For Quick Alerts
  ALLOW NOTIFICATIONS  
  For Daily Alerts

  ಅಯ್ಯೋ.. ದರ್ಶನ್ ಗೆ ಯಾಕೆ ಯಾವಾಗಲೂ ಹೀಗಾಗುತ್ತೆ!

  |
  Ambareesh : ದರ್ಶನ್ ಗೇ ಯಾವಾಗಲೂ ಯಾಕೆ ಹೀಗೆ ಆಗುತ್ತೆ? | FILMIBEAT KANNADA

  ಕನ್ನಡ ಚಿತ್ರರಂಗದ ಬಹುತೇಕ ಎಲ್ಲ ನಟರು ಅಂಬರೀಶ್ ಅವರ ಅಂತಿಮ ದರ್ಶನ ಪಡೆದಿದ್ದಾರೆ. ಆದರೆ, ದರ್ಶನ್ ಅವರಿಗೆ ಮಾತ್ರ ಒಂದು ದಿನ ಕಳೆದರೂ ಅಂಬರೀಶ್ ಅವರ ಅಂತಿಮ ದರ್ಶನ ಪಡೆಯುವ ಅವಕಾಶ ಸಿಕ್ಕಿರಲಿಲ್ಲ.

  ದರ್ಶನ್ ತಮ್ಮ 'ಯಜಮಾನ' ಸಿನಿಮಾದ ಚಿತ್ರೀಕರಣಕ್ಕಾಗಿ ಸ್ವೀಡನ್ ಗೆ ಹೋಗಿದ್ದರು. ಆದರೆ, ಇದೇ ಸಮಯಕ್ಕೆ ಸಿಡಿಲಿನ ಹಾಗೆ ಅಂಬರೀಶ್ ನಿಧನರಾದ ಸುದ್ದಿ ಅವರ ಕಿವಿಗೆ ಬಿತ್ತು. ಸುದ್ದಿ ತಿಳಿದ ತಕ್ಷಣ ಬೆಂಗಳೂರಿಗೆ ಬರುವ ತಯಾರಿ ನಡೆಸಿದ ಅವರು ಇಂದು ಬೆಳಗ್ಗೆ ಇಲ್ಲಿಗೆ ಬಂದು ಇಳಿದಿದ್ದಾರೆ.

  ತಂದೆ ನಿಧನರಾದ ದಿನ ದರ್ಶನ್ ಸಹಾಯಕ್ಕೆ ಬಂದದ್ದು ಒಬ್ಬ ಡ್ರೈವರ್ !

  ದರ್ಶನ್ ಗೆ ಈ ರೀತಿ ಸಮಸ್ಯೆ ಈ ಹಿಂದೆಯೂ ಆಗಿತ್ತು. ತಮ್ಮ ತಂದೆ ತೂಗುದೀಪ ಶ್ರೀನಿವಾಸ್ ತೀರಿಕೊಂಡಾಗಾ ಕೂಡ ದರ್ಶನ್ ಪಡಬಾರದ ಕಷ್ಟ ಪಟ್ಟು ಅಂತಿಮ ದರ್ಶನ ಪಡೆದಿದ್ದರು. ಈಗ ಚಿತ್ರರಂಗದ ಅವರ ಅಪ್ಪಾಜಿ ಅಂಬರೀಶ್ ನಿಧನರಾದ ವೇಳೆಯೂ ಅದೇ ರೀತಿ ಆಗಿದೆ. ಮುಂದೆ ಓದಿ..

