Just In
Don't Miss!
- News
ಹಲ್ವಾ ಸಮಾರಂಭದೊಂದಿಗೆ ಅಂತಿಮ ಹಂತದಲ್ಲಿ ಬಜೆಟ್ 2021
- Finance
ಬಜೆಟ್ 2021: ಐ.ಟಿ. ಫೈಲಿಂಗ್ ನಲ್ಲಿ PAN ಕಾರ್ಡ್ ಗೆ ಏಕಿಷ್ಟು ಮಹತ್ವ, ಏನಿದರ ವಿಶೇಷ?
- Sports
ಐಪಿಎಲ್ 2021: ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಸಂಗಕ್ಕರ ಬಲ
- Automobiles
ಕರೋಕ್ ಎಸ್ಯುವಿಯನ್ನು ಸ್ಥಳೀಯವಾಗಿ ಅಭಿವೃದ್ಧಿಪಡಿಸಲಿದೆ ಸ್ಕೋಡಾ
- Lifestyle
ವಾರ ಭವಿಷ್ಯ: 12 ರಾಶಿಗಳ ರಾಶಿ ಫಲ ಹೇಗಿದೆ ನೋಡಿ
- Education
NIT Recruitment 2021: ರಿಸರ್ಚ್ ಅಸಿಸ್ಟೆಂಟ್ ಹುದ್ದೆಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
'ಲಂಡನ್'ನಲ್ಲಿ ದರ್ಶನ್ ಪಡೆದ ಪ್ರಶಸ್ತಿ ಬಗ್ಗೆ ಇದ್ದ ಗೊಂದಲಕ್ಕೆ ಉತ್ತರ.!
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರನ್ನ ಲಂಡನ್ ಪಾರ್ಲಿಮೆಂಟ್ ನಲ್ಲಿ ವಿಶೇಷವಾದ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಈ ಸಮಾರಂಭದ ಫೋಟೋಗಳು ಮತ್ತು ವಿಡಿಯೋ ತುಣುಕಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ದರ್ಶನ್ ಅವರಿಗೆ ಲಂಡನ್ ಪಾರ್ಲಿಮೆಂಟ್ ನಿಂದ 'ಗ್ಲೋಬಲ್ ಡೈವರ್ಸಿಟಿ ಪ್ರಶಸ್ತಿ' ನೀಡಲಾಗಿದೆ ಎಂಬ ಸುದ್ದಿ ಆರಂಭದಲ್ಲಿ ಸದ್ದು ಮಾಡಿತ್ತು. ಆದ್ರೆ, ಇದು 'ಗ್ಲೋಬಲ್ ಡೈವರ್ಸಿಟಿ ಪ್ರಶಸ್ತಿ' ಅಲ್ಲ, 'ಗ್ಲೋಬಲ್ ಇಂಟೆಗ್ರಿಟಿ ಪ್ರಶಸ್ತಿ'. ಇದು ಲಂಡನ್ ಸರ್ಕಾರ ಕೊಟ್ಟಿದ್ದಲ್ಲ, ಈ ಪ್ರಶಸ್ತಿಗೂ ಲಂಡನ್ ಪಾರ್ಲಿಮೆಂಟ್ ಗೂ ಯಾವುದೇ ಸಂಬಂಧವಿಲ್ಲ ಎಂಬುದರ ಬಗ್ಗೆ ಸ್ಪಷ್ಟನೆ ಸಿಕ್ಕಿದೆ.
ಅಷ್ಟಕ್ಕೂ, ಲಂಡನ್ ನಲ್ಲಿ ದರ್ಶನ್ ಅವರನ್ನ ಸನ್ಮಾನಿಸಿದ್ದೇಕೆ? ಈ ಪ್ರಶಸ್ತಿ ನೀಡಿದ್ದು ಯಾರು? ಯಾವುದು ಈ ಪ್ರಶಸ್ತಿ ಎಂಬ ಗೊಂದಲಕ್ಕೆ ಉತ್ತರ ಮುಂದೆ ಓದಿ.....

ಲಂಡನ್ ಸಂಸತ್ತಿನಲ್ಲಿ ದರ್ಶನ್ ಗೆ ಗೌರವ
ಕನ್ನಡ ನಟ ದರ್ಶನ್ ಅವರಿಗೆ ಲಂಡನ್ ಸಂಸತ್ತಿನಲ್ಲಿ ಸನ್ಮಾಸಲಾಗಿರುವುದು ನಿಜ. ಆದ್ರೆ, ಇದು ಲಂಡನ್ ಸರ್ಕಾರದಿಂದ ನಡೆದ ಕಾರ್ಯಕ್ರಮವಲ್ಲವೆನ್ನುವುದು ಅಷ್ಟೇ ನಿಜ ಎಂಬುದನ್ನ ಬ್ರಿಟನ್‍ನಲ್ಲಿರುವ ಹೌಸ್ ಆಫ್ ಕಾಮನ್ಸ್ ಸದಸ್ಯ ವೀರೇಂದ್ರ ಶರ್ಮಾ ಭಾರತೀಯ ಮಾಧ್ಯಮಗಳಿಗೆ ಸಂದೇಶ ರವಾನಿಸಿದ್ದಾರೆ.

