For Quick Alerts
  ALLOW NOTIFICATIONS  
  For Daily Alerts

  ಆಷಾಢ ಶುಕ್ರವಾರ ಹಿನ್ನೆಲೆ ಚಾಮುಂಡಿ ದರ್ಶನ ಪಡೆದ ಡಿ ಬಾಸ್

  By Pavithra
  |
  ನಾಡ ಅಧಿದೇವತೆ ದರ್ಶನ ಪಡೆದುಕೊಂಡ ದರ್ಶನ್...! | Filmibeat Kannada

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಆಗಾಗ ಮೈಸೂರಿಗೆ ಭೇಟಿ ನೀಡುತ್ತಲೇ ಇರುತ್ತಾರೆ. ಮೂಲತಃ ಮೈಸೂರಿನವರೇ ಆಗಿರುವ ದರ್ಶನ್ ಅವರ ಆರಾಧ್ಯ ದೈವ ಚಾಮುಂಡೇಶ್ವರಿ. ಯಾವುದೇ ಶುಭ ಕೆಲಸಗಳನ್ನು ಮಾಡುವ ಮುನ್ನ ಬೆಟ್ಟದ ಅರಸಿಗೆ ನಮಿಸಿ ಮುಂದಿನ ಕೆಲಸಗಳನ್ನು ಮಾಡುವುದು ಡಿ ಬಾಸ್ ಹಿಂದಿನಿಂದಲೂ ನಡೆಸಿಕೊಂಡು ಬಂದಿದ್ದಾರೆ.

  ಸಾಮಾನ್ಯ ದಿನಗಳು ಮಾತ್ರವಲ್ಲದೆ ಆಷಾಢ ಶುಕ್ರವಾರ, ವರ್ಧಂತಿ, ಶ್ರಾವಣ ಮಾಸದಲ್ಲಿ ಎಷ್ಟೇ ಕೆಲಸವಿದ್ದರೂ ಅದಕ್ಕೊಂದು ಸಣ್ಣ ಬ್ರೇಕ್ ಕೊಟ್ಟು ದರ್ಶನ್ ತಪ್ಪದೇ ಚಾಮುಂಡಿಯ ದರ್ಶನ ಪಡೆದುಕೊಳ್ಳುತ್ತಾರೆ.

  'ನಾಗರಹಾವು' ಚಿತ್ರಕ್ಕೆ ಶುಭಕೋರಿದ ಚಾಲೆಂಜಿಂಗ್ ಸ್ಟಾರ್'ನಾಗರಹಾವು' ಚಿತ್ರಕ್ಕೆ ಶುಭಕೋರಿದ ಚಾಲೆಂಜಿಂಗ್ ಸ್ಟಾರ್

  ಇಂದು ಆ‍ಷಾಡ ಶುಕ್ರವಾರ ಈ ಹಿನ್ನಲೆಯಲ್ಲಿ ಮೈಸೂರಿನ ಚಾಮುಂಡಿಬೆಟ್ಟಕ್ಕೆ ನಟ ದರ್ಶನ್ ಭೇಟಿ ನೀಡಿದ್ದಾರೆ. ಪ್ರತಿ ವರ್ಷ ಆಷಾಢ ಶುಕ್ರವಾರ ಬೆಟ್ಟಕ್ಕೆ ಭೇಟಿ ನೀಡುವ ಡಿ ಬಾಸ್ ಈ ಸಲವು ಸ್ನೇಹಿತರೊಂದಿಗೆ ಆಗಮಿಸಿ ಚಾಮುಂಡಿಯ ದರ್ಶನ ಪಡೆದಿದ್ದಾರೆ.

  ಮೈಸೂರಿನಲ್ಲಿ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿರುವ ದರ್ಶನ್ ಚಾಮುಂಡಿ ಬೆಟ್ಟಕ್ಕೆ ಆಗಮಿಸುತ್ತಿದ್ದಂತೆ, ಅಭಿಮಾನಿಗಳು ‌ಹರ್ಷೋದ್ಗಾರ ವ್ಯಕ್ತಪಡಿಸಿದ್ದಾರೆ. ಸಾಕಷ್ಟು ಜನರ ಮಧ್ಯೆ ಹರಸಾಹಸ ಪಟ್ಟು ದಾಸ ದೇವಾಲಯ ಪ್ರವೇಶಿಸಿದ್ದಾರೆ.

  ನಟ ದರ್ಶನ್ ಒಳ ಬಿಡಲು ಪೊಲೀಸರ ಹರಸಾಹಸ ಮಾಡಿದ್ದು ಇದೇ ವೇಳೆ ಅಭಿಮಾನಿಗಳನ್ನ ನಿಯಂತ್ರಿಸುವಾಗ ಸ್ವಲ್ಪ ಹೊತ್ತು ನೂಕುನುಗ್ಗಲು ಉಂಟಾಗಿದೆ. ಇವುಗಳ ಮಧ್ಯೆ ಚಾಲೆಂಜಿಂಗ್ ಸ್ಟಾರ್ ಚಾಮುಂಡಿ ದೇವಿಯ ದರ್ಶನ ಪಡೆದು ಹಿಂದಿರುಗಿದ್ದಾರೆ.

  English summary
  Kannada actor Darshan has been visit Chamundi hill for Ashada Friday pooja. Special pooja is organized at Chamundi Hill on the back of Ashada Friday.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X