  ತಂದೆಯ ಅಂತಿಮ ದರ್ಶನದ ದಿನ

  ತಂದೆಯ ಅಂತಿಮ ದರ್ಶನದ ದಿನ

  ''ನಮ್ಮ ತಂದೆ ನಿಧನರಾದಾಗ ಅಂದು ಬಸ್ ಸ್ಟ್ರೈಕ್ ಇತ್ತು. ಆಗ ನಾನು ನೀನಾಸಂ ನಲ್ಲಿ ಇದ್ದೆ. ಅಪ್ಪನ ವಿಷಯ ಕೇಳಿ ಹೆಗ್ಗೋಡು ನಿಂದ ಸಾಗರಕ್ಕೆ ಹೇಗೋ ಬಂದೆ. ಸಾಗರದಿಂದ ಶಿವಮೊಗ್ಗಕ್ಕೂ ಬಂದೆ. ಆದರೆ ಅಲ್ಲಿಂದ ಮೈಸೂರಿಗೆ ಹೋಗಬೇಕು ಎಂದಾಗ ತುಂಬನೇ ತೊಂದರೆ ಆಯ್ತು.'' ಎಂದು ದರ್ಶನ್ ಆ ದಿನ ನಡೆದ ಘಟನೆಯನ್ನು ಈ ಹಿಂದೆ ಹೇಳಿಕೊಂಡಿದ್ದರು.

  ಬೆಂಗಳೂರಿಗೆ ಬಂದ ಡಿ ಬಾಸ್: 'ಅಂಬಿ' ದರ್ಶನಕ್ಕೆ ದಾಸ ಪಟ್ಟ ಕಷ್ಟ ಯಾರಿಗೂ ಗೊತ್ತಿಲ್ಲ.!

  ಶಿವಮೊಗ್ಗ ಟು ಮೈಸೂರು

  ಶಿವಮೊಗ್ಗ ಟು ಮೈಸೂರು

  ''ಶಿವಮೊಗ್ಗದಲ್ಲಿ ಮೈಸೂರಿನಿಂದ ಬಂದಿದ್ದ ಒಂದು ಟ್ಯಾಕ್ಸಿ ಇತ್ತು. ಅದರ ಡ್ರೈವರ್ ಮೈಸೂರು ಅಂತ ಕೂಗುವುದು ಕೇಳಿಸಿಕೊಂಡು ನಾನು ಹೋಗಿ ಕುತ್ತಿದೆ. ಆದರೆ ಆ ಡೈವರ್ ಇನ್ನು ಉಳಿದ ಜನರನ್ನು ಬಂದು ತನ್ನ ಟ್ಯಾಕ್ಸಿ ತುಂಬಲಿ ಅಂತ ಕಾಯುತ್ತಿದ್ದ. ಯಾಕೆ ಇವತ್ತೇ ಮೈಸೂರಿಗೆ ಹೋಗುತ್ತಿದ್ದೀರಿ ಅಂತ ಕೇಳಿದ. ನಾನು ನಮ್ಮ ತಂದೆ ನಿಧನರಾದ ವಿಷಯ ಹೇಳಿ ಬೇಗ ಹೋಗ ಬೇಕಾಗಿತ್ತು ಆದರೆ ಇವತ್ತು ಬಸ್ ಇಲ್ಲ ಎಂದೆ. ತಂದೆಗೆ ಆ ರೀತಿ ಆಗಿದೆ ಅಂತ ಹೇಳಿದ ತಕ್ಷಣ ಆತ ಟ್ಯಾಕ್ಸಿ ಸ್ಟಾರ್ಟ್ ಮಾಡಿದ '' - ದರ್ಶನ್, ನಟ

  ಅಂಬಿ ಅಂತ್ಯಕ್ರಿಯೆಗೆ ವಿದೇಶದಿಂದ ಬರ್ತಾರಾ 'ಯಜಮಾನ'.?

