For Quick Alerts
  ALLOW NOTIFICATIONS  
  For Daily Alerts

  ಡಿ ಬಾಸ್ ಖರೀದಿ ಮಾಡಿರುವ ಕಾರ್ ನ ಸ್ಪೆಷಾಲಿಟಿಸ್ ಇಲ್ಲಿದೆ

  By Pavithra
  |

  ಸದ್ಯ ಗಾಂಧಿನಗರದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕಾರು ಖರೀದಿ ಮಾಡಿರುವುದೇ ಸದ್ದು. ಸಂಕ್ರಾಂತಿ ಹಬ್ಬದಂದು ಕಾರನ್ನ ಖರೀದಿ ಮಾಡಿರುವ ದರ್ಶನ್ ಮೊದಲ ದಿನವೇ ಕಾರ್ ನಲ್ಲಿ ಮೈಸೂರಿಗೆ ರೈಡ್ ಹೋಗಿದ್ದಾರೆ.

  ಹಮ್ಮರ್, ಜಾಗ್ವಾರ್, ಆಡಿ, ಫಾರ್ಚುನರ್ ಗಳಂತಹ ಲಗ್ಸುರಿ ಕಾರಿಗಳ ಒಡೆಯನಾಗಿದ್ದ ದರ್ಶನ್ ಈಗ ಜಗ್ಗತ್ತಿನ ದುಬಾರಿ ಕಾರುಗಳ ಲೀಸ್ಟ್ ನಲ್ಲಿರುವ ಬಿಳಿ ಬಣ್ಣದ ಲಂಬೋರ್ಗಿನಿಯನ್ನ ಕೊಂಡುಕೊಂಡಿದ್ದಾರೆ.

  ಮನೆಯ ಬಳಿ ಕಾರಿಗೆ ಪೂಜೆ ಸಲ್ಲಿಸಿ ನಂತರ ಮೈಸೂರಿಗೆ ಪ್ರಯಾಣ ಬೆಳೆಸಿದ ದಚ್ಚು ಇಂದು (ಜ.16)ರಂದು ಚಾಮುಂಡಿ ಬೆಟ್ಟದಲ್ಲಿ ಕಾರ್ ಗೆ ಪೂಜೆ ಮಾಡಿಸಿಕೊಂಡು ಬೆಂಗಳೂರಿಗೆ ಹಿಂತಿರುಗಿದ್ದಾರೆ. ದರ್ಶನ್ ಬಳಿ ಸಾಕಷ್ಟು ಕಾರ್ ಗಳಿದ್ದರು ಇದೇ ಕಾರ್ ಖರೀದಿ ಮಾಡಲು ಕಾರಣವೇನು? ಈ ಕಾರ್ ನಲ್ಲಿರುವ ವಿಶೇಷತೆಗಳೇನು? ಸಂಪೂರ್ಣ ಮಾಹಿತಿ ಇಲ್ಲಿದೆ. ಮುಂದೆ ಓದಿ

  ದುಬಾರಿ ಕಾರುಗಳ ಪಟ್ಟಿಯಲ್ಲಿ ಲಂಬೋರ್ಗಿನಿ

  ದುಬಾರಿ ಕಾರುಗಳ ಪಟ್ಟಿಯಲ್ಲಿ ಲಂಬೋರ್ಗಿನಿ

  ಜಗತ್ತಿನ ದುಬಾರಿ ಕಾರುಗಳ ಪಟ್ಟಿಯಲ್ಲಿರುವ ಲಂಬೋರ್ಗಿನಿ ಕಾರ್ ಅನ್ನು ದರ್ಶನ್ ಖರೀದಿಸಿದ್ದಾರೆ. ಡಿ ಬಾಸ್ ಕೊಂಡುಕೊಂಡಿರುವ ಲಂಬೋರ್ಗಿನಿ ಆವೆಡೆಡರ್ ಭಾರತದಲ್ಲಿ 5 ಕೋಟಿ 1 ಲಕ್ಷ ಬೆಲೆ ಬಾಳುವ ಕಾರ್ ಆಗಿದೆ.

