For Quick Alerts
  ALLOW NOTIFICATIONS  
  For Daily Alerts

  ಮನೆಗೆ 'ಡಿ ಬಾಸ್' ಎಂದು ಹೆಸರಿಟ್ಟ ಅಭಿಮಾನಿ, ದರ್ಶನ್ ಫ್ಯಾನ್ಸ್ ಖುಷಿ

  |

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಅಭಿಮಾನಿಗಳು, ತಮ್ಮ ಅಭಿಮಾನ ತೋರಿಸುವುದಕ್ಕಾಗಿ ಹೊಸ ರೀತಿ ಕೆಲಸಗಳನ್ನು ಮಾಡುತ್ತಿರುತ್ತಾರೆ. ಇಲ್ಲೊಬ್ಬ ಅಭಿಮಾನಿ ನಿರ್ಮಾಣ ಹಂತದಲ್ಲಿರುವ ತಮ್ಮ ನೂತನ ನಿವಾಸಕ್ಕೆ ದರ್ಶನ್ ಅವರ ಹೆಸರಿಟ್ಟಿದ್ದಾರೆ.

  Upendra ಅಭಿನಯದ ಬ್ರಹ್ಮ ಚಿತ್ರ ತಯಾರಾದ ಕ್ಷಣಗಳು | FILMIBEAT KANNADA

  ಈ ಫೋಟೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಡಿ ಬಾಸ್ ಭಕ್ತಗಣ ಆ ಅಭಿಮಾನಿಗೆ ಹಾಟ್ಸಾಪ್ ಹೇಳುತ್ತಿದ್ದಾರೆ. ತಮ್ಮ ನೆಚ್ಚಿನ ನಟನ ಮೇಲಿನ ಅಭಿಮಾನಕ್ಕಾಗಿ ಫ್ಯಾನ್ ಮಾಡಿರುವ ಕೆಲಸ ನಿಜಕ್ಕೂ ಅಚ್ಚರಿಗೆ ಕಾರಣವಾಗಿದೆ. ಮುಂದೆ ಓದಿ...

  'ಡಿ' ಅಣ್ಣನ ಹೆಸರೇ ಆಸರೆ

  'ಡಿ' ಅಣ್ಣನ ಹೆಸರೇ ಆಸರೆ

  ನಿರ್ಮಾಣ ಹಂತದ ಮನೆಗೆ ಡಿ-ಬಾಸ್ ಎಂದು ಹೆಸರಿಟ್ಟಿರುವ ಅಭಿಮಾನಿ ಬಗ್ಗೆ ಪೂರ್ತಿ ವಿವರ ಲಭ್ಯವಾಗಿಲ್ಲ. ಈ ಮನೆ ಯಾವ ಊರಿನಲ್ಲಿ ನಿರ್ಮಾಣವಾಗುತ್ತಿದೆ, ಆ ಅಭಿಮಾನಿಯ ಹೆಸರು ಏನು ಎಂಬುದರ ಬಗ್ಗೆ ಕುತೂಹಲ ಹೆಚ್ಚಿದೆ. ಆದರೆ, ಫೋಟೋ ಮಾತ್ರ ಡಿ ಬಾಸ್ ಭಕ್ತರ ಪಾಲಿಗೆ ಬಹಳ ಖುಷಿ ನೀಡುತ್ತಿದೆ. ದರ್ಶನ್ ಅವರ ಅಭಿಮಾನಿಗಳ ಫೇಸ್‌ಬುಕ್, ಟ್ವಿಟ್ಟರ್ ಖಾತೆಗಳಲ್ಲಿ ಫೋಟೋ ಹೆಚ್ಚು ಶೇರ್ ಆಗುತ್ತಿದೆ.