  ದರ್ಶನ್ ಸಹಾಯಕ್ಕೆ ಬಂದಿದ್ದ ಟ್ಯಾಕ್ಸಿ ಡ್ರೈವರ್

  ದರ್ಶನ್ ಸಹಾಯಕ್ಕೆ ಬಂದಿದ್ದ ಟ್ಯಾಕ್ಸಿ ಡ್ರೈವರ್

  ''ನಾನು ಇನ್ನು ಜನ ಬರಲಿ ಪರವಾಗಿಲ್ಲ ಅಂದೆ. ಆದರೆ ಆತ ಸರ್.. ಮುಂದೆ ಯಾರಾನಾದರೂ ಹತ್ತಿಸಿಕೊಳ್ಳುತ್ತೇನೆ ಎಂದು ಹೇಳಿ, ಮೈಸೂರು ಬರುವ ವರೆಗೆ ಯಾರನ್ನು ಹತ್ತಿಸಿಕೊಳ್ಳದೆ ಅದಷ್ಟು ಬೇಗ ನಮ್ಮ ಮನೆಗೆ ತಲುಪಿಸಿದ. ನಾನು ನಮ್ಮ ಮನೆ ಹೋದಾಗ ನನ್ನ ಲಗೇಜ್ ಬಾಗಿಲಲ್ಲಿ ಇಟ್ಟು ಹೋಗಿದ್ದ. ನಾನು ಒಳಗೆ ಹೋಗಿ ಆಮೇಲೆ ಬಂದು ನೋಡಿದರೆ ಆತ ಇರಲಿಲ್ಲ. ನನ್ನ ಬಳಿ ದುಡ್ಡು ಕೂಡ ಪಡೆಯಲಿಲ್ಲ'' -ಎಂದು ದರ್ಶನ್ ವಿವರಿಸಿದ್ದರು.

  ಈಗ ಮತ್ತೆ ತೊಂದರೆ ಆಗಿದೆ

  ಈಗ ಮತ್ತೆ ತೊಂದರೆ ಆಗಿದೆ

  ದರ್ಶನ್ ಗೆ ಚಿತ್ರರಂಗದಲ್ಲಿ ತಂದೆಯ ರೀತಿ ಇದ್ದಿದ್ದು ಅಂಬರೀಶ್. ಅವರ ಅಂತಿಮ ದರ್ಶನ ಪಡೆಯಲು ಕೂಡ ದರ್ಶನ್ ಬಹಳ ಕಷ್ಟ ಪಟ್ಟಿದ್ದರು. ಸ್ವೀಡನ್ ನಲ್ಲಿ ಚಿತ್ರೀಕರಣ ಮಾಡುತ್ತಿದ್ದ ದರ್ಶನ್ ನಾಲ್ಕು ದೇಶಗಳನ್ನು ದಾಟಿ ಇಂದು ಅಂಬಿಯ ಮುಖ ನೋಡಿದರು. ಸಾವಿನ ಸಮಯದಲ್ಲಿ ಪೂರ್ತಿಯಾಗಿ ಅಂಬಿ ಜೊತೆಗೆ ದರ್ಶನ್ ಇರಲಾಗಲಿಲ್ಲ.

  ನೇರ ವಿಮಾನ ಇರಲಿಲ್ಲ

  ನೇರ ವಿಮಾನ ಇರಲಿಲ್ಲ

  ಭಾರತ ಮತ್ತು ಸ್ವೀಡನ್ ದೇಶಕ್ಕೆ ನೇರವಾಗಿ ವಿಮಾನವಿಲ್ಲ. ದುಬೈ ಮೂಲಕ ಭಾರತಕ್ಕೆ ಪ್ರಯಾಣ ಮಾಡಬೇಕು. ಸ್ವೀಡನ್ ನಿಂದ ಭಾರತಕ್ಕೆ ಅಂದಾಜು 7000 ಕಿಲೋ ಮೀಟರ್ ಗಳಷ್ಟು ವಿಮಾನದಲ್ಲಿ ಪ್ರಯಾಣ ಮಾಡಬೇಕಾಗಿದೆ. ಸ್ವೀಡನ್ ನಿಂದ ದುಬೈ, ದುಬೈನಿಂದ ಬೆಂಗಳೂರು ಮಾರ್ಗವಾಗಿ ದರ್ಶನ್ ಬಂದಿದ್ದಾರೆ. ಹೀಗಾಗಿ ದರ್ಶನ್ ಬರುವುದು ಬಹಳ ತಡವಾಯ್ತು.

  English summary
  Actor Darshan faced difficulties during his father death also.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X