ದರ್ಶನ್ ಮೇಲಿನ ಆಪಾದನೆಯನ್ನ ಅಳಿಸಿ ಹಾಕಿದ ಸುಮಲತಾ
Recommended Video
ಸಿನಿಮಾ ಸ್ಟಾರ್ ಗಳು ರಾಜಕಾರಣಿಗಳ ಪರ ಪ್ರಚಾರ ಮಾಡಿದ್ರೆ ಜನ ಸೇರ್ತಾರೆ, ಮತಗಳಾಗಿ ಪರಿವರ್ತನೆಯಾಗಲ್ಲ ಎಂಬುದು ಬಹಳ ಹಿಂದಿನಿಂದಲೂ ಚರ್ಚೆಯಾಗುತ್ತಿರುವ ವಿಷ್ಯ. ಆದರೂ ಪ್ರತಿ ಚುನಾವಣೆಯಲ್ಲೂ ಸಿನಿಮಾ ತಾರೆಯರು ಅಭ್ಯರ್ಥಿಗಳ ಪರ ಪ್ರಚಾರ ಮಾಡ್ತಾನೇ ಇರ್ತಾರೆ.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ದರ್ಶನ್ ಪ್ರಚಾರದ ಬಗ್ಗೆ ಆಪಾದನೆ, ಆರೋಪ ಒಂದು ಭಾರಿ ಸದ್ದು ಮಾಡಿತ್ತು. ದರ್ಶನ್ ಪ್ರಚಾರ ಮಾಡಿದ್ರೆ ಅವರ ಅಭ್ಯರ್ಥಿ ಗೆಲ್ಲಲ್ಲ ಎಂದು ಕಾಲೆಳೆದರು. ಅದಕ್ಕೆ ಉದಾಹರಣೆ ಎಂಬಂತೆ ಮಾಜಿ ಸಿಎಂ ಸಿದ್ದರಾಮಯ್ಯ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಕಂಡ ಸೋಲು ಕಣ್ಣ ಮುಂದೆ ಇತ್ತು.
ಅದೇ ವಿಷ್ಯವನ್ನ ಮಂಡ್ಯದಲ್ಲಿ ತೇಲಿಬಿಟ್ಟು ಡಿ ಬಾಸ್ ಬಳಗಕ್ಕೆ ಮಾನಸಿಕವಾಗಿ ಅಟ್ಯಾಕ್ ಮಾಡಿದ್ದರು ಪ್ರತಿಪಕ್ಷಗಳು. ಅಂದು ದರ್ಶನ್ ಪ್ರಚಾರ ಮಾಡಿದ್ದ ಸಿದ್ದರಾಮಯ್ಯ ಗೆಲ್ಲಲಿಲ್ಲ. ಈಗ ಸುಮಲತಾನೂ ಗೆಲ್ಲಲ್ಲ ಎಂದು ಬಿಂಬಿಸಿದರು. ಆದ್ರೀಗ, ಡಿ ಬಾಸ್ ಮೇಲಿನ ಆಪಾದನೆ, ಆರೋಪವನ್ನ ಭರ್ಜರಿ ಗೆಲುವಿನ ಮೂಲಕ ಸುಮಲತಾ ಅಳಿಸಿಹಾಕಿದ್ದಾರೆ. ಮುಂದೆ ಓದಿ....

ಕಾಲರ್ ಎತ್ತಿದ ಡಿ-ಬಾಸ್ ಬಳಗ
ದರ್ಶನ್ ಪ್ರಚಾರ ಮಾಡಿದ್ರೆ ಸುಮಲತಾ ಗೆಲ್ಲಲ್ಲ ಎಂದುವರಿಗೆ ಮಂಡ್ಯ ಫಲತಾಂಶ ಉತ್ತರ ನೀಡಿದೆ. ಒಂದು ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಅಂಬರೀಶ್ ಪತ್ನಿ ಜಯಗೊಳಿಸಿದ್ದು, ಇದು ದರ್ಶನ್ ಅಭಿಮಾನಿಗಳಿಗೆ ಖುಷಿ ತಂದಿದೆ. ಸುಮಲತಾ ಗೆಲುವಿನಲ್ಲಿ ಡಿ ಬಾಸ್ ಅವರ ಪಾಲು ಇದೆ ಎಂದು ಕಾಲರ್ ಎತ್ತಿದ್ದಾರೆ.

