For Quick Alerts
  ALLOW NOTIFICATIONS  
  For Daily Alerts

  ದರ್ಶನ್ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾದ 'ಬಿಗ್ ಬಾಸ್' ಪ್ರಥಮ್

  |
  ದರ್ಶನ್ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾದ 'ಬಿಗ್ ಬಾಸ್' ಪ್ರಥಮ್..! | FILMIBEAT KANNADA

  ಬಿಗ್ ಬಾಸ್ ಖ್ಯಾತಿಯ ಪ್ರಥಮ್ ಇಂಡಸ್ಟ್ರಿಯಲ್ಲಿರುವ ಬಹುತೇಕ ಎಲ್ಲ ನಟರ ಜೊತೆಯಲ್ಲೂ ಉತ್ತಮ ಬಾಂಧವ್ಯ ಇಟ್ಟುಕೊಂಡಿದ್ದಾರೆ. ಅದೇ ರೀತಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಬಳಿಯೂ ಪ್ರಥಮ್ ಟಚ್ ನಲ್ಲಿ ಇದ್ದಾರೆ. ಪ್ರಥಮ್ ಅಭಿನಯಿಸಿದ್ದ 'ಎಂಎಲ್ಎ' ಚಿತ್ರದ ಆಡಿಯೋ ಲಾಂಚ್ ಮಾಡಿದ್ದು ಕೂಡ ದರ್ಶನ್ ಅವರೇ.

  ಇನ್ನು ದರ್ಶನ್ ಅವರ ಬಗ್ಗೆ ಪ್ರಥಮ್ ಹೋದಲ್ಲಿ ಬಂದಲ್ಲಿ ಮೆಚ್ಚುಗೆ ಮಾತುಗಳನ್ನಾಡಿದ್ದನ್ನ ನೋಡಿದ್ದೀವಿ. ಆದ್ರೀಗ, ಡಿ-ಬಾಸ್ ಬಗ್ಗೆ ಆಶ್ಚರ್ಯಕರ ಹೇಳಿಕೆ ನೀಡಿ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

  'ಎಂಎಲ್ಎ' ಬೆಂಬಲಕ್ಕೆ ನಿಂತ ಚಾಲೆಂಜಿಂಗ್ ಸ್ಟಾರ್ ದರ್ಶನ್

  ಹೌದು, ಪ್ರಥಮ್ ನಟಿಸಿ, ನಿರ್ದೇಶನದ ನ'ಟಭಯಂಕರ' ಚಿತ್ರದ ಪೋಸ್ಟರ್ ರಿಲೀಸ್ ಮಾಡಲು ''ದರ್ಶನ್ ಅವರಿಗಿಂತ ದೊಡ್ಡ ಸ್ಟಾರ್ ಬರ್ತಾರೆ'' ಎಂದು ಹೇಳಿಕೊಂಡಿದ್ದಾರೆ. ಇದು ದರ್ಶನ್ ಅಭಿಮಾನಿಗಳನ್ನ ತಾಳ್ಮೆ ಕೆಡಿಸಿದೆ. ಆದ್ರೆ, ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದ ಪ್ರಥಮ್ ಕೂಲ್ ಆಗಿ ರಿಯಾಕ್ಟ್ ಮಾಡಿದ್ದಾರೆ. ಏನಿದು, ಪ್ರಥಮ್ ಮತ್ತು ದರ್ಶನ್ ಅಭಿಮಾನಿಗಳ ಹೊಸ ವಿವಾದ? ಮುಂದೆ ಓದಿ.....

  ಯಾರು ಆ ಬಿಗ್ ಸ್ಟಾರ್?

  ಯಾರು ಆ ಬಿಗ್ ಸ್ಟಾರ್?

  'ನಟಭಯಂಕರ' ಚಿತ್ರದ ಪೋಸ್ಟರ್ ರಿಲೀಸ್ ಮಾಡಲು 'ದರ್ಶನ್ ಅವರಿಗಿಂತ ದೊಡ್ಡ ಸ್ಟಾರ್' ಬರ್ತಾರೆ ಎಂದು ಹೇಳುತ್ತಿರುವ ಪ್ರಥಮ್, ಯಾರಿಂದ ಪೋಸ್ಟರ್ ಬಿಡುಗಡೆ ಮಾಡಿಸಲಿದ್ದಾರೆ ಎಂಬುದು ಈಗ ಕುತೂಹಲ ಮೂಡಿಸಿದೆ. ಮತ್ತೊಂದು ಕಡೆ ಡಿ ಬಾಸ್ ಅಭಿಮಾನಿಗಳ ಕೋಪಕ್ಕೆ ಗುರಿಯಾಗಿದ್ದಾರೆ ಒಳ್ಳೆ ಹುಡುಗ ಪ್ರಥಮ್.

  ದರ್ಶನ್ ತಾಯಿ ಅಥವಾ ಮಗ ಇರಬಹುದು

  ದರ್ಶನ್ ತಾಯಿ ಅಥವಾ ಮಗ ಇರಬಹುದು

  ಸಿನಿಮಾ ಪ್ರಚಾರಕ್ಕಾಗಿ ಈ ರೀತಿ ಗಿಮಿಕ್ ಮಾಡೋದ್ರಲ್ಲಿ ಪ್ರಥಮ್ ಎತ್ತಿದ ಕೈ. ಬಹುಶಃ ಆ ದೊಡ್ಡ ಸ್ಟಾರ್ ದರ್ಶನ್ ಅವರ ತಾಯಿ ಅಥವಾ ಮಗ ಇರಬಹುದು ಎಂದು ಊಹಿಸುತ್ತಿದ್ದಾರೆ. ಇನ್ನು ಕೆಲವರು ಪ್ರಥಮ್ ಅವರ ಈ ಹೇಳಿಕೆಯನ್ನ ಖಂಡಿಸಿ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಈ ರೀತಿ ಪ್ರಚಾರ ಮಾಡುವುದು ತಪ್ಪು ಎನ್ನುತ್ತಿದ್ದಾರೆ.

  ಯಡಿಯೂರಪ್ಪ ಅವರನ್ನ ಭೇಟಿ ಮಾಡಿದ ಪ್ರಥಮ್, ಕಾರಣವೇನು?

  ಕಾದು ನೋಡಿ ಅಂತಿದ್ದಾರೆ ಪ್ರಥಮ್

  ಕಾದು ನೋಡಿ ಅಂತಿದ್ದಾರೆ ಪ್ರಥಮ್

  ಅಭಿಮಾನಿ ಆಕ್ರೋಶವನ್ನ ತಾಳ್ಮೆಯಿಂದ ಸ್ವೀಕರಿಸುತ್ತಿರುವ ಪ್ರಥಮ್, ''ಕಾದು ನೋಡಿ, ದರ್ಶನ್ ಅವರಿಗಿಂತ ದೊಡ್ಡ ಸ್ಟಾರ್ ನನ್ನ ಚಿತ್ರದ ಪೋಸ್ಟರ್ ರಿಲೀಸ್ ಮಾಡ್ತಾರೆ. ಅವರು ಈಗಾಗಲೇ ಪೋಸ್ಟರ್ ಬಿಡುಗಡೆ ಮಾಡಲು ಒಪ್ಪುಕೊಂಡಿದ್ದಾರೆ'' ಎಂದು ಹೇಳಿದ್ದಾರೆ.

  ದರ್ಶನ್ ಆಪ್ತರೇ ಪಕ್ಕಾ

  ದರ್ಶನ್ ಆಪ್ತರೇ ಪಕ್ಕಾ

  ಪ್ರಥಮ್ ಇಷ್ಟು ಕಾನ್ಫಿಡೆನ್ಸ್ ಆಗಿ ಹೇಳ್ತಿದ್ದಾರೆ ಅಂದ್ರೆ ಅದು ದರ್ಶನ್ ಅವರ ಆಪ್ತರೇ ಇರಬೇಕು ಎಂಬುದು ಚರ್ಚೆ. ದರ್ಶನ್ ಅವರ ತಾಯಿ, ಮಗ, ಅಥವಾ ಅವರಿಗೆ ತುಂಬಾ ಬೇಕಾದವರು ಯಾರೋ ಒಬ್ಬರು ಅನ್ನೊದು ಪಕ್ಕಾ. ಬಟ್ ಅದು ಯಾರು ಎಂಬುದನ್ನ ಸ್ವತಃ ಪ್ರಥಮ್ ಅವರೇ ಹೇಳಬೇಕಿದೆ. ಅದಕ್ಕೆ ಉತ್ತರ ನಾಳೆ ಸಿಗಲಿದೆ. ಯಾಕಂದ್ರೆ, ನಟಭಯಂಕರ ಪೋಸ್ಟರ್ ನಾಳೆ ಬಿಡುಗಡೆಯಾಗುತ್ತಿದೆ.

  English summary
  Challenging star darshan fans expressed angry on bigg boss pratham.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X