  ಚಿತ್ರದುರ್ಗದ ದರ್ಶನ್ ಅಭಿಮಾನಿಯ ಕೆಲಸಕ್ಕೆ 'ಡಿ' ಭಕ್ತರು ಖುಷಿಯೋ ಖುಷಿ

  ಚಿತ್ರದುರ್ಗದಲ್ಲಿ ಇಂತಹ ಘಟನೆ ವರದಿಯಾಗಿತ್ತು

  ಚಿತ್ರದುರ್ಗದಲ್ಲಿ ಇಂತಹ ಘಟನೆ ವರದಿಯಾಗಿತ್ತು

  ಈ ಹಿಂದೆ 2018ರಲ್ಲಿ ಚಿತ್ರದುರ್ಗದಲ್ಲಿ ಯೋಗಿ ಎಂಬ ಅಭಿಮಾನಿಯೊಬ್ಬರು ತಮ್ಮ ನೂತನವಾಗಿ ನಿರ್ಮಿಸಿದ್ದ ಮನೆಗೆ 'ಚಾಲೆಂಜಿಂಗ್' ಎಂದು ಹೆಸರಿಟ್ಟಿದ್ದರು. ಆಗಲೂ ಈ ಫೋಟೋಗಳು ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಈ ಮನೆ ಗ್ರೌಂಡ್ ಫ್ಲೋರ್ ಮತ್ತು ಫಸ್ಟ್ ಫ್ಲೋರ್ ಹೊಂದಿತ್ತು.

  ರಾಬರ್ಟ್ ಮಾಸ್ಕ್

  ರಾಬರ್ಟ್ ಮಾಸ್ಕ್

  ಕೊರೊನಾ ವೈರಸ್ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ದರ್ಶನ್ ಅಭಿಮಾನಿಗಳು 'ರಾಬರ್ಟ್ ಮಾಸ್ಕ್' ತಯಾರಿಸಿದ್ದರು. ಮಾಸ್ಕ್ ಮೇಲೆ ರಾಬರ್ಟ್ ಚಿತ್ರದ ಹೆಸರು ಮತ್ತು ದರ್ಶನ್ ಅವರ ಫೋಟೋ ಮುದ್ರಿಸಿ ಮಾರುಕಟ್ಟೆಗೆ ಪರಿಚಯಿಸಿದ್ದರು.

  ಮಾಸ್ಕ್ ನಲ್ಲಿಯೂ ಡಿ ಬಾಸ್ ದರ್ಶನ್ 'ರಾಬರ್ಟ್' ಹವಾ

  ಟ್ರ್ಯಾಕ್ಟರ್, ಎತ್ತಿನ ಗಾಡಿಯಲ್ಲಿ ನಟ

  ಟ್ರ್ಯಾಕ್ಟರ್, ಎತ್ತಿನ ಗಾಡಿಯಲ್ಲಿ ನಟ

  ಲಾಕ್‌ಡೌನ್‌ನಿಂದ ಶೂಟಿಂಗ್ ಇಲ್ಲದೆ ಮನೆಯಲ್ಲಿದ್ದ ದರ್ಶನ್ ಹೆಚ್ಚಿನ ಸಮಯ ತಮ್ಮ ಫಾರ್ಮ್ ಹೌಸ್‌ನಲ್ಲಿ ಕಳೆದಿದ್ದಾರೆ. ಈ ವೇಳೆ ಹಸು ಸೇರಿದಂತೆ ಪ್ರಾಣಿಗಳ ಆರೈಕೆ ಮಾಡುವುದರಲ್ಲಿ ತೊಡಗಿಸಿಕೊಂಡಿದ್ದರು. ಟ್ರ್ಯಾಕ್ಟರ್ ಚಾಲನೆ ಮಾಡಿದ್ದರು. ಎತ್ತಿನ ಗಾಡಿ ಸವಾರಿ ಮಾಡಿದ್ದರು. ಮಾಜಿ ಸಚಿವ ವಿನಯ್ ಕುಲಕರ್ಣಿ ಅವರ ತೋಟಕ್ಕೆ ಭೇಟಿ ನೀಡಿ ಎತ್ತಿನ ಗಾಡಿ ಸವಾರಿ ಮಾಡಿದ್ದ ವಿಡಿಯೋ ವೈರಲ್ ಆಗಿತ್ತು.

  English summary
  Challenging star Darshan fan named D-Boss for the his new house.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X