ದರ್ಶನ್ ಗೆ ಆಹ್ವಾನ ಕೊಟ್ಟಿದ್ದು ವಿರೇಂದ್ರ ಶರ್ಮಾ
ಅಕ್ಟೋಬರ್ 19 ರಂದು ಲಂಡನ್ ಸಂಸತ್ತಿಗೆ ಆಗಮಿಸಿ ಆಹ್ವಾನಿತ ಅತಿಥಿಗಳೊಂದಿಗೆ ನಿಮ್ಮ ಅನುಭವಗಳನ್ನು ಹಂಚಿಕೊಳ್ಳಬೇಕೆಂದು ವಿರೇಂದ್ರ ಶರ್ಮಾ ಅವರು ದರ್ಶನ್ ಅವರಿಗೆ ಆಹ್ವಾನಿಸಿದ್ದರು. ಈ ಆಹ್ವಾನವನ್ನು ಸ್ವೀಕರಿಸಿ ದರ್ಶನ್ ಅವರು ಲಂಡನ್ ಗೆ ಹೋಗಿದ್ದಾರೆ. ಈ ಸಂದರ್ಭದಲ್ಲಿ ದರ್ಶನ್ ಅವರನ್ನು ಸನ್ಮಾನಿಸಿ 'ಗ್ಲೋಬಲ್ ಇಂಟೆಗ್ರಿಟಿ ಅವಾರ್ಡ್' ನೀಡಲಾಗಿದೆ.
'ಲಂಡನ್'ನಲ್ಲಿ ನಟ ದರ್ಶನ್ ಗೆ ಮಹೋನ್ನತ ಪ್ರಶಸ್ತಿ.!

ವೈಯಕ್ತಿಕ ಆಹ್ವಾನ
ಬ್ರಿಟನ್ ಸಂಸದ ವೀರೇಂದ್ರ ಶರ್ಮಾ ಅವರು ಬ್ರಿಟನ್ ಕನ್ನಡಿಗರ ಒತ್ತಾಯದ ಮೇರೆಗೆ ದರ್ಶನ್ ಅವರನ್ನು ಲಂಡನ್ ಗೆ ಆಹ್ವಾನಿಸಿದ್ದರು. ವೀರೇಂದ್ರ ಅವರು ಖಾಸಗಿ ಕಾರ್ಯಕ್ರಮವೊಂದನ್ನು ಏರ್ಪಡಿಸಿ ಅಲ್ಲಿ ದರ್ಶನ್ ಅವರನ್ನು ಸನ್ಮಾನಿಸಿದ್ದಾರೆ. ‘ಅಕ್ಟೋಬರ್ 19ರಂದು ಲಂಡನ್‍ನಲ್ಲಿ ನಡೆದ ಕಾರ್ಯಕ್ರಮಕ್ಕೆ ನಾನೇ ದರ್ಶನ್ ತೂಗುದೀಪ ಅವರನ್ನು ಆಹ್ವಾನಿಸಿದ್ದೆ. ಇಲ್ಲಿನ ಸದಸ್ಯರು ಮತ್ತು ಕನ್ನಡಿಗರ ಮನವಿ ಮೇರೆಗೆ ದರ್ಶನ್ ಅವರನ್ನು ಬ್ರಿಟನ್ ಸಂಸತ್ತಿಗೆ ಆಹ್ವಾನಿಸಲಾಗಿತ್ತು. ಇದು ನನ್ನ ವೈಯಕ್ತಿಕ ಆಹ್ವಾನವಾಗಿತ್ತು ಎಂಬುದನ್ನು ನಾನು ಸ್ಪಷ್ಟಪಡಿಸುತ್ತಿದ್ದೇನೆ'' ಎಂದು ತಿಳಿಸಿದ್ದಾರೆ.

