್ಠಿಯಲ್ಲಿ ನುಡಿದಿದ್ದಾರೆ.[ದರ್ಶನ್ ಹುಟ್ಟುಹಬ್ಬಕ್ಕಿಲ್ಲ 'ಚಕ್ರವರ್ತಿ' ಮುಹೂರ್ತ!]


Darshan expressed his thoughts while Re edit movies after release

'ಚಿತ್ರ ಬಿಡುಗಡೆ ಆಗೋದು ಸ್ವಲ್ಪ ತಡ ಆದರೂ ಪರವಾಗಿಲ್ಲ ಆದರೆ ಸಿನಿಮಾವನ್ನು ಪೂರ್ತಿಯಾಗಿ ಮುಗಿಸಿದ ನಂತರ ಬಿಡುಗಡೆಯ ಬಗ್ಗೆ ಯೋಚನೆ ಮಾಡಬೇಕು ಅದರ ಬದ್ಲಾಗಿ ಆತುರಾತುರವಾಗಿ ಮೊದಲು ಸಿನಿಮಾ ಬಿಡುಗಡೆ ಮಾಡಿ ಆಮೇಲೆ ಪೋಸ್ಟ್ ಮಾರ್ಟಂ ಮಾಡುತ್ತಾ ಕೂರೋದಲ್ಲ.


ಚಿತ್ರಮಂದಿರ ಸಿಕ್ಕಿಬಿಡ್ತು ಅಥವಾ ದಿನ ಚೆನ್ನಾಗಿದೆ ಅಂತ ಚಿತ್ರ ಬಿಡುಗಡೆ ಮಾಡಬಾರದು, ಹಾಗಾಗಿ ಎಲ್ಲಾ ಕೆಲಸ ಮುಗಿಸಿಕೊಂಡು ರಿಲೀಸ್ ಮಾಡಬೇಕು. ಎಂದು ಬಾಕ್ಸಾಫೀಸ್ ಸುಲ್ತಾನ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.


ಇನ್ನು ಸ್ವತಃ ದರ್ಶನ್ ಅವರ 'ವಿರಾಟ್' ಸಿನಿಮಾದ ಬಿಡುಗಡೆ ವಿಚಾರದಲ್ಲೂ ಹೀಗೆ ಎಡವಟ್ಟು ಆಗಿತ್ತು. 'ವಿರಾಟ್' ಸಿನಿಮಾದ ಒಂದು ಹಾಡಿನ ಚಿತ್ರೀಕರಣ ಬಾಕಿ ಇರುವಾಗಲೇ ನಿರ್ಮಾಪಕರು ಸಿನಿಮಾ ಬಿಡುಗಡೆ ಮಾಡಲು ಆತುರ ವ್ಯಕ್ತಪಡಿಸಿದ್ದರು.['ವಿರಾಟ್' ದರ್ಶನಕ್ಕೆ ಅಡ್ವಾನ್ಸ್ ಟಿಕೆಟ್ ಬುಕ್ಕಿಂಗ್ ಶುರು ಗುರು]


Darshan expressed his thoughts while Re edit movies after release

ಆದರೆ ಹೀಗೆ ಹರಿಬರಿಯಾಗಿ ಸಿನಿಮಾ ಬಿಡುಗಡೆ ಮಾಡಿದರೆ ಚಿತ್ರಕ್ಕೆ ಸಮಸ್ಯೆ ಉಂಟಾಗುತ್ತದೆ ಎಂದು ದರ್ಶನ್ ಅವರೇ ಹೇಳಿದ್ದರು. ಅಂತೂ ಕೊನೆಗೆ 'ವಿರಾಟ್' ನಿರ್ಮಾಪಕ ಕಲ್ಯಾಣ್ ಮತ್ತು ದರ್ಶನ್ ಅವರ ಮುಸುಕಿನ ಗುದ್ದಾಟಕ್ಕೆ ತೆರೆ ಬಿದ್ದು, ಬಾಕಿ ಇದ್ದ ಹಾಡಿನ ಚಿತ್ರೀಕರಣ ಮುಗಿಸಿ ಸೆನ್ಸಾರ್ ಮಾಡಿಸಲಾಗಿದೆ.[ರಿಯಾಲಿಟಿ ಶೋಗೆ ಬರಲ್ಲ ಅಂದಿದ್ದ ದರ್ಶನ್ ವೀಕೆಂಡ್ ಗೆ ಬಂದ್ರು ]


ಇದೀಗ ದರ್ಶನ್, ನಟಿ ಇಶಾ ಚಾವ್ಲಾ, ನಟಿ ಚೈತ್ರ ಚಂದ್ರನಾಥ್ ಮತ್ತು ನಟಿ ವಿದಿಶಾ ಶ್ರೀವಾತ್ಸವ್ ಕಾಣಿಸಿಕೊಂಡಿರುವ 'ವಿರಾಟ್' ಈ ವಾರ (ಜನವರಿ 29) ರಂದು ಇಡೀ ಕರ್ನಾಟಕದಾದ್ಯಂತ ಭರ್ಜರಿಯಾಗಿ ತೆರೆ ಕಾಣುತ್ತಿದೆ. ಚಿತ್ರಕ್ಕೆ ನಿರ್ದೇಶಕ ಹೆಚ್ ವಾಸು ಅವರು ಆಕ್ಷನ್-ಕಟ್ ಹೇಳಿದ್ದಾರೆ.

English summary
Challenging star Darshan expressed his thoughts while Re edit the movies after release.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada