For Quick Alerts
  ALLOW NOTIFICATIONS  
  For Daily Alerts

  ವಿನೋದ್ ಪ್ರಭಾಕರ್ ಹುಟ್ಟುಹಬ್ಬಕ್ಕೆ ಭರ್ಜರಿ ಗಿಫ್ಟ್ ಕೊಟ್ಟ ಡಿ-ಬಾಸ್

  |

  ಮರಿ ಟೈಗರ್ ವಿನೋದ್ ಪ್ರಭಾಕರ್ ಗೆ ಇಂದು ಹುಟ್ಟುಹಬ್ಬದ ಸಂಭ್ರಮ. ವಿನೋದ್ ಅವರ ಬರ್ತಡೇ ಪ್ರಯುಕ್ತ ಅಭಿಮಾನಿಗಳು ಕೇಕ್ ಕತ್ತರಿಸಿ, ಸಿಹಿ ಹಂಚಿ ಸಂಭ್ರಮಿಸಿದ್ದಾರೆ. ಮರಿ ಟೈಗರ್ ಬರ್ತಡೇ ಅಂದ್ಮೇಲೆ ಡಿ ಬಾಸ್ ದರ್ಶನ್ ಭೇಟಿ ಮಾಡುವುದು, ಗಿಫ್ಟ್ ಏನಾದರೂ ನೀಡುವುದು ಸಾಮಾನ್ಯ. ಈ ಸಂಪ್ರದಾಯ ಈ ವರ್ಷವೂ ನಡೆದಿದೆ.

  ಹುಟ್ಟುಹಬ್ಬದ ಪ್ರಯುಕ್ತ ದರ್ಶನ್ ಅವರನ್ನು ಭೇಟಿ ಮಾಡಿದ ವಿನೋದ್ ಪ್ರಭಾಕರ್ ಅವರಿಗೆ, ಚಾಲೆಂಜಿಂಗ್ ಸ್ಟಾರ್ ಭರ್ಜರಿ ಗಿಫ್ಟ್ ಕೊಟ್ಟಿದ್ದಾರೆ. ಈ ಗಿಫ್ಟ್ ಬಗ್ಗೆ ಸ್ವತಃ ವಿನೋದ್ ಪ್ರಭಾಕರ್ ಮಾತನಾಡಿದ್ದಾರೆ. ಹಾಗಿದ್ರೆ, ಆ ಗಿಫ್ಟ್ ಯಾವುದು? ಮುಂದೆ ಓದಿ...

  ಫೋನ್ ಮಾಡಿ ವಿಶ್ ಮಾಡಿದ ದರ್ಶನ್

  ಫೋನ್ ಮಾಡಿ ವಿಶ್ ಮಾಡಿದ ದರ್ಶನ್

  ವಿನೋದ್ ಪ್ರಭಾಕರ್ ಅವರಿಗೆ ಕಾಲ್ ಮಾಡಿದ್ದ ದರ್ಶನ್ ''ಹ್ಯಾಪಿ ಬರ್ತಡೇ ಟೈಗರ್'' ಎಂದು ವಿಶ್ ಮಾಡಿದರಂತೆ. ಬಳಿಕ ಡಿ-ಬಾಸ್ ಮನೆಗೆ ಭೇಟಿ ನೀಡಿದ ವೇಳೆ ಕೇಕ್ ಕತ್ತರಿಸಿದರಂತೆ. ಕೇಕ್ ಮೇಲೂ ಕೂಡ ಹ್ಯಾಪಿ ಬರ್ತಡೇ ಟೈಗರ್ ಎಂದೇ ಬರೆಸಲಾಗಿತ್ತು ಎಂದು ವಿನೋದ್ ಪ್ರಭಾಕರ್ ತಿಳಿಸಿದರು.

  'ರಾಬರ್ಟ್' ಚಿತ್ರದಲ್ಲಿ ನಟ ವಿನೋದ್ ಪ್ರಭಾಕರ್?'ರಾಬರ್ಟ್' ಚಿತ್ರದಲ್ಲಿ ನಟ ವಿನೋದ್ ಪ್ರಭಾಕರ್?

  ಭರ್ಜರಿ ಗಿಫ್ಟ್ ಕೊಟ್ಟ ಡಿ ಬಾಸ್

  ಭರ್ಜರಿ ಗಿಫ್ಟ್ ಕೊಟ್ಟ ಡಿ ಬಾಸ್

  ವಿನೋದ್ ಪ್ರಭಾಕರ್ ಅವರ ಹುಟ್ಟುಹಬ್ಬದ ಪ್ರಯುಕ್ತ ಭರ್ಜರಿ ಗಿಫ್ಟ್ ಕೊಟ್ಟರಂತೆ. ಆದರೆ, ಆ ಗಿಫ್ಟ್ ಏನು ಎಂದು ಹೇಳದ ವಿನೋದ್ ''ಅದು ಪರ್ಸನಲ್ ಅದನ್ನು ನಾನು ಹೇಳಲ್ಲ'' ಎಂದರು. ಗಿಫ್ಟ್ ಕೊಟ್ಟಿದ್ದು ನಿಜ ಎಂದು ತಿಳಿಸಿದ ವಿನೋದ್, ಆ ಗಿಫ್ಟ್ ಏನೆಂದು ಹೇಳಲಿಲ್ಲ. ಹಾಗಾಗಿ, ಈ ಉಡುಗೊರೆಯ ಬಗ್ಗೆ ಮತ್ತಷ್ಟು ಕುತೂಹಲ ಹುಟ್ಟಿಕೊಂಡಿದೆ.

  ದರ್ಶನ್ ನೀಡಿದ ಸಲಹೆ ಏನು?

  ದರ್ಶನ್ ನೀಡಿದ ಸಲಹೆ ಏನು?

  ದರ್ಶನ್ ಅವರಿಗೆ ವಿನೋದ್ ಪ್ರಭಾಕರ್ ಅಂದ್ರೆ ಬಹಳ ಇಷ್ಟ ಮತ್ತು ಅಚ್ಚುಮೆಚ್ಚು. ಮರಿ ಟೈಗರ್ ಅವರಿಗೆ ಆರಂಭದಿಂದಲೂ ಜೊತೆಯಾಗಿರುವ ಡಿ ಬಾಸ್, ಅವರ ಪ್ರತಿ ಚಿತ್ರಗಳಿಗೂ ಸಾಥ್ ನೀಡುತ್ತಾ ಬಂದಿದ್ದಾರೆ. ಈಗಲೂ ಮನೆಗೆ ಹೋಗಿದ್ದಾಗ ''ಟೈಗರ್ ಜೀವನದಲ್ಲಿ ತುಂಬಾ ಬ್ಯುಸಿ ಇರಬೇಕು'' ಎಂದು ಸಲಹೆ ನೀಡಿದರಂತೆ.

  ವಿನೋದ್ ಪ್ರಭಾಕರ್ ಚಿತ್ರದ ಟ್ರೈಲರ್ ಲಾಂಚ್ ಮಾಡಲಿದ್ದಾರೆ ದರ್ಶನ್ವಿನೋದ್ ಪ್ರಭಾಕರ್ ಚಿತ್ರದ ಟ್ರೈಲರ್ ಲಾಂಚ್ ಮಾಡಲಿದ್ದಾರೆ ದರ್ಶನ್

  ವಿನೋದ್ ಚಿತ್ರಗಳು ಯಾವುದು?

  ವಿನೋದ್ ಚಿತ್ರಗಳು ಯಾವುದು?

  ಸದ್ಯ ವಿನೋದ್ ಪ್ರಭಾಕರ್ ನಟನೆಯ ಫೈಟರ್ ಮತ್ತು ಶ್ಯಾಡೋ ಸಿನಿಮಾಗಳು ರಿಲೀಸ್ ಗೆ ರೆಡಿಯಾಗಿದೆ. ಎರಡು ಚಿತ್ರಗಳು ಚಿತ್ರೀಕರಣ ಮುಗಿಸಿ ತೆರೆಗೆ ಬರಲು ಕಾಯುತ್ತಿದೆ. ಇನ್ನು ಹೆಸರಿಡದ ಚಿತ್ರವೊಂದು ಕೂಡ ಮುಗಿದಿದೆ. ಈ ಮಧ್ಯೆ ಹೊಸ ಸಿನಿಮಾವೊಂದು ಕೈಗೆತ್ತಿಕೊಂಡಿದ್ದಾರೆ. ಈ ಕಡೆ ದರ್ಶನ್ ಜೊತೆ ರಾಬರ್ಟ್ ಸಿನಿಮಾದಲ್ಲೂ ಮರಿ ಟೈಗರ್ ನಟಿಸುತ್ತಿದ್ದಾರೆ.

  English summary
  Challenging star darshan gave surprise gift to his friend vinod prabhakar for Birthday.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X