  ಕಾರ್ ನಲ್ಲಿದೆ ಹಲವು ವಿಶೇಷತೆಗಳು

  ಕಾರ್ ನಲ್ಲಿದೆ ಹಲವು ವಿಶೇಷತೆಗಳು

  ಇಟಲಿ ಕಂಪನಿಯ ಲಂಬೋರ್ಗಿನಿ ಮೂರು ಮಾಡೆಲ್ ಗಳಲ್ಲಿ ಲಭ್ಯವಿದೆ. ಅದರಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಆಯ್ಕೆ ಮಾಡಿಕೊಂಡಿರುವುದು ಐದು ಕೋಟಿ ರೂಪಾಯಿಯ ಲಂಬೋರ್ಗಿನಿ ಆವೆಡೆಡರ್. ವಿಶೇಷತೆ ಎಂದರೆ ಕಾರ್ ನ ಎರಡು ಡೋರ್ ಗಳು ಮೇಲ್ಬಾಗದಲ್ಲಿ ತೆಗೆದುಕೊಳ್ಳುತ್ತವೆ.

  ಟೂ ಸೀಟರ್ ಕಾರ್ ಲಂಬೋರ್ಗಿನಿ

  ಟೂ ಸೀಟರ್ ಕಾರ್ ಲಂಬೋರ್ಗಿನಿ

  ಲಂಬೋರ್ಗಿನಿ ಆವೆಡೆಡರ್ ಅತಿ ವೇಗವಾಗಿ ಚಲಿಸುವ ಕಾರ್ ಆಗಿದೆ. 320 ಗರಿಷ್ಠ ವೇಗವನ್ನ ಹೊಂದಿದ್ದು 5204 ಸಿಸಿ ಇದೆ. ಇದರ ಗ್ರೌಂಡ್ ಕ್ಲಿಯರೆನ್ಸ್ ಕೇವಲ 135 ಎಂ ಎಂ ಎನ್ನುವುದು ವಿಶೇಷ.

  ಎಲ್ಲವೂ ಅಟೋಮೆಟಿಕ್

  ಎಲ್ಲವೂ ಅಟೋಮೆಟಿಕ್

  ಈ ಕಾರಿನಲ್ಲಿ ಡೋರ್ ಓಪನ್ ಮಾಡುವುದರಿಂದ ಹಿಡಿದು ಗೇರ್, ವಿಂಡೋ ಎಲ್ಲವೂ ಆಟೋಮೆಟಿಕ್ ನಿಂದ ಕೂಡಿದೆ. ಪ್ರತಿ ಲೀಟರ್ ಪೆಟ್ರೋಲ್ ಗೆ ೧೦ಕಿ ಲೋ ಮೀಟರ್ ಮೈಲೇಜ್ ಸಿಗುವುದು ಅನುಮಾನ.

  ಆರಾಧ್ಯ ದೈವಕ್ಕೆ ಮೊದಲ ಪೂಜೆ

  ಆರಾಧ್ಯ ದೈವಕ್ಕೆ ಮೊದಲ ಪೂಜೆ

  ದರ್ಶನ್ ಆರಾಧಿಸುವ ದೈವವಾಗಿರುವ ಚಾಮುಂಡೇಶ್ವರಿ ಸನ್ನಿಧಾನದಲ್ಲಿ ಕಾರಿಗೆ ಮೊದಲ ಪೂಜೆಯನ್ನ ಸಲ್ಲಿಸಿದ್ದಾರೆ. ಮೈಸೂರಿನ ಸ್ನೇಹಿತರು ಮತ್ತು ಆಪ್ತರು ಪೂಜೆಯಲ್ಲಿ ಭಾಗಿ ಆಗಿದ್ದಾರೆ. ಅಭಿಮಾನಿಗಳಂತು ದರ್ಶನ್ ದುಬಾರಿ ಕಾರು ಖರೀದಿ ಮಾಡಿರುವುದಕ್ಕೆ ಸಂತಸ ವ್ಯಕ್ತ ಪಡಿಸಿದ್ದಾರೆ.

  English summary
  Kannada Actor Darshan bought Lamborghini car. Here information on the Darshan car's features, Darshan traveled to Mysore in a new car Lamborghini car

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X