ದರ್ಶನ್ ಗೆ ಕೊಟ್ಟಿದ್ದು 'ಗ್ಲೋಬಲ್ ಇಂಟೆಗ್ರಿಟಿ ಪ್ರಶಸ್ತಿ'
ಇನ್ನು ದರ್ಶನ್ ಗೆ ನೀಡಿರುವ 'ಗ್ಲೋಬಲ್ ಇಂಟೆಗ್ರಿಟಿ ಪ್ರಶಸ್ತಿ'ಗೂ ಬ್ರಿಟನ್ ಸಂಸತ್ತಿಗೂ ಯಾವುದೇ ಸಂಬಂಧವಿಲ್ಲ. ಕೆಲವೊಂದು ಸುದ್ದಿ ಮಾಧ್ಯಮಗಳು ದರ್ಶನ್ ಅವರಿಗೆ ಬ್ರಿಟನ್ ಸಂಸತ್ತು 'ಗ್ಲೋಬಲ್ ಡೈವರ್ಸಿಟಿ ಪ್ರಶಸ್ತಿ' ನೀಡಲಾಗಿದೆ ಎಂದು ವರದಿ ಮಾಡಿದ್ದವು. ಆದರೆ 'ಗ್ಲೋಬಲ್ ಡೈವರ್ಸಿಟಿ ಪ್ರಶಸ್ತಿ' ಮತ್ತು 'ಗ್ಲೋಬಲ್ ಇಂಟೆಗ್ರಿಟಿ ಪ್ರಶಸ್ತಿ' ಒಂದೇ ಅಲ್ಲ. ಇವೆರಡೂ ಬೇರೆ ಬೇರೆ ಪ್ರಶಸ್ತಿಗಳು'' ಎಂದು ವಿರೇಂದ್ರ ಶರ್ಮಾ ಅವರು ತಿಳಿಸಿದ್ದಾರೆ.

ಬ್ರಿಟನ್ ಸಂಸತ್ತಿಗೆ ಸಂಬಂಧವಿಲ್ಲ
ಈ ಹಿಂದೆ ಅಮಿತಾಬ್ ಬಚ್ಚನ್, ಐಶ್ವರ್ಯಾ ರೈ ಬಚ್ಚನ್, ಜಾಕಿ ಚಾನ್, ಬಾಲಿವುಡ್ ನಟ ಸಲ್ಮಾನ್ ಖಾನ್ ಸೇರಿದಂತೆ ಹಲವರಿಗೆ 'ಗ್ಲೋಬಲ್ ಡೈವರ್ಸಿಟಿ ಪ್ರಶಸ್ತಿ' ಸಿಕ್ಕಿತ್ತು. ಆದರೆ ದರ್ಶನ್ ಅವರಿಗೆ ಪ್ರದಾನ ಮಾಡಲಾದ 'ಗ್ಲೋಬಲ್ ಇಂಟೆಗ್ರಿಟಿ ಪ್ರಶಸ್ತಿ'ಗೂ ಬ್ರಿಟನ್ ಸಂಸತ್ತಿಗೂ ಯಾವುದೇ ಸಂಬಂಧ ಇಲ್ಲ ಎಂದು ವಿರೇಂದ್ರ ಶರ್ಮಾ ಹೇಳಿಕೆ ಬಿಡುಗಡೆ ಮಾಡಿದ್ದಾರಂತೆ.

ಅಭಿಮಾನಿಗಳಿಗೆ ಪ್ರಶಸ್ತಿ ಅರ್ಪಿಸಿದ ದಾಸ
ಇನ್ನು ಈ ಬಗ್ಗೆ ಅಧಿಕೃತವಾಗಿ ದರ್ಶನ್ ಅವರು ಎಲ್ಲಿಯೂ ಮಾತನಾಡಿಲ್ಲ. ದರ್ಶನ್ ಗೆ ಸಿಕ್ಕಿದ ಪ್ರಶಸ್ತಿಯನ್ನ ತಪ್ಪಾಗಿ ಅರ್ಥೈಸಿ ಅಭಿಮಾನಿಗಳಲ್ಲಿ ಗೊಂದಲ ಉಂಟಾಗಿತ್ತು. ಆದ್ರೀಗ, ಇದಕ್ಕೊಂದು ಸ್ಪಷ್ಟನೆ ಸಿಕ್ಕಿದೆ. ಇನ್ನು ಲಂಡನ್ ನಲ್ಲಿ ಪ್ರಶಸ್ತಿ ಸ್ವೀಕರಿಸಿದ ಚಾಲೆಂಜಿಂಗ್ ಸ್ಟಾರ್ ಈ ಪ್ರಶಸ್ತಿಯನ್ನ ತಮ್ಮ ಅಭಿಮಾನಿಗಳಿಗೆ ಅರ್ಪಿಸಿದ್ದಾರೆ. ಈ ಮೂಲಕ ಬ್ರಿಟಿಷ್ ನಾಡಲ್ಲಿ ಕನ್ನಡದ ಕೀರ್ತಿ ಪತಾಕೆ ಹೆಚ್ಚಿಸಿದ್ದಾರೆ.