ಹತ್ತಕ್ಕೂ ಹೆಚ್ಚು ದಿನ ಡಿ ಬಾಸ್ ಪ್ರಚಾರ
ಮಂಡ್ಯದಲ್ಲಿ ಸುಮಲತಾ ಪರ ಕ್ಯಾಂಪೇನ್ ಮಾಡಿದ್ದ ದರ್ಶನ್ ಸತತವಾಗಿ ಹತ್ತಕ್ಕೂ ಹೆಚ್ಚು ದಿನ ಬೀದಿಗಿಳಿದು ಮತ ಕೇಳಿದ್ದರು. ಮಂಡ್ಯ, ನಾಗಮಂಗಲ, ಕೆ.ಆರ್ ಪೇಟೆ, ಕೆ.ಆರ್ ನಗರ, ಮಳವಳ್ಳಿ, ಪಾಂಡವಪುರ, ಶ್ರೀರಂಗಪಟ್ಟಣ ಎಲ್ಲ ಕಡೆಯೂ ಹಳ್ಳಿ ಹಳ್ಳಿಗೂ ಹೋಗಿದ್ದರು. ಹೋದೆಲ್ಲೆಲ್ಲ ಜನಸಾಗರವೇ ಸೇರಿತ್ತು.

ರಾಬರ್ಟ್ ಸೆಟ್ ನಲ್ಲೇ ಸಂಭ್ರಮ
ರಾಬರ್ಟ್ ಚಿತ್ರೀಕರಣದಲ್ಲಿರುವ ದರ್ಶನ್, ಮಂಡ್ಯದಲ್ಲಿ ಸುಮಲತಾ ಗೆದ್ದಿದ್ದಾರೆ ಎಂದು ತಿಳಿಯುತ್ತಿದ್ದಂತೆ ವಿಡಿಯೋ ಮೂಲಕ ಮಂಡ್ಯ ಜನರಿಗೆ ಧನ್ಯವಾದ ತಿಳಿಸಿದ್ದಾರೆ. ರಾಬರ್ಟ್ ಸೆಟ್ ನಲ್ಲಿ ಕೇಕ್ ಕತ್ತರಿಸಿ ಸಂಭ್ರಮಿಸಿದ್ದಾರೆ. ಮಂಡ್ಯ ಅಭಿವೃದ್ದಿಗಾಗಿ ಸುಮಲತಾ ಅಮ್ಮ ಎಲ್ಲ ರೀತಿಯ ಕೆಲಸ ಮಾಡ್ತಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ದರ್ಶನ್-ಯಶ್ ಜುಗಲ್ ಬಂಧಿ
ಮಂಡ್ಯದಲ್ಲಿ ಸುಮಲತಾ ಜಯಗಳಿಸಲು ಹಲವು ಕಾರಣಗಳಿರಬಹುದು. ಅದರಲ್ಲಿ ಒಂದು ಕಾರಣ ಜೋಡೆತ್ತುಗಳ ಬಲ. ದರ್ಶನ್ ಮತ್ತು ಯಶ್ ಒಟ್ಟಿಗೆ ನಿಂತು ಮಂಡ್ಯದಲ್ಲಿ ಅಬ್ಬರದ ಪ್ರಚಾರ ಮಾಡಿದ್ದು ಹಾಗೂ ಜನರ ಮನಸ್ಸು ಸುಮಲತಾ ಪರವಾಗಿ ವಾಲುವಂತೆ ಅವರು ಮಾಡಿದ ಕೆಲವು ಕೆಲಸಗಳು ಕೂಡ ಗೆಲುವಿಗೆ ಕಾರಣವಾಗಿದೆ. ಇದನ್ನೇ ಸುಮಲತಾ ಕೂಡ ಹೇಳಿದ್ದಾರೆ. ನನ್ನ ಗೆಲುವಿನಲ್ಲಿ ಯಶ್ ಮತ್ತು ದರ್ಶನ್ ಇಬ್ಬರು ಇರಲಿದ್ದು, ಎಲ್ಲರೂ ಸೇರಿ ಸಂಭ್ರಮಿಸುತ್ತೇವೆ ಎಂದಿದ್ದಾರೆ.


Click it and Unblock